Breakfast Recipes: ಬೋರಿಂಗ್ ಉಪ್ಪಿಟ್ಟು-ಚಿತ್ರಾನ್ನ ಬದಲು ಈ 6 ತಿಂಡಿಗಳನ್ನು ಮಾಡಿ ನೋಡಿ..

ವಿವಿಧ ಪ್ರದೇಶಗಳಲ್ಲಿ  ಅಂದರೆ ಭಾರತದ ವಿವಿಧ ರಾಜ್ಯಗಳಲ್ಲಿ ಜನಪ್ರಿಯವಾಗಿರುವ 6 ವಿಭಿನ್ನ ಉಪಹಾರ  ಪದಾರ್ಥಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇವೆ.  

ಮೇಥಿ ಕಾ ಥೆಪ್ಲಾ

ಮೇಥಿ ಕಾ ಥೆಪ್ಲಾ

  • Share this:
    ಬೆಳಗಿನ ಉಪಾಹಾರವು ದಿನದ ಪ್ರಮುಖ ಊಟ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ  ಭಾರತದಂತಹ ದೇಶದಲ್ಲಿ ವಿಭಿನ್ನ ಸಂಸ್ಕೃತಿಗಳು ಮತ್ತು ಸಂಪ್ರದಾಯಗಳ ಮಿಶ್ರಣಗಳು ಸಿಗುತ್ತವೆ. ಬೆಳಗಿನ ಉಪಾಹಾರದ ರುಚಿಗಳು ಪ್ರದೇಶದಿಂದ ಪ್ರದೇಶಕ್ಕೆ ಬದಲಾಗುತ್ತವೆ. ನಿಮ್ಮ ಅಡುಗೆಮನೆಯಲ್ಲಿ ಹೊಸ ಪಾಕವಿಧಾನಗಳನ್ನು ಪ್ರಯೋಗಿಸಲು ನೀವು ಬಯಸುವುದಾದರೆ, ಇಲ್ಲಿದೆ ಹೊಸ ರುಚಿಗಳು.  ಬ್ರೆಡ್ ಮತ್ತು ಬೆಣ್ಣೆಯೊಂದಿಗೆ ಹಾಗೂ ಮೊಟ್ಟೆಗಳನ್ನು ಮೀರಿ ನಿಮ್ಮ  ಅಡುಗೆ ಮನೆಯಲ್ಲಿ  ವಿವಿಧ ಅಡುಗೆ ತಯಾರಿಸಲು ನಿಮಗೆ ನಾವು ಸಹಾಯ ಮಾಡತ್ತೇವೆ. ನಾವು ವಿವಿಧ ಪ್ರದೇಶಗಳಲ್ಲಿ  ಅಂದರೆ ಭಾರತದ ವಿವಿಧ ರಾಜ್ಯಗಳಲ್ಲಿ ಜನಪ್ರಿಯವಾಗಿರುವ 6 ವಿಭಿನ್ನ ಉಪಹಾರ  ಪದಾರ್ಥಗಳನ್ನುಪಟ್ಟಿ ಮಾಡಿದ್ದೇವೆ.  

    ಆಲೂ ಪರಾಠ: ಪಂಜಾಬಿನ ಅದ್ಭುತ ಆಹಾರ ಪದಾರ್ಥಗಳಲ್ಲಿ ಆಲೂ ಪರಾಠ ಕೂಡ ಒಂದು. ಇದನ್ನು ಸಂಪೂರ್ಣ ಗೋಧಿ ಹಿಟ್ಟನ್ನು ಬಳಸಿ  ಅದಕ್ಕೆ ಮಸಾಲೆಯುಕ್ತ ಬೇಯಿಸಿದ ಆಲೂಗಡ್ಡೆ ಮಿಶ್ರಣವನ್ನು ತುಂಬಿಸಲಾಗುತ್ತದೆ.ಅದನ್ನು ಬಿಸಿ ಬಾಣಲೆಯಲ್ಲಿ ಬೇಯಿಸಿ ಅದಕ್ಕೆ ಬೆಣ್ಣೆ ಅಥವಾ ದೇಸಿ ತುಪ್ಪವನ್ನು ಹಾಕಿ ಸೇವಿಸಲಾಗುತ್ತದೆ.

    ರಸೀಲೆ ಆಲೂ ಜೊತೆ ಪುರಿ: ಉತ್ತರ ಪ್ರದೇಶದ ಹೃದಯ ಭಾಗದ ಫೇಮಸ್ ಖಾದ್ಯ. ಇದನ್ನ  ಯಾವ ಸಮಯದಲ್ಲಿ ಬೇಕಾದರೂ ಸೇವನೆ ಮಾಡಬಹುದು. ತಿಂಡಿ ಮಧ್ಯಾಹ್ನದ ಊಟ, ರಾತ್ರಿ ಊಟ ಹೀಗೆ. ಇದನ್ನು ವಿಶೇಷ ಸಂದರ್ಭಗಳಲ್ಲಿ ಕೂಡ ತಯಾರಿಸಲಾಗುತ್ತದೆ. ಬೆಡ್ಮಿ ಪುರಿಯನ್ನು ರವೆ ಮತ್ತು ಸಂಪೂರ್ಣ ಗೋಧಿ ಹಿಟ್ಟನ್ನು ಬಳಸಿ ತಯಾರು ಮಾಡಲಾಗುತ್ತದೆ. ಇನ್ನು ತಯಾರಿದ ಗೋಧಿ ಹಿಟ್ಟಿಗೆ ಮಸಾಲೆಯುಕ್ತ ಮಸೂರವನ್ನು ಸೇರಿಸಿ ಮಿಶ್ರಣ ಮಾಡಿ  ಕೆಂಬಣ್ಣದಲ್ಲಿ ಕರಿಯಲಾಗುತ್ತದೆ.ಈ ಪೂರಿಯನ್ನು ಮಸಾಲೆಯುಕ್ತ ಆಲೂಗಡ್ಡೆ ಸಾಗು ಜೊತೆ ಸೇವಿಸಿದರೆ ಬಹಳ ಸೊಗಸು.

    ಮೇಥಿ ಕಾ ಥೆಪ್ಲಾ: ಗುಜರಾತ್ ರಾಜ್ಯದಲ್ಲಿ ಥೆಪ್ಲಾಗಳು ಹೆಚ್ಚು ಫೇಮಸ್. ತೆಪ್ಲಾ ಒಂದು ಫ್ಲಾಟ್ ಬ್ರೆಡ್ ಖಾದ್ಯವಾಗಿದ್ದು, ಗೋಧಿ ಹಿಟ್ಟಿಗೆ ಮೆಥಿ ಎಲೆಗಳು, ಶುಂಠಿ ಮತ್ತು ಹಸಿರು ಮೆಣಸಿನಕಾಯಿಗಳೊಂದಿಗೆ  ಸೇರಿಸಿ ಮಿಶ್ರಣ ಮಾಡಿಕೊಳ್ಳಲಾಗುತ್ತದೆ. ನಂತರ ಹಿಟ್ಟನ್ನು ಸಮತಟ್ಟಾದ ವಲಯಗಳಾಗಿ, ಅಂದರೆ ಸಣ್ಣ ದಪ್ಪ ಇರದಂತೆ ಸಮವಾಗಿ ಸುತ್ತಿಕೊಳ್ಳಲಾಗುತ್ತದೆ ಮತ್ತು ಬಿಸಿ ಬಾಣಲೆಯಲ್ಲಿ ಸ್ವಲ್ಪ ಎಣ್ಣೆ ಅಥವಾ ತುಪ್ಪದೊಂದಿಗೆ ಗರಿಗರಿಯಾಗುವವರೆಗೆ ಬೇಯಿಸಲಾಗುತ್ತದೆ. ಇದನ್ನು ಸಾಮಾನ್ಯವಾಗಿ ಬೆಳಿಗ್ಗೆ ಬಿಸಿ ಚಹಾದೊಂದಿಗೆ ಸವಿಯಲಾಗುತ್ತದೆ.

    ಇದನ್ನೂ ಓದಿ: Weight Loss Tips: ಈ 5 ವಿಧಾನಗಳನ್ನು ಪಾಲಿಸಿದರೆ ಸಾಕು ಸುಲಭವಾಗಿ ಸಣ್ಣಗಾಗಬಹುದು..

    ಪೋಹಾ: ಮಹಾರಾಷ್ಟ್ರ ರಾಜ್ಯದ ಫೇಮಸ್ ತಿಂಡಿಗಳಲ್ಲಿ ಇದು ಒಂದು. ಕೇವಲ ಮಹಾರಾಷ್ಟ್ರವಲ್ಲದೇ ದಕ್ಷಿಣ ಭಾರತ ಹಲವು ರಾಜ್ಯಗಳಲ್ಲಿ ಇದನ್ನು ಬೆಳಗಿನ ತಿಂಡಿಯಾಗಿ ಬಳಸುತ್ತಾರೆ. ಈ ಖಾದ್ಯವನ್ನು ನೀರಿನಲ್ಲಿ ನೆನೆಸಿದ  ಅವಲಕ್ಕಿಯನ್ನು( ಅಕ್ಕಿಯ ಮತ್ತೊಂದು ಪದಾರ್ಥ) ಬಳಸಿ ತಯಾರಿಸಲಾಗುತ್ತದೆ. ನೀವು ಆರೋಗ್ಯಕರವಾಗಿರುವ ಮತ್ತು ವಿಭಿನ್ನವಾದ ಪೋಹಾ ಮಾಡುವ ಬಯಕೆ ಇದ್ದಲ್ಲಿ ಇದಕ್ಕೆ  ಹೆಚ್ಚಿನ ತರಕಾರಿಗಳನ್ನು ಸೇರಿಸಿದರೆ ಉತ್ತಮವಾಗಿರುತ್ತದೆ. ಇದರ ಜೊತೆ ನಿಂಬೆ ಹಣ್ಣು ಅಥವಾ ಮಜ್ಜಿಗೆ ಮೆಣಸಿನ ಜೊತೆ ಸೇವಿಸಿಸುವುದು ಉತ್ತಮ.

     ಅಪ್ಪಮ್ ಮತ್ತು ಚಿಕನ್ ಸ್ಟ್ಯೂ: ಅಪ್ಪಮ್ ಖಾದ್ಯ ಕೇರಳದಲ್ಲಿ ಹೆಚ್ಚು ಜನಪ್ರಿಯವಾಗಿರುವ ತಿಂಡಿ ಪದಾರ್ಥ. ಇದನ್ನು  ಹಾಪರ್ಸ್ ಎಂದು ಸಹ ಕರೆಯಲಾಗುತ್ತದೆ.  ಇದನ್ನು ಅಕ್ಕಿ ಮತ್ತು ತೆಂಗಿನ ಹಾಲಿನ ಹಿಟ್ಟನ್ನು ಬಳಸಿ ತಯಾರಿಸಲಾಗುತ್ತದೆ. ಇದು ಅಂಚುಗಳಲ್ಲಿ ಗರಿಗರಿಯಾಗಿರುತ್ತದೆ  ಹಾಗೂ ಸವಿಯಲು ವಿಭಿನ್ನವಾಗಿರುತ್ತದೆ, ಅಪ್ಪಂಗಳನ್ನು ಹೆಚ್ಚು ಮಸಾಲೆಯುಕ್ತ ತೆಂಗಿನ ಹಾಲು ಮತ್ತು  ಚಿಕನ್ ಸ್ಟ್ಯೂನೊಂದಿಗೆ  ತಿಂದರೆ ಬಹಳ ಅದ್ಭುತವಾಗಿರುತ್ತದೆ.

    (ಸಂಧ್ಯಾ) 
    Published by:Kavya V
    First published: