Mango recipe: ಮನತಣಿಸುವ ಮಾವಿನ ರೆಸಿಪಿಗಳು; ನೀವೂ ಟ್ರೈ ಮಾಡಿ

ಅದ್ಭುತ ಸುವಾಸನೆ ಅಪ್ರತಿಮ ರುಚಿಯುಳ್ಳ ಮಾವಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಇರೋಲ್ಲ ಹೇಳಿ. ಕಿರಿಯರಿಂದ ಹಿರಿಯರವರೆಗೂ ಎಲ್ಲರೂ ಇಷ್ಟಪಡಬಹುದಾದ ಮಾವನ್ನು ಹಾಗೆಯೇ ನೇರವಾಗಿಯೂ ಇಲ್ಲವೆ ಅದರ ವಿವಿಧ ರೆಸಿಪಿಗಳನ್ನೂ ಸಹ ಮಾಡಿ ತಿಂದು ತೇಗಬಹುದು.

 ಮಾವಿನ ಹಣ್ಣು

ಮಾವಿನ ಹಣ್ಣು

  • Share this:
ಬೇಸಿಗೆ ಎಂದರೆ ಒಂದೆಡೆ ಸುಡು ಬಿಸಿಲೆಂಬ ಕಿರಿಕಿರಿ ಉಂಟಾದರೆ ಇನ್ನೊಂದೆಡೆ ಹಣ್ಣುಗಳ ರಾಜನೆಂದೇ ಖ್ಯಾತಿ ಪಡೆದಿರುವ ಮಾವಿನ ಹಣ್ಣಿನ ಸೀಸನ್ ಎಂದು ನೆನೆದು ಮನದಲ್ಲಿ ಸಂತಸವೂ ಆಗುತ್ತದೆ. ಹೌದು, ಮಾವಿಲ್ಲದೆ ಬೇಸಿಗೆಯನ್ನೂ ನೆನೆಸಿಕೊಳ್ಳಲೂ ಸಹ ಕಷ್ಟವಾಗಬಹುದು. ಅದ್ಭುತ ಸುವಾಸನೆ ಅಪ್ರತಿಮ ರುಚಿಯುಳ್ಳ ಮಾವಿನ ಹಣ್ಣು ಎಂದರೆ ಯಾರಿಗೆ ತಾನೆ ಇಷ್ಟ ಇರೋಲ್ಲ ಹೇಳಿ. ಕಿರಿಯರಿಂದ ಹಿರಿಯರವರೆಗೂ ಎಲ್ಲರೂ ಇಷ್ಟಪಡಬಹುದಾದ ಮಾವನ್ನು ಹಾಗೆಯೇ ನೇರವಾಗಿಯೂ ಇಲ್ಲವೆ ಅದರ ವಿವಿಧ ರೆಸಿಪಿಗಳನ್ನೂ ಸಹ ಮಾಡಿ ತಿಂದು ತೇಗಬಹುದು.

ಆದರೆ, ನಿಮಗೆ ಗೊತ್ತೆ ಅದ್ಭುತ ಸ್ವಾದ ಹೊಂದಿರುವ ಮಾವು ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇಂದು ನಾವು ನಿಮಗೆ ಮಾವಿನಿಂದ ತಯಾರಿಸಬಹುದಾದ ಐದು ಅದ್ಭುತ ರೆಸಿಪಿಗಳ ಬಗ್ಗೆ ತಿಳಿಸುತ್ತಿದ್ದೇವೆ. ಈ ರೆಸಿಪಿಗಳು ಕೇವಲ ಮಾವಿನ ಹಣ್ಣುಗಳ ವೈವಿಧ್ಯಮಯ ಸ್ವಾದವನ್ನಷ್ಟೇ ನೀಡುವುದಲ್ಲದೆ ಆರೋಗ್ಯದಾಯಕವಾಗಿಯೂ ಇರುತ್ತವೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗಾದರೆ ತಡ ಏಕೆ, ಆ ರೆಸಿಪಿಗಳ ಕುರಿತು ಈಗಲೇ ಈ ಲೇಖನದ ಮೂಲಕ ತಿಳಿಯಿರಿ ಹಾಗೂ ನಿಮ್ಮ ಮನೆಯಲ್ಲೂ ಒಮ್ಮೆ ಪ್ರಯತ್ನಿಸಿ ನೋಡಿ.

1. ಮಾವಿನ ಜೊತೆ ಕ್ರ್ಯಾನ್ ಬೆರಿ ಚನ್ನಾ ಚಾಟ್
ಚಾಟ್ ಎಂದ ತಕ್ಷಣ ಹಲವರ ಬಾಯಲ್ಲಿ ನೀರೂರುವುದು ಗ್ಯಾರಂಟಿ. ನಾವು ಹಲವು ಬಗೆಯ ಚಾಟ್ ಸೇವಿಸುತ್ತೇವೆ. ಬೇಸಿಗೆಯಲ್ಲಿ ಮಾವಿನಕಾಯಿಯ ಈ ಚಾಟ್ ಒಮ್ಮೆ ಪ್ರಯತ್ನಿಸಿ ನೋಡಿ. ಬೇಯಿಸಿದ ಕಡಲೆಕಾಳು ಹಾಗೂ ಮಾವಿನ ತುಂಡುಗಳೊಂದಿಗೆ ಡಿಹೈಡ್ರೇಟ್ ಮಾಡಲಾದ ಕ್ರ್ಯಾನ್ ಬೆರಿ ಸೇರಿಸಿಕೊಂಡು ಮೇಲೆ ಚಾಟ್ ಮಸಾಲಾ, ಕೊರಿಯಾಂಡರ್ ಎಲೆಗಳು, ಶೇವು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸೇವಿಸಿ.

2. ಕೊಕೊನಟ್ ಮ್ಯಾಂಗೋ ಓಟ್ ಮೀಲ್
ನೀವು ಸಾಮಾನ್ಯವಾಗಿ ಬೇಯಿಸಿಕೊಂಡು ಸೇವಿಸುವಂತಹ ಓಟ್ ನೊಂದಿಗೆ ತುರಿದ ಕೊಬ್ಬರಿ, ತುಂಡುಗಳಾಗಿ ಕತ್ತರಿಸಿದ ಮಾವನ್ನು ಹದವಾಗಿ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ಹೆಚ್ಚಿನ ಸುವಾಸನೆಗೆ ಸ್ವಲ್ಪ ಚಕ್ಕೆ ಸೇರಿಸಬಹುದು. ತದನಂತರ ಇದನ್ನು ಸೇವಿಸಿ ಹಾಗೂ ಸ್ವಾದದ ವಿನೂತನ ಅನುಭವ ಪಡೆಯಿರಿ.

ಇದನ್ನೂ ಓದಿ:Health Tips: ಮಧುಮೇಹ ಇರುವವರು ಮಾವಿನಹಣ್ಣು ತಿನ್ನಬಹುದಾ? ತಜ್ಞರು ಏನ್ ಹೇಳ್ತಾರೆ?

3. ಮಾವು ಮತ್ತು ಪೀಚ್ ಜೊತೆ ವ್ಹೈಟ್ ಐಸ್ ಟೀ
ವ್ಹೈಟ್ ಐಸ್ ಟೀ ಹಲವರಿಗೆ ತುಂಬ ಇಷ್ಟವಾಗುವ ಪೇಯ. ಈ ಪೇಯಕ್ಕೆ ಹೆಚ್ಚಿನ ಮೆರುಗು ನೀಡಲು ಅದರಲ್ಲಿ ನೀವು ಮಾವು ಹಾಗೂ ಪೀಚ್ ಹಣ್ಣುಗಳನ್ನು ಬೆರೆಸಬಹುದು. ಇದು ತನ್ನದೆ ಆದ ವೈಶಿಷ್ಟ್ಯ ಹೊಂದುವ ಮೂಲಕ ನಿಮ್ಮ ಸ್ವಾದದ ಚಪಲವನ್ನು ತಣಿಸುತ್ತದೆ.

4. ರಾಕೆಟ್ ಆಂಡ್ ಮ್ಯಾಂಗೊ ಸಲಾಡ್
ರಾಕೆಟ್ ಸಲಾಡ್ ಎಂಬುದು ಹಲವು ಅದ್ಭುತ ಟ್ರಾಪಿಕಲ್ ಹಣ್ಣುಗಳ ಮಿಶ್ರಣವಾಗಿದೆ. ಬ್ಲ್ಯಾಕ್ ಬೆರಿ, ಸ್ಟ್ರಾಬೆರಿ, ಬಾಳೆ ಹಣ್ಣು ಮುಂತಾದ ಹಣ್ಣುಗಳನ್ನು ಹೊಂದಿರುವ ಈ ಸಲಾಡಿಗೆ ನೀವು ಪಕ್ವಗೊಂಡ ಅಥವಾ ಹಣ್ಣಾದ ಮಾವಿನ ಹಣ್ಣುಗಳನ್ನು ಸೇರಿಸಿದರೆ ಸಿದ್ಧವಾಗುತ್ತದೆ ನಿಮ್ಮ ರಾಕೆಟ್ ಮತ್ತು ಮ್ಯಾಂಗೊ ಸಲಾಡ್. ನೋಡಲು ಎಷ್ಟು ಆಕರ್ಷಕವಾಗಿ ಕಾಣುವುದೋ ಸವಿಯಲೂ ಸಹ ಅಷ್ಟೆ ರುಚಿಕರವಾಗಿರುತ್ತದೆ.

5. ಮಾಂಬಳಾ ಪುಲಿಶೇರಿ
ಇದೊಂದು ಸಾಂಪ್ರದಾಯಿಕವಾಗಿ ಮಾಡಲಾಗುವ ತಂಬೂಳಿ ಇದ್ದಂತೆ. ಇದನ್ನು ಕೊಬ್ಬರಿ ರುಬ್ಬಿ ಅದಕ್ಕೆ ವಗ್ಗರಣೆ ಹಾಕಿ ಮಾಡಲಾಗುತ್ತದೆ. ಇದರಲ್ಲಿ ವಿಶೇಷವಾಗಿ ಮಾವು ಸೇರಿಸುವ ಮೂಲಕ ಇದರ ರುಚಿ ಮತ್ತಷ್ಟು ಉತ್ಕೃಷ್ಟವಾಗುತ್ತದೆ. ಇದನ್ನು ಮಧ್ಯಾಹ್ನದ ಊಟ ಇಲ್ಲವೇ ರಾತ್ರಿಯ ಊಟದಲ್ಲಿ ಸವಿಯಬಹುದು.

ಇದನ್ನೂ ಓದಿ:  Indian Street Food: ಈ ಮಹಿಳೆ ಮಾಡಿದ್ದು ಅಂತಿಂಥಾ ಮ್ಯಾಗಿ ಅಲ್ಲ, ಇದು ಮ್ಯಾಂಗೋ ಮ್ಯಾಗಿ!

ಈ ಮೇಲೆ ವಿವರಿಸಲಾದ ರೆಸಿಪಿಗಳಲ್ಲಿ ಮಾವಿನ ಕಾಯಿ ಹಾಗೂ ಮಾವಿನ ಹಣ್ಣುಗಳನ್ನು ಬಳಸಲಾಗಿದೆ. ಮಾವಿನ ಹಣ್ಣುಗಳು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು ಈ ರೀತಿ ವಿವಿಧ ಖಾದ್ಯಗಳೊಂದಿಗೆ ಸವಿಯ ಮೂಲಕ ಆ ಖಾದ್ಯಗಳ ಪೋಷಕ ತತ್ವಗಳ ಜೊತೆಗೆ ಮಾವಿನ ಆರೋಗ್ಯಕರ ಗುಣಗಳೂ ಸಹ ನಮ್ಮ ದೇಹಕ್ಕೆ ಸೇರಲಿವೆ.
Published by:Ashwini Prabhu
First published: