ಇನ್ಮುಂದೆ ಟ್ರಿಪ್ ಅಡ್ವೈಸರ್ನಲ್ಲೂ ಸಿಗಲಿದೆ ಫುಡ್ ಡೆಲಿವರಿ
ನ್ಯೂಸ್ 18 ಕನ್ನಡ
ಅಗ್ಗದ ಪ್ರವಾಸ ವ್ಯವಸ್ಥೆಯನ್ನು ಒದಗಿಸುತ್ತಿರುವ ಟ್ರಿಪ್ ಅಡ್ವೈಸರ್ ಸಂಸ್ಥೆಯು ಶೀಘ್ರದಲ್ಲೇ ಆಹಾರ ವಿತರಣಾ ಸೇವೆಯನ್ನು ಪ್ರಾರಂಭಿಸಲಿದೆ. ಫುಡ್ ಡೆಲಿವರಿ ಸೇವೆಯಲ್ಲಿ ಈಗಾಗಲೇ ಸಂಚಲನ ಸೃಷ್ಟಿಸಿರುವ delivery.com ಸಂಸ್ಥೆಯೊಂದಿಗೆ ಪಾಲುದಾರಿಕೆ ಹೊಂದಲು ಈ ಪ್ರವಾಸಿ ವೆಬ್ಸೈಟ್ ಮುಂದಾಗಿದೆ.
ಅಮೆರಿಕದ 12 ಸಾವಿರಕ್ಕೂ ಹೆಚ್ಚಿನ ರೆಸ್ಟೋರೆಂಟ್ಗಳು delivery.com ಆನ್ಲೈನ್ ಡೆಲಿವರಿ ಯೋಜನೆಯಲ್ಲಿ ಭಾಗಿಯಾಗಿದ್ದು, ಇದರೊಂದಿಗೆ ಸೇರಿ ಪ್ರವಾಸಿಗಳಿಗೆ ಆಹಾರ ಪೂರೈಕೆಯ ವ್ಯವಸ್ಥೆಯನ್ನು ನಿರ್ವಹಿಸಲು ಟ್ರಿಪ್ ಅಡ್ವೈಸರ್ ಸಂಸ್ಥೆ ಉತ್ಸುಕವಾಗಿದೆ.
ಈ ಹೊಸ ವ್ಯವಸ್ಥೆಯಿಂದ ಟ್ರಿಪ್ ಅಡ್ವೈಸರ್ ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ತಮಗೆ ಬೇಕಾದ ಆಹಾರಗಳ ಬಗ್ಗೆ ಮೊದಲೇ ತಿಳಿದುಕೊಳ್ಳಲು ಇದರಿಂದ ನೆರವಾಗಲಿದೆ. ಪ್ರವಾಸದ ವೇಳೆ ಸ್ಥಳೀಯ ಆಹಾರದ ರುಚಿಗಳನ್ನು ಅಸ್ವಾದಿಸಲು ಟ್ರಿಪ್ ಅಡ್ವೈಸರ್ ಬಳಕೆದಾರರಿಗೆ ಸಂಸ್ಥೆಯು ಈ ಪ್ರಯೋಗವನ್ನು ಮಾಡಲು ಆಸಕ್ತಿವಹಿಸಿದೆ. ಟ್ರಿಪ್ ಅಡ್ವೈಸರ್ ಮತ್ತು delivery.com ಸಹಭಾಗಿತ್ವದಿಂದ ನೆಚ್ಚಿನ ರೆಸ್ಟೋರೆಂಟ್ಗಳಿಂದ ಜನಪ್ರಿಯ ಆಹಾರಗಳನ್ನು ಮನೆಯ ಬಾಗಿಲಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಮಾಡಲಾಗುತ್ತದೆ.ಈ ಹಿಂದೆ ಅಮೆರಿಕದ 1000ಕ್ಕೂ ಹೆಚ್ಚಿನ ಹೋಟೆಲ್ಗಳಲ್ಲಿ ಉಳಿದುಕೊಂಡಿರುವ ಅತಿಥಿಗಳಿಗೆ ಗ್ರೂಬ್ಹಬ್ ಫುಡ್ ಆರ್ಡರ್ ಸಹಭಾಗಿತ್ವದಲ್ಲಿ ಇಂಟರ್ಕಾಂಟಿನೆಂಟಲ್ ಹೊಟೇಲ್ ಗ್ರೂಪ್ (ಐಹೆಚ್ಜಿ) ಮೊಬೈಲ್ ಆ್ಯಪ್ ಮತ್ತು ಆನ್ಲೈನ್ ಮೂಲಕ ಆಹಾರದ ಆರ್ಡರ್ಗಳನ್ನು ತೆಗೆದುಕೊಳ್ಳಲಾಗಿತ್ತು.
ಪ್ರವಾಸಿಗಳಿಗೆ ಆಹಾರ ಒದಗಿಸಲು ಇಂಟರ್ಕಾಂಟಿನೆಂಟಲ್ ಹೊಟೇಲ್ ಗ್ರೂಪ್ ಕೈಗೊಂಡ ಈ ಹೊಸ ಪ್ಲಾನ್ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ಪ್ರೇರಿತರಾಗಿರುವ ಟ್ರಿಪ್ ಅಡ್ವೈಸರ್ ಸಂಸ್ಥೆಯು ತನ್ನ ಗ್ರಾಹಕರ ಅನುಕೂಲಕ್ಕಾಗಿ ಹೊಸ ಸಾಹಸಕ್ಕೆ ಕೈ ಹಾಕಲಿದೆ.

Loading...