• Home
  • »
  • News
  • »
  • lifestyle
  • »
  • Tricolor Vegetables: ತ್ರಿವರ್ಣ ಬಣ್ಣದ ಹಣ್ಣು, ತರಕಾರಿ ನೋಡಲು ಚೆಂದ, ಆರೋಗ್ಯಕ್ಕೂ ಒಳ್ಳೆಯದು!

Tricolor Vegetables: ತ್ರಿವರ್ಣ ಬಣ್ಣದ ಹಣ್ಣು, ತರಕಾರಿ ನೋಡಲು ಚೆಂದ, ಆರೋಗ್ಯಕ್ಕೂ ಒಳ್ಳೆಯದು!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ವಿವಿಧ ಬಣ್ಣಗಳ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದಾಗ್ಯೂ ಚಳಿಗಾಲದಲ್ಲಿ ಹಲವು ಬಣ್ಣಗಳ ತರಕಾರಿಗಳು ಲಭ್ಯ ಇವೆ. ಅನೇಕ ಬಣ್ಣಗಳ ತರಕಾರಿಗಳು ವಿವಿಧ ಗುಣಲಕ್ಷಣ ಹೊಂದಿವೆ ಅಂತಾರೆ ಪೌಷ್ಟಿಕ ತಜ್ಞೆ ಡಾ.ಅದಿತಿ ಶರ್ಮಾ. ತ್ರಿವರ್ಣ ಹಣ್ಣು ಮತ್ತು ತರಕಾರಿಗಳು ಯಾವೆಲ್ಲಾ ಆರೋಗ್ಯ ಲಾಭ ನೀಡುತ್ತವೆ ಎಂದು ತಿಳಿಸಿದ್ದಾರೆ.

ಮುಂದೆ ಓದಿ ...
  • Share this:

    ತ್ರಿವರ್ಣ ಬಣ್ಣಗಳ ((Tricolor) ಬಗ್ಗೆ ನಿಮಗೆ ಗೊತ್ತೇ ಇದೆ. ಅದು ಧ್ವಜದ ಬಣ್ಣ. ಕೇಸರಿ, ಬಿಳಿ, ಹಸಿರು. ತ್ರಿಬಣ್ಣಗಳ ತರಕಾರಿಗಳ (Vegetables) ರೆಸಿಪಿ (Recipe) ಕೂಡ ಸಾಕಷ್ಟು ಜನಪ್ರಿಯವಾಗಿದೆ (Famous). ಈ ಮೂರು ಬಣ್ಣದ ತರಕಾರಿಗಳು ಮತ್ತು ಹಣ್ಣುಗಳು (Fruits) ಸಾಕಷ್ಟು ಆರೋಗ್ಯ ಪ್ರಯೋಜನ (Health Benefits) ನೀಡುತ್ತವೆ ಎಂದು ತಜ್ಞರು ಹೇಳುತ್ತಾರೆ. ಊಟದಲ್ಲಿ ಬಣ್ಣ ಬಣ್ಣದ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸುವಂತೆ ಸಲಹೆ ನೀಡುತ್ತಾರೆ. ವಿವಿಧ ಬಣ್ಣಗಳ ತರಕಾರಿಗಳು ಮಾರುಕಟ್ಟೆಯಲ್ಲಿ ಸಿಗುತ್ತವೆ. ಅದಾಗ್ಯೂ ಚಳಿಗಾಲದಲ್ಲಿ ಹಲವು ಬಣ್ಣಗಳ ತರಕಾರಿಗಳು ಲಭ್ಯ ಇವೆ. ಕಿತ್ತಳೆ, ಮೂಲಂಗಿ, ಕ್ಯಾರೆಟ್, ಸೌತೆಕಾಯಿ, ಹಸಿರು ಕ್ಯಾಪ್ಸಿಕಂ, ಹಸಿರು ಸೊಪ್ಪುಗಳು ಹೀಗೆ ಒಂದಾ, ಎರಡಾ ಹಲವು ಬಣ್ಣದ ತರಕಾರಿಗಳು ಆರೋಗ್ಯ ವರ್ಧಕವಾಗಿವೆ.


    ಬಣ್ಣ ಬಣ್ಣದ ತರಕಾರಿಗಳು ಮತ್ತು ಆರೋಗ್ಯ


    ವಿವಿಧ ಬಣ್ಣಗಳ ತರಕಾರಿಗಳು ವಿವಿಧ ಗುಣಲಕ್ಷಣ ಹೊಂದಿವೆ ಅಂತಾರೆ ಪೌಷ್ಟಿಕ ತಜ್ಞೆ ಡಾ.ಅದಿತಿ ಶರ್ಮಾ. ತ್ರಿವರ್ಣ ಹಣ್ಣು ಮತ್ತು ತರಕಾರಿಗಳು ಯಾವೆಲ್ಲಾ ಆರೋಗ್ಯ ಲಾಭ ನೀಡುತ್ತವೆ ಎಂದು ತಿಳಿಸಿದ್ದಾರೆ.


    ಕೆಂಪು ಮತ್ತು ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳು


    ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳು ಹಸಿವು ಹೆಚ್ಚಿಸುತ್ತವೆ. ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳಲ್ಲಿ ಆಲ್ಫಾ ಮತ್ತು ಬೀಟಾ ಕ್ಯಾರೋಟಿನ್ ಗುಣಲಕ್ಷಣಗಳಿವೆ. ಇದು ನಂತರ ವಿಟಮಿನ್ ಎ ರೂಪ ಪಡೆಯುತ್ತದೆ. ಈ ಪೋಷಕಾಂಶಗಳು ದೇಹಕ್ಕೆ ಬಣ್ಣ ನೀಡುತ್ತದೆ.




    ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತವೆ. ಮೂಳೆಗಳ ಆರೋಗ್ಯ ವೃದ್ಧಿಸುತ್ತದೆ. ಕ್ಯಾನ್ಸರ್ ಬೆಳವಣಿಗೆ ತಡೆಯುತ್ತವೆ. ಕೀಲುಗಳು ಮತ್ತು ಮೂಳೆಗಳ ಬಲಿಷ್ಠತೆಗೆ ಸಹಕಾರಿ. ಕಣ್ಣಿನ ಆರೋಗ್ಯಕ್ಕೆ ಉತ್ತಮ. ಹೃದ್ರೋಗ ಮತ್ತು ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತದೆ.


    ಹಳದಿ ಬಣ್ಣದ ತರಕಾರಿ ಮತ್ತು ಹಣ್ಣುಗಳು


    ಹೇಗೆ ಕಿತ್ತಳೆ ಬಣ್ಣದ ಆಹಾರಗಳು ಆರೋಗ್ಯ ಪ್ರಯೋಜನ ನೀಡುತ್ತವೆಯೋ, ಹಾಗೆಯೇ ಹಳದಿ ಬಣ್ಣದ ತರಕಾರಿ ಮತ್ತು ಹಣ್ಣುಗಳು ಲಾಭ ತಂದು ಕೊಡುತ್ತವೆ. ಕಿತ್ತಳೆ ಮತ್ತು ಹಳದಿ ಬಣ್ಣದ ಆಹಾರಗಳಲ್ಲಿ ಕಿತ್ತಳೆ, ಟ್ಯಾಂಗರಿನ್, ಕಮರ್ಖಾ, ಕುಂಬಳಕಾಯಿ, ಪಪ್ಪಾಯಿ ಮತ್ತು ಏಪ್ರಿಕಾಟ್ ಸೇರಿದೆ.


    ವಿಟಮಿನ್ ಸಿ ಕೆಂಪು ಮತ್ತು ಕಿತ್ತಳೆ ಬಣ್ಣದ ಹಣ್ಣು ಮತ್ತು ತರಕಾರಿಗಳಲ್ಲಿದೆ. ಕಿತ್ತಳೆ ಹಾಗೂ ಹಳದಿ ಬಣ್ಣವು ಶಕ್ತಿಯ ಸಂಕೇತ. ಕಿತ್ತಳೆ ಮತ್ತು ಕ್ಯಾರೆಟ್ ಜ್ಯೂಸ್ ದೇಹವನ್ನು ಸಕ್ರಿಯವಾಗಿರಿಸುತ್ತದೆ ಮತ್ತು ಶಕ್ತಿ ವರ್ಧಕವಾಗಿದೆ ಅಂತಾರೆ ತಜ್ಞರು.


    ಬಿಳಿ ಬಣ್ಣದ ಹಣ್ಣು ಮತ್ತು ತರಕಾರಿಗಳು


    ಬಿಳಿ ಬಣ್ಣದ ತರಕಾರಿ ಮತ್ತು ಹಣ್ಣುಗಳು ಉರಿಯೂತದ ಗುಣಲಕ್ಷಣ ಹೊಂದಿವೆ. ದೇಹದ ಉರಿಯೂತ ಕಡಿಮೆ ಮಾಡುತ್ತದೆ. ಕ್ಯಾನ್ಸರ್ ಬೆಳವಣಿಗೆ ತಡೆಯುತ್ತದೆ. ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ.


    ಸಾಂದರ್ಭಿಕ ಚಿತ್ರ


    ಅಣಬೆ, ಬೆಳ್ಳುಳ್ಳಿ, ಬಾಳೆ ಹಣ್ಣು, ಬಿಳಿ ಈರುಳ್ಳಿ, ಆಲೂಗಡ್ಡೆ, ಕಾಟೇಜ್ ಚೀಸ್, ಮೂಲಂಗಿ ಮತ್ತು ಅಕ್ಕಿ ಸೇರಿದಂತೆ ಎಲ್ಲಾ ಬಿಳಿ ಆಹಾರ ಪದಾರ್ಥಗಳಲ್ಲಿ ಕಾರ್ಬೋಹೈಡ್ರೇಟ್ ಮತ್ತು ಫೈಬರ್ ಹೇರಳವಾಗಿದೆ. ಆಂಥೋಕ್ಸಾಂಥಿನ್ ಇದೆ. ಇದು ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ.


    ಹೂಕೋಸು ಮತ್ತು ಟರ್ನಿಪ್ ಗ್ಲುಕೋಸಿನೋಲೇಟ್ಸ್ ಎಂಬ ಪೌಷ್ಟಿಕ ಅಂಶವಿದೆ. ಕ್ಯಾನ್ಸರ್ ನಿಂದ ರಕ್ಷಿಸುತ್ತವೆ. ಬೆಳ್ಳುಳ್ಳಿ ಮತ್ತು ಈರುಳ್ಳಿಗಳಲ್ಲಿ ಪಾಲಿಫಿನಾಲ್ಸ್, ಉತ್ಕರ್ಷಣ ನಿರೋಧಕಗಳಿವೆ. ಪ್ರೋಟೀನ್ ಮತ್ತು ಫೈಬರ್ ಗುಣಲಕ್ಷಣಗಳು ಬಿಳಿ ಬೀನ್ಸ್ ನಲ್ಲಿವೆ. ಪೊಟ್ಯಾಸಿಯಮ್ ಮತ್ತು ಕಬ್ಬಿಣಾಂಶವಿದೆ.


    ಇದನ್ನೂ ಓದಿ: ಈ ಪದಾರ್ಥಗಳ ಸೇವನೆಯಿಂದ ಆಸಿಡಿಟಿ ಸಮಸ್ಯೆ ಹೆಚ್ಚುತ್ತದೆ, ಹುಷಾರು!


    ಹಸಿರು ಎಲೆಗಳ ತರಕಾರಿಗಳು


    ಕಬ್ಬಿಣದ ಕೊರತೆ ನಿವಾರಿಸುತ್ತವೆ ಹಸಿರು ತರಕಾರಿಗಳು. ಪಾಲಕ್ ಸೊಪ್ಪು, ಬಟಾಣಿ, ಗ್ರೀನ್ಸ್ ಮತ್ತು ಲಿಮಾ ಬೀನ್ಸ್ ಕಬ್ಬಿಣ ಒದಗಿಸುತ್ತವೆ. ಹಸಿರು ಬಣ್ಣದ ತರಕಾರಿಗಳು ಆರೋಗ್ಯಕರ ಜೀವನ ಪ್ರತಿನಿಧಿಸುತ್ತದೆ.

    Published by:renukadariyannavar
    First published: