Memory Power: ಎಷ್ಟೇ ಓದಿದ್ರೂ ಮರೆವು ನಿಮ್ಮನ್ನು ಕಾಡ್ತಿದ್ಯಾ? ಈ 3 ಟ್ರಿಕ್ಸ್​​ನ ಫಾಲೋ ಮಾಡಿ!

Memory Power: ಕಲಿಕೆಯಲ್ಲಿ ನೆನಪಿನ ಶಕ್ತಿ ಅನ್ನೋದು ಅತೀ ಮುಖ್ಯ ಆದರೆ ಕೆಲವರಿಗೆ ಎಷ್ಟು ಓದಿದರೂ ನೆನಪೇ ಇರಲ್ಲ. ಅಂತವರು ಈ ಮೂರು ಉಪಾಯಗಳನ್ನು ನೋಡಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಜೀವನ ಅಂದ ಮೇಲೆ ಹೊಸದನ್ನು(New) ಕಲಿಯೋದು ಇದ್ದೇ ಇರುತ್ತೆ. ದಿನವೂ ಹೊಸ ಹೊಸದನ್ನು ಕಲಿಯಲೇಕು. ಇನ್ನು ವಿದ್ಯಾರ್ಥಿಗಳನ್ನಂತೂ (Students) ಕೇಳೋದೇ ಬೇಡ ದಿನನಿತ್ಯ ಶಾಲೆಯಲ್ಲಿ ಕಲಿಸೋ ಹತ್ತಾರು ಪಾಠಗಳನ್ನು ನೆನಪಿನಲ್ಲಿಟ್ಟುಕೊಳ್ಳೋಕೆ ಕಷ್ಟಪಡ್ತಾರೆ. ಹೀಗಾಗಿ ಕಲಿಕೆಯಲ್ಲಿ ಏಕಾಗ್ರತೆ ಹಾಗೂ ನೆನಪಿಟ್ಟುಕೊಳ್ಳೋದು ತುಂಬಾನೇ ಮುಖ್ಯ. ಇನ್ನು ಉದ್ಯೋಗದಲ್ಲಿರುವವರಿಗೆ ಹೊಸದನ್ನು ಕಲಿಯೋದು ಅನಿವಾರ್ಯ. ಅದಕ್ಕಾಗಿ ಅನೇಕರು ಕಷ್ಟ ಪಡುತ್ತಾರೆ. ಅಂಥವರಿಗಾಗಿಯೇ ವಿಷಯವನ್ನು(Subject) ಬೇಗನೇ ಕಲಿಯೋದಕ್ಕೆ ಹಾಗೂ ನೆನಪಿಟ್ಟುಕೊಳ್ಳೋಕೆ ಮೂರು ಉಪಾಯಗಳನ್ನು ನೀಡಲಾಗಿದೆ ಇದನ್ನು ಪಾಲಿಸಿದ್ರೆ ನೀವೂ ಬೇಗ  ಬೇಗ ಕಲಿಬಹುದು. 

ಸ್ಲೀಪ್‌ ಸ್ಯಾಂಡ್​​ವಿಚ್

ವಿಜ್ಞಾನಿಗಳು ಸುದೀರ್ಘ ಅಧ್ಯಯನಕ್ಕೆ ಸ್ಲೀಪ್‌ ಸ್ಯಾಂಡ್‌ ವಿಚ್‌ ಅನ್ನು ಶಿಫಾರಸು ಮಾಡ್ತಾರೆ. ನಿಮಗೆ ಒಂದು ಮುಖ್ಯವಾದ ಪ್ರಸೆಂಟೇಶನ್‌ ಇದೆ. ಅದನ್ನ ತಯಾರಿಸೋದಕ್ಕೆ ಕೇವಲ ಒಂದೇ ದಿನ ಇದೆ ಅಂತ ಕಲ್ಪಿಸಿಕೊಳ್ಳಿ.ಇದಕ್ಕಾಗಿ ನೀವು ಹೆಚ್ಚು ಓದಬೇಕು ಮತ್ತು ಪ್ರೆಸೆಂಟೇಶನ್‌ ತಯಾರಿಸಬೇಕು. ಇದಕ್ಕಾಗಿ ನೀವು ಅಧ್ಯಯನ ಮಾಡಿ, ಸ್ವಲ್ಪ ಹೊತ್ತು ಮಲಗಿ. ಮತ್ತೆ ಎದ್ದು ಓದಿರಿ. ಮತ್ತೆ ಸ್ವಲ್ಪ ಮಲಗಿ. ಆಗ ನಿಮ್ಮ ಕೆಲಸ ಮತ್ತಷ್ಟು ಸುಲಭವಾಗುತ್ತದೆ.

ಸ್ಲೀಪ್‌ ಸ್ಯಾಂಡ್‌ ವಿಚ್‌ ಅನ್ನೋದು ವೇಗವಾಗಿ ಕಲಿತುಕೊಳ್ಳೊದಕ್ಕೆ ಒಂದು ಒಳ್ಳೆಯ ಮಾರ್ಗ. ನಿದ್ದೆಯು ನೀವು ಓದಿದ ಮಾಹಿತಿಯನ್ನು ಹಾಗೆಯೇ ಉಳಿಸಿಕೊಳ್ಳೋದಕ್ಕೆ ಸಹಾಯ ಮಾಡುತ್ತೆ. ಮಲಗಲು ಹೋಗುವಾಗ ನೀವು ಓದಿದ ಮಾಹಿತಿಯು ಸುಪ್ತ ಮನಸ್ಸಿನಲ್ಲಿ ಸಂಗ್ರಹವಾಗುತ್ತದೆ. ಹಾಗೇಯೆ ನಿಮಗೆ ಸುಸ್ತಾಗೋದಿಲ್ಲ. ಆಕ್ಟಿವ್‌ ಆಗಿರುವ ನಿಮ್ಮ ಮೆದುಳು ಥಟ್ಟನೆ ಗ್ರಹಿಸುತ್ತದೆ. ಇನ್ನು ನೀವು ಕೊನೆಯ ಅವಧಿಯಲ್ಲಿ ಅಭ್ಯಾಸ ಮಾಡ್ತೀರಾ ಅಂತಾ ಆದ್ರೆ ಕೆಲವು ಗಂಟೆಗಳ ಕಾಲ ಅಧ್ಯಯನ ಮಾಡಿ ಹಾಗೂ ರಾತ್ರಿ ಚೆನ್ನಾಗಿ ನಿದ್ದೆ ಮಾಡಿ. ಓದಿರುವುದು ನಿಮ್ಮ ತಲೆಯಲ್ಲಿ ಜಾಗೃತವಾಗಿರುತ್ತದೆ.

ಇದನ್ನೂ ಓದಿ: ಕೂದಲು ಉದ್ದ ಮತ್ತು ದಪ್ಪವಾಗಿ ಬೆಳೆಯಲು ಈ ಕ್ರಮವನ್ನು ಅನುಸರಿಸಿ

ವಿಷಯಗಳನ್ನು ಹೆಣೆಯುವುದು

2008 ರಲ್ಲಿ ಸಂಶೋಧಕರ ತಂಡವೊಂದು ವಿರುದ್ಧ ಕಲಿಕೆಯ ಬಗ್ಗೆ ಸಂಶೋಧನೆ ನಡೆಸಿತು. ಒಂದು ವಿಷಯವನ್ನು ವೇಗವಾಗಿ ಕಲಿಯಬೇಕೆಂದರೆ ನೀವು ಬೇರೆ ಇನ್ನೇನ್ನೋ ಅಭ್ಯಾಸ ಮಾಡಬೇಕು ಎಂಬುದು. ಅದು ಹೇಗೆ ಅನ್ನೋದನ್ನ ನೋಡೋಣ. ಒಮ್ಮೆ ಸಂಶೋಧಕರು ಆರು ವರ್ಣಚಿತ್ರಗಳ ಆಧಾರದ ಮೇಲೆ ಕೆಲವು ಕಲಾವಿದರನ್ನು ಗುರುತಿಸಲು ಹೇಳುತ್ತಾರೆ. ಉಳಿದವರಿಗೆ ತಮ್ಮದೇ ಕೆಲವು ವರ್ಣಚಿತ್ರಗಳನ್ನು ನೀಡುತ್ತಾರೆ. ಹೀಗೆ ಮಾಡಿ ಎರಡು ಗುಂಪುಗಳಲ್ಲಿ ಜನರನ್ನು ಬಿಟ್ಟಾಗ ಅವರು ಎಲ್ಲಾ ಚಿತ್ರಗಳನ್ನೂ ನೆನಪಿನಲ್ಲಿಟ್ಟುಕೊಂಡಿದ್ದರು. ಹಾಗಾದ್ದರಿಂದ ಒಂದೇ ರೀತಿಯ ವಿಷಯಕ್ಕಿಂತ ಹಲವು ವಿಷಯಗಳ ಮೇಲೆ ಗಮನಹರಿಸುವು ಮುಖ್ಯ. ಹೀಗೆ ಮಾಡಿದಾಗ ನೆನಪಿನ ಶಕ್ತಿ ಹೆಚ್ಚುತ್ತದೆ.

ಚ್ಯೂಯಿಂಗ್ ಗಮ್ ಜಗಿಯಿರಿ

ನಮ್ಮಲ್ಲಿ ಬಹಳಷ್ಟು ಜನರು ತಾಜಾ ಉಸಿರಾಟಕ್ಕೆಂದು ಚ್ಯೂಯಿಂಗ್‌ ಗಮ್‌ ಜಗಿಯುತ್ತಾರೆ. ಇನ್ನೂ ಕೆಲವರಿಗೆ ಅದರ ಟೇಸ್ಟ್‌ ಇಷ್ಟ ಆಗುತ್ತದೆ. ಆದ್ರೆ ನಿಮ್ಮ ಮೆದುಳು ವೇಗವಾಗಿ ಕಲಿಯೋದಿಕ್ಕೆ ಚ್ಯೂಯಿಂಗ್‌ ಗಮ್‌ ಸಹಾಯ ಮಾಡುತ್ತೆ ಅಂದ್ರೆ ನೀವು ನಂಬ್ತೀರಾ?ಹೌದು ವಿಚಿತ್ರ ಆದರೂ ಸತ್ಯ ಇದು. ಅಧ್ಯಯನಗಳ ಪ್ರಕಾರ, ಚ್ಯೂಯಿಂಗ್‌ ಗಮ್‌ ಅರಿವಿನ ಪ್ರಯೋಜನಗಳನ್ನು ಹೊಂದಿದೆ. ಇದನ್ನು ತಿನ್ನುವ ಜನರು ಹೆಚ್ಚು ಅಲರ್ಟ್‌ ಆಗಿರುತ್ತಾರೆ ಹಾಗೂ ಕಡಿಮೆ ಒತ್ತಡ ಅನುಭವಿಸುತ್ತಾರೆ.

ಇದನ್ನೂ ಓದಿ: ಹೈಟ್​ ಇಲ್ಲ ಅಂತ ಬೇಜಾರಾ? 75 ಸಾವಿರ ಡಾಲರ್​ ಇದ್ರೆ 6 ಇಂಚು ಎತ್ತರ ಆಗ್ಬಹುದು!

ಇದು ವ್ಯಕ್ತಿಯನ್ನು ಶಾಂತವಾಗಿಡಲು ಸಹಾಯ ಮಾಡುತ್ತದೆ. ಈ ವಿಷಯವನ್ನು ಮೊದಲ ಬಾರಿಗೆ 2011 ರಲ್ಲಿ ಕಂಡುಹಿಡಿಯಲಾಯಿತು. ಇನ್ನು 2015ರಲ್ಲಿ ನಡೆದ ಮತ್ತೊಂದು ಸಂಶೋಧನೆಯು ಚ್ಯೂಯಿಂಗ್‌ ಗಮ್‌ ನೀವು ಖುಷಿಯಿಂದ ಇರೋಕೆ ಸಹಾಯ ಮಾಡುತ್ತೆ ಎಂದಿದೆ. ಇವಿಷ್ಟು ವಿಷಯಗಳು ನೀವು ವಿಷಯವನ್ನು ವೇಗವಾಗಿ ಕಲಿಯೋಕೆ ಹಾಗೂ ನೆನಪಿಟ್ಟುಕೊಳ್ಳಲು ಸಹಾಯ ಮಾಡುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.
First published: