• Home
  • »
  • News
  • »
  • lifestyle
  • »
  • Pregnancy And Piles: ಗರ್ಭಾವಸ್ಥೆಯಲ್ಲಿ ಪೈಲ್ಸ್ ಸಮಸ್ಯೆಗೆ ಪರಿಹಾರ ಪಡೆಯೋದು ಹೇಗೆ?

Pregnancy And Piles: ಗರ್ಭಾವಸ್ಥೆಯಲ್ಲಿ ಪೈಲ್ಸ್ ಸಮಸ್ಯೆಗೆ ಪರಿಹಾರ ಪಡೆಯೋದು ಹೇಗೆ?

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

Piles During Pregnancy: ನೋವು ನಿವಾರಕಗಳನ್ನು ಬಳಸುವುದು - ಇಬುಪ್ರೊಫೇನ್, ಅಸೆಟಾಮಿನೋಫೆನ್ ಮುಂತಾದ ಔಷಧಿಗಳು ನೋವು ನಿವಾರಕ ಮಾತ್ರೆಗಳಾಗಿದ್ದು ವೈದ್ಯರ ಸಲಹೆ ಮೆರೆಗೆ ಇವುಗಳನ್ನು ಬಳಸುವ ಮೂಲ್ಕವೂ ಮೂಲವ್ಯಾಧಿಯ ನೋವಿನಿಂದ ಪರಿಹಾರವನ್ನು ಪಡೆಯಬಹುದು.

  • Share this:

ಮೂಲವ್ಯಾಧಿ 9Constipation) ಎಂಬುದು ಮಲ ವಿಸರ್ಜಿಸುವ ಸ್ಥಳದಲ್ಲಿ ಕೆಲವು ಆಂತರಿಕ ಶಾರೀರಿಕ ವೈಪರಿತ್ಯಗಳಿಂದಾಗಿ ಉಂಟಾಗುವ ಒಂದು ಆರೋಗ್ಯದ ಸಮಸ್ಯೆಯಾಗಿದೆ (Health problem). ಇದು ಮಾರಣಾಂತಿಕವಾಗಿರದಿದ್ದರೂ ಮಲ ವಿಸರ್ಜನೆಯ ಸಂದರ್ಭದಲ್ಲಿ ಅಥವಾ ಸಾಮಾನ್ಯವಾಗಿ ಆ ಸ್ಥಳದಲ್ಲಿ ನೋವು ಅಥವಾ ತುರಿಕೆ ಉಂಟು ಮಾಡುತ್ತಿರುತ್ತದೆ. ಬಹು ಪ್ರಕರಣಗಳಲ್ಲಿ ನಮ್ಮ ಜೀವನಶೈಲಿಯಲ್ಲಿ ಉತ್ತಮ ಬದಲಾವಣೆಗಳನ್ನು (Changes) ಮಾಡಿಕೊಳ್ಳುವ ಮೂಲಕ ಇದು ತನ್ನಿಂದ ತಾನಾಗಿಯೇ ಹೋಗಬಹುದಾಗಿದೆಯಾದರೂ ಇದನ್ನು ನಿರ್ಲಕ್ಷಿಸಿದರೆ ಇದರಿಂದ ಸಾಕಷ್ಟು ನೋವು ಅನುಭವಿಸಬಹುದಾಗಿದ್ದು ಮನೆಮದ್ದುಗಳಿಂದ (Home Remedies) ಪರಿಹರಿಸಲ್ಪಡದಿದ್ದರೆ ಶಸ್ತ್ರ ಚಿಕಿತ್ಸೆಗಳಿಗೆ ಒಳಗಾಗಬೇಕಾಗುತ್ತದೆ. 


ಮೂಲವ್ಯಾಧಿ ಎಂದರೇನು?


ಮೊದಲಿಗೆ ಮೂಲವ್ಯಾಧಿ ಎಂದರೇನು ಎಂಬುದರ ಬಗ್ಗೆ ತಿಳಿದುಕೊಳ್ಳೋಣ. ಸಾಮಾನ್ಯವಾಗಿ ಪೈಲ್ಸ್ ಎಂದೆ ಎಲ್ಲೆಡೆ ಕರೆಯಲ್ಪಡುವ ಮೂಲವ್ಯಾಧಿಯು ಬಹಳಷ್ಟು ಜನರು ಅನುಭವಿಸುವ ಒಂದು ಆರೋಗ್ಯ ಸಮಸ್ಯೇಯೇ ಆಗಿದೆ. ಮನುಷ್ಯನು ಮಲ ವಿಸರ್ಜಿಸುವ ಮಾರ್ಗವಾದ ಗುದ ದ್ವಾರದ ಒಳ ಭಾಗದಲ್ಲಿ ಶೇಖರಣೆಗೊಳ್ಳುವ ಉರಿಯುತದ, ಬಾವು ಬಂದಂತಿರುವ ಅಂಗಾಂಶಗಳನ್ನೇ ಪೈಲ್ಸ್ ಅಥವಾ ಮೂಲವ್ಯಾಧಿ ಎಂದು ಕರೆಯುತ್ತಾರೆ. ಗುದ ದ್ವಾರದ ಹೊರ  ಹಾಗೂ ಒಳ ಎರಡೂ ಭಾಗಗಳಲ್ಲಿ ಕಂಡುಬರುವ ಈ ಮೂಲವ್ಯಾಧಿಯು ವಿವಿಧ ಗಾತ್ರ, ಆಕಾರ ಮತ್ತು ಅಳತೆಗಳಲ್ಲಿರುತ್ತವೆ.


ಗುದ ದ್ವಾರದ ಒಳ ಭಾಗದಲ್ಲುಂಟಾಗುವ ಮೂಲವ್ಯಾಧಿಯು ಗುದದ್ವಾರದ ಒಳ ಭಾಗದ ಮೇಲ್ಮುಖದಲ್ಲಿ ಸುಮಾರು 2-4 ಸೆ.ಮೀ ಗಳವರೆಗೂ ವಿಸ್ತರಿಸಿದರೆ ಹೊರ ಭಾಗದಲ್ಲುಂಟಾಗುವ ಮೂಲವ್ಯಾಧಿಯು ಗುದದ್ವಾರದ ಸುತ್ತಲಿನ ಅಂಚುಗಳಲ್ಲಿ ಕಂಡುಬರುತ್ತದೆ. ಮಲ ವಿಸರ್ಜನೆಗೆ ಸಂಬಂಧಿಸಿದಂತೆ ಇದು ಸಾಕಷ್ಟು ಕಿರಿಕಿರಿ ಉಂಟು ಮಾಡುತ್ತದೆ. ಇಲ್ಲಿ ಗಮನಿಸಬೇಕಾದ ಒಂದು ಅಂಶವೆಂದರೆ ವಯಸ್ಸಾದಂತೆ ಮೂಲವ್ಯಾಧಿಗೊಳಪಡುವ ಸಂಭವನೀಯತೆ ಹೆಚ್ಚಾಗತೊಡಗುತ್ತದೆ.




ಅಲ್ಲದೆ ಪುರುಷರಂತೆ ಮಹಿಳೆಯರೂ ಸಹ ಮೂಲವ್ಯಾಧಿ ಸಮಸ್ಯೆಗಳನ್ನು ಅನುಭವಿಸುತ್ತಾರೆ. ಅದರಲ್ಲೂ ವಿಶೇಷವಾಗಿ ಗರ್ಭಧರಿಸಿದ ಹೆಣ್ಣುಮಕ್ಕಳು ಮಲಬದ್ಧತೆ ಅನುಭವಿಸುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮೂಲವ್ಯಾಧಿ ಸಮಸ್ಯೆ ಸಿಲುಕುವ ಸಾಧ್ಯತೆಯೂ ಇರುತ್ತದೆ.


ಇದರ ಲಕ್ಷಣಗಳು


ಬಹಳಷ್ಟು ಪ್ರಕರಣಗಳಲ್ಲಿ ಬಹಳಷ್ಟು ಜನರಲ್ಲಿ ಮೂಲವ್ಯಾಧಿ ಕಾಣಿಸಿಕೊಂಡರೂ ಸಹ ಅದು ಅಷ್ಟೊಂದು ಗಂಭೀರ ಸಮಸ್ಯೆಗಳನ್ನು ತಂದೊಡ್ಡುವುದಿಲ್ಲ. ಕೆಲದಿನಗಳ ಬಳಿಕ ತಾನಾಗಿಯೇ ಅದು ಮಾಯವಾಗಿ ಹೋಗಿ ಬಿಡುತ್ತದೆ. ಆದರೆ, ಅದು ಉಲ್ಬಣಗೊಂಡಾಗ ಮಾತ್ರ ಮನುಷ್ಯ ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತದೆ. ಆದಾಗ್ಯೂ ಪೈಲ್ಸ್ ಇರುವಂತೆ ಸೂಚಿಸುವ ಕೆಲ ಲಕ್ಷಣಗಳು ಈ ಕೆಳಗಿನಂತಿವೆ.


* ಗುದದ್ವಾರದ ಬಳಿ ಗಟ್ಟಿಯಾದ ಹಾಗೂ ನೋವಿನಿಂದ ಕೂಡಿರುವ ಗಂಟಿನ ಉಪಸ್ಥಿತಿಯನ್ನು ಮನುಷ್ಯ ಅನುಭವಿಸುತ್ತಾನೆ. ಇಂತಹ ಗಂಟಿನಲ್ಲಿ ರಕ್ತವಿದ್ದರೆ ಇದನ್ನು ಥ್ರೊಂಬೋಸ್ಡ್ ಎಕ್ಸ್ಟರ್ನಲ್ ಹ್ಯುಮರಾಯಿಡ್ಸ್ ಎಂದು ಕರೆಯುತ್ತಾರೆ.  


* ಮೂಲವ್ಯಾಧಿಯಿಂದ ಬಳಲುವ ಮನುಷ್ಯ ಮಲ ವಿಸರ್ಜಿಸಿದ ನಂತರವೂ ಅವನಲ್ಲಿ ಪೂರ್ಣವಗಿ ವಿಸರ್ಜಿತವಾಗಿದೆ ಎಂಬ ಸಮಾಧಾನ ಅಥವಾ ತೃಪ್ತಿ ಎಂಬುದು ಇರುವುದಿಲ್ಲ.


* ಮಲದ ಜೊತೆ ರಕ್ತದ ಹನಿಗಳು ವಿಸರ್ಜಿತವಾಗುವುದು.


* ಮಲ ವಿಸರ್ಜನವಾಗುವ ಗುದ ದ್ವಾರದ ಬಳಿ ಕೆರೆತದ ಅನುಭವ, ಕೆಂಪಾಗುವಿಕೆ ಹಾಗೂ ಬಾವು ಕಾಣುವುದು.


* ಮಲ ವಿಸರ್ಜನೆಯ ಸಂದರ್ಭದಲ್ಲೂ ನೋವು ಉಂಟಾಗುವುದು.


ಒಮ್ಮೊಮ್ಮೆ ಇದು ತನ್ನಿಂದ ತಾನಾಗಿಯೇ ಹೋಗದಿದ್ದರೆ ಅಥವಾ ಇದನ್ನು ಉಪಚರಿಸದಿದ್ದರೆ ಪೈಲ್ಸ್ ಎಂಬುದು ಗಂಭೀರ ಪರಿಣಾಮಗಳನ್ನೂ ಸಹ ಉಂಟು ಮಾಡಬಲ್ಲುದು. ಉದಾಹರಣೆಗೆ


* ಮಲ ವಿಸರ್ಜನೆಯ ಸಂದರ್ಭದಲ್ಲಿ ಅತಿಯಾದ ರಕ್ತಸ್ರಾವ ಉಂಟಾಗುವುದು, ಕೊನೆಗೆ ಇದು ಅನೇಮಿಯಾ ಉಂಟು ಮಾಡಬಲ್ಲುದು.


* ಸೋಂಕು ಉಂಟಾಗುವುದು.


* ಮಲ ವಿಸರ್ಜನೆಯ ಮೇಲೆ ನಿಯಂತ್ರಣ ಕಳೆದುಕೊಳ್ಳುವುದು.


* ಗುದ ದ್ವಾರದ ಬಳಿ ಅಥವಾ ಒಳ ಭಾಗದಲ್ಲಿ ಹೊಸದಾದ ಚಾನೆಲ್ ಒಂದು ಸೃಷ್ಟಿಯಾಗುವಿಕೆ.


ಮೂಲವ್ಯಾಧಿಯನ್ನು ನಾಲ್ಕು ಭಾಗಗಳಲ್ಲಿ ವಿಂಗಡಿಸಲಾಗಿದೆ


ಗ್ರೇಡ್ I : ಈ ಪ್ರಕಾರದ ಮೂಲವ್ಯಾಧಿಯಲ್ಲಿ ಗುದದ್ವಾರದ ಲೈನಿಂಗ್ ಗಳಲ್ಲಿ ಚಿಕ್ಕದಾದ ಉಬ್ಬುಗಳು ಇರುತ್ತವೆ ಹಾಗೂ ಬಾಹ್ಯವಾಗಿ ಇವು ಕಂಡುಬರುವುದಿಲ್ಲ.


ಗ್ರೇಡ್ II : ಈ ಪ್ರಕಾರದ ಪೈಲ್ಸ್ ಗಳು ಮೊದಲನೇ ಗ್ರೇಡ್ ಪೈಲ್ಸ್ ಗಳಿಗಿಂತಲೂ ಗಾತ್ರದಲ್ಲಿ ಸ್ವಲ್ಪ ದೊಡ್ಡದಾಗಿರುತ್ತವೆ. ಮಲ ವಿಸರ್ಜನೆಯಾಗುವಾಗ ಇವೂ ಸಹ ತಳ್ಳಲ್ಪಟ್ಟಂತಹ ಅನುಭವ ನೀಡುತ್ತವೆ. 


ಗ್ರೇಡ್ III : ಇವು ಎರಡನೇ ಪ್ರಕಾರಕ್ಕಿಂತ ಇನ್ನೂ ಸ್ವಲ್ಪ ದೊಡ್ಡ ಗಾತ್ರದ್ದಾಗಿದ್ದು ಗುದದ್ವಾರದಿಂದ ಜೋತು ಬೀಳುತ್ತಿರುತ್ತವೆ. ಇವುಗಳನ್ನು ಮತ್ತೆ ಒಳ ನೂಕಬಹುದಾಗಿರುತ್ತದೆ. 


ಗ್ರೇಡ್ IV : ಈ ಪ್ರಕಾರದ ಪೈಲ್ಸ್ ಗಳು ದೊಡ್ಡದಾಗಿದ್ದು ಇವುಗಳನ್ನು ಮತ್ತೆ ಒಳ ಹಾಕಲು ಸಾಧ್ಯವಾಗುವುದಿಲ್ಲ. ಇವುಗಳಿಗೆ ಚಿಕಿತ್ಸೆಯ ಅವಶ್ಯಕತೆಯಿರುತ್ತದೆ. 


ಬಾಹ್ಯವಾಗಿ ಉಂಟಾಗುವ ಮೂಲವ್ಯಾಧಿಯು ಗುದದ್ವಾರದ ಸುತ್ತ ಗಂಟುಗಳನ್ನು ನಿರ್ಮಿಸುತ್ತವೆ. ರಕ್ತ ಹೆಪ್ಪುಗಟ್ಟಿದ ಸಂದರ್ಭದಲ್ಲಿ ಅವು ವಿಪರೀತವಾದ ಕೆರೆತ ಹಾಗೂ ನೋವನ್ನು ಉಂಟು ಮಾಡುತ್ತವೆ. ಈ ಸಂದರ್ಭದಲ್ಲಿ ಇದನ್ನು ಉಪಚರಿಸಬೇಕಾಗಿರುವುದು ಅನಿವಾರ್ಯವಾಗುತ್ತದೆ. 


ಮೂಲವ್ಯಾಧಿ ಉಂಟಾಗಲು ಕಾರಣಗಳು


ಕೆಳ ಭಾಗದ ಗುದನಾಳದಲ್ಲಿ ಅತಿಯಾದ ಒತ್ತಡದಿಂದ ಸಾಮಾನ್ಯವಾಗಿ ಮೂಲವ್ಯಾಧಿ ಉಂಟಾಗುತ್ತದೆ. ನಮಗೆಲ್ಲ ತಿಳಿದಿರುವಂತೆ ಗುದ ಭಾಗದೊಳಗೆ ರಕ್ತನಾಳಗಳಿರುತ್ತವೆ. ಇವುಗಳ ಮೇಲೆ ಒತ್ತಡ ಬಿದ್ದಾಗ ಇವು ಹಿಗ್ಗಿ ಮೂಲವ್ಯಾಧಿ ಉಂಟಾಗುವಂತೆ ಮಾಡುತ್ತವೆ. ಹಾಗಾದರೆ, ಇವುಗಳ ಮೇಲೆ ಒತ್ತಡ ಹೇಗೆ ಬೀಳಬಹುದು ಎಂಬ ಪ್ರಶ್ನೆ ಮೂಡುವುದು ಸಹಜ. ಅದಕ್ಕೆ ಉತ್ತರವೆಂದರೆ


* ಒಮ್ಮೊಮ್ಮೆ ಅತಿಯಾದ ಭಾರ ಎತ್ತುವಿಕೆಯಿಂದಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


* ತೀವ್ರವಾದ ಅಥವಾ ನಿರಂತರವಾದ ಮಲಬದ್ಧತೆ ಅನುಭವಿಸಿದಾಗ ಗುದ ಭಾಗದೊಳಗಿನ ರಕ್ತನಾಳಗಳ ಮೇಲೆ ಒತ್ತಡ ಬೀಳುತ್ತದೆ.


* ಗರ್ಭಧರಿಸಿದಾಗಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


* ಅತಿಯಾದ ಭೇದಿ ಉಂಟಾದ ಸಂದರ್ಭಗಳಲ್ಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


* ಬಲವಂತವಾಗಿ ಮಲ ವಿಸರ್ಜಿಸುವಾಗಲೂ ರಕ್ತನಾಳಗಳ ಮೇಲೆ ಒತ್ತಡ ಬೀಳುವ ಸಾಧ್ಯತೆ ಇರುತ್ತದೆ.


ಗರ್ಭಾವಸ್ಥೆಯಲ್ಲಿ ನೀವು ಹೆಮೊರೊಯಿಡ್ಸ್ ಅನ್ನು ಹೇಗೆ ತಡೆಯಬಹುದು?


ಗರ್ಭಾವಸ್ಥೆಯಲ್ಲಿ ನೀವು ಹಾರ್ಮೋನುಗಳ ಹೆಚ್ಚಳ ಮತ್ತು ಬೆಳೆಯುತ್ತಿರುವ ಹೊಟ್ಟೆಯನ್ನು ಬದಲಾಯಿಸಲು ಸಾಧ್ಯವಾಗದಿದ್ದರೂ, ಗರ್ಭಾವಸ್ಥೆಯಲ್ಲಿ ಮೂಲವ್ಯಾಧಿ ಚಿಕಿತ್ಸೆಯಲ್ಲಿ ನಿಮ್ಮ ಆಹಾರ ಮತ್ತು ವ್ಯಾಯಾಮದ ದಿನಚರಿಯು ನಿಮಗೆ ಬಹಳ ಸಹಾಯ ಮಾಡಬಲ್ಲುದು. ನೀವು ಮೂಲವ್ಯಾಧಿ ಉಂಟಾಗದಂತೆ ತೆಗೆದುಕೊಳ್ಳಬಹುದಾದ ಕೆಲವು ಕ್ರಮಗಳು ಹೀಗಿರಲಿ


ಮಲವನ್ನು ಮೃದುವಾಗಿ ಮತ್ತು ಕಡಿಮೆ ನೋವಿನಿಂದ ಹೊರಹಾಕಲು ನಿಮ್ಮ ದೈನಂದಿನ ನೀರಿನ ಸೇವನೆಯನ್ನು ಹೆಚ್ಚಿಸಿ  


* ಹೆಚ್ಚು ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ತಿನ್ನುವ ಮೂಲಕ ನಿಮ್ಮ ದೈನಂದಿನ ಫೈಬರ್ ಸೇವನೆಯನ್ನು ಹೆಚ್ಚಿಸಿ (ನಿಮ್ಮ ವೈದ್ಯರು ಬೇರೆ ರೀತಿಯಲ್ಲಿ ಸೂಚಿಸದ ಹೊರತು)


* ವಾಕಿಂಗ್‌ನಂತಹ ನಿಮ್ಮ ದೈನಂದಿನ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು (ನಿಮ್ಮ ಚಟುವಟಿಕೆಗಳು ಪರಿಣಾಮಕಾರಿಯಾಗಲು ಹೆಚ್ಚಿನ ಶ್ರಮ ಪಡುವ ಅಗತ್ಯವಿಲ್ಲ)


* ನಿಮಗೆ ಸರಿಯಾಗಿ ಮಲ ವಿಸರ್ಜಿಸಲು ಆಗುತ್ತಿಲ್ಲವೆಂದರೆ ಶೌಚಾಲಯದಲ್ಲಿ ಹೆಚ್ಚು ಹೊತ್ತು ಕುಳಿತುಕೊಳ್ಳುವುದನ್ನು ತಡೆಯಿರಿ


* ನಿಮ್ಮ ಗರ್ಭಾವಸ್ಥೆಯಲ್ಲಿ ನೀವು ಸುರಕ್ಷಿತವಾಗಿ ವ್ಯಾಯಾಮ ಮಾಡಬಹುದು ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ವ್ಯಾಯಾಮದ ದಿನಚರಿಯನ್ನು ಹೆಚ್ಚಿಸುವ ಮೊದಲು ಯಾವಾಗಲೂ ನಿಮ್ಮ ವೈದ್ಯರನ್ನು ಪರೀಕ್ಷಿಸಿ.


ಪೈಲ್ಸ್ ನಿವಾರಿಸಲು ಮನೆ ಚಿಕಿತ್ಸೆಗಳು


ಗರ್ಭಾವಸ್ಥೆಯಲ್ಲಿದ್ದಾಗ ಪೈಲ್ಸ್ ಉಂಟಾದರೆ ಬಹು ಸಂದರ್ಭಗಳಲ್ಲಿ ಮನೆಯಲ್ಲೇ ಚಿಕಿತ್ಸೆ ನೀಡಬಹುದಾಗಿದ್ದರೂ ವೈದ್ಯರ ಸಲಹೆ ಪಡೆಯುವುದು ಸಹ ಅಗತ್ಯವಾಗಿರುತ್ತದೆ. 


ಇದನ್ನೂ ಓದಿ: ಕಣ್ಣುಗಳ ಕೆಳಗಿನ ಊತ ನಿವಾರಿಸಲು ಈ ಉಪಾಯ ಟ್ರೈ ಮಾಡಿ ನೋಡಿ!


* ಸಾಮಯಿಕ ಕ್ರೀಮ್‌ಗಳು ಮತ್ತು ಮುಲಾಮುಗಳು - ಹೈಡ್ರೋಕಾರ್ಟಿಸೋನ್ ಹೊಂದಿರುವ ಕ್ರೀಮ್‌ಗಳು ಅಥವಾ ಸಪೊಸಿಟರಿಗಳನ್ನು ಪೀಡಿತ ಜಾಗದಲ್ಲಿ ಹಚ್ಚಿಕೊಳ್ಳಬಹುದು. ಇದು ತ್ವರಿತವಾಗಿ ನೋವಿನಿಂದ ತಾತ್ಕಾಲಿಕ ಪರಿಹಾರವನ್ನು ನೀಡುತ್ತದೆ. ಉಪಯೋಗಿಸುವ ಮುಂಚೆ ಒಂದೊಮ್ಮೆ ವೈದ್ಯರ ಸಲಹೆ ಪಡೆಯಲು ಮರೆಯದಿರಿ.


* ಐಸ್ ಪ್ಯಾಕ್ಗಳನ್ನು ಇಟ್ಟುಕೊಳ್ಳುವುದು - ಮೂಲವ್ಯಾಧಿಯಿಂದ ಉಂಟಾದ ಊತವನ್ನು ಕಡಿಮೆ ಮಾಡಲು ಪೀಡಿತ ಜಾಗದಲ್ಲಿ ಐಸ್ ಪ್ಯಾಕ್ಗಳನ್ನು ಇಟ್ಟುಕೊಳ್ಳಬಹುದು. ಉಪಯೋಗಿಸುವ ಮುಂಚೆ ಒಂದೊಮ್ಮೆ ವೈದ್ಯರ ಸಲಹೆ ಪಡೆಯಲು ಮರೆಯದಿರಿ.


* ಬೆಚ್ಚಗಿನ ನೀರಿನಿಂದ ಸಿಟ್ಜ್ ಸ್ನಾನ - ಸಿಟ್ಜ್ ಸ್ನಾನದಲ್ಲಿ ಪಾತ್ರೆಯಂತಹ ವಸ್ತುವೊಂದನ್ನು ಶೌಚ ಗುಂಡಿಯ ಮೇಲಿರಿಸಿರಲಾಗಿರುತ್ತದೆ. ಬೆಚ್ಚಗಿನ ನೀರಿನಿಂದ ಅದನ್ನು ತುಂಬಿಸಿ ಮತ್ತು ಅದರ ಮೇಲೆ ಕುಳಿತುಕೊಳ್ಳುವುದು. ಇದರಿಂದ ಉರಿ ಮತ್ತು ತುರಿಕೆಯು ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಉಪಯೋಗಿಸುವ ಮುಂಚೆ ಒಂದೊಮ್ಮೆ ವೈದ್ಯರ ಸಲಹೆ ಪಡೆಯಲು ಮರೆಯದಿರಿ.


* ತೇವಾಂಶವುಳ್ಳ ಟವೆಲ್‌ಗಳನ್ನು ಬಳಸುವುದು - ಕೆಲವು ಭಾರತೀಯರು ಹಾಗೂ ಗರ್ಭದರಿಸಿದ ಪೈಲ್ಸ್‌ನಿಂದ ಬಳಲುತ್ತಿರುವಾಗ ತಮ್ಮ ಕೆಳಭಾಗವನ್ನು ಒರೆಸಲು ಒಣ ಕಾಗದವನ್ನು ಬಳಸುತ್ತಾರೆ, ಅದು ಬಹಳ ನೋವಿನಿಂದ ಕೂಡಿರುತ್ತದೆ. ಹಾಗಾಗಿ ಅದನ್ನು ಮಾಡದೆ ತೇವಾಂಶವುಳ್ಳ ಟವೆಲ್ ಬಳಸುವುದು ಉತ್ತಮ. ಅದರಿಂದ ನೋವು ಉಪಶಮನವಾಗುತ್ತದೆ. ಇದನ್ನು ಅನುಸರಿಸುವ ಮುಂಚೆ ಒಂದೊಮ್ಮೆ ವೈದ್ಯರ ಸಲಹೆ ಪಡೆಯಲು ಮರೆಯದಿರಿ.


ಇದನ್ನೂ ಓದಿ: ಸಿಗರೇಟ್​ ಸೇವನೆ ಬಿಡಬೇಕು ಅಂದ್ರೆ ಕಾಳು ಮೆಣಸಿನ ಎಣ್ಣೆ ಸಹಾಯ ಮಾಡುತ್ತಂತೆ


* ನೋವು ನಿವಾರಕಗಳನ್ನು ಬಳಸುವುದು - ಇಬುಪ್ರೊಫೇನ್, ಅಸೆಟಾಮಿನೋಫೆನ್ ಮುಂತಾದ ಔಷಧಿಗಳು ನೋವು ನಿವಾರಕ ಮಾತ್ರೆಗಳಾಗಿದ್ದು ವೈದ್ಯರ ಸಲಹೆ ಮೆರೆಗೆ ಇವುಗಳನ್ನು ಬಳಸುವ ಮೂಲ್ಕವೂ ಮೂಲವ್ಯಾಧಿಯ ನೋವಿನಿಂದ ಪರಿಹಾರವನ್ನು ಪಡೆಯಬಹುದು. ಇದನ್ನು ಅನುಸರಿಸುವ ಮುಂಚೆ ಒಂದೊಮ್ಮೆ ವೈದ್ಯರ ಸಲಹೆ ಪಡೆಯಲು ಮರೆಯದಿರಿ.

Published by:Sandhya M
First published: