Brain Cancer: 4 ವರ್ಷದ ಕಂದಮ್ಮನನ್ನು ಕಾಡಿದ ಬ್ರೇನ್ ಕ್ಯಾನ್ಸರ್​! ಇದಕ್ಕೆ ಶಾಶ್ವತ ಪರಿಹಾರನೇ ಇಲ್ವಾ?

Treatment For Cancer: ಮಕ್ಕಳ ಮೆದುಳಿನಲ್ಲಿ ಗೆಡ್ಡೆಗಳ ರೂಪದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಮಕ್ಕಳ ಮೆದುಳನ್ನು ಕಾಡುವ ಈ ಅಪರೂಪದ ಕ್ಯಾನ್ಸರ್ ಕಾಯಿಲೆ ಸಂಪೂರ್ಣ ಗುಣವಾಗದೇ ಇದ್ದರು ತಾತ್ಕಾಲಿಕ ಪರಿಹಾರ ಇದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
4 ರ ಹರೆಯದ ಮೇಲಿನ್ ಬೆಲ್ ಎಂಬಾಕೆ ಇತರ ಮಕ್ಕಳಂತೆಯೇ (Children) ತುಂಟಾಟ ಮಾಡುತ್ತಿದ್ದಳು. ಡಾನ್ಸ್ ಮಾಡುತ್ತಿದ್ದಳು  ತನ್ನ ಅಕ್ಕಂದಿರ ಜೊತೆ ಸಮಯ ಕಳೆಯಲು ಇಷ್ಟಪಡುತ್ತಿದ್ದಳು. ಇನ್ನು ಆಕೆಗೆ ತುಂಬಾ ಇಷ್ಟದ ಕಥಾ ಪಾತ್ರವೆಂದರೆ ಸ್ಲೈಡರ್ ಮ್ಯಾನ್ ಹಾಗೂ ಹಲ್ಕ್. ಎಂಟು ತಿಂಗಳಿನಿಂದ ಮೇಲಿನ್ ವಿಚಿತ್ರವಾಗಿ ವರ್ತಿಸುತ್ತಿದ್ದಳು. ರಾತ್ರಿಯಲ್ಲಿ (Night) ಭಯ ಬೀಳುವುದು, ಸರಿಯಾಗಿ ನಿದ್ರಿಸದಿರುವುದು ಹೀಗೆ ವಿಚಿತ್ರವಾಗಿ ಮೇಲಿನ್ ವರ್ತಿಸಲಾರಂಭಿಸಿದಳು. MRI ನಂತರ ಮೇಲಿನ್​​ಅನ್ನು ಹೆಚ್ಚಿನ ಚಿಕಿತ್ಸೆಗಾಗಿ (Treatment) ಸಾಲ್ಟ್ ಲೇಕ್ ಸಿಟಿಗೆ ಕಳುಹಿಸಲಾಯಿತು. ಆದರೆ ಈ ಪ್ರವಾಸವೇ ಮೇಲಿನ್ ಹಾಗೂ ಅವಳ ಕುಟುಂಬಸ್ಥರ ಬದುಕಿಗೆ ಮುಳುವಾಯಿತು.  ಆಕೆಯ ಕುಟುಂಬದ ಪರಿಸ್ಥಿತಿ ಹದಗೆಟ್ಟಿತು.

ಮೇಲಿನ್‌ಗೆ ಸಂಭವಿಸಿದ್ದಾದರೂ ಏನು?

ಡಿಫ್ಯೂಸ್ ಇಂಟ್ರಿನ್ಸಿಕ್ ಪಾಂಟೈನ್ ಗ್ಲಿಯೋಮಾ (DIPG) ಎಂಬ ಕಾಯಿಲೆಯಿಂದ ಮೇಲಿನ್ ಬಳಲುತ್ತಿದ್ದಳು. ಮಕ್ಕಳ ಮೆದುಳನ್ನು ಕಾಡುವ ಅಪರೂಪದ ಕ್ಯಾನ್ಸರ್ ಕಾಯಿಲೆ ಇದು ಎಂದು ವೈದ್ಯರಿಂದ ತಿಳಿದು ಬಂದಿತ್ತು ಇದಕ್ಕೆ ಯಾವುದೇ ಚಿಕಿತ್ಸೆ ಇಲ್ಲ ಎಂದು ಹೇಳಿದ್ದರು. ಮಕ್ಕಳ ಮೆದುಳಿನಲ್ಲಿ ಗೆಡ್ಡೆಗಳ ರೂಪದಲ್ಲಿ ಕ್ಯಾನ್ಸರ್ ಪತ್ತೆಯಾಗುತ್ತದೆ. ಇದೊಂದು ಮಾರಣಾಂತಿಕ ಖಾಯಿಲೆಯಾಗಿದೆ ಎಂದು ಅವಳ ಚಿಕ್ಕಮ್ಮ ಹೆದರಿದ್ದರು. ಆ ಸಮಯದಲ್ಲಿ ಆಕೆ ಸಾಮಾನ್ಯ ಇತರ ಮಕ್ಕಳಂತೆಯೇ ಕಾಣುತ್ತಿದ್ದಳು.

ಲವಲವಿಕೆಯಿಂದ ಇರುತ್ತಿದ್ದ ಬಾಲಕಿ!

ತನ್ನ ಸ್ಪೈಡರ್ ಮ್ಯಾನ್ ಪೈಜಾಮ ಧರಿಸಿ ಆಸ್ಪತ್ರೆಯಲ್ಲೆಲ್ಲಾ ಓಡಾಡುತ್ತಿದ್ದಳು. ಮರುದಿನ ಎರಡನೇ MRI ಹಾಗೂ ಮೆದುಳಿನ ರೋಗಪತ್ತೆಗಾಗಿ ಆಕೆಯನ್ನು ಕರೆದೊಯ್ದ ವೈದ್ಯರ ತಂಡ ತಿಳಿಸಿದ ವಿಷಯ ಮಾತ್ರ ಆಘಾತಕಾರಿಯಾಗಿತ್ತು. ಆಕೆ ಆಪರೇಷನ್ ಥಿಯೇಟರಿನಿಂದ ಹೊರಬಂದಾಗ ಮೇಲಿನ್‌ ಎಡಗೈ ಹಾಗೂ ಎಡಗಾಲಿನ ಚಲನೆಯನ್ನು ಸ್ವಲ್ಪ ಮಟ್ಟಿಗೆ ಕಳೆದುಕೊಂಡಂತೆ ಕಾಣುತ್ತಿತ್ತು ಹಾಗೂ ಮೇಲಿನ್ ಕಣ್ರೆಪ್ಪೆ ತೆರೆದಿರಲಿಲ್ಲ ಎಂಬುದು ಮೇಲಿನ್ ಚಿಕ್ಕಮ್ಮಳ ಮಾತಾಗಿದೆ.

ಮಕ್ಕಳನ್ನು ಕಾಡುವ ಅಪರೂಪದ ಮೆದುಳಿನ ಕ್ಯಾನ್ಸರ್

ಈ ವಿಧವಾದ ಕ್ಯಾನ್ಸರ್‌ನ ಸುಮಾರು 300 ಪ್ರಕರಣಗಳು ಪ್ರತೀ ವರ್ಷ US ಹಾಗೂ ಯುರೋಪ್‌ನಲ್ಲಿ ಪತ್ತೆಯಾಗುತ್ತಿದೆ. ಇದು ತುಂಬಾ ಅಪರೂಪವಾದ ಕಾಯಿಲೆಯಾಗಿರುವುದರಿಂದ ಸಂಶೋಧನೆಯಲ್ಲಿ ತೊಡಗಿರುವ ವೈದ್ಯರೂ ಕೂಡ ಚಿಂತಿತರಾಗಿದ್ದಾರೆ.  ಬೃಹತ್ ಗಡ್ಡೆಗಳ ನಡುವೆ ಇರುವ ಸಣ್ಣ ಮೆದುಳು MRI ಸ್ಕ್ಯಾನಿಂಗ್​​ನಲ್ಲಿ ಕಾಣಿಸಿದೆ ಎಂದು ಅವಳ ಚಿಕ್ಕಮ್ಮ ಬೋಕಾರಾ ಹೇಳಿದ್ದಾರೆ.

ಇದನ್ನೂ ಓದಿ : ಗರ್ಭಿಣಿಯರು ಖರ್ಜೂರ ತಿನ್ನಬಹುದಾ? ಇದು ಮಗುವಿನ ಆರೋಗ್ಯ ಕಾಪಾಡುತ್ತಾ?

ವಿಕಿರಣ ಚಿಕಿತ್ಸೆ ಪಡೆದ  ಮೇಲಿನ್ :

ಸಾಲ್ಟ್ ಲೇಕ್ ಸಿಟಿಯಲ್ಲಿ ಆರು ವಿಕಿರಣ ಚಿಕಿತ್ಸೆಗಳಲ್ಲಿ ಎರಡು ವಾರಗಳ ಚಿಕಿತ್ಸೆಯನ್ನು ಮೇಲಿನ್ ಮುಗಿಸಿಕೊಂಡಿದ್ದಾಳೆ. ಪಾಸಿಟಿವ್ ರೆಸ್ಫಾನ್ಸ್ ಬಂದರೂ ಕೂಡ ಇದು ತಾತ್ಕಾಲಿಕ ಪರಿಹಾರವಾಗಿದೆ. ಏಕೆಂದರೆ ಈ ಟ್ಯೂಮರ್‌ನ ಸ್ಥಳದಿಂದಾಗಿ ಇದು ಮೆದುಳಿನ ಕೆಳಭಾಗದಲ್ಲಿ ಗೆಡ್ಡೆಯಂತ ರಚನೆಯಾಗಿದ್ದು ಇದಕ್ಕೆ ಬೇರೆ ಪರಿಹಾರ ಇಲ್ಲ ಕೇವಲ ವಿಕಿರಣ ಚಿಕಿತ್ಸೆಯಿಂದ ಮಾತ್ರ ಕಡಿಮೆ ಮಾಡಲು ಪ್ರತ್ನಿಸಬೇಕು ಎಂದು ಹೇಳಿದ್ದಾರೆ. ಮೇಲಿನ್‌ನೊಂದಿಗೆ ದಿನಕಳೆಯುತ್ತಿರುವ ಆಕೆಯ ಕುಟುಂಬ ನಿತ್ಯವೂ ಆಕೆಯನ್ನು ಖುಷಿಯಾಗಿರಿಸುವ ಪ್ರಯತ್ನದಲ್ಲಿದೆ. ವಿಕಿರಣ ಚಿಕಿತ್ಸೆ ಹೊರತುಪಡಿಸಿ ಕಿಮೊಥೆರಪಿಯನ್ನು ಗಡ್ಡೆಗಳ ಮೇಲೆ ಪ್ರಯೋಗಿಸಲು ಸಾಧ್ಯವಿಲ್ಲ ಏಕೆಂದರೆ ಈ ಚಿಕಿತ್ಸೆ ಗಡ್ಡೆಗಳ ಮೇಲೆ ಪರಿಣಾಮಕಾರಿಯಾಗಿಲ್ಲ.

ಇದನ್ನೂ ಓದಿ: ಮಾರಣಾಂತಿಕ ಕ್ಯಾನ್ಸರ್ ಬರಲು ಈ ಅಂಶಗಳೇ ಕಾರಣ.. ಮೊದಲು ಇವನ್ನು ಬದಲಿಸಿ

ಔಷಧವೇ ಇಲ್ಲದ ಖಾಯಿಲೆ:

ಇನ್ನು ಮೇಲಿನ್ ಕುಟುಂದವರು ಮೆದುಳಿನ ಗೆಡ್ಡೆಯ ಕುರಿತು ಜಾಗೃತಿ ಮೂಡಿಸಲು ಬಯಸಿದ್ದಾರೆ. ಕಳೆದ 40 ವರ್ಷಗಳಲ್ಲಿ ಈ ಗೆಡ್ಡೆಯ ಚಿಕಿತ್ಸೆಯಲ್ಲಿ ಯಾವುದೇ ಗಂಭೀರ ಪ್ರಗತಿಗಳು ಕಂಡುಬಂದಿಲ್ಲ. ಗೆಡ್ಡೆಯ ಚಿಕಿತ್ಸೆಗೆ ಹೆಚ್ಚಿನ ನಿಧಿ ಹಾಗೂ ಸಂಶೋಧನೆಗಳ ಅಗತ್ಯವಿದೆ ಇದರಿಂದ ಭವಿಷ್ಯದಲ್ಲಿ ಈ ರೋಗಕ್ಕೆ ಚಿಕಿತ್ಸೆಯನ್ನು ಕಂಡುಹಿಡಿಯಬಹುದು. ಈ ಖಾಯಿಲೆಯಿಂದ ಬಳಲುವ ಇನ್ನು ಅನೇಕರಿಗೆ ಇದು ಸಹಕಾರಿಯಾಗಲಿದೆ.
First published: