Travelling And Hair: ಟ್ರಾವೆಲ್​ ಮಾಡುವಾಗ ಕೂದಲು ಹಾಳಾಗ್ಬಾರ್ದು ಅಂದ್ರೆ ಇಷ್ಟು ಮಾಡಿ ಸಾಕು

ಪ್ರಯಾಣಿಸುವಾಗ ಹೆಚ್ಚು ಒಣ ಕೂದಲು ಮತ್ತು ಚದುರಿದ ಕೂದಲ ಸ್ಥಿತಿ ಹೆಚ್ಚು ಕಾಡತ್ತದೆ. ಹವೆ ಹಾಗೂ ವಾತಾವರಣ ಇದಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೂದಲ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಮುಖ್ಯ. ಪ್ರಯಾಣದ ಆರಂಭದ ಮೊದಲು ಕೂದಲ ಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ಆದರೆ ಪ್ರಯಾಣದ ಪ್ರತಿ ದಿನವೂ ಕೂದಲ ಸ್ಥಿತಿ ಹದಗೆಡುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಪ್ರಯಾಣ (Travelling), ಸಭೆ, ಸಮಾರಂಭ (Functions) ಹೀಗೆ ಏನೇ ಇರಲಿ ಹುಡುಗಿಯರು (Girls) ತಮ್ಮ ತ್ವಚೆ ಹಾಗೂ ಕೂದಲ (Skin And Hair) ಆರೋಗ್ಯದ (Health) ಬಗ್ಗೆ ಹೆಚ್ಚು ಕಾಳಜಿ (Care) ವಹಿಸುತ್ತಾರೆ. ತಾವು ಹಾಕುವ ಬಟ್ಟೆಯಿಂದ ಹಿಡಿದು ಹೇರ್ ಸ್ಟೈಲ್ ವರೆಗೆ ಹೆಚ್ಚು ಕಾಳಜಿ ವಹಿಸುವುದು ತುಂಬಾ ಮುಖ್ಯವಾಗುತ್ತದೆ. ಹಾಗೆಯೇ ಹುಡುಗಿಯರು ಹಬ್ಬಗಳು ಹಾಗೂ ಸಮಾರಂಭಗಳಲ್ಲಿ ಸ್ಪೆಶಲ್ ಲುಕ್ ನಿಂದ ಕಂಗೊಳಿಸಲು ಸಾಕಷ್ಟು ಪ್ರಯತ್ನ ಮಾಡ್ತಾರೆ. ಯಾವ ಡ್ರೆಸ್ ಹಾಕಿಕೊಳ್ಳಬೇಕು ಮತ್ತು ಹಾಕಬಾರದು ಹೀಗೆ ಪ್ರತೀ ವಿಷಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಯಾವ ಸೀಸನ್ ಮತ್ತು ವಿಶೇಷ ಸಂದರ್ಭಗಳಲ್ಲಿ ಯಾವ ರೀತಿ ಡ್ರೆಸ್ ಮಾಡಬೇಕು ಎಂಬ ಬಗ್ಗೆ ಸಾಕಷ್ಟು ಕಾಳಜಿ ವಹಿಸುತ್ತಾರೆ.

    ಚದುರಿದ ಮತ್ತು ಒಣಗಿದ ಕೂದಲು

    ಉಡುಪು, ಜೀನ್ಸ್- ಟಾಪ್ಸ್ ಮತ್ತು ವಿವಿಧ ರೀತಿಯ ಪಾದರಕ್ಷೆಗಳು ಇವುಗಳ ಬಗ್ಗೆ ಕೇರ್ ತೆಗೆದುಕೊಳ್ತಾರೆ. ಎಲ್ಲಾ ಚಿತ್ರಗಳಲ್ಲಿ, ಫೋಟೋಗಳಲ್ಲಿ ಸಂಪೂರ್ಣವಾಗಿ ಆಕರ್ಷಕವಾಗಿ ಮತ್ತು ಸೊಗಸಾವಾಗಿ ಕಾಣಿಸುತ್ತಾರೆ. ಆದರೆ ಚದುರಿದ ಮತ್ತು ಒಣಗಿದ ಕೂದಲು ಫೋಟೋಗಳಲ್ಲಿ ಅಂದವನ್ನು ಹಾಳು ಮಾಡುತ್ತದೆ. ಹೀಗಾಗಿ ಚಿತ್ರಗಳು ಚೆನ್ನಾಗಿ ಬರುವುದಿಲ್ಲ. ಫೋಟೋಗಳನ್ನು ಕಸದ ಬುಟ್ಟಿಗೆ ಹಾಕುವ ಕೆಲಸ ಮಾಡಲಾಗುತ್ತದೆ.

    ಪ್ರಯಾಣಿಸುವಾಗ ಹೆಚ್ಚು ಒಣ ಕೂದಲು ಮತ್ತು ಚದುರಿದ ಕೂದಲ ಸ್ಥಿತಿ ಹೆಚ್ಚು ಕಾಡತ್ತದೆ. ಹವೆ, ಹಾಗೂ ವಾತಾವರಣ ಇದಕ್ಕೆ ಕಾರಣವಾಗುತ್ತದೆ. ಹಾಗಾಗಿ ಕೂದಲ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದು ಮುಖ್ಯ. ಪ್ರಯಾಣದ ಆರಂಭದ ಮೊದಲು ಕೂದಲ ಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ಆದರೆ ಪ್ರಯಾಣದ ಪ್ರತಿ ದಿನವೂ ಕೂದಲ ಸ್ಥಿತಿ ಹದಗೆಡುತ್ತದೆ.

    ಇದನ್ನೂ ಓದಿ: ಅಕ್ಕಿ ತೊಳೆದ ನೀರು, ಗಂಜಿ ಚೆಲ್ಲುತ್ತೀರಾ? ಚರ್ಮ ಮತ್ತು ಕೂದಲ ಸಮಸ್ಯೆಗೆ ಇದೇ ರಾಮಬಾಣವಂತೆ!

    ಇದು ಹುಡುಗಿಯರ ನೋಟವನ್ನು ಹಾಳು ಮಾಡುತ್ತದೆ. ಜೊತೆಗೆ ಮನಸ್ಥಿತಿಯೂ ಹಾಳಾಗುತ್ತದೆ. ಆದಾಗ್ಯೂ, ಚರ್ಮರೋಗ ತಜ್ಞೆ ಜಯಶ್ರೀ ಶರದ್ ನೀಡಿದ ಕೆಲವು ಸಲಹೆಗಳನ್ನು ಫಾಲೋ ಮಾಡುವ ಮೂಲಕ ಚದುರಿದ ಮತ್ತು ಒಣ ಕೂದಲನ್ನು ಸರಿಪಡಿಸಿ ಅಂದ ಕಾಪಾಡಬಹುದು.

    ಶಾಂಪೂ ಮತ್ತು ಕಂಡಿಷನರ್ ಬಳಕೆ

    ಚರ್ಮರೋಗ ತಜ್ಞೆ ಜಯಶ್ರೀ ಶರದ್ ಹೇಳುವ ಪ್ರಕಾರ, ಹೋಟೆಲ್ ನಲ್ಲಿ ಸಿಗುವ ಶಾಂಪೂ ಪ್ರಯಾಣದ ವೇಳೆ ಬಳಸಬಾರದು. ಅವರ ಪ್ರಕಾರ, ಪ್ರತಿಯೊಬ್ಬರೂ ಸಾಮಾನ್ಯವಾಗಿ ಬಳಸುವ ಶಾಂಪೂ ಮತ್ತು ಕಂಡೀಷನರ್ ಅನ್ನು ತಮ್ಮೊಂದಿಗೆ ಕೊಂಡೊಯ್ಯಬೇಕು.

    ಬಿಸಿಲಿನಲ್ಲಿದ್ದಾಗ ಹೇಗೆ ರಕ್ಷಿಸಿಕೊಳ್ಬೇಕು?

    ನೀವು ತಿರುಗಾಡುವಾಗ ಅಥವಾ ಬಿಸಿಲಿದ್ದಾಗ ನೀವು ಸುತ್ತಾಡಬೇಕೆಂದಾಗ ಸೂರ್ಯನ ಕಿರಣಗಳಿಂದ ನಿಮ್ಮ ತ್ವಚೆಯನ್ನು ರಕ್ಷಿಸಲು ಚರ್ಮದ ಮೇಲೆ ಸನ್‌ಸ್ಕ್ರೀನ್ ಅನ್ನು ಅನ್ವಯಿಸಲಾಗುತ್ತದೆ. ಆದರೆ ಕೂದಲಿಗೆ ಏನು ಮಾಡಬೇಕು ಎಂಬ ಪ್ರಶ್ನೆ ಎದುರಾಗುತ್ತದೆ.

    ತಜ್ಞರ ಪ್ರಕಾರ, ಅಂತಹ ಸ್ಥಿತಿಯಲ್ಲಿ ಕೂದಲಿನ ಮೇಲೆ ಸ್ಕಾರ್ಫ್ ಅಥವಾ ಬಟ್ಟೆ ಕಟ್ಟಿಕೊಳ್ಳಿ. ಈ ರಕ್ಷಣೆ ನೀಡದಿದ್ದರೆ, ಸೂರ್ಯನ ನೇರಳಾತೀತ ಕಿರಣಗಳು ಕೂದಲಿಗೆ ಹಾನಿ ಉಂಟು ಮಾಡುತ್ತದೆ. ಮತ್ತು ಬಣ್ಣಬಣ್ಣದ ಕೂದಲನ್ನು ಹಾನಿಗೊಳಿಸುತ್ತವೆ.

    ಬಾಚಣಿಗೆ ಮಾಡುವ ಮೊದಲು ಈ ಕೆಲಸ ಮಾಡಿ

    ನಿಮ್ಮ ಕೂದಲು ಬಾಚುವ ಪ್ರತಿ ಬಾರಿ ಹೇರ್ ಸೀರಮ್ ಅನ್ನು ಅನ್ವಯಿಸಿ. ಈ ಹೊಳೆಯುವ ದ್ರವವು ಬಾಹ್ಯ ಅಂಶಗಳಿಂದ ಕೂದಲನ್ನು ರಕ್ಷಿಸುತ್ತದೆ. ಇದು ಕೂದಲು ಉದುರುವಿಕೆ ಮತ್ತು ಸುಕ್ಕುಗಟ್ಟಿದ ಕೂದಲಿನ ಸಮಸ್ಯೆ ನಿಯಂತ್ರಿಸಲು ಸಾಕಷ್ಟು ಸಹಾಯ ಮಾಡುತ್ತದೆ.

    ಇದನ್ನೂ ಓದಿ: ಅಪರೂಪದ ಬ್ಯಾಕ್ಟೀರಿಯಾದಿಂದ ಹರಡುವ ಸೋಂಕಿನಿಂದ ಸಾವು; ಯಾವುದು ಈ ಕಾಯಿಲೆ?

    ಪ್ರಯಾಣದ ವೇಳೆ ಯಾವ ತಪ್ಪು ಮಾಡಬೇಡಿ

    ಪ್ರಯಾಣ ಮಾಡುವಾಗ ನಿಮ್ಮ ಕೂದಲನ್ನು ಸುರಕ್ಷಿತವಾಗಿರಿಸಲು ಹೇರ್ ಸ್ಟೈಲಿಂಗ್ ಉತ್ಪನ್ನಗಳಿಂದ ದೂರವಿರಿ. ಹೇರ್ ಸ್ಟೈಲ್ ನ್ನು ಮತ್ತು ಶೈಲಿಯನ್ನು ಸರಳವಾಗಿರಿಸಿ. ಹೆಚ್ಚಿನ ಸ್ಟೈಲಿಂಗ್ ಉತ್ಪನ್ನಗಳು ಕೂದಲನ್ನು ಉತ್ತಮವಾಗಿ ನಿರ್ವಹಿಸುತ್ತವೆ.
    Published by:renukadariyannavar
    First published: