ವಿದೇಶ ಪ್ರವಾಸಕ್ಕೆ ಹೋಗ್ತಿದ್ದೀರಾ? Passport ಕಳೆದುಕೊಳ್ಳುವ ಭಯಾನಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ

ನಿಮ್ಮ ಪಾಸ್‌ಪೋರ್ಟ್ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಕೆಲವು ಸಲಹೆಗಳನ್ನು ಇಲ್ಲಿ ತಿಳಿದುಕೊಳ್ಳೋಣ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ವಿದೇಶಿ ಪ್ರವಾಸ (Abroad) ಮಾಡುವಾಗ ಬಟ್ಟೆ ಲಗೇಜ್, ಪಾಸ್‌ಪೋರ್ಟ್ (Passport) ಸೇರಿ ನಮ್ಮ ವಸ್ತುಗಳಿಗೆ ನಾವೇ ಜವಾಬ್ದಾರರಾಗಿರುತ್ತೇವೆ. ವಿಮಾನ ಪ್ರಯಾಣ (Travel) ಮಾಡುವಾಗ ನಿಸ್ಸಂಶಯವಾಗಿ, ಪಾಸ್‌ಪೋರ್ಟ್‌ ತುಂಬಾ ಮುಖ್ಯವಾಗುತ್ತದೆ. ವಾಹನ ಚಲಾಯಿಸಲು ಹೇಗೆ ಡ್ರೈವಿಂಗ್ ಲೈಸೆನ್ಸ್ (Driving License) ಅಗತ್ಯವೋ ಹಾಗೆಯೇ ದೇಶದ ಹೊರಗೆ ಅಧಿಕೃತವಾಗಿ ಭೇಟಿ ನೀಡಲು ನಮ್ಮ ಸರ್ಕಾರದಿಂದ ಅನುಮತಿಯ ಜೊತೆಗೆ ಭದ್ರತೆಯನ್ನೂ ಒದಗಿಸೋ ದಾಖಲೆಯೇ ಪಾಸ್‌ಪೋರ್ಟ್. ದೇಶದೊಳಗೆ ಕೂಡ ಪಾಸ್‌ಪೋರ್ಟ್ ಅನ್ನು ನೀವು ನಿಮ್ಮ ಗುರುತು ಚೀಟಿ(Identity)ಯನ್ನಾಗಿ ಬಳಸಬಹುದು . ಪಾಸ್‌ಪೋರ್ಟ್‌ನ ಗಾತ್ರದಲ್ಲಿ ಚಿಕ್ಕದಾದರೂ ಇದು ನಿಮ್ಮನ್ನು ಸ್ಥಳಗಳಿಗೆ ಕರೆದೊಯ್ಯುವುದು ಮಾತ್ರವಲ್ಲದೆ ನಿಮ್ಮ ಪೌರತ್ವವನ್ನು ಸಾಬೀತುಪಡಿಸುವ ಕೀಲಿಯಾಗಿದೆ.

ಹೀಗಾಗಿ ಪ್ರಯಾಣ ಮಾಡುವಾಗ ಅದನ್ನು ಕಳೆದುಕೊಂಡರೆ ಅಷ್ಟೇ, ಕಥೆ ಮುಗಿಯಿತು. ಇನ್ನು ಯಾರಾದರೂ ಅದನ್ನು ಕದ್ದರೆ ಅಥವಾ ಪ್ರಯಾಣದಲ್ಲಿ ಬಳಸಲಾಗದ ಮಟ್ಟಿಗೆ ಹಾನಿಗೊಳಗಾದರೂ ಸಹ ಕೆಲವು ತೊಂದರೆಗಳನ್ನು ಅನುಭವಿಸಬೇಕಾಗುತ್ತದೆ.

ಹಾಗಾದರೆ ನಮ್ಮ ಪ್ರವಾಸದ ಸಮಯದಲ್ಲಿ ನಾವು ನಮ್ಮ ಪಾಸ್‌ಪೋರ್ಟ್‌ಗಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳುವುದು ಎಂಬುದರ ಬಗ್ಗೆ ಕೆಲವು ಟಿಪ್ಸ್ ಇಲ್ಲಿವೆ.

ಇದನ್ನೂ ಓದಿ:  First Dating: ಡೇಟಿಂಗ್ ಹೋಗುವ ಮೊದಲು ಹೇಗಿರಬೇಕು ಎಂಬ ಗೊಂದಲವೇ? ಚಿಂತೆ ಬಿಡಿ ಈ ಟಿಪ್ಸ್ ಫಾಲೋ ಮಾಡಿ

ಪಾಸ್‌ಪೋರ್ಟ್‌ ಅನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಲು ಕ್ರಮವಹಿಸಬಹುದೇ ಹೊರತು, ಖಂಡಿತವಾಗಿಯೂ ಅದನ್ನು ಕಳ್ಳತನದಿಂದ ರಕ್ಷಿಸಲು ಯಾವುದೇ ವಿಧಾನವಿಲ್ಲ. ಆದರೆ ನೀವು ಅದನ್ನು ಸಂಭವಿಸದಂತೆ ತಡೆಯಬಹುದು. ಮತ್ತು ಅದನ್ನೇ ಗಮನದಲ್ಲಿಟ್ಟುಕೊಂಡು, ನಿಮ್ಮ ಪಾಸ್‌ಪೋರ್ಟ್ ಸುರಕ್ಷಿತವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವುಕೆಲವು ಸಲಹೆಗಳನ್ನು ಇಲ್ಲಿ ತಿಳಿದುಕೊಳ್ಳೋಣ.

1.ಪಾಸ್‌ಪೋರ್ಟ್‌ ಪ್ರತಿಗಳನ್ನು ಮಾಡಿಟ್ಟುಕೊಳ್ಳಿ
ಪ್ರಯಾಣಕ್ಕೆ ಹೊರಡುವ ಮುನ್ನವೇ, ನಿಮ್ಮ ಪಾಸ್‌ಪೋರ್ಟ್‌ನ ಹಲವು ಪ್ರತಿಗಳನ್ನು ನೀವು ಮಾಡಿಟ್ಟುಕೊಳ್ಳಬೇಕು. ಮತ್ತು ಅವೆಲ್ಲವನ್ನೂ ಬೇರೆ ಬೇರೆ ಬ್ಯಾಗ್‌ಗಳಲ್ಲಿ ಇರಿಸಿಕೊಳ್ಳಬೇಕು. Z ಸೆಕ್ಯುರಿಟಿಯನ್ನು ಖಚಿತಪಡಿಸಿಕೊಳ್ಳಲು ಅದನ್ನು ನಿಮ್ಮ ಬ್ಯಾಗ್ ಗಳ ಕೆಳಭಾಗದಲ್ಲಿ ಇರಿಸಿ. ಅಲ್ಲದೆ, ನೀವು ಅದರ ಒಂದು ಪ್ರತಿಯನ್ನು ಮನೆಯಲ್ಲಿಯೂ ಸಹ ಇರಿಸಿಕೊಳ್ಳುವುದು ಉತ್ತಮ.

2.ನಿಮ್ಮ ಹೋಟೆಲ್‌ನಲ್ಲಿ ಬಿಡಿ
ಒಮ್ಮೆ ನೀವು ನಿಮ್ಮ ಜಾಗವನ್ನು ತಲುಪಿದ ನಂತರ, ನಿಮ್ಮ ಪಾಸ್‌ಪೋರ್ಟ್ ಅನ್ನು ನಿಮ್ಮ ಹೋಟೆಲ್‌ನಲ್ಲಿ ಬಿಡಬೇಕು ಮತ್ತು ಬದಲಿಗೆ ಅದರ ಒಂದು ಪ್ರತಿಯನ್ನು ತೆಗೆದುಕೊಂಡು ಹೋಗಬೇಕು. ಸಾಮಾನ್ಯವಾಗಿ, ಹೋಟೆಲ್‌ಗಳು ಭದ್ರತಾ ಕೋಡ್‌ನೊಂದಿಗೆ ಲಾಕರ್ ಅನ್ನು ಒದಗಿಸುತ್ತವೆ. ಆರ್ದ್ರ ವಾತಾವರಣ ಅಥವಾ ನೀರಿನಂತಹ ಪುಟಗಳನ್ನು ಹಾಳುಮಾಡುವ ಜಾಗಗಳಿಗೆ ಕೊಂಡೊಯ್ಯುವ ಬದಲು ಅದನ್ನು ನೀವು ಇಲ್ಲಿ ಉತ್ತಮವಾಗಿ ರಕ್ಷಿಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆ ನಿಮ್ಮ ಪಾಸ್‌ಪೋರ್ಟ್ ಅನ್ನು ರಕ್ಷಿಸಲು ಹೋಟೆಲ್ನ ಲಾಕರ್ ಬಳಸಿ.

3.ಪಾಸ್‌ಪೋರ್ಟ್‌ ಕವರ್
ನೀವು ವಿದೇಶದಲ್ಲಿ ಸುತ್ತಾಡಲು ಹೋಗುವಾಗ ಬ್ಯಾಗ್‌ಗಳನ್ನು ತೆಗೆದುಕೊಂಡು ಹೋದರೆ ಉತ್ತಮ ವಾಟರ್ ಪ್ರೂಫ್ ಕವರ್ ನಲ್ಲಿ ಪಾಸ್‌ಪೋರ್ಟ್ ಅನ್ನು ಹಾಕಿ ಬ್ಯಾಗ್‌ನಲ್ಲಿ ಇರಿಸಿಕೊಳ್ಳಿ. ಅದರಲ್ಲೂ ನೀವು ಬೀಜ್, ನೀರು ಪ್ರದೇಶಗಳಿಗೆ ಹೋಗುವಾಗ ಈ ಕ್ರಮವನ್ನು ತಪ್ಪದೇ ಪಾಲಿಸಿ. ನೀರಿನ ತಗುಲುವಿಕೆ ಮಾಹಿತಿ-ಆಧಾರಿತ ಪುಟಗಳನ್ನು ಓದಲಾಗದಂತೆ ತಿರುಗಿಸಬಹುದು, ಇದರ ಪರಿಣಾಮವಾಗಿ ನಿಮ್ಮ ಪಾಸ್‌ಪೋರ್ಟ್ ಅನ್ನು ಬದಲಾಯಿಸಬೇಕಾಗಬಹುದು ಎಂದು ಮತ್ತೆ ಹೇಳಬೇಕಾಗಿಲ್ಲ.

4.ನಿಮ್ಮ ಹಕ್ಕುಗಳನ್ನು ತಿಳಿಯಿರಿ
ನಿಸ್ಸಂಶಯವಾಗಿ, ವಿಮಾನ ನಿಲ್ದಾಣದ ಭದ್ರತೆಯನ್ನು ತೆರವುಗೊಳಿಸಲು ನಿಮ್ಮ ಪಾಸ್‌ಪೋರ್ಟ್ ಅಗತ್ಯವಿದೆ. ಆದರೆ ನಿಮ್ಮ ನಿಜವಾದ ಪಾಸ್‌ಪೋರ್ಟ್ ಮತ್ತು ನಕಲನ್ನು ತೋರಿಸಲು ನೀವು ಅಗತ್ಯವಿರುವ ಸ್ಥಳಗಳ ಬಗ್ಗೆ ನೀವು ತಿಳಿದಿರಬೇಕು. ನೀವು ಅಂತಾರಾಷ್ಟ್ರೀಯ ಚಾಲನಾ ಪರವಾನಗಿಯನ್ನು ಹೊಂದಿದ್ದರೆ, ನಿಮ್ಮ ಪರವಾನಗಿ ಅಥವಾ ನಿಮ್ಮ ಪಾಸ್‌ಪೋರ್ಟ್‌ನ ನಕಲು ಪ್ರತಿ ತೋರಿಸಿದರೆ ಸಾಕಾಗುತ್ತದೆ. ಹೀಗಾಗಿ ಮೊದಲೇ ಕೆಲವು ಹಕ್ಕು ಮತ್ತು ಭದ್ರತೆ ಬಗ್ಗೆ ತಿಳಿಯಿರಿ.

ಇದನ್ನೂ ಓದಿ:  Skin Care: ಬೇಸಿಗೆ ಬಿಸಿಲಿನಿಂದ ಮುಖ ಕಪ್ಪಾಗುವುದನ್ನು ತಡೆಯುವುದು ಹೇಗೆ? ಇಲ್ಲಿದೆ ಸುಲಭದ ಟಿಪ್ಸ್

5.ಆಗಾಗ್ಗೆ ಪರಿಶೀಲಿಸಿ
ನೀವು ನಿಮ್ಮ ಪಾಸ್‌ಪೋರ್ಟ್ ಹೊಂದಿರುವಿರಾ ಎಂದು ಖಚಿತಪಡಿಸಿಕೊಳ್ಳಲು ನೀವು ಆಗಾಗ್ಗೆ ಪರಿಶೀಲಿಸಬೇಕು. ನೀವು ಇದನ್ನು ಪದೇ ಪದೇ ಮಾಡುತ್ತೀರಿ. ಇದರಿಂದಾಗಿ ನೀವು ಅದನ್ನು ತಪ್ಪಾಗಿ ಇರಿಸಿದರೆ ಅದನ್ನು ಟ್ರ್ಯಾಕ್ ಮಾಡುವುದು ಸುಲಭವಾಗುತ್ತದೆ.
Published by:Mahmadrafik K
First published: