Holiday Plan: ಅರಮನೆ ನಗರಿ ಸುತ್ತಲೂ ಇವೆ ಈ ಸೂಪರ್ ಪ್ರವಾಸಿ ತಾಣಗಳು- ಕ್ರಿಸ್​ಮಸ್​ ರಜೆಯಲ್ಲಿ ನೀವೂ ಹೋಗಿ

Mysuru Travel Tips: ಬೆಟ್ಟಗಳು ಸರಾಸರಿ ಸುಮಾರು 3000 ಅಡಿ ಎತ್ತರವನ್ನು ಹೊಂದಿವೆ ಮತ್ತು ನಿತ್ಯಹರಿದ್ವರ್ಣದಿಂದ ಆವೃತವಾಗಿರುವ ಪೂರ್ವ ಘಟ್ಟಗಳ 70 ಕ್ಕೂ ಹೆಚ್ಚು ಶಿಖರಗಳಿಂದ ಆವೃತವಾಗಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಮೈಸೂರು(Mysuru) ಪ್ರತಿಯೊಬ್ಬರು ಹೆಚ್ಚು ಮೆಚ್ಚುವ ಸ್ಥಳಗಳಲ್ಲಿ ಒಂದು. ರಜೆಯನ್ನು ಕಳೆಯಲು ಹೇಳಿ ಮಾಡಿಸಿದ ಜಾಗ. ಮೈಸೂರಿನಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳಿದೆ. ಅರಮನೆ(Palace) ನಗರಿ ಪ್ರವಾಸಿ ಪ್ರಿಯರಿಗೆ ಅಚ್ಚುಮೆಚ್ಚು. ಇತಿಹಾಸ (history), ಪರಂಪರೆ, ಸಂಸ್ಕೃತಿ, ಪ್ರಕೃತಿ, ವನ್ಯಜೀವಿಗಳು, ರಮಣೀಯ ಸೌಂದರ್ಯ ಒಂದೆರೆಡಲ್ಲ. ಇದರ ಬಗ್ಗೆ ಹೇಳುತ್ತಾ ಹೋದರೆ ಸಮಯ ಸಾಕಾಗಲ್ಲ. ಮಡಿಕೇರಿಯಿಂದ(Kodagu) ಐತಿಹಾಸಿಕ ಪಟ್ಟಣವಾದ ಶ್ರೀರಂಗಪಟ್ಟಣದವರೆಗೆ, ಪಾರಂಪರಿಕ ಪ್ರದೇಶಗಳಾದ ಬೇಲೂರು-ಹಳೇಬೀಡು ಮತ್ತು ಸೋಮನಾಥಪುರದಿಂದ ದೇವಾಲಯ ಪಟ್ಟಣಗಳಾದ ಮೇಲ್ಕೋಟೆ ಮತ್ತು ಶ್ರವಣಬೆಳಗೊಳದವರೆಗೆ, ನಾಗರಹೊಳೆ ಮತ್ತು ಬಂಡೀಪುರದ ದಟ್ಟ ಕಾಡುಗಳಿಂದ ಹಿಡಿದು ರಂಗನತಿಟ್ಟು ಮತ್ತು ಪಕ್ಷಿಗಳ ತಾಣಗಳವರೆಗೆ. ಕೊಕ್ಕೆರೆಬೆಳ್ಳೂರು, ಜನಪದ ಲೋಕದ ಸಾಂಸ್ಕೃತಿಕ ಭೂದೃಶ್ಯದಿಂದ ರಾಮನಗರದ ಸಾಹಸದ ಒಳನಾಡಿನವರೆಗೆ, ವಿಲಕ್ಷಣ ಪಟ್ಟಣವಾದ ಬೈಲಕುಪ್ಪೆಯಿಂದ ತನ್ನ ಅನನ್ಯ ಸಾಂಸ್ಕೃತಿಕ ವೈಭವದಿಂದ ಶಿವನಸಮುದ್ರ ಮತ್ತು ಮೇಕೆದಾಟು ಅರಣ್ಯದವರೆಗೆ ಮೈಸೂರಿಗೆ ಹತ್ತಿರವಾಗುವ ಹಲವಾರು ಸ್ಥಳಗಳಿದೆ. ಆದರೆ ಮೈಸೂರಿಗೆ ಭೇಟಿ ನೀಡಿದರೆ ನೋಡುವ ಇನ್ನೂಹೆಚ್ಚಿನ ಸ್ಥಳಗಳನ್ನು ನೋಡಬಹುದು.  

ಹಾಗಾದ್ರೆ ಮೈಸೂರಿನಲ್ಲಿ ಯಾವ ಯಾವ ಸ್ಥಳಗಳನ್ನು ನೋಡಬಹುದು ಎಂಬುದು ಇಲ್ಲಿದೆ.  

ಶ್ರೀರಂಗಪಟ್ಟಣ 

ಮೈಸೂರಿನಿಂದ ಕೇವಲ 30 ನಿಮಿಷಗಳ ದೂರದಲ್ಲಿರುವ ಶ್ರೀರಂಗಪಟ್ಟಣವು ಕಾವೇರಿ ನದಿಯಿಂದ ರೂಪುಗೊಂಡ ದ್ವೀಪವಾಗಿದೆ ಮತ್ತು ಇದು ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್​ನ ರಾಜಧಾನಿಯಾಗಿತ್ತು. ಇಂದು, ಇದು ಕೋಟೆಗಳು, ಅರಮನೆಗಳು, ಗೋರಿಗಳು ಮತ್ತು ದೇವಾಲಯಗಳ ಅವಶೇಷಗಳಿಂದ ತುಂಬಿದೆ. ಶ್ರೀರಂಗಪಟ್ಟಣವು ಹೆಚ್ಚು ಅವಶೇಷಗಳಂತೆ ಗೋಚರಿಸುತ್ತದೆ ಮತ್ತು ಅದರ ಆವರಣದಲ್ಲಿ ಪ್ರಸಿದ್ಧ ರಂಗನಾಥಸ್ವಾಮಿ ದೇವಾಲಯವಿದೆ.

ಇದನ್ನೂ ಓದಿ: ಅರೇಂಜ್ಡ್​ ಮ್ಯಾರೇಜ್​ನಲ್ಲಿ ಸಂಬಂಧ ಚೆನ್ನಾಗಿರ್ಬೇಕು ಅಂದ್ರೆ ಈ ವಿಚಾರಗಳ ಬಗ್ಗೆ ಗಮನ ಹರಿಸಲೇಬೇಕು!

ಇನ್ನೂ ದೂರದಲ್ಲಿರುವ ದರಿಯಾ ದೌಲತ್ ಬಾಗ್ ಅನ್ನು ಟಿಪ್ಪುವಿನ ಬೇಸಿಗೆ ಅರಮನೆ ಎಂದು ಕರೆಯಲಾಗುತ್ತದೆ. ಇಲ್ಲಿ ನೋಡಬೇಕಾದ ಇತರ ಸ್ಥಳಗಳೆಂದರೆ ವೆಲ್ಲೆಸ್ಲಿ ಸೇತುವೆ, ಕ್ಯಾಥೋಲಿಕ್ ಚರ್ಚ್ ಮತ್ತು ಗನ್‌ಪೌಡರ್‌ಗಾಗಿ ಸ್ಟೋರ್ ರೂಂ.

ಬಲಮುರಿ ಫಾಲ್ಸ್

ಮೈಸೂರಿನ ಉತ್ತರಕ್ಕೆ ಸುಮಾರು 15 ಕಿಮೀ ದೂರದಲ್ಲಿರುವ ಬಲಮುರಿ ಜಲಪಾತವು ಒಂದು ಸಣ್ಣ ಜಲಪಾತವಾಗಿದೆ ಆದರೆ  ಇದರ ಸೌಂದರ್ಯ ಮಾತ್ರ ಮಂತ್ರಮುಗ್ಧಗೊಳಿಸುತ್ತದೆ. ಅಣೆಕಟ್ಟೆ ತುಂಬಿದ ನಂತರ ಜಲಪಾತವಾಗಿ ನೀರು ಉಕ್ಕಿ ಹರಿಯುತ್ತದೆ. ಆದರೆ ನೀರಿನ ಹರಿವು ಚುರುಕಾದಾಗ ಅದು ಅಪಾಯಕಾರಿಯಾಗಬಹುದು.

ಬಿಆರ್​ ಹಿಲ್ಸ್

ಮೈಸೂರಿನಿಂದ ಸುಮಾರು 85 ಕಿಮೀ ದೂರದಲ್ಲಿರುವ ಈ ಬೆಟ್ಟ ರಮಣೀಯ ಸ್ಥಳಗಳಲ್ಲಿ ಒಂದಾಗಿದೆ. ಬಿಳಿಗಿರಿ ರಂಗನಾಥಸ್ವಾಮಿ ಬೆಟ್ಟಗಳು ಮುಂಜಾನೆಯಲ್ಲಿ ನೀಡುವ ಆಹ್ಲಾದಕರ ಅನುಭವವನ್ನು ವರ್ಣಿಸುವುದು ಕಷ್ಟ. ಇತರ ಆಕರ್ಷಣೆಗಳಲ್ಲಿ ದೊಡ್ಡ ಸಂಪಿಗೆ ಮರ, 2000 ವರ್ಷಗಳಷ್ಟು ಹಳೆಯದಾದ ಚಂಪಕ ಮರ ಇತಿಹಾಸವನ್ನು ಸಾರಿ ಹೇಳುತ್ತದೆ.

 ಎಂಎಂ ಹಿಲ್ಸ್

ಮೈಸೂರಿನಿಂದ ಸುಮಾರು 135 ಕಿ.ಮೀ ದೂರದಲ್ಲಿರುವ ಮಲೆ ಮಹದೇಶ್ವರ ಬೆಟ್ಟಗಳು ಕರ್ನಾಟಕ-ತಮಿಳುನಾಡು ಗಡಿಯ ಸಮೀಪದಲ್ಲಿರುವ ಚಾಮರಾಜನಗರ ಜಿಲ್ಲೆಯ ಪ್ರದೇಶ. ದಟ್ಟ ಕಾಡುಗಳು ಮತ್ತು ವನ್ಯಜೀವಿಗಳನ್ನು ಹೊಂದಿರುವ ಬೆಟ್ಟಗಳು ಮತ್ತು ಕಣಿವೆಗಳಿಂದ ಸುತ್ತುವರಿದಿರುವ ಶಿವನಿಗೆ ಅರ್ಪಿತವಾದ ಪುರಾತನ ದೇವಾಲಯಕ್ಕೆ ಇದು ಪ್ರಸಿದ್ಧವಾಗಿದೆ.

ಇದನ್ನೂ ಓದಿ: ಈ ಕ್ರಿಸ್​ಮಸ್​ಗೆ ಮನೆಯನ್ನು ಅಂದಗೊಳಿಸುವ ಸೂಪರ್ ಐಡಿಯಾಗಳು ಇಲ್ಲಿದೆ

ಬೆಟ್ಟಗಳು ಸರಾಸರಿ ಸುಮಾರು 3000 ಅಡಿ ಎತ್ತರವನ್ನು ಹೊಂದಿವೆ ಮತ್ತು ನಿತ್ಯಹರಿದ್ವರ್ಣದಿಂದ ಆವೃತವಾಗಿರುವ ಪೂರ್ವ ಘಟ್ಟಗಳ 70 ಕ್ಕೂ ಹೆಚ್ಚು ಶಿಖರಗಳಿಂದ ಆವೃತವಾಗಿವೆ. ಇಲ್ಲಿ ಎರಡು ನದಿಗಳೂ ಇವೆ, ಈಶಾನ್ಯದಲ್ಲಿ ಕಾವೇರಿ ಮತ್ತು ದಕ್ಷಿಣದಲ್ಲಿ ಪಾಲಾರ್ ಇದೆ.
Published by:Sandhya M
First published: