• Home
  • »
  • News
  • »
  • lifestyle
  • »
  • Kallathigiri Falls: ಹಸಿರ ಸಿರಿಯಲ್ಲಿ ಕಲ್ಲತ್ತಗಿರಿಯ ಜಲವೈಭವ! ನೋಡಿದವ್ರು ಹೇಳದೇ ಇರೋದಿಲ್ಲ ವ್ಹಾರೇ ವ್ಹಾ!

Kallathigiri Falls: ಹಸಿರ ಸಿರಿಯಲ್ಲಿ ಕಲ್ಲತ್ತಗಿರಿಯ ಜಲವೈಭವ! ನೋಡಿದವ್ರು ಹೇಳದೇ ಇರೋದಿಲ್ಲ ವ್ಹಾರೇ ವ್ಹಾ!

ಫಾಲ್ಸ್​

ಫಾಲ್ಸ್​

Kallathigiri Falls near Chikkamagaluru: ಜಲಪಾತವನ್ನು ನೀವು ಹತ್ತಿರದಿಂದ ನೋಡಿದಾಗ ಅದರ ಸೌಂದರ್ಯಕ್ಕೆ ಮರುಳಾಗದೇ ಇರುವುದಿಲ್ಲ. ಜಲಪಾತದ ಸುತ್ತಮುತ್ತಲಿನ ಪ್ರದೇಶಗಳು ನಿಮ್ಮ ಮನಸ್ಸಿನ ಎಲ್ಲಾ ಒತ್ತಡವನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ.

  • Share this:

ನವೆಂಬರ್ ಡಿಸೆಂಬರ್​ (November -December) ತಿಂಗಳಿನಿಂದ ಪ್ರವಾಸ ಪ್ರಿಯರಿಗೆ ಅದೇನೋ ಶಕ್ತಿ ಬರುತ್ತದೆ, ಈ ಸಮಯದಲ್ಲಿಯೇ ಹೆಚ್ಚಿನ ಜನರು ವಿವಿಧ ಸ್ಥಳಗಳಿಗೆ ಪ್ರವಾಸ (Travel) ಹೋಗಲು ಇಷ್ಟಪಡುತ್ತಾರೆ. ಹೆಚ್ಚಾಗಿ ಜನರು ಜಲಪಾತಗಳನ್ನು (Falls)  ನೋಡಲು ಬಯಸುತ್ತಾರೆ. ಅವುಗಳ ಸೌಂದರ್ಯ, ಮನಸ್ಸಿಗೆ ನೆಮ್ಮದಿ ನೀಡುತ್ತದೆ. ಕೆಲಸದ ಒತ್ತಡ, ಮನೆಯ ಚಿಂತೆ ಎಲ್ಲಾವನ್ನು ಮರೆಸುವ ತಾಕತ್ತು ಪ್ರಕೃತ್ತಿಗೆ ಇದೆ ಎಂದರೆ ತಪ್ಪಲ್ಲ.  ನೀವು ಸಹ ಪ್ರವಾಸ ಯೋಜಿಸುತ್ತಿದ್ದರೆ, ಕಾಫಿನಾಡು ಚಿಕ್ಕಮಗಳೂರಿನ ಕಲ್ಲತ್ತಿಗಿರಿ (Kallathigiri Falls) ಫಾಲ್ಸ್​ ಉತ್ತಮ. ಕಲ್ಲತ್ತಿಗಿರಿ ಜಲಪಾತದ ಪ್ರಕೃತಿಯ ಸೌಂದರ್ಯ ತನ್ನ ಮೋಡಿ ಮೂಲಕ ನಿಮ್ಮನ್ನು ಆವರಿಸುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿ ನೀವು ಶುದ್ಧ, ಉಲ್ಲಾಸಕರ ಮತ್ತು ಆಕರ್ಷಕ ಪ್ರಕೃತಿಯನ್ನು ಅನುಭವಿಸುತ್ತೀರಿ. ಈ ಜಲಪಾತವನ್ನು ನೀವು ಹತ್ತಿರದಿಂದ ನೋಡಿದಾಗ ಅದರ ಸೌಂದರ್ಯಕ್ಕೆ ಮರುಳಾಗದೇ ಇರುವುದಿಲ್ಲ. ಜಲಪಾತದ ಸುತ್ತಮುತ್ತಲಿನ ಪ್ರದೇಶಗಳು ನಿಮ್ಮ ಮನಸ್ಸಿನ ಎಲ್ಲಾ ಒತ್ತಡವನ್ನು ದೂರ ಮಾಡುವ ಶಕ್ತಿಯನ್ನು ಹೊಂದಿದೆ.


ಪ್ರಕೃತಿ ಸೌಂದರ್ಯಕ್ಕೆ ಸಾಕ್ಷಿ ಇದು


ಚಿಕ್ಕಮಗಳೂರಿನಲ್ಲಿ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ನೀವು ಪ್ರಕೃತಿಯ ಅತ್ಯಂತ ಹಸಿರಿನಿಂದ ಕೂಡಿದ ಸೌಂದರ್ಯವನ್ನು ಆನಂದಿಸಲು ಈ ಸ್ಥಳಕ್ಕೆ ಭೇಟಿ ನೀಡಲೇಬೇಕು.  ಕೆಮ್ಮಣ್ಣುಗುಂಡಿಗೆ ಸಮೀಪದಲ್ಲಿರುವ ಕಲ್ಲತ್ತಿಗಿರಿ ಜಲಪಾತವು ಪ್ರಕೃತಿದತ್ತವಾಗಿ ಪಡೆದ ಸೌಂದರ್ಯ ರಾಶಿಯನ್ನು ಹೊಂದಿದೆ. ಹಿನ್ನೆಲೆಯು ಹಲವಾರು ಪರ್ವತಗಳು ಮತ್ತು ದಟ್ಟವಾದ ಕಾಡು ಆಕರ್ಷಿಸುತ್ತದೆ.  ವಿಶ್ರಾಂತಿ ಪಡೆಯಲು ಮತ್ತು ಮೋಜಿನ ಪ್ರವಾಸ ಮಾಡಲು ನೀವು ಈ ಸ್ಥಳಕ್ಕೆ ಭೇಟಿ ನೀಡಿದರೆ, ನಿಜಕ್ಕೂ ಶಾಂತಿ ಲಭಿಸುತ್ತದೆ.


ಚಿಕ್ಕಮಗಳೂರಿನಲ್ಲಿ ಭೇಟಿ ನೀಡುವ ಇದು ವಿಭಿನ್ನವಾಗಿರುವ ಅತ್ಯುತ್ತಮ ಸ್ಥಳ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆಸುಪಾಸಿನಲ್ಲಿ ಒಂದು ಚಿಕ್ಕ ದೇವಸ್ಥಾನವಿದೆ. ಈ ದೇವಾಲಯವು ವಿಗ್ರಹಗಳು ಮತ್ತು ಕಲ್ಲಿನ ರಚನೆಗಳನ್ನು ಹೊಂದಿದ್ದು, ವರ್ಷವಿಡೀ ಭಕ್ತರು ಈ ಸ್ಥಳಕ್ಕೆ ಭೇಟಿ ನೀಡಿ ಇಲ್ಲಿ ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಇಲ್ಲಿ ದತ್ತಾತ್ರೇಯ, ಈಶ್ವರ-ಪಾರ್ವತಿ, ಗಣಪತಿ, ಬೇಲೂರು ಚನ್ನಕೇಶವನ ಜೊತೆ ಶಿಲಾ ಬಾಲಿಕೆಯರ ಉದ್ಭವ ಮೂರ್ತಿಗಳಿವೆ.


ಈ ಜಲಪಾತ ಮೋಜು ಮತ್ತು ಆಧ್ಯಾತ್ಮಿಕವಾಗಿ ಸಹ ಎರಡಕ್ಕೂ ಸೂಕ್ತವಾಗುವ ಸ್ಥಳವಾಗಿದೆ. ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ಬಹಳ ಜನಪ್ರಿಯ ಚಟುವಟಿಕೆಯಾಗಿದ್ದು, ಇಲ್ಲಿ ಸಹ ನೀವು ಟ್ರೆಕ್ಕಿಂಗ್ ಮಾಡಬಹುದು. ಇನ್ನು ಕಲ್ಲತ್ತಿಗಿರಿ ಜಲಪಾತಕ್ಕೆ ಹೋಗುವ ದಾರಿಯುದ್ಧಕ್ಕೂ ಸುಂದರವಾದ ನೋಟ ಕಣ್ಣಿಗೆ ರಸದೌತಣವನ್ನ ನೀಡುತ್ತೆ ಎನ್ನಬಹುದು.


ಇದನ್ನೂ ಓದಿ: ಕೇವಲ 4 ದಿನ ಮಿಸ್ ಮಾಡ್ದೇ ತುಳಸಿ ಎಲೆ ತಿನ್ನಿ ಸಾಕು, ಈ ಸಮಸ್ಯೆ ಮಾಯವಾಗುತ್ತೆ


ಹತ್ತಿರವಿದೆ ಹಬ್ಬೆ ಫಾಲ್ಸ್


ಅದ್ಭುತ ಪ್ರಕೃತಿಯ ಸೌಂದರ್ಯ ಆಕರ್ಷಣೆ ಮಾಡುವುದರಿಂದ, ಜಲಪಾತದ ಸುತ್ತಲಿನ ಪ್ರದೇಶಗಳು ಕ್ಯಾಂಪಿಂಗ್‌ಗೆ ಸೂಕ್ತವಾದ ಸ್ಥಳಗಳಾಗಿವೆ. ಜಲಪಾತದ ಸುತ್ತಲೂ ಒಂದು ದಾರಿ ಇದೆ, ಅದು ಜಲಪಾತದ ಮೇಲೆ ಟ್ರಕ್ಕಿಂಗ್ ಮಾಡಲು ನಿಮಗೆ ಅನುವು ಮಾಡಿಕೊಡುತ್ತದೆ. ಇದು ಪ್ರಮುಖವಾದ ಪಾಯಿಂಟ್ ಆಗಿದ್ದು, Z ಪಾಯಿಂಟ್ ಎಂದು ಕರೆಯಲಾಗುತ್ತದೆ. ಇಲ್ಲಿಂದ ನೀರು ಇಳಿಯುವುದನ್ನು ನೀವು ನೋಡಿ, ಆನಂದಿಸಬಹುದು.
ಇಲ್ಲಿ ರಾಕ್ ಗಾರ್ಡನ್ ಇದೆ, ನೋಡಲು ಸಾಕಷ್ಟು ವಿಭಿನ್ನ ವಿಷಯಗಳನ್ನು ಹೊಂದಿರುವ ಮತ್ತೊಂದು ರಮಣೀಯ ಸ್ಥಳವಾಗಿದೆ. ಈ ಪ್ರದೇಶದ ಹತ್ತಿರ ಹೆಬ್ಬೆ ಜಲಪಾತ ಇದ್ದು, ಅಲ್ಲಿಗೆ ಸಹ ಭೇಟಿ ನೀಡಬಹುದು. ಸುತ್ತಮುತ್ತಲಿನ ನೈಸರ್ಗಿಕ ಸೌಂದರ್ಯವು ನಿಮ್ಮನ್ನು ಬೇರೆ ಯಾವುದೋ ಲೋಕಕ್ಕೆ ಕರೆದುಕೊಂಡು ಹೋಗುತ್ತದೆ ಎನ್ನಬಹುದು.
ಅಲ್ಲದೇ, ಈ ಕ್ಷೇತ್ರಕ್ಕೆ ಆಧ್ಯಾತ್ಮಿಕ ಹಿನ್ನಲೆ ಸಹ ಇದ್ದು, ಕಲ್ಲಿನ ಗುಹೆಯೊಳಗೆ ವೀರಭದ್ರಸ್ವಾಮಿ ಮೂರ್ತಿ ಕೂಡ ಇಲ್ಲಿದೆ. ನೀವು ಇಲ್ಲಿ ಸ್ನಾನ ಮಾಡಿ, ಪೂಜೆ ಮಾಡಿದರೆ ಜನರ ಮೈಮೇಲೆ ಬರುವ ದುಷ್ಟಶಕ್ತಿಗಳನ್ನ ವೀರಭದ್ರಸ್ವಾಮಿ ನಾಶ ಮಾಡುತ್ತಾನೆ ಹಾಗೂ ಈ ನೀರಿನಲ್ಲಿ ಮಂತ್ರ ಶಕ್ತಿ ಇದೆ ಎಂಬುದು ಇಲ್ಲಿನ ಜನರ ನಂಬಿಕೆ.


ಸ್ಥಳ: ಕಲ್ಲತ್ತಿಗಿರಿ ಜಲಪಾತ, ಕಲ್ಲತ್ತಿಗಿರಿ, ಕರ್ನಾಟಕ


 ಭೇಟಿ ನೀಡಲು ಉತ್ತಮ ಸಮಯ: ಪ್ರವಾಸಿಗರು ಸೆಪ್ಟೆಂಬರ್‌ನಿಂದ ಫೆಬ್ರವರಿವರೆಗೆ ಈ ಸ್ಥಳಕ್ಕೆ ಭೇಟಿ ನೀಡಲು ಉತ್ತಮ ಸಮಯ ಎನ್ನಬಹುದು.


ಇದನ್ನೂ ಓದಿ: ಜೀರ್ಣಕ್ರಿಯೆಯಿಂದ ಡೆಂಗ್ಯೂವರೆಗೆ ಪಪ್ಪಾಯಕಾಯಿ ಪ್ರಯೋಜನಗಳಿವು


ಪ್ರವೇಶ ಶುಲ್ಕ: ಉಚಿತ
ಸಮಯ: ಇದು ಪ್ರತಿದಿನ ಬೆಳಗ್ಗೆ 7:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ


ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ದೂರ: ಇದು ಅಂದಾಜು 50 ಕಿಲೋಮೀಟರ್ ದೂರದಲ್ಲಿದೆ.

Published by:Sandhya M
First published: