• Home
  • »
  • News
  • »
  • lifestyle
  • »
  • Hebbe Falls: ಧುಮ್ಮಿಕ್ಕುವ ಹಬ್ಬೆ ಜಲಪಾತ ನೋಡೋದೆ ಒಂದು ಸುಂದರ ಅನುಭವ, ಇಲ್ಲಿಗೆ ಹೋಗೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್​

Hebbe Falls: ಧುಮ್ಮಿಕ್ಕುವ ಹಬ್ಬೆ ಜಲಪಾತ ನೋಡೋದೆ ಒಂದು ಸುಂದರ ಅನುಭವ, ಇಲ್ಲಿಗೆ ಹೋಗೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Hebbe Falls near Chikkamagaluru: ಕರ್ನಾಟಕದಲ್ಲಿ ಹಲವಾರು ಜಲಪಾತಗಳಿದೆ. ಅದರಲ್ಲಿ ಚಿಕ್ಕಮಗಳೂರಿನ ಈ ಸುಂದರ ಜಲಪಾತ ಕೂಡ ಒಂದು. ಅದರ ಹೆಸರು ಹಬ್ಬೆ ಜಲಪಾತ. ಈ ಜಲಪಾತಕ್ಕೆ ಹೋಗುವುದು ಹೇಗೆ? ಎಲ್ಲಾ ಮಾಹಿತಿ ಇಲ್ಲಿದೆ. 

  • Share this:

ಫಾಲ್ಸ್​ಗಳನ್ನು (Falls) ನೋಡುವುದು ಬಹಳ ಸುಂದರವಾದ ಅನುಭವ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.  ಅದರಲ್ಲೂ ಹನಿಮೂನ್​ (Honeymoon) ಎಂದರೆ ಮೊದಲು ನೆನಪಾಗುವುದು ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾಗಿರುವ ಜಾಗಗಳು. ಯಾವುದೇ ಜಲಪಾತವನ್ನು ಮಳೆಗಾಲದಲ್ಲಿ ಮತ್ತು ಚಳಿಗಾಲದಲ್ಲಿ ನೋಡುವ ಮಜಾನೇ ಬೇರೆ ಎಂದರೆ ತಪ್ಪಲ್ಲ. ತಂಪಾದ ಗಾಳಿ, ಹಚ್ಚಹಸಿರಿನ ಪ್ರಕೃತಿ ನಡುವೆ,  ಧುಮ್ಮಿಕ್ಕುವ ಜಲಪಾತಗಳ ಸೌಂದರ್ಯವನ್ನು ಆನಂದಿಸಬಹುದು. ಈ ರೀತಿ ನೀವು ಸಹ ಎಂಜಾಯ್ ಮಾಡಬೇಕು ಎಂದರೆ ಕರ್ನಾಟಕದಲ್ಲಿ (Karnataka) ಹಲವಾರು ಜಲಪಾತಗಳಿದೆ. ಅದರಲ್ಲಿ ಚಿಕ್ಕಮಗಳೂರಿನ ಈ ಸುಂದರ ಜಲಪಾತ ಕೂಡ ಒಂದು. ಅದರ ಹೆಸರು ಹಬ್ಬೆ ಜಲಪಾತ. ಈ ಜಲಪಾತಕ್ಕೆ ಹೋಗುವುದು ಹೇಗೆ? ಎಲ್ಲಾ ಮಾಹಿತಿ ಇಲ್ಲಿದೆ.


ಚಿಕ್ಕಮಗಳೂರಿನ ಹಬ್ಬೆ ಜಲಪಾತ


ಹೆಬ್ಬೆ ಜಲಪಾತವು ಚಿಕ್ಕಮಗಳೂರಿನ ಒಂದು ಸುಂದರವಾದ ಪ್ರವಾಸಿ ಸ್ಥಳವಾಗಿದೆ. ಕೆಮ್ಮಣ್ಣುಗುಂಡಿ ಗಿರಿಧಾಮದಿಂದ ಜಲಪಾತಕ್ಕೆ ನೀವು ಸುಲಭವಾಗಿ ಹೋಗಬಹುದು. ಇದು ಈ ಗಿರಿಧಾಮದಿಂದ 8 ಕಿ.ಮೀ ದೂರದಲ್ಲಿದೆ. ಜಲಪಾತವು ಬೆರಗುಗೊಳಿಸುವ ಹಸಿರಿನಿಂದ ಆವೃತವಾಗಿದ್ದು, ದಟ್ಟವಾದ ಕಾಡುಗಳು, ಸಮೃದ್ಧ ಸಸ್ಯಗಳು ಮತ್ತು ಬೆಟ್ಟಗಳು ಈ ಪ್ರದೇಶವನ್ನು ಆವರಿಸಿದೆ.
ಜಲಪಾತದ ಸುತ್ತಲಿನ ಪ್ರದೇಶದಲ್ಲಿ ಕಾಫಿ ತೋಟಗಳು ಹರಡಿದ್ದು, 168 ಮೀಟರ್ ಎತ್ತರದಿಂದ ಇಳಿಯುವ ಜಲಪಾತವನ್ನು ಎರಡು ಹಂತಗಳಾಗಿ ವಿಂಗಡಿಸಲಾಗಿದೆ. ದೊಡ್ಡ ಜಲಪಾತ ಮತ್ತು ಸಣ್ಣ ಜಲಪಾತ ಎಂದು. ದೊಡ್ಡ ಹೆಬ್ಬೆ ಮತ್ತು ಚಿಕ್ಕ ಹೆಬ್ಬೆ ಎಂದು ಕರೆಯಲ್ಪಡುವ ಈ ಜಲಪಾತವು ಈ ಎರಡು ಪ್ರದೇಶಗಳಲ್ಲಿ ಎತ್ತರದ ಕಾರಣದಿಂದ ಬದಲಾಗುತ್ತದೆ.


ಇದಲ್ಲದೆ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಚಿಕ್ಕಮಗಳೂರಿನ ಸೌಂದರ್ಯವನ್ನು ಅನುಭವಿಸಬಹುದು.  ಮೊದಲೇ ಹೇಳಿದಂತೆ ಕೆಮ್ಮಣ್ಣುಗುಂಡಿಯಿಂದ 8 ಕಿ.ಮೀ ಟ್ರಕ್ಕಿಂಗ್ ಮೂಲಕ ನೀವು ಈ ಜಲಪಾತಕ್ಕೆ ಹೋಗಬೇಕು. ಈ ಮಾರ್ಗವು ತುಂಬಾ ಕಿರಿದಾಗಿ ಮತ್ತು ಕಡಿದಾಗಿದ್ದು, ಬಹಳ ಎಚ್ಚರಿಕೆಯಿಂದ ಹೋಗಬೇಕು. ಆದರೆ, ಟ್ರಕ್ಕಿಂಗ್ ಮಾಡುವಾಗ ದಾರಿಯುದ್ದಕ್ಕೂ, ನೀವು ರಮಣೀಯ ಪ್ರಕೃತ್ತಿಯ ಸೌಂದರ್ಯವನ್ನು ಎಂಜಾಯ್ ಮಾಡಬಹುದು. ಹೆಬ್ಬೆ ಜಲಪಾತ ತಲುಪುವುದು ನಿಜಕ್ಕೂ ಒಂದು ಸುಂದರ ಅನುಭ ಎನ್ನಬಹುದು.
ಟ್ರಕ್ಕಿಂಗ್ ಮಾಡಿ ಹೋಗಬೇಕು ಇಲ್ಲಿಗೆ?


ದೂರದಿಂದ ನೀವು ನೀರು ಚಿಮ್ಮುವ ಶಬ್ದಗಳನ್ನು ಕೇಳಬಹುದು, ಇದು ನಿಮ್ಮ ಸಸ್ಪೆನ್ಸ್ ಮತ್ತು ಉತ್ಸಾಹವನ್ನು ಹೆಚ್ಚಿಸುತ್ತದೆ. ಹೆಬ್ಬೆ ಜಲಪಾತವು ಶಾಂತ ರಜಾದಿನವನ್ನು ಅನುಭವಿಸಲು ಸೂಕ್ತವಾದ ಸ್ಥಳವಾಗಿದೆ. ಇದು ವಿಶ್ರಾಂತಿ ಮತ್ತು ತೊಂದರೆಗೆ ಸೂಕ್ತವಾದ ಸ್ಥಳವಾಗಿದೆ. ನೀವು ನಗರದ ದೈನಂದಿನ ಜಂಜಾಟಗಳಿಂದ ಬೇಸರಗೊಂಡಿದ್ದರೆ ಮತ್ತು ಆಯಾಸಗೊಂಡಿದ್ದರೆ, ಆಗಾಗ ಈ ಜಲಪಾತಗಳಿಗೆ ಭೇಟಿ ನೀಡುವುದರಿಂದ ನಿಮ್ಮ ಶಕ್ತಿಯನ್ನು ರೀಚಾರ್ಜ್ ಮಾಡುತ್ತದೆ ಎನ್ನುವುದರಲ್ಲಿ ಎಳಷ್ಟು ಅನುಮಾನವಿಲ್ಲ.


ಇದನ್ನೂ ಓದಿ: ಅರಿಶಿನವನ್ನು ಈ ರೀತಿ ನಿಮ್ಮ ಆಹಾರದಲ್ಲಿ ಬಳಸಿದ್ರೆ ಶೀತ-ಕೆಮ್ಮಿಗೆ ಪರಿಹಾರ ಸಿಗುತ್ತೆ


ಈ ಜಲಪಾತಗಳ ಒಂದು ಉತ್ತಮ ವೈಶಿಷ್ಟ್ಯವೆಂದರೆ ನೀರಿನಲ್ಲಿ ಗಿಡಮೂಲಿಕೆ ಅಂಶವಿದೆ ಎನ್ನಲಾಗುತ್ತದೆ. ಹೌದು, ಈ ಆರೋಗ್ಯಕರ ನೀರಿನಲ್ಲಿ ಸ್ನಾನ ಮಾಡಿದರೆ ಹಲವಾರು ಲಾಭವಿದೆ ಎನ್ನುತ್ತಾರೆ ಸ್ಥಳಿಯರು. ಇಲ್ಲಿ ನೀವು ವಿವಿಧ ಸಾಹಸ ಚಟುವಟಿಕೆಗಳನ್ನು ಸಹ ಮಾಡಬಹುದು.  ಸುತ್ತಮುತ್ತಲಿನ ಪ್ರದೇಶಗಳಲ್ಲಿನ ದಟ್ಟವಾದ ಕಾಡುಗಳು ಮತ್ತು ಕಾಫಿ ತೋಟಗಳು ಚಿಕ್ಕಮಗಳೂರಿನಲ್ಲಿ ಟ್ರೆಕ್ಕಿಂಗ್ ಮತ್ತು ಕ್ಯಾಂಪಿಂಗ್ ಮಾಡಲು ಒಳ್ಳೆಯ ಅವಕಾಶಗಳನ್ನು ಒದಗಿಸುತ್ತವೆ. ಇಲ್ಲಿನ ಹವಾಮಾನವು ವರ್ಷವಿಡೀ ಶಾಂತ ಮತ್ತು ಸೌಮ್ಯವಾಗಿರುತ್ತದೆ.
ಲೊಕೇಶನ್: ಚಿಕ್ಕಮಗಳೂರು ಜಿಲ್ಲೆ, ಕೆಸವಿನಮನೆ, ಕರ್ನಾಟಕ


ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್‌ನಿಂದ ಜನವರಿವರೆಗಿನ ಚಳಿಗಾಲದ ಸಮಯ ಹೆಬ್ಬೆ ಜಲಪಾತಕ್ಕೆ ಭೇಟಿ ನೀಡಲು ಉತ್ತಮ ಸಮಯ.
ಪ್ರವೇಶ ಶುಲ್ಕ: ಉಚಿತ


ಸಮಯ: ಇದು ಬೆಳಗ್ಗೆ 6:00 ರಿಂದ ಸಂಜೆ 6:00 ರವರೆಗೆ ತೆರೆದಿರುತ್ತದೆ


ಇದನ್ನೂ ಓದಿ: ಈ ಹಣ್ಣುಗಳನ್ನು ಪ್ರತಿದಿನ ತಿಂದ್ರೆ ಆರೋಗ್ಯ ಚೆನ್ನಾಗಿರುತ್ತಂತೆ


ಇಲ್ಲಿಗೆ ಹೋಗುವುದು ಹೇಗೆ?


ಚಿಕ್ಕಮಗಳೂರು ಬಸ್ ನಿಲ್ದಾಣದಿಂದ ಅಂದಾಜು 70 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರು-ಚಿಕ್ಕಮಗಳೂರು ಅಥವಾ ಬೆಂಗಳೂರು-ಶಿವಮೊಗ್ಗ ನಡುವೆ ಸಾಕಷ್ಟು ಬಸ್‌ಗಳು ಬಹಳಷ್ಟಿದ್ದು, ಬೀರೂರ್ ನಿಂದ, ಟ್ಯಾಕ್ಸಿ ಅಥವಾ ಖಾಸಗಿ ಬಸ್‌ಗಳ ಮೂಲಕ ಇಲ್ಲಿಗೆ ಹೋಗಬಹುದು.

Published by:Sandhya M
First published: