• Home
  • »
  • News
  • »
  • lifestyle
  • »
  • Abbey Falls: ಕೊಡಗಿನ ಈ ಅಬ್ಬೆ ಜಲಪಾತಕ್ಕೆ ಫ್ಯಾಮಿಲಿ ಜೊತೆ ಹೋಗ್ಬನ್ನಿ, ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್​

Abbey Falls: ಕೊಡಗಿನ ಈ ಅಬ್ಬೆ ಜಲಪಾತಕ್ಕೆ ಫ್ಯಾಮಿಲಿ ಜೊತೆ ಹೋಗ್ಬನ್ನಿ, ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್​

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Abbey Falls a Beautiful Place: ಅಬ್ಬೆ ಜಲಪಾತವು ನಿಮ್ಮ ಪ್ರೀತಿಪಾತ್ರರ ಜೊತೆ ದಿನವನ್ನು ಕಳೆಯಲು ಉತ್ತಮ ಸ್ಥಳವಾಗಿದೆ. ನೀವು ಸಹ ಈ ಬಾರಿ ರಜೆಯಲ್ಲಿ ಹೋಗಲು ಪ್ಲ್ಯಾನ್​ ಮಾಡ್ತಿದ್ರೆ ಕೆಲ ಮಾಹಿತಿ ಇಲ್ಲಿದೆ.  

  • Share this:

ಮಡಿಕೇರಿಯನ್ನು (Madikeri) ಭಾರತದ ಸ್ಕಾಟ್ಲ್ಯಾಂಡ್​ ಎಂದು ಕರೆಯಲಾಗುತ್ತದೆ. ಇಲ್ಲಿನ ರಮಣೀಯ ಪ್ರಕೃತಿ ಸೌಂದರ್ಯ ಪ್ರವಾಸ ಪ್ರಿಯರನ್ನು (Travel) ಸೆಳೆಯುತ್ತಿರುವುದು ಸುಳ್ಳಲ್ಲ. ಭಾರೀ ಮಳೆ (Rain) ಇದ್ದಾಗ ಸಾಮಾನ್ಯವಾಗಿ ಇಲ್ಲಿಗೆ ಪ್ರವಾಸಿಗರು ಹೆಚ್ಚು ಬರುತ್ತಾರೆ. ಆದರೆ ಚಳಿಗಾಲದಲ್ಲಿ (Winter) ಸಹ ಈ ಮಡಿಕೇರಿ ಪ್ರವಾಸ ಮಾಡುವುದು ಒಂದು ಸುಂದರ ಅನುಭವ ನೀಡುತ್ತದೆ. ಈ ಮಡಿಕೇರಿಯ ಸಮೀಪದಲ್ಲಿರುವ ಪ್ರಸಿದ್ಧ ಆಕರ್ಷಣೆಗಳಲ್ಲಿ ಒಂದಾದ ಅಬ್ಬೆ ಜಲಪಾತವು ನಿಮ್ಮ ಪ್ರೀತಿಪಾತ್ರರ ಜೊತೆ ದಿನವನ್ನು ಕಳೆಯಲು ಉತ್ತಮ ಸ್ಥಳವಾಗಿದೆ. ನೀವು ಸಹ ಈ ಬಾರಿ ರಜೆಯಲ್ಲಿ ಹೋಗಲು ಪ್ಲ್ಯಾನ್​ ಮಾಡ್ತಿದ್ರೆ ಕೆಲ ಮಾಹಿತಿ ಇಲ್ಲಿದೆ.


ಪಶ್ಚಿಮ ಘಟ್ಟಗಳ ಹಚ್ಚ ಹಸಿರಿನ ಸುತ್ತಮುತ್ತಲಿನ ಮಧ್ಯೆ, ಅಬ್ಬೆ ಜಲಪಾತವು ನೀವು ಗಡಿಬಿಡಿಯ ಜೀವನದಿಂದ ತಪ್ಪಿಸಿಕೊಳ್ಳಲು ಭೇಟಿ ನೀಡಬಹುದಾದ ಒಂದು ಸಂತೋಷಕರ ಸ್ಥಳ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಪ್ರಕೃತಿ ಪ್ರಿಯರು ಮತ್ತು ಫೋಟೋಗ್ರಾಫರ್​ಗಳು ಭೇಟಿ ನೀಡಲೇಬೇಕಾದ ಅಬ್ಬೆ ಜಲಪಾತವು ದಕ್ಷಿಣ ಭಾರತದ ಅತ್ಯಂತ ಆಕರ್ಷಕ ಜಲಪಾತಗಳಲ್ಲಿ ಒಂದಾಗಿದೆ. ವಿಹಂಗಮ ದೃಶ್ಯವನ್ನು ನಾವು ಮಿಸ್ ಮಾಡದೇ ಎಂಜಾಯ್ ಮಾಡಬೇಕು.


70 ಅಡಿ ಎತ್ತರದಿಂದ ಕೆಳಗೆ ಬೀಳುವ ಈ ಫಾಲ್ಸ್​ ಖಂಡಿತವಾಗಿಯೂ ಪ್ರವಾಸಿಗರನ್ನು ಮಂತ್ರಮುಗ್ಧಗೊಳಿಸುತ್ತದೆ.  ಕಾವೇರಿ ನದಿಯನ್ನು ಸೇರುವ ಅಬ್ಬೆ ಜಲಪಾತವು ಹಸಿರು ಕಾಫಿ ತೋಟಗಳ ನಡುವೆ ಇದ್ದು, ಅದರ ಪ್ರಶಾಂತ ವಾತಾವರಣಕ್ಕೆ ಹೆಸರುವಾಸಿಯಾಗಿದೆ. ಸಾಹಸ ಪ್ರಿಯರಿಗೆ ಇದು ಟ್ರೆಕ್ಕಿಂಗ್‌ಗೆ ಸ್ವರ್ಗವಾಗಿದ್ದು, ಏಕಾಂತವನ್ನು ಬಯಸುವವರಿಗೆ ಇದು ಪ್ರಕೃತಿಯ ಮಧ್ಯದಲ್ಲಿ ಶಾಂತಿಯಿಂದ ಸಮಯ ಕಳೆಯಲು ಉತ್ತಮ ಸ್ಥಳ ಎನ್ನಬಹುದು. ಅಬ್ಬೆ ಜಲಪಾತದಲ್ಲಿ ಸೇತುವೆಯೊಂದಿದ್ದು, ಅಲ್ಲಿಂದ ಜಲಪಾತವನ್ನು ನೋಡುವುದು ಒಂದು ರೋಮಾಂಚನಕಾರಿ ಅನುಭವ.


ಅಬ್ಬೆ ಜಲಪಾತದಲ್ಲಿ ನೋಡಬಹುದಾದ ವಿಶೇಷತೆಗಳು


ರುದ್ರರಮಣೀಯವಾದ ಪ್ರಾಕೃತಿಕ ಸೌಂದರ್ಯವನ್ನು ಆನಂದಿಸಿ: ಇದು ತನ್ನ ಸುತ್ತಮುತ್ತಲಿನ ಹಚ್ಚ ಹಸಿರಿನ ಪ್ರದೇಶಗಳು ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾಗಿದ್ದು, ನೀವು ಇಲ್ಲಿ ಪ್ರಕೃತಿಯನ್ನು ಆನಂದಿಸಬಹುದು.


ಕಾಫಿ ಮತ್ತು ಏಲಕ್ಕಿ ತೋಟಗಳಿಗೆ ಪ್ರವಾಸ ಹೋಗಬಹುದು: ಮನಸ್ಸಿಗೆ ಮುದ ನೀಡುವ ಅನುಭವವನ್ನು ಪಡೆಯಲು ಪ್ರವಾಸಿಗರು ಅಬ್ಬೆ ಜಲಪಾತದ ಸುತ್ತಮುತ್ತಲಿನ ಕಾಫಿ, ಏಲಕ್ಕಿ ಮತ್ತು ಇತರ ತೋಟಗಳಿಗೆ ವಾಕಿಂಗ್ ಹೋಗಬಹುದು.


ಟ್ರೆಕ್ಕಿಂಗ್: ಸಹ್ಯಾದ್ರಿ ಶ್ರೇಣಿಯ ಭೂಪ್ರದೇಶಗಳ ನಡುವೆ ಟ್ರಕ್ಕಿಂಗ್ ಮಾಡುವುದು ಅಬ್ಬೆ ಜಲಪಾತದ ಸುಂದರ ಅನುಭವಗಳಲ್ಲಿ ಒಂದಾಗಿದೆ. ಇಲ್ಲಿ ಟ್ರಕ್ಕಿಂಗ್ ಸುಮಾರು 15-20 ನಿಮಿಷಗಳವರೆಗೆ ಇರುತ್ತದೆ. ಆದರೆ ನಿಮ್ಮ ಒತ್ತಡವನ್ನು ನಿವಾರಿಸಿ, ಶಾಂತಿ ನೀಡುತ್ತದೆ ಎನ್ನಬಹುದು.




ಅಬ್ಬೆ ಫಾಲ್ಸ್ ಬೆಲೆ ಮಾಹಿತಿ: ವಯಸ್ಕರಿಗೆ: ₹15 ರೂಪಾಯಿ


ಅಬ್ಬೆ ಜಲಪಾತವನ್ನು ತಲುಪುವುದು ಹೇಗೆ?


ಅಬ್ಬೆ ಜಲಪಾತಕ್ಕೆ ಹತ್ತಿರದ ಊರು ಎಂದರೆ ಮಡಿಕೇರಿ ಇದು 8-10 ಕಿಮೀ ದೂರದಲ್ಲಿದೆ. ಮಂಗಳೂರು ಮತ್ತು ಮೈಸೂರಿನಂತಹ ಇತರ ನಗರಗಳು ಅಬ್ಬೆ ಜಲಪಾತದಿಂದ ಸುಮಾರು 130 ಕಿಮೀ ದೂರದಲ್ಲಿದೆ.


travel plans Abbey Falls a beautiful place in kodagu
ಸಾಂದರ್ಭಿಕ ಚಿತ್ರ


ರಸ್ತೆ ಮೂಲಕ 


ಮಡಿಕೇರಿ ಮಾರ್ಗವಾಗಿ ಬರುವುದಾದರೆ ಗಾಳಿಬೀಡು ರಸ್ತೆಯ ಮೂಲಕ ಜಲಪಾತ ತಲುಪಿ ಸ್ವಲ್ಪ ಹೊತ್ತು ನಡೆದುಕೊಂಡು ಹೋಗಬೇಕು. ಮಂಗಳೂರು, ಮೈಸೂರು ಅಥವಾ ಬೆಂಗಳೂರಿನ ಮೂಲಕ ಬಂದರೆ, ಕ್ಯಾಬ್‌ಗಳು ಅಥವಾ ಟ್ಯಾಕ್ಸಿಗಳು ಬಾಡಿಗೆಗೆ ಸುಲಭವಾಗಿ ಲಭ್ಯವಿದೆ.


ಇದನ್ನೂ ಓದಿ: ಧುಮ್ಮಿಕ್ಕುವ ಹಬ್ಬೆ ಜಲಪಾತ ನೋಡೋದೆ ಒಂದು ಸುಂದರ ಅನುಭವ, ಇಲ್ಲಿಗೆ ಹೋಗೋದು ಹೇಗೆ? ಇಲ್ಲಿದೆ ಫುಲ್ ಡೀಟೇಲ್ಸ್​


 ರೈಲಿನ ಮೂಲಕ 


ಅಬ್ಬೆ ಜಲಪಾತಕ್ಕೆ ಹತ್ತಿರದ ರೈಲು ನಿಲ್ದಾಣವೆಂದರೆ ಮೈಸೂರು ರೈಲ್ವೆ ನಿಲ್ದಾಣ. ಅಲ್ಲಿಂದ ಅಬ್ಬೆ ಜಲಪಾತಕ್ಕೆ ನೇರವಾಗಿ ತಲುಪಲು ಕ್ಯಾಬ್ ಅಥವಾ ಟ್ಯಾಕ್ಸಿಯನ್ನು ತೆಗೆದುಕೊಳ್ಳಬೇಕು ಅಥವಾ ಬಸ್ ಮೂಲಕ ಮಡಿಕೇರಿಗೆ ಹೋಗಿ ನಂತರ ಅಬ್ಬೆ ಜಲಪಾತವನ್ನು ತಲುಪಲು ಸ್ಥಳೀಯ ಸಾರಿಗೆಯನ್ನು ಬಳಸಬಹುದು.




ಬಸ್ಸಿನ ಮೂಲಕ 


ಬೆಂಗಳೂರು, ಮೈಸೂರು ಮತ್ತು ಮಂಗಳೂರಿನಿಂದ ಅಬ್ಬೆ ಜಲಪಾತಕ್ಕೆ ಹತ್ತಿರದ ಮಡಿಕೇರಿ ತಲುಪಲು ಹಲವಾರು KSRTC ಬಸ್ಸುಗಳಿವೆ.


ಅಬ್ಬೆ ಜಲಪಾತವು ಕರ್ನಾಟಕದ ಕೊಡಗಿನಲ್ಲಿದೆ. ಇದು ಮಡಿಕೇರಿಯಿಂದ 10 ಕಿಲೋಮೀಟರ್ ದೂರ ಮತ್ತು ಮೈಸೂರಿನಿಂದ ಸುಮಾರು 122 ಕಿಮೀ ದೂರದಲ್ಲಿದೆ. ಬೆಂಗಳೂರಿನಿಂದ ಅಬ್ಬೆ ಜಲಪಾತವು 268 ಕಿ.ಮೀ ದೂರದಲ್ಲಿದೆ.


ಇದನ್ನೂ ಓದಿ: ಆಗುಂಬೆಯ ಪ್ರೇಮ ಸಂಜೆಯ ಸೂರ್ಯಾಸ್ತ ನೋಡೋದೇ ಕಣ್ಣಿಗೆ ಹಬ್ಬ! ತಂಗಾಳಿಯಲ್ಲಿ ಬಿಸಿ ಟೀ ಕುಡಿತಾ ಇದ್ರೆ ಸ್ವರ್ಗ!


ಸಮಯ: ಅಬ್ಬೆ ಜಲಪಾತಕ್ಕೆ ವಾರದ ಯಾವುದೇ ದಿನದಲ್ಲಿ ಭೇಟಿ ನೀಡಬಹುದು. ಇದು ಎಲ್ಲಾ ಏಳು ದಿನಗಳವರೆಗೆ ತೆರೆದಿರುತ್ತದೆ. ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಜಲಪಾತಗಳಿಗೆ ಭೇಟಿ ನೀಡುವ ಸಮಯ.

Published by:Sandhya M
First published: