ನಿಮ್ಮ ರಾಶಿ ಪ್ರಕಾರ ನೀವು ಎಲ್ಲಿಗೆ ಪ್ರವಾಸಕ್ಕೆ ತೆರಳಿದರೆ ಅದೃಷ್ಟ ಬರುತ್ತೆ ಗೊತ್ತಾ?

ನಿಮ್ಮ ರಾಶಿ ಪ್ರಕಾರ ನೀವು ವಿಶ್ವದ ಯಾವ ಪ್ರವಾಸಿತಾಣಕ್ಕೆ ಭೇಟಿ ನೀಡುವುದು ಸೂಕ್ತ? ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವ ಸ್ಥಳ ಯಾವುದು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 

Photo: Google

Photo: Google

 • Share this:

  ನಿಮ್ಮ ರಾಶಿಚಕ್ರ ಚಿಹ್ನೆಯ ಪ್ರಕಾರ ನೀವು ಆನ್ವೇಶಿಸಬಹುದಾದ ಸ್ಥಳಗಳು ಮತ್ತು ದೇಶಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ಬದುಕಿನಲ್ಲಿ ನಕ್ಷತ್ರಗಳ ಪಾತ್ರವನ್ನು ನೀವು ನಂಬುವವರಾದರೆ, ಇದು ನಿಮಗೆ ಕುತೂಹಲವನ್ನುಂಟು ಮಾಡಬಹುದು. ನಿಮ್ಮ ರಾಶಿ ಪ್ರಕಾರ ನೀವು ವಿಶ್ವದ ಯಾವ ಪ್ರವಾಸಿತಾಣಕ್ಕೆ ಭೇಟಿ ನೀಡುವುದು ಸೂಕ್ತ? ನಿಮ್ಮ ವ್ಯಕ್ತಿತ್ವಕ್ಕೆ ಒಪ್ಪುವ ಸ್ಥಳ ಯಾವುದು? ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. 


  ಮೇಷ: ಈ ರಾಶಿಯ ಸಂಕೇತ ಬೆಂಕಿ, ಹಾಗಾಗಿ ಮೇಷ ರಾಶಿಯವರು ತಮ್ಮನ್ನು ಶಾಂತಗೊಳಿಸಲು ಯಾವಾಗಲೂ ನೀರಿನ ಸುತ್ತಮುತ್ತ ಇರಲು ಬಯಸುತ್ತಾರೆ. ಅವರು ಸಾಹಸಿಗಳು ಮತ್ತು ಪ್ಯಾಶನೇಟ್ ಆಗಿರುತ್ತಾರೆ. ಸಂಪೂರ್ಣ ಚಟುಚಟಿಕೆಗಳಿಂದ ತುಂಬಿರುವ ಸವಾಲಿನ ಪ್ರವಾಸಗಳು ಅವರಿಗಿಷ್ಟ. ಮನಾಲಿ, ಮಾಡ್ರಿಡ್ ಮತ್ತು ಮೊರೊಕ್ಕೋ ಅವರ ಪ್ರವಾಸಕ್ಕೆ ಸೂಕ್ತ ಸ್ಥಳಗಳು.


  ಕಟಕ:ಪ್ರೀತಿ ಮತ್ತು ಪ್ರಣಯ ಕಟಕ ರಾಶಿಗೆ ಸಮನಾರ್ಥಕ ಎನ್ನಬಹುದು. ನೀರಿನ ಸಂಕೇತವುಳ್ಳ ಇವರು, ತಮ್ಮ ಪ್ರತೀ ಪ್ರವಾಸದಲ್ಲೂ ಹೊಸ ಹೊಸ ಅನುಭವಗಳನ್ನು ಪಡೆಯಲು ಬಯಸುತ್ತಾರೆ. ಅವರಿಗೆ ತಮ್ಮ ಹೆತ್ತವರ ಜೊತೆ ಪ್ರಯಾಣಿಸುವುದೆಂದರೆ ಬಲು ಇಷ್ಟ. ಲಕ್ಷದ್ವೀಪ, ಬುಡಪೆಸ್ಟ್ ಮತ್ತು ಗ್ರೀಸ್ ಅವರ ಪ್ರವಾಸಕ್ಕೆ ಸೂಕ್ತ ಸ್ಥಳಗಳು.


  ಮೀನ:ಈ ರಾಶಿಯವರದ್ದು ನೀರಿನ ಸಂಕೇತವಾಗಿರುವುದರಿಂದ, ಅವರು ಹರಿವಿನೊಂದಿಗೆ ಸಾಗಿ, ಜೀವನದ ಪ್ರತಿಯೊಂದು ಅಂಶಗಳಲ್ಲೂ ಪ್ರಣಯವನ್ನು ಹುಡುಕಲು ಪ್ರಯತ್ನಿಸುತ್ತಾರೆ. ದ್ವೀಪಗಳು ಮತ್ತು ಸುತ್ತಲೂ ನೀರುಳ್ಳ ಸ್ಥಳಗಳನ್ನು ಆನ್ವೇಶಿಸುವುದು ಅವರಿಗಿಷ್ಟ. ಸಾಗರ ತೀರದ ಯಾವುದೇ ಸುಂದರ ಜಾಗ ಮೀನ ರಾಶಿಯವರಿಗೆ ಸೂಕ್ತ. ಥೈಲಾಂಡ್ , ಮೆಕ್ಸಿಕೋ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಮೀನ ರಾಶಿಯವರ ಪ್ರವಾಸಕ್ಕೆ ಸೂಕ್ತ ಸ್ಥಳ.


  ವೃಷಭ :ಯೋಜನೆಗಳನ್ನು ರೂಪಿಸುವುದರಲ್ಲಿ ಇವರು ನಿಪುಣರು. ಶ್ರೀಮಂತ ಜೀವನವನ್ನು ಇಷ್ಟಪಡುವ ಅವರು, ಶ್ರೀಮಂತ ಸಂಸ್ಕೃತಿಗಳ ಆನ್ವೇಷಣೆ ಮತ್ತು ಶಾಪಿಂಗ್ ಅವರಿಗೆ ಹೆಚ್ಚು ಸಂತೋಷ ನೀಡುತ್ತದೆ.ಇಟಲಿ, ಲಿಸ್ಬನ್ ಮತ್ತು ಉದಯ್‍ಪುರ್ ಪ್ರವಾಸ ವೃಷಭ ರಾಶಿಯವರಿಗೆ ಖುಷಿ ನೀಡಬಹುದು.


  ಧನು ರಾಶಿ:ಈ ರಾಶಿಯವರು ಸಾಹಸಪ್ರಿಯರು. ಅವರ ಜೀವನ ಬದಲಾಯಿಸುವ ಅನುಭವ ಮತ್ತು ಸವಾಲನ್ನು ಇಷ್ಟಪಡುತ್ತಾರೆ. ಅವರು ಅಜೀವ ಪರ್ಯಂತ ಅನ್ವೇಷಣೆ ಮತ್ತು ಕಲಿಯುವಿಕೆಗೆ ಸಿದ್ಧವಿರುತ್ತಾರೆ. ಲೊನಾವ್ಲಾ, ಪ್ಯಾರಿಸ್ ಮತ್ತು ಫ್ಲಾರೆನ್ಸ್ ಅವರಿಗೆ ಪ್ರವಾಸಕ್ಕೆ ಸೂಕ್ತ.


  ವೃಶ್ಚಿಕ:ಈ ರಾಶಿಯವರು ಸ್ವತಂತ್ರ ಮನೋಭಾವದವರು. ಒಬ್ಬರೇ ಪ್ರಯಾಣಿಸುವುದು ಅವರಿಗಿಷ್ಟ. ಅವರು ಐಷಾರಾಮಿ ಪ್ರಕೃತಿಯವರು. ಹೆಚ್ಚಾಗಿ ಅಸಾಮಾನ್ಯ ಸ್ಥಳಗಳು ಅವರ ಗಮನ ಸೆಳೆಯುತ್ತವೆ. ಜಮ್ಮು ಮತ್ತು ಕಾಶ್ಮೀರ, ಬಾರ್ಸಿಲೋನಾ ಮತ್ತು ಮಾಲ್ಡೀವ್ಸ್ ನಂತಹ ಸ್ಥಳಗಳು ಅವರ ಆಂತರಿಕ ಆಧ್ಯಾತ್ಮಿಕ ಆನ್ವೇಷಣೆಗೆ ತೃಪ್ತಿ ನೀಡಬಲ್ಲವು.


  ಸಿಂಹ: ತಮಗೇನು ಬೇಕು ಮತ್ತು ತಮಗೇನು ಇಷ್ಟ ಎಂಬುವುದು ಈ ರಾಶಿಯವರಿಗೆ ಖಚಿತವಾಗಿ ಗೊತ್ತಿರುತ್ತದೆ. ಅವರು ಬಯಸುವುದು ತಮ್ಮ ವ್ಯಕ್ತಿತ್ವದಂತೆಯೇ ಪ್ರಕಾಶಮಾನವಾಗಿ ಹೊಳೆಯುವ ಸೂರ್ಯನನ್ನು. ಅವರಿಗೆ ಸೂರ್ಯ ಸ್ನಾನಯುಕ್ತವಾದ ಐಷಾರಾಮಿ ಅನುಭವಗಳು ಇಷ್ಟ. ಮೊನ್ಯಾಕೋ, ಸೀಶೆಲ್ಸ್ ಮತ್ತು ರಾಜಸ್ಥಾನದಂತಹ ಸ್ಥಳಗಳು ಅವರಿಗಿಷ್ಟವಾಗುತ್ತದೆ.


  ಮಕರ:ಅವರು ಅತ್ಯುತ್ತಮ ಪ್ರವಾಸ ಸಂಗಾತಿಗಳು. ಐತಿಹಾಸಿಕ ಹಿನ್ನೆಲೆಯುಳ್ಳ ಸ್ಥಳಗಳನ್ನು ಸುತ್ತುವುದು ಅವರಿಗಿಷ್ಟ. ದಕ್ಷಿಣ ಆಫ್ರಿಕಾ, ಪ್ರೇಗ್ ಮತ್ತು ಕೋವಲಮ್ ಪ್ರವಾಸ ಅವರಿಗೆ ಸೂಕ್ತ.


  ಇದನ್ನೂ ಓದಿ: Relationship Mistakes Zodiac: ಸಂಬಂಧಗಳ ವಿಚಾರದಲ್ಲಿ ಪ್ರತೀ ರಾಶಿಯವರೂ ಒಂದೊಂದು ತಪ್ಪು ಮಾಡೇ ಮಾಡ್ತಾರಂತೆ, ನಿಮ್ಮ ತಪ್ಪು ಯಾವುದು ?

  ತುಲಾ:ಅವರ ರಾಶಿಯ ಸಂಕೇತಕ್ಕೆ ತಕ್ಕಂತೆ, ಅವರು ಯಾವಾಗಲೂ ಚಟುವಟಿಕೆ ಮತ್ತು ಆರಾಮದ ನಡುವೆ ಸಮತೋಲನವನ್ನು ಇಟ್ಟುಕೊಳ್ಳುತ್ತಾರೆ. ಹೋದಲೆಲ್ಲಾ ಅವರು ಶಾಂತಿಯನ್ನು ಬಯಸುತ್ತಾರೆ. ಸ್ಯಾನ್‍ಫ್ರಾನ್ಸಿಸ್ಕೋ, ಕೇರಳ ಮತ್ತು ಸ್ಪೇನ್ ಅವರ ಪ್ರವಾಸಕ್ಕೆ ಯೋಗ್ಯ ಸ್ಥಳಗಳು.


  ಮಿಥುನ:ವೇಗವನ್ನು ಇಷ್ಟಪಡುವ ಈ ರಾಶಿಯವರು, ಸಾಮಥ್ರ್ಯವುಳ್ಳವರು, ಸಾಹಸಿಗಳು ಮತ್ತು ಮಕ್ಕಳಂತೆ. ತಮ್ಮ ಪ್ರವಾಸದಲ್ಲಿ ಯಾವುದೂ ತಪ್ಪಿ ಹೋಗಬಾರದು ಎಂಬ ಕಾರಣಕ್ಕಾಗಿ ಅವರು ಬೇಗ ಬೇಗ ಎಲ್ಲವನ್ನು ನೋಡಲು ಬಯಸುತ್ತಾರೆ. ಅವರು ಕೇವಲ ಒಂದು ಕಡಲತೀರ ಮತ್ತು ಒಂದು ಬೆಟ್ಟಕ್ಕಿಂತ ನೋಡುವುದಕ್ಕಿಂತ ಹೆಚ್ಚಿನದನ್ನು ಬಯಸುತ್ತಾರೆ. ತಮ್ಮ ಮಾರ್ಗದಲ್ಲಿ ಥ್ರಿಲ್ ಮತ್ತು ಸಾಹಸಗಳು ಅವರಿಗಿಷ್ಟ. ವೆಲೆನ್ಸಿಯಾ,ಊಟಿ, ಲಂಡನ್ ಮತ್ತು ಈಜಿಪ್ಟ್ ಅವರ ಕುತೂಹಲವನ್ನು ಖಂಡಿತಾ ತಣಿಸಬಲ್ಲವು.


  ಕುಂಭ:ಈ ರಾಶಿಯವರು ಹೊಂದಾಣಿಕೆಯ ಗುಣ ಉಳ್ಳವರು ಮತ್ತು ಸ್ವತಂತ್ರರು. ಎಲ್ಲಾ ಜಾಗಗಳಿಗೂ ಬೇಗ ಹೊಂದಿಕೊಳ್ಳುತ್ತಾರೆ. ಆದರೆ ಒಮ್ಮೆ ಹೋದ ಜಾಗಕ್ಕೆ ಮತ್ತೊಮ್ಮೆ ಹೋಗಲು ಇಷ್ಟ ಪಡುವುದಿಲ್ಲ. ಯುಎಇ, ಲೀಪ್‍ಜಿಗ್, ಗೋವಾ ಮತ್ತು ಬರ್ಲಿನ್ ಅವರಿಗೆ ಇಷ್ಟವಾಗಬಹುದು.


  ಕನ್ಯಾ:ಅವರು ಪ್ರವಾಸದ ಕುರಿತು ಪಟ್ಟಿ ತಯಾರಿಸುತ್ತಾರೆ, ನಿಖರವಾಗಿರುತ್ತಾರೆ ಮತ್ತು ಕಲಾತ್ಮಕತೆ ಇಷ್ಟ. ಅವರಿಗೆ ದಿನನಿತ್ಯದ ಬದುಕಿನಿಂದ ಕೊಂಚ ವಿರಾಮ ಪಡೆಯುವುದು ಇಷ್ಟ. ರಾಶಿ ಸಂಕೇತಗಳಲ್ಲಿ ಅತ್ಯಂತ ಸಂವೇದನಾಶೀಲರೆಂದರೆ ಈ ರಾಶಿಯವರು. ಯಾವಾಗಲೂ ಒಳ್ಳೆಯ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಕನ್ಯಾ ರಾಶಿಯವರೊಂದಿಗೆ ಪ್ರಯಾಣಿಸುವಾಗ ಪ್ರತಿಬಾರಿ ಏನನ್ನಾದರು ಹೊಸದನ್ನು ನೋಡಲು ಸಿದ್ಧವಾಗಿರಿ. ಆ್ಯಮ್‍ಸ್ಟ್ರಡಾಂ, ರೋಮ್ ಮತ್ತು ಜೈಸಲ್ಮೇರ್ ಅವರಿಗೆ ಇಷ್ಟವಾಗಬಹುದು.

  First published: