Pilates Girls: ಸಾರಾ, ಕಂಗನಾ, ಜಾನ್ವಿ ಕಪೂರ್‌ ಈ ಮೂರು ಜನರಲ್ಲೂ ಒಂದು ಕಾಮನ್ ವಿಚಾರ ಇದೆ, ಅದೇನು ನೋಡಿ

ಪೈಲೇಟ್ಸ್ ವ್ಯಾಯಾಮ ಪದ್ದತಿಯನ್ನು ಹೆಚ್ಚಿನ ನಟಿ ಮಣಿಯರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ದೇಹರೋಗ್ಯವನ್ನು ಪಡೆಯುತ್ತಿದ್ದಾರೆ. ಅದರಲ್ಲಿ ಪ್ರಮುಖರಾದ ನಟಿ ಮಣಿಯರೆಂದರೆ ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಕಂಗನಾ ರನೌತ್ ಹೀಗೆ ಇತರ ನಟಿ ಮಣಿಯರು ಕೂಡ ಈ ಪೈಲೇಟ್ಸ್ ಗೆ ಮಾರು ಹೋಗಿದ್ದಾರೆ.

ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್‌

ಸಾರಾ ಅಲಿ ಖಾನ್ ಮತ್ತು ಜಾನ್ವಿ ಕಪೂರ್‌

  • Share this:
ಇಂದಿನ ಕಾಲದಲ್ಲಿ ಆರೋಗ್ಯದ (Health) ಬಗ್ಗೆ ಪ್ರತಿಯೊಬ್ಬರು ಕೂಡ ಬಹಳಷ್ಟು ಕಾಳಜಿಯನ್ನು ವಹಿಸುತ್ತಾರೆ.  ಯೋಗ, ಜಿಮ್‌ಗೆ ಹೋಗಿ ದೇಹ ಕಸರತ್ತು ಮಾಡುತ್ತಾರೆ. ಇನ್ನು ನಟಿ ಮಣಿಗಳು ಒಂದೊಂದು ರೀತಿಯ ವ್ಯಾಯಾಮ (Exercise) ಮಾಡಿ ಮತ್ತಷ್ಟು ಸುಂದರವಾಗಿ ಕಾಣಲು ದಿನವೂ ತಮ್ಮ ದೇಹವನ್ನು ದಂಡಿಸುತ್ತಾರೆ. ಅದರಲ್ಲಿ ಈಗ ಟ್ರೆಂಡ್‌ ಅಲ್ಲಿರೋ ವ್ಯಾಯಾಮ ಪದ್ಧತಿ ಎಂದರೆ ಅದು ಪೈಲೇಟ್ಸ್ (Pilates). ಈ ಪೈಲೇಟ್ಸ್'ನಿಂದ ದೇಹ ಹಗುರವಾಗುತ್ತೆ, ಫಿಟ್‌'ನೆಸ್‌ (Fitness) ಬರುತ್ತೆ. ಆರೋಗ್ಯ ಸುಧಾರಣೆಯಾಗೋದು ಗ್ಯಾರೆಂಟಿ. ನಿಮ್ಮ ಕೈಕಾಲಿಗೆ ಶಕ್ತಿ (Strength) ಬರುತ್ತೆ, ದೇಹದಲ್ಲಿ ರಕ್ತ ಸಂಚಾರ ಸರಾಗವಾಗುತ್ತೆ. ಈ ಪಿಲೇಟ್ಸ್‌ನಿಂದ ಇಷ್ಟೆಲ್ಲ ಪ್ರಯೋಜನಗಳು ಇವೆಯೇ? ಹಾಗಿದ್ರೆ ಈಗ ನಿಮಗೊಂದು ಸಂಶಯ ಬಂದಿ­ರಬಹುದು. ‘ಪೈಲೇಟ್ಸ್' ಅಂದರೆ ಏನು ಅಂತ ಅಲ್ವಾ..? ಅದಕ್ಕೆ ಉತ್ತರ ಮುಂದೆ ತಿಳಿಯಲು ಓದಿ.

ಪೈಲೇಟ್ಸ್ ಎಂದರೇನು?
ಪೈಲೇಟ್ಸ್ ಅನ್ನೋದು ಒಂದು ವ್ಯಾಯಾಮ ಪದ್ಧತಿ. ಇದನ್ನು 20 ರ ದಶಕದಲ್ಲಿ ಜೋಸೆಫ್‌ ಪೈಲೇಟ್ಸ್ ಅವರು ಕಂಡುಹಿಡಿದರು. ದೇಹದ ಮೇಲೆ ನಿಯಂತ್ರಣ ಸಾಧಿಸೋದು ಈ ವ್ಯಾಯಾಮದಲ್ಲಿ ಮುಖ್ಯವಾಗುತ್ತೆ. ಉಸಿರಾಟ ಮತ್ತು ವ್ಯಾಯಾಮ ಎರಡನ್ನೂ ಒಳಗೊಂಡ ಈ ಎಕ್ಸರ್‌'ಸೈಸ್‌'ನ್ನು ಮಾಡೋದಕ್ಕೆ ಟ್ರೈನರ್‌ ಸಹಾಯ ಕೂಡ ಬೇಕು.

ಈ ಪೈಲೇಟ್ಸ್ ವ್ಯಾಯಾಮ ಪದ್ದತಿಯನ್ನು ಹೆಚ್ಚಿನ ನಟಿ ಮಣಿಯರು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ದೇಹರೋಗ್ಯವನ್ನು ಪಡೆಯುತ್ತಿದ್ದಾರೆ. ಅದರಲ್ಲಿ ಪ್ರಮುಖರಾದ ನಟಿ ಮಣಿಯರೆಂದರೆ ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಕಂಗನಾ ರನೌತ್ ಹೀಗೆ ಇತರ ನಟಿ ಮಣಿಯರು ಕೂಡ ಈ ಪೈಲೇಟ್ಸ್ ಗೆ ಮಾರು ಹೋಗಿದ್ದಾರೆ.

ಪೈಲೇಟ್ಸ್ ಬಗ್ಗೆ ಟ್ರೈನರ್‌ ನಮ್ರತಾ ಪುರೋಹಿತ್ ಏನು ಹೇಳಿದ್ದಾರೆ  
ಟ್ರೈನರ್‌ ಆದ ನಮ್ರತಾ ಪುರೋಹಿತ್ ಅವರು “ನಿಮಗೆ ನೀವೆ ಹಾಕಿಕೊಂಡ ಗಡಿಗಳನ್ನು ದೂರ ಸರಿಸಿ. ನಿಮಗೆ ನೀವೆ ವಿಧಿಸಿಕೊಂಡ ನಿರ್ಬಂಧಗಳನ್ನು ಬಿಡಿ. ಹೊಸ ಕೆಲಸವನ್ನು ಮಾಡಲು ಅಣಿಯಾಗಿ. ಅದಕ್ಕೆ ಯಾವದೇ ಮಿತಿಗಳು ಇರುವುದಿಲ್ಲ” ಎಂದು ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ.

ಇದನ್ನೂ ಓದಿ:  Fashion Tips: ಸೀರೆಯಲ್ಲಿ ಪರ್ಫೆಕ್ಟ್​ ಆಗಿ ಕಾಣ್ಬೇಕು ಅಂದ್ರೆ ಇಲ್ನೋಡಿ ಹೀಗೆ ಮಾಡಿ

ಪುರೋಹಿತ್ ಹದಿಹರೆಯ ವಯಸ್ಸಿನಲ್ಲಿ ಒಂದು ಗಂಭೀರ ಅಪಘಾತಕ್ಕೆ ಒಳಗಾಗಿದ್ದರು. ಆಗ ಅವರನ್ನು ಮತ್ತೆ ಈ ಪೈಲೇಟ್ಸ್ ವ್ಯಾಯಾಮವೇ ಜಗತ್ತಿಗೆ ಪರಿಚಯಿಸಿತು ಮತ್ತು ಅಲ್ಲಿಂದ ಅವರು ಎಂದಿಗೂ ಹಿಂತಿರುಗಿ ನೋಡಲಿಲ್ಲ. “ವಾಸ್ತವವಾಗಿ, ಪೈಲೇಟ್ಸ್ ನಿಂದ ನನ್ನ ಜೀವನದಲ್ಲಿ ಹಲವಾರು ಪ್ರಯೋಜನಗಳನ್ನು ನಾನು ಕಂಡುಕೊಂಡಿದ್ದೇನೆ” ಎಂದು ಅವರು ಹೇಳಿದರು. ನಮ್ರತಾ ಪುರೋಹಿತ್‌ ಅವರು ಸಾರಾ ಅಲಿ ಖಾನ್, ಕಂಗನಾ ರನೌತ್, ಕರೀನಾ ಕಪೂರ್ ಖಾನ್ ಮತ್ತು ಇತರ ನಟಿಯರಿಗೆ ತರಬೇತಿ ನೀಡಿದ್ದಾರೆ. 28 ವರ್ಷ ವಯಸ್ಸಿನವರಾದ ಇವರು ಪೈಲೇಟ್ಸ್ ನ ಮೂಲ ತತ್ವಗಳು ಮತ್ತು ಅದಕ್ಕೆ ಸಂಬಂಧಿಸಿದ ತಪ್ಪು ಕಲ್ಪನೆಗಳ ಬಗ್ಗೆ ಮಾತನಾಡಿದ್ದಾರೆ.

15ನೇ ವಯಸ್ಸಿನಲ್ಲೇ ಪೈಲೇಟ್ಸ್ ಮಾಡಲು ಆರಂಭಿಸಿದ್ದಾರಂತೆ ನಮ್ರತಾ ಪುರೋಹಿತ್
ಅಪಘಾತದಿಂದಾಗಿ ಅವರು ತಮ್ಮ ವೃತ್ತಿಜೀವನದ ಆರಂಭಿಕ ದಿನಗಳಲ್ಲಿ ಎದುರಿಸಿದ ಕಷ್ಟಗಳು ಹಾಗೂ ಒಟ್ಟಾರೆ ಫಿಟ್‌ನೆಸ್ ಅನ್ನು ಹೇಗೆ ಕಾಪಾಡಿಕೊಳ್ಳುವುದು, ಯಾವ ಸೆಲೆಬ್ರೆಟಿ ಜೊತೆಗೆ ಪೈಲೇಟ್ಸ್ ಮಾಡುವುದನ್ನು ಹೆಚ್ಚು ಆನಂದ ಪಡುತ್ತಾರೆ.. ಹೀಗೆ ಅನೇಕ ವಿಷಯಗಳನ್ನು ಸುದ್ದಿ ಮಾಧ್ಯಮದ ಜೊತೆಗಿನ ಸಂವಾದದಲ್ಲಿ ಹಂಚಿಕೊಂಡಿದ್ದಾರೆ.

“ನಾನು 15 ವರ್ಷದವಳು ಇದ್ದಾಗ ಪೈಲೇಟ್ಸ್ ಮಾಡಲು ಪ್ರಾರಂಭಿಸಿದೆ. ನಾನು ಕುದುರೆಯಿಂದ ಬಿದ್ದಿದ್ದೆ ಮತ್ತು ಅದು ನನ್ನ ಮೊಣಕಾಲು ಮುರಿಯಲು ನೇರ ಕಾರಣವಾಗಿತ್ತು. ನಾನು ತಕ್ಷಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಶಸ್ತ್ರಚಿಕಿತ್ಸೆಯ ನಂತರ, ನಾನು ಫಿಟ್ ಆಗಲು ಮತ್ತು ನೋವು-ಮುಕ್ತವಾಗಲು ಬಹಳಷ್ಟು ಕೆಲಸಗಳನ್ನು ಪ್ರಯತ್ನ ಮಾಡಿದ್ದೇನೆ. ಆದರೆ ಯಾವುದೂ ನನಗೆ 100 % ರಷ್ಟು ಉತ್ತಮ ಫಲಿತಾಂಶವನ್ನು ನೀಡಲಿಲ್ಲ” ಎಂದು ಹೇಳಿಕೊಂಡಿದ್ದಾರೆ.

“ಆ ಸಮಯದಲ್ಲಿ, ನನ್ನ ತಂದೆ ಸಮೀರ್ ಪುರೋಹಿತ್ ಅವರು ಮುಂಬೈನಲ್ಲಿ ಪೈಲೇಟ್ಸ್ ಕೋರ್ಸ್ ಅನ್ನು ಆಯೋಜಿಸುತ್ತಿದ್ದರು ಮತ್ತು ನಾನು ಕೂಡ ಅದಕ್ಕೆ ಸೇರಿಕೊಳ್ಳುತ್ತೇನೆ ಎಂದು ಬೇಡಿಕೊಂಡೆ. ನಂತರ ಅವರು ಓಕೆ ಎಂದರು. ಈ ಕೋರ್ಸ್‌ ನಾಲ್ಕು ದಿನಗಳು ನಡೆಯಿತು. ಆ ಅಪಘಾತ ಆಗಿದ್ದ ದಿನದಿಂದ ಒಟ್ಟಾರೆ ಒಂದು ವರ್ಷದಲ್ಲಿ ಮೊದಲ ಬಾರಿಗೆ ನಾನು ನೋವಿನಿಂದ ಮುಕ್ತಿ ಹೊಂದಿದ್ದೆ. ನಾನು ಮತ್ತೆ ಸ್ಕ್ವಾಷ್ ಆಡಲು ಹಿಂತಿರುಗಿದೆ ಮತ್ತು ಆ ವರ್ಷ ರಾಷ್ಟ್ರೀಯ ಪಂದ್ಯಗಳನ್ನು ಆಡಿದೆ. ನಾನು ಈ ಪೈಲೇಟ್ಸ್ ನಿಂದ ಅನುಭವಿಸಿದ ಮ್ಯಾಜಿಕ್‌ಗೆ ನಾನು ಯಾವಾಗಲೂ ಆಶ್ಚರ್ಯವಾಗಿರುತ್ತೇನೆ. ಈ ಪೈಲೇಟ್ಸ್ ಅಂದು ನನಗೆ ಸಹಾಯ ಮಾಡಿತು. ಅದರ ಪ್ರಭಾವದಿಂದ ಇಂದು ಬಹಳಷ್ಟು ಜನರಿಗೆ ಸಹಾಯ ಆಗುತ್ತಿದೆ” ಎಂದು ಹೇಳಿದರು.

ನೀವು ಆರಂಭಿಕ ದಿನಗಳಲ್ಲಿ ಎದುರಿಸಿದ ಸವಾಲುಗಳು ಯಾವುವು?
“ಈ ಪೈಲೇಟ್ಸ್ ವ್ಯಾಯಾಂ ಮಾಡಿಸಲು ನನಗೆ ಆರಂಭಿಕ ದಿನಗಳಲ್ಲಿ ಒಂದು ಸ್ಟುಡಿಯೋ ಬೇಕಾಗಿತ್ತು. ಅದರ ಜೊತೆಗೆ ನನಗೆ ಇದ್ದ ಮತ್ತೊಂದು ಆರಂಭಿಕ ಸವಾಲು ಎಂದರೆ ವ್ಯಾಯಾಮದ ಸ್ವರೂಪದ ಬಗ್ಗೆ ಜನರಿಗೆ ಅರಿವು ಮೂಡಿಸುವುದು.

ಇದನ್ನೂ ಓದಿ:  Onion And Hair Care: ಕೂದಲು, ನೆತ್ತಿಯ ಆರೋಗ್ಯ ಕಾಪಾಡಲು ನಟಿಯರು ಈರುಳ್ಳಿ ರಸ ಬಳಸುವ ಬಗ್ಗೆ ಹೀಗೆ ಹೇಳಿದ್ದಾರೆ!

ಈ ಪೈಲೇಟ್ಸ್ ವ್ಯಾಯಾಕ್ಕೆ ಸಂಬಂಧಿಸಿದ ಬಹಳಷ್ಟು ತಪ್ಪುಗ್ರಹಿಕೆಗಳು ಎಲ್ಲರಲ್ಲೂ ಇದ್ದವು. ಇದು ಕೇವಲ ಸ್ಟ್ರೆಚಿಂಗ್ ಅಥವಾ ಮಹಿಳೆಯರಿಗೆ ಮಾತ್ರ ಎಂದು ಜನರು ಭಾವಿಸಿದ್ದರು. ನಾನು ಕ್ರಮೇಣ ಈ ತಪ್ಪು ಕಲ್ಪನೆಗಳನ್ನು ಕಡಿಮೆ ಮಾಡಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ.

ಇದರ ಬಗ್ಗೆ ಜನರಿಗೆ ಮನವರಿಕೆ ಆಗಬೇಕು. "ಈ ಪೈಲೇಟ್ಸ್ ಆರಂಭ ಮಾಡಿದ ಕ್ಷಣದಿಂದ ನನ್ನ ಜೀವನವೇ ಬದಲಾಗಿ ಹೋಯಿತು. ನಾನೆಂದು ಮತ್ತೆ ಹಿಂತಿರುಗಿ ನೋಡಲೇ ಇಲ್ಲ” ಎಂದು ನಮ್ರತಾ ಅವರು ತಮ್ಮ ಆರಂಭಿಕ ವೃತಿ ಜೀವನದ ಬಗ್ಗೆ ಹೇಳಿಕೊಂಡಿದ್ದಾರೆ.

ಈ ಪೈಲೇಟ್ಸ್ ವ್ಯಾಯಾಮದ ಜೊತೆಗೆ, ನೀವು ಯಾವ ರೀತಿಯ ವ್ಯಾಯಾಮವನ್ನು ಇಷ್ಟಪಡುತ್ತೀರಿ ಮತ್ತು ಇತರರಿಗೆ ಯಾವ ವ್ಯಾಯಾಮಗಳನ್ನು ಶಿಫಾರಸು ಮಾಡುತ್ತೀರಿ?
ನಾನು ವಿದ್ಯುತ್ ಸ್ನಾಯು ಉದ್ದೀಪನ (ಇಎಂಎಸ್) ತರಬೇತಿಯನ್ನು ಪ್ರೀತಿಸುತ್ತೇನೆ. ಸೀಮಿತ ಸಮಯದಲ್ಲಿ ಮತ್ತು ಕೀಲುಗಳ ಮೇಲೆ ಯಾವುದೇ ಪರಿಣಾಮ ಬೀರದಂತೆ ತರಬೇತಿ ನೀಡಲು ಮತ್ತು ನಿಮ್ಮ ದೇಹದಿಂದ ಉತ್ತಮವಾದದ್ದನ್ನು ಪಡೆಯಲು ಇದು ನಂಬಲಾಗದಷ್ಟು ಸ್ಮಾರ್ಟ್ ಮಾರ್ಗವಾಗಿದೆ ಎಂದು ನಾನು ಭಾವಿಸುತ್ತೇನೆ.

ಇದು ಇಡೀ ದೇಹದ ಮೇಲೆ ಒಂದೇ ಸಮಯದಲ್ಲಿ ಕೆಲಸ ಮಾಡುತ್ತದೆ ಮತ್ತು ಇದನ್ನು ಸರಿಯಾಗಿ ಮಾಡಿದರೆ, ವಯಸ್ಸಾದವರು, ಕ್ರೀಡಾ ವ್ಯಕ್ತಿಗಳು ಮತ್ತು ಇನ್ನು ಹೆಚ್ಚಿನ ಜನರನ್ನು ಒಳಗೊಂಡಂತೆ ಎಲ್ಲಾ ಫಿಟ್‌ನೆಸ್ ಹಂತಗಳಲ್ಲಿನ ಜನರಿಗೆ ಇದು ಅತ್ಯಂತ ಪ್ರಯೋಜನಕಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಅಗತ್ಯತೆಗಳು ಮತ್ತು ಅವಶ್ಯಕತೆಗಳನ್ನು ಅವಲಂಬಿಸಿ ವಾರಕ್ಕೊಮ್ಮೆ ಅಥವಾ ಎರಡು ಬಾರಿ 20 ನಿಮಿಷಗಳ ಕಾಲ ಇದನ್ನು ಮಾಡುವುದರಿಂದ ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು.

ಪೈಲೇಟ್ಸ್ ಕುರಿತು ತಪ್ಪು ಕಲ್ಪನೆಗಳ ಬಗ್ಗೆ ನಿಮ್ಮ ಅಭಿಪ್ರಾಯ:
ಈ ಪೈಲೇಟ್ಸ್ ದಾರಿಯುದ್ದಕ್ಕೂ ನಾವು ಎದುರಿಸಬೇಕಾದ ಸಾಕಷ್ಟು ತಪ್ಪು ಕಲ್ಪನೆಗಳು ನಮ್ಮಲ್ಲಿವೆ. ಒಂದು ತಪ್ಪು ಕಲ್ಪನೆ ಎಂದರೆ ಈ ವ್ಯಾಯಾಮ ಮಹಿಳೆಯರಿಗೆ ಮಾತ್ರ ಎಂದು ಹೇಳಲಾಗುತ್ತದೆ. ನಿಜ ಹೇಳಬೇಕೆಂದರೆ ಇದು ಯುದ್ಧದಲ್ಲಿ ಪುರುಷರಿಂದ ಆರಂಭವಾಯಿತು. ಮತ್ತೊಂದು ತಪ್ಪು ಕಲ್ಪನೆ ಎಂದರೆ, ಸೂಕ್ಷ್ಮವಾದ ವ್ಯಾಯಮ ಮತ್ತು ನಿಧಾನವಾದ ವ್ಯಾಯಾಮ ಇದಾಗಿದೆ.

ಹೌದು ಇದು ನಿಜ. ಈ ವ್ಯಾಯಾಮವು ದೇಹದ ಪ್ರತಿಯೊಂದು ಅಂಗದ ಮೇಲೂ ಪ್ರಭಾವವನ್ನು ಬೀರುವ ಸಲುವಾಗಿ ನಿಧಾನವಾದ ವ್ಯಾಯಾಮ ಇದಾಗಿದೆ. ಇದು ಫಿಟ್ನೆಸ್‌ನ ಪ್ರತಿಯೊಂದು ಅಂಶಗಳ ಮೇಲೆ ಕಾರ್ಯನಿರ್ವಹಿಸುತ್ತದೆ. ಅವುಗಳೆಂದರೆ ಶಕ್ತಿ, ಸಹಿಷ್ಣುತೆ, ಸಮತೋಲನ ಇತ್ಯಾದಿ.

ಪೈಲೇಟ್ಸ್ ಮಾಡುವುದನ್ನು ಯಾರು ಹೆಚ್ಚು ಆನಂದಿಸುತ್ತಾರೆ?
ಇದು ನಿಜವಾಗಿಯೂ ಕಠಿಣ ಪ್ರಶ್ನೆಯಾಗಿದೆ, ಆದರೆ ನನ್ನ ಪ್ರಕಾರ ಸಾರಾ ಅಲಿ ಖಾನ್, ಜಾನ್ವಿ ಕಪೂರ್, ಕಂಗನಾ ರನೌತ್, ಧ್ವನಿ ಭಾನುಶಾಲಿ, ಅದಿತಿ ರಾವ್ ಹೈದರಿ ಮತ್ತು ಇಲಿಯಾನಾ ಡಿ'ಕ್ರೂಜ್ ಅವರು ಪೈಲೇಟ್ಸ್ ವ್ಯಾಯಾಮ ಮಾಡುವಾಗ ಬಹಳಷ್ಟು ಆನಂದದಿಂದ ಈ ವ್ಯಾಯಾಮದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ. ಅವರೇ ನಿಜವಾದ ‘ಪೈಲೇಟ್ಸ್ ಹುಡುಗಿಯರು’! ಎಂದು ನಮ್ರತಾ ಹೇಳಿದರು.

ಇದನ್ನೂ ಓದಿ: Fashion Tips: ಮಳೆಗಾಲದಲ್ಲಿ ಆಫೀಸ್​ಗೆ ಹೋಗುವಾಗ ಈ ಡ್ರೆಸ್​ಗಳು ಸೂಪರ್​ ಆಗಿ ಸೂಟ್​ ಆಗುತ್ತೆ

ಹೀಗೆ ಪೈಲೇಟ್ಸ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ಟ್ರೈನರ್‌ ನಮ್ರತಾ ಪುರೋಹಿತ್‌ ಅವರು ಹಂಚಿಕೊಂಡು ಓದುಗ ಬಳಗಕ್ಕೆ ಸಾಕಷ್ಟು ಮಾಹಿತಿ ಹಂಚಿದ್ದಾರೆ.
Published by:Ashwini Prabhu
First published: