Onam 2022: ಓಣಂ ವೇಳೆ ಸಿಂಪಲ್​ ಆಗಿ ತಯಾರಿಸಿ ಕೇರಳದ ಈ ಸಾಂಪ್ರದಾಯಿಕ ಖಾದ್ಯಗಳನ್ನು

ಓಣಂ ದಿನಂದು ಕೇರಳಿಗರು ಪೌರಾಣಿಕ ರಾಜ, ಮಹಾಬಲಿಯ ಗೃಹ ಪ್ರವೇಶವನ್ನು ಸ್ಮರಿಸುತ್ತಾರೆ. ಮನೆಯ ಮುಂದೆ ಹೂವಿನ ರಂಗವಲ್ಲಿ ಹಾಕಿ ಮಹಾಬಲಿಯನ್ನು ಆತ್ಮೀಯವಾಗಿ ಸ್ವಾಗತಿಸುತ್ತಾರೆ. ಓಣಂ ಹಬ್ಬದಂದು ಓಣಂ ಸದ್ಯವು ತರಾವರಿ ಖಾದ್ಯಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ ಬಾಳೆ ಎಲೆಯಲ್ಲಿ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಹಾಗೆಯೇ ನೆಲದ ಮೇಲೆ ಕುಳಿತು ಓಣಂ ಔತಣಕೂಟವನ್ನು ಮನೆಮಂದಿ ಸೇರಿ ಸವಿಯುತ್ತಾರೆ.

ಓಣಂ ಹಬ್ಬದ ವಿಶೇಷ ಭಕ್ಷ್ಯ

ಓಣಂ ಹಬ್ಬದ ವಿಶೇಷ ಭಕ್ಷ್ಯ

  • Share this:
ಈ ವರ್ಷ, ಓಣಂ ಆಚರಣೆಯು (Onam Celebration) ಆಗಸ್ಟ್ 28 ರಂದು ಪ್ರಾರಂಭವಾಗಿ ಸೆಪ್ಟೆಂಬರ್ 8 ರಂದು ಮುಕ್ತಾಯಗೊಳ್ಳುತ್ತದೆ. ಅಂತಿಮ ದಿನವನ್ನು ತಿರುವೋಣಂ ಅಂದರೆ ಪವಿತ್ರ ಓಣಂ ದಿನ ಎಂದು ಆಚರಿಸಲಾಗುತ್ತದೆ. ಈ ದಿನಂದು ಕೇರಳಿಗರು (Keralites) ಪೌರಾಣಿಕ ರಾಜ, ಮಹಾಬಲಿಯ ಗೃಹ ಪ್ರವೇಶವನ್ನು ಸ್ಮರಿಸುತ್ತಾರೆ. ಮನೆಯ ಮುಂದೆ ಹೂವಿನ ರಂಗವಲ್ಲಿ ಹಾಕಿ ಮಹಾಬಲಿಯನ್ನು (Mahabali) ಆತ್ಮೀಯವಾಗಿ ಸ್ವಾಗತಿಸುತ್ತಾರೆ ಅಂತೆಯೇ ಓಣಂ ಹಬ್ಬದಂದು ಏರ್ಪಡಿಸಲಾಗುವ ಬೋಟ್ ರೇಸ್ (Boat Race) ಕೂಡ ಅತ್ಯಂತ ಆಕರ್ಷಣೀಯವಾದುದಾಗಿದೆ. ಓಣಂ ಹಬ್ಬದಂದು ಓಣಂ ಸದ್ಯವು ತರಾವರಿ ಖಾದ್ಯಗಳನ್ನು ಒಳಗೊಂಡಿರುತ್ತದೆ. ಮುಖ್ಯವಾಗಿ ಬಾಳೆ ಎಲೆಯಲ್ಲಿ ಭಕ್ಷ್ಯಗಳನ್ನು ಬಡಿಸಲಾಗುತ್ತದೆ. ಹಾಗೆಯೇ ನೆಲದ ಮೇಲೆ ಕುಳಿತು ಓಣಂ ಔತಣಕೂಟವನ್ನು ಮನೆಮಂದಿ ಸೇರಿ ಸವಿಯುತ್ತಾರೆ.

ಓಣಂ ಸದ್ಯದಲ್ಲಿ ಯಾವೆಲ್ಲಾ ಭಕ್ಷ್ಯಗಳನ್ನು ಒಳಗೊಂಡಿರುತ್ತದೆ
ಮಲಯಾಳಂನಲ್ಲಿ ಓಣಂ ಸದ್ಯ ಎಂದು ಕರೆಯುವ ಔತಣಕೂಟ ಎಂದರೆ ಸಸ್ಯಾಹಾರಿ ಬಹು ವ್ಯಂಜನಗಳುಳ್ಳ ಊಟವಾಗಿದ್ದು 24 ಕ್ಕಿಂತ ಹೆಚ್ಚು ಭಕ್ಷ್ಯಗಳನ್ನು ಒಳಗೊಂಡಿರುತ್ತದೆ.

ಓಣಂ ಸದ್ಯದಲ್ಲಿ ಬಾಳೆಕಾಯಿ ಚಿಪ್ಸ್, ಶರ್ಕರ ಉಪ್ಪೇರಿ, (ಬೆಲ್ಲ ಲೇಪಿತ ಬಾಳೆಕಾಯಿ ಚಿಪ್ಸ್), ಮಾವಿನ ಉಪ್ಪಿನಕಾಯಿ, ಲಿಂಬೆ ಉಪ್ಪಿನಕಾಯಿ, ಹುಳಿ ಹಾಗೂ ಶುಂಠಿ ಚಟ್ನಿ, ಕಿಚಡಿ, ಪಚ್ಚಡಿ (ಮೊಸರು ಮಿಶ್ರಿತ ಅನಾನಸ್), ಓಲನ್ (ತೆಂಗಿನಕಾಯಿ ಹಾಲು ಸೇರಿಸಿ ಮಾಡಿದ ಕಪ್ಪು ಬೀನ್ಸ್ ಜೊತೆಗೆ ಬೂದಿ ಸೋರೆಕಾಯಿ ಪದಾರ್ಥ), ತುರಿದ ತೆಂಗಿನಕಾಯಿಯೊಂದಿಗೆ ಹುರಿದ ತರಕಾರಿಗಳು, ತೀಯಲ್ (ಮಿಶ್ರಿತ ತರಕಾರಿ ಪದಾರ್ಥ), ಎರಿಸೆರಿ (ಹಿಸುಕಿದ ಬೀನ್ಸ್ ಮತ್ತು ತೆಂಗಿನಕಾಯಿಯೊಂದಿಗೆ ಕುಂಬಳಕಾಯಿ ಪದಾರ್ಥ), ಅವಿಯಲ್, ಪುಳಿಸೇರಿ (ಮೊಸರು ಸೇರಿಸಿದ ಮೇಲೋಗರ), ಕೂಟು ಕರಿ (ಕಪ್ಪು ಕಡಲೆ ಕರಿ), ಸಾಂಬಾರ್, ರಸಂ, ಮಸಾಲೆಯುಕ್ತ ಮಜ್ಜಿಗೆ, ಬಾಳೆಹಣ್ಣು, ಹಪ್ಪಳ ಮತ್ತು ಅನ್ನ ಇರುತ್ತದೆ.

ಎರಿಶ್ಶೇರಿ
ಕುಂಬಳಕಾಯಿ, ಬೆಳ್ಳುಳ್ಳಿ ಮತ್ತು ಹಸಿಮೆಣಸಿನೊಂದಿಗೆ ತೆಂಗಿನ ಕಾಯಿ ತುರಿ ಸೇರಿಸಿ ಕಡೆದ ಮಸಾಲೆ ಬೆರೆತ ಮಿಶ್ರಣವಾಗಿದೆ. ಸಾಸಿವೆ, ಮೆಣಸು, ಕರಿಬೇವಿನ ಎಲೆಯ ಒಗ್ಗರಣೆಯನ್ನು ಸೇರಿಸಲಾಗುತ್ತದೆ. ಇದು ಸಾಂಪ್ರದಾಯಿಕ ಓಣಂ ಖಾದ್ಯವಾಗಿದೆ.

ಇದನ್ನೂ ಓದಿ:  Onam 2022: ಆಹಾ! ಇದೇ ನೋಡಿ ಓಣಂ ಸದ್ಯ, ಇಲ್ಲಿದೆ ಈ ಹಬ್ಬದ ವಿಶೇಷ 26 ವಿಧದ ಭಕ್ಷ್ಯಗಳು

ಪುಲಿಶ್ಶೇರಿ
ಸರಳ ಹಾಗೂ ಜನಪ್ರಿಯ ಭಕ್ಷ್ಯವನ್ನು ಬೂದುಗುಂಬಳ ಅಥವಾ ಮುಳ್ಳುಸೌತೆಯನ್ನು ಮಕ್ಕಿಗೆ, ತೆಂಗಿನ ಕಾಯಿಯೊಂದಿಗೆ ಮಸಾಲೆ ಸೇರಿಸಿ ತಯಾರಿಸಲಾಗುತ್ತದೆ. ನಿಮ್ಮ ರುಚಿಯನ್ನು ಈ ಖಾದ್ಯ ಇಮ್ಮಡಿಗೊಳಿಸುವುದು ಖಂಡಿತ.

ತೇಂಗಾ ಚೋರ್
ದೈನಂದಿನ ಅನ್ನಕ್ಕೆ ತೆಂಗಿನ ತುರಿಯನ್ನು ಸೇರಿಸಿ ಇದನ್ನು ತಯಾರಿಸಲಾಗುತ್ತದೆ. ಉದ್ದಿನ ಬೇಳೆ ಹಾಗೂ ಗೋಡಂಬಿಯೊಂದಿಗೆ ಮಸಾಲೆಯನ್ನು ಬೆರೆಸಿ ಅಂತಿಮವಾಗಿ ಮೆಣಸಿನ ಕಾಯಿ ಹಾಗೂ ಲಿಂಬೆ ರಸವನ್ನು ಸೇರಿಸಲಾಗುತ್ತದೆ.

ಪಚ್ಚಡಿ
ಮೆಣಸಿನ ಕಾಯಿ ಹಾಗೂ ಮಸಾಲೆಗಳನ್ನು ತೆಂಗಿನ ತುರಿಯೊಂದಿಗೆ ಬೆರೆಸಿ ಪಚ್ಚಡಿ ತಯಾರಿಸಲಾಗುತ್ತದೆ. ಅನಾನಾಸನ್ನು ತೆಳುವಾಗಿ ಕತ್ತರಿಸಿ ಇದಕ್ಕೆ ಸೇರಿಸಲಾಗುತ್ತದೆ.

ಅವಿಯಲ್
ಆಲೂಗಡ್ಡೆ, ಕ್ಯಾರೆಟ್, ಬಾಳೆಕಾಯಿ, ನುಗ್ಗೆ, ಬೀನ್ಸ್ ಹಾಗೂ ಹಸಿ ಮಾವಿನ ಕಾಯಿಯನ್ನು ಮಿಶ್ರಣ ಮಾಡಿ ಆವಿಯಲ್ ಅನ್ನು ತಯಾರಿಸಲಾಗುತ್ತದೆ. ತೆಂಗಿನ ತುರಿಯ ಹಾಲು ಇದಕ್ಕೆ ಪ್ರಧಾನವಾಗಿದೆ.

ಪಾಲಡ ಪಾಯಸಮ್
ಸಿಹಿ ಇಲ್ಲದಿದ್ದರೆ ಯಾವುದೇ ಊಟ ಕೂಡ ಪರಿಪೂರ್ಣವಾಗುವುದಿಲ್ಲ. ಹಾಲು ಪಾಯಸ ಕೂಡ ಅದರಲ್ಲೊಂದಾಗಿದೆ. ಸೇಮಿಗೆ ಹಾಗೂ ಅನ್ನವನ್ನು ಹಾಲಿನಲ್ಲಿ ಬೇಯಿಸಲಾಗುತ್ತದೆ. ಇದಕ್ಕೆ ಏಲಕ್ಕಿ, ಸಕ್ಕರೆ ಮತ್ತು ಬೆಣ್ಣೆಯನ್ನು ಮಿಶ್ರಗೊಳಿಸಲಾಗುತ್ತದೆ. ಪಾಯಸದ ರುಚಿಯನ್ನು ನೂರ್ಮಡಿಗೊಳಿಸಲು ಒಣ ಹಣ್ಣುಗಳನ್ನು ಸೇರಿಸಬಹುದು.

ಇದನ್ನೂ ಓದಿ:  Onam 2022: ಮಹಾಬಲಿ ಪ್ರಜೆಗಳ ಬಗ್ಗೆ ಹೊಂದಿದ್ದ ಪ್ರೀತಿಯೇ ಓಣಂ ಹಬ್ಬದ ಆಚರಣೆಗೆ ಪ್ರಮುಖ ಕಾರಣ

ಬನಾನಾ ಹಲ್ವ
ಇನ್ನೊಂದು ಸಿಹಿ ಖಾದ್ಯವಾಗಿದೆ. ಗಾಢ ಕಂದು ಬಣ್ಣದ ಹಲ್ವವನ್ನು ಬಾಳೆಹಣ್ಣಿನಿಂದ ತಯಾರಿಸಲಾಗುತ್ತದೆ. ಇದಕ್ಕೆ ಸಕ್ಕರೆ, ತುಪ್ಪ, ಬಾದಾಮಿ ಹಾಗೂ ಏಲಕ್ಕಿ ಹುಡಿ ಬೆರೆಸಿ ಇದನ್ನು ತಯಾರಿಸಲಾಗುತ್ತದೆ. ಇದು ರುಚಿಕರ ಮತ್ತು ಆರೋಗ್ಯಕರವೂ ಹೌದು.

ಉಣ್ಣಿಯಪ್ಪಮ್
ಅಕ್ಕಿ, ತುಪ್ಪ, ಹಿಸುಕಿದ ಬಾಳೆಹಣ್ಣು, ಬೆಲ್ಲ ಹಾಗೂ ತೆಂಗಿನ ತುರಿ ಬೆರೆಸಿ ಉಣ್ಣಿಯಪ್ಪಮ್ ಅನ್ನು ತಯಾರಿಸಲಾಗುತ್ತದೆ.

ಅಡ ಪ್ರಧಮನ್
ಕೇರಳ ಶೈಲಿಯ ಅಕ್ಕಿ ಪಾಯಸ ಇದಾಗಿದ್ದು ಬೆಲ್ಲ ಹಾಗೂ ತೆಂಗಿನ ಹಾಲು ಇದರಲ್ಲಿ ಪ್ರಧಾನವಾಗಿದೆ. ಅಕ್ಕಿ ಹಾಗೂ ಹಿಸುಕಿದ ಬಾಳೆಹಣ್ಣು ಇದರಲ್ಲಿ ಮುಖ್ಯವಾಗಿದೆ. ಒಣ ಹಣ್ಣುಗಳನ್ನು ಸೇರಿಸಲಾಗುತ್ತದೆ.

ತೆಂಗಿನ ತುರಿ ಲಾಡು
ತೆಂಗಿನ ತುರಿ ಲಾಡುವನ್ನು ಸುಲಭವಾಗಿ ತಯಾರಿಸಬಹುದಾಗಿದೆ. ಕಂಡೆನ್ಸ್‌ಡ್ ಹಾಲು, ಸಕ್ಕರೆ ಪಾಕ ಇಲ್ಲವೇ ಮಾಯಾ ಇದಕ್ಕೆ ಮುಖ್ಯವಾಗಿ ಬೇಕು. ಇದಕ್ಕೆ ಹಸಿ ಅಥವಾ ಒಣ ತೆಂಗಿನ ತುರಿಯನ್ನು ಸೇರಿಸಬಹುದು.

ರಸಂ
ಕಾಳುಮೆಣಸಿನ ಹುಡಿ ಹಾಗೂ ಟೊಮೇಟಾವನ್ನು ಸೇರಿಸಿ ರಸಂ ತಯಾರಿಸಲಾಗುತ್ತದೆ. ಬೇಳೆಯೊಂದಿಗೆ ಬೇಯಿಸಿದ ಟೊಮೇಟೊ ಹಾಗೂ ಕರಿಬೇವು, ಕೊತ್ತಂಬರಿ ಸೊಪ್ಪು ಸೇರಿಸಿ ರಸಂ ತಯಾರಿಸಲಾಗುತ್ತದೆ.

ಕಡಲ ಕರಿ
ತೆಂಗಿನತುರಿ, ಕೆಂಪು ಮೆಣಸು, ಕೊತ್ತಂಬರಿ ಬೀಜ, ಕರಿಬೇವು, ಬೆಳ್ಳುಳ್ಳಿಯನ್ನು ಹುರಿದುಕೊಳ್ಳಬೇಕು. ಇದೆಲ್ಲವನ್ನೂ ನುಣ್ಣಗೆ ಅರೆದುಕೊಳ್ಳಿ ಸಾಸಿವೆ ಒಗ್ಗರಣೆ ಹಾಕಿ ಇದಕ್ಕೆ ಈರುಳ್ಳಿ, ಕೊತ್ತಂಬರಿ ಹುಡಿ, ಮೆಣಸಿನ ಹುಡಿ, ಗರಮ್ ಮಸಾಲೆಯನ್ನು ಸೇರಿಸಿ ಹುರಿದುಕೊಳ್ಳಿ ಬೇಯಿಸಿದ ಕಡಲೆಯನ್ನು ಸೇರಿಸಿ ನಂತರ ಪೇಸ್ಟ್ ಮಾಡಿದ ಮಸಾಲೆ ಸೇರಿಸಿ.

ಇದನ್ನೂ ಓದಿ:  Onam Food Recipe: ಓಣಂ ವಿಶೇಷ: ಕೇರಳ ಸ್ಟೈಲ್ ಬಾದಾಮಿ, ಸೇಬು ಪಾಯಸ ಸವಿಯಿರಿ

ಕಾಳನ್ ಕೇರಳ ಖಾದ್ಯ
ಗೆಣಸು ಹಾಗೂ ಬಾಳೆಹಣ್ಣನ್ನು ಮಜ್ಜಿಗೆ ಹಾಗೂ ಅರಿಶಿನ ಪುಡಿಯೊಂದಿಗೆ ಮೃದುವಾಗುವವರೆಗೆ ಬೇಯಿಸಿ. ಉಪ್ಪು ಹಾಕಿ ತದನಂತರ ತೆಂಗಿನ ತುರಿಯನ್ನು ನುಣ್ಣಗೆ ಅರೆದು ಹಾಕಿ. ಎಣ್ಣೆಗೆ ಸಾಸಿವೆ, ಕರಿಬೇವಿನ ಎಲೆ ಸೇರಿಸಿ. ಇದಕ್ಕೆ ಮಜ್ಜಿಗೆ ಹಾಗೂ ಕಾಳುಮೆಣಸಿನ ಹುಡಿ ಸೇರಿಸಿ ನಂತರ ಮೆಂತ್ಯ ಸೇರಿಸಿ.

ಉಳ್ಳಿ ತೇಯಲ್
ಸಣ್ಣ ಈರುಳ್ಳಿಯನ್ನು ಮುಖ್ಯವಾಗಿ ಸೇರಿಸಿ ಉಳ್ಳಿ ತೇಯಲ್ ತಯಾರಿಸಲಾಗುತ್ತದೆ. ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿಕೊಂಡು ಇದಕ್ಕೆ ಜೀರಿಗೆ, ಮೆಂತ್ಯ, ಸಂಪೂರ್ಣ ಕಾಳುಮೆಣಸು ಮತ್ತು ಕೊತ್ತಂಬರಿ ಬೀಜಗಳನ್ನು ಸೇರಿಸಿ. ಕಂದು ಬಣ್ಣಕ್ಕೆ ತಿರುಗುವವರೆಗೆ ಹುರಿದುಕೊಳ್ಳಿ. ತೆಂಗಿನ ತುರಿ ಸೇರಿಸಿ ಚೆನ್ನಾಗಿ ಹುರಿದುಕೊಳ್ಳಿ. ಇದಕ್ಕೆ ಮೆಣಸು, ಅರಶಿನ ಸೇರಿಸಿ ನಂತರ ಚೆನ್ನಾಗಿ ಮಿಶ್ರ ಮಾಡಿಕೊಂಡು ಪೇಸ್ಟ್ ತಯಾರಿಸಿ ಬೆಂದ ಸಣ್ಣ ಈರುಳ್ಳಿಗೆ ಈ ಪೇಸ್ಟ್ ಅನ್ನು ಬೆರೆಸಿ.
Published by:Ashwini Prabhu
First published: