Relationship Tips: ಈ ಥರಾ ಎಲ್ಲಾ ಆದ್ರೆ ನಿಮ್ಮ ಸಂಗಾತಿ ಜೊತೆ ಏನೋ ಸಮಸ್ಯೆ ಇದೆ ಎಂದರ್ಥ, ನಿಮಗೂ ಹೀಗಾಗ್ತಿದೆಯಾ?

Relationship Tip: ನೀವು ಕೆಟ್ಟ ಸಂಬಂಧದಲ್ಲಿದ್ದಾಗ, ಅದರಲ್ಲಿನ ಕೆಟ್ಟ ಅಂಶಗಳು ನಿಮ್ಮ ನಡುವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ಈ ಸಂಬಂಧದಲ್ಲಿ ನಿಮ್ಮ ಸಂಗಾತಿ ನಿಮ್ಮ ಬೇಕು ಬೇಡಗಳನ್ನು ಕಡೆಗಾಣಿಸುತ್ತಾರೆ. ನಿಮಗೆ ಬೆಲೆ ನೀಡುವುದಿಲ್ಲ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
Toxic relationship ಜೀವನದಲ್ಲಿ ಕೆಲವೊಂದು ಸಂಬಂಧಗಳು ಬಹಳ ಮುಖ್ಯವಾಗುತ್ತದೆ. ನಾವು ನಮ್ಮ ತಂದೆ ತಾಯಿಯ ನಂತರ ನಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತೇವೆ. ನಮ್ಮ ಸಂಗಾತಿಯೊಂದಿಗಿನ ಸಂಬಂಧ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಪರಿಣಾಮ ಬೀರುತ್ತದೆ. ಅಮೇರಿಕನ್ ಸಂವಹನ ಮತ್ತು ಮನೋವಿಜ್ಞಾನ ತಜ್ಞ ಡಾ. ಲಿಲಿಯನ್ ಗ್ಲಾಸ್ ಪ್ರಕಾರ, ವಿಷಕಾರಿ ಸಂಬಂಧ ( Toxic Relationship)ಅಥವಾ ಅಹಿತಕರವಾದ ಪರಸ್ಪರ ಒಬ್ಬರಿಗೊಬ್ಬರು ಬೆಂಬಲಿಸದ ಜನರ ನಡುವಿನ ಯಾವುದೇ ಸಂಬಂಧವಾಗಲಿ ಅದು ಒಳ್ಳೆಯದಲ್ಲ.  ಅಲ್ಲಿ ಜಗಳಗಳು ಮತ್ತು ವೈಮನಸ್ಸು ಜಾಸ್ತಿಯಾಗುತ್ತದೆ. ಒಬ್ಬರನ್ನೊಬ್ಬರು ಒಂದೆಲ್ಲ ಒಂದು ರೀತಿಯಲ್ಲಿ ದುರ್ಬಲಗೊಳಿಸಲು ಪ್ರಯತ್ನಿಸುತ್ತಾರೆ. ಆ ಸಂಬಂಧದಲ್ಲಿ ಸ್ವರ್ಧೆ ಆರಂಭವಾಗುತ್ತದೆ. ಅವರ ನಡುವೆ ಗೌರವ ಕಡಿಮೆಯಾಗುತ್ತದೆ. ಒಗ್ಗಟ್ಟಿನ ಕೊರತೆಯಾಗುತ್ತದೆ. ಇವೆಲ್ಲ ವಿಷಕಾರಿ ಸಂಬಂಧದ ಕೆಲ ಲಕ್ಷಣಗಳು ಅಷ್ಟೇ.

ವಿಷಕಾರಿ ಸಂಬಂಧದಲ್ಲಿರುವ ಸಾಮಾನ್ಯ ಲಕ್ಷಣಗಳೆಂದರೆ  ಒಬ್ಬರಿಗೊಬ್ಬರು ಬೆಂಬಲ ನೀಡುವುದಿಲ್ಲ. ನಡುವಳಿಕೆಯಲ್ಲಿ ಬದಲಾಣೆಯಾಗುತ್ತದೆ. ಮಾತು ಮಾತಿಗೆ ಸಿಟ್ಟು, ಅಸಾಮಾಧಾನ ಆರಂಭವಾಗುತ್ತದೆ. ಬಹಳ ದಿನಗಳ ಕಾಲ ಒಟ್ಟಿಗೆ ಇದ್ದರೂ ಸಹ ಇಬ್ಬರ ನಡುವೆ ಅಸೂಯೆ ಹುಟ್ಟಿಕೊಳ್ಳುತ್ತದೆ. ಸಂಬಂಧದಲ್ಲಿ ನಂಬಿಕೆ ಇರುವುದಿಲ್ಲ.  ಅಷ್ಟೇ ಅಲ್ಲದೇ ಪ್ರಮಾಣಿಕತನ ಎಂಬುದು ಸಂಬಂಧದಲ್ಲಿ ಮುಂದುವರೆಯುವುದಿಲ್ಲ. ಇದರ ಜೊತೆ ಇನ್ನೂ ಹೆಚ್ಚಿನ ಲಕ್ಷಣಗಳು ಕಾಣ ಸಿಗುತ್ತವೆ. ಅಲ್ಲದೇ ಇಂಥಹ ಸಂಬಂಧಗಳು ಹಲವಾರು ಪರಿಣಾಮಗಳನ್ನು ಬೀರುತ್ತದೆ.

ಇಂಥಹ ಸಂಬಂಧದ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ

ನೀವು ಒಂದು ಸಂಬಂಧದಲ್ಲಿದ್ದೀರಾ ಎಂದ ಮೇಲೆ ಅದು ನಿಮ್ಮನ್ನ ಖಾಲಿ ಖಾಲಿ ಎನಿಸಬಾರದು.  ನಿಮ್ಮ ಪೌಷ್ಟಿಕಾಂಶದ ಅವಶ್ಯಕತೆಗಳನ್ನು ನೀವು ಎಷ್ಟು ನೋಡಿಕೊಂಡರೂ, ನೀವು ಯಾವಾಗಲೂ ಹಸಿವಿನಿಂದ ಬಳಲುತ್ತೀರಿ ಮತ್ತು ನಿಮ್ಮ ದೇಹಕ್ಕೆ ಶಕ್ತಿಯ ಕೊರತೆಯಾಗುತ್ತದೆ. . ಇದಕ್ಕೆ ನಿಮ್ಮ ಜೀವನದ ಒಂದು ಭಾಗವಾಗಿರುವ ಕೆಟ್ಟ ಸಂಬಂಧ ಕಾರಣ. ಆ ಸಂಬಂಧದೊಂದಿಗೆ ಬರುವ ನಕಾರಾತ್ಮಕತೆಯು ನಿಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಇದು ನಿಮ್ಮ ಎಲ್ಲಾ ಶಕ್ತಿಯನ್ನು ಹೀರಿಕೊಳ್ಳುತ್ತದೆ, ಇದರಿಂದ ನೀವು ಖಾಲಿಯಾಗುತ್ತೀರಿ.

ಇದನ್ನೂ ಓದಿ: ಮದುವೆಗೆ ಮುನ್ನ ಲೈಂಗಿಕತೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು?

ನೀವು ಕೆಟ್ಟ ಸಂಬಂಧದಲ್ಲಿದ್ದಾಗ, ಅದರಲ್ಲಿನ ಕೆಟ್ಟ ಅಂಶಗಳು ನಿಮ್ಮ ನಡುವಳಿಕೆಯ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವುದಾದರೂ ಸನ್ನಿವೇಶಗಳಿಗೆ ಪ್ರತಿಕ್ರಿಯೆ ಕೊಡುವ ರೀತಿ ಬದಲಾಗುತ್ತದೆ. ಯಾವಾಗಲೂ ಕೋಪ ಅಥವಾ ಭಯ ನಿಮ್ಮನ್ನ ಕಾಡುತ್ತದೆ. ನೀವು ಹೆಚ್ಚು ನಿರ್ಧಾರಗಳನ್ನು ಭಯದಲ್ಲಿ ಅಥವಾ ಕೋಪದಲ್ಲಿ ತೆಗೆದುಕೊಳ್ಳುತ್ತೀರಿ. ಈ ನಡುವಳಿಕೆ ನಿಮ್ಮನ್ನ ಹೆಚ್ಚು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವಂತೆ ಮಾಡುತ್ತದೆ. ನಿಮ್ಮನ್ನ ಮತ್ತು ನಿಮ್ಮ ಸಾಮರ್ಥ್ಯವನ್ನು ಅನುಮಾನಿಸುವಂತೆ ಮಾಡುತ್ತದೆ.

ಈ ಸಂಬಂಧದಲ್ಲಿ ನಿಮ್ಮ ಸಂಗಾತಿ ನಿಮ್ಮ ಬೇಕು ಬೇಡಗಳನ್ನು ಕಡೆಗಾಣಿಸುತ್ತಾರೆ. ನಿಮಗೆ ಬೆಲೆ ನೀಡುವುದಿಲ್ಲ. ಇದು ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ನಿಮ್ಮ ಭಾವನೆಯನ್ನು ಅರ್ಥ ಮಾಡಿಕೊಳ್ಳುವವರು ಯಾರು ಇಲ್ಲ ಭಾವನೆ ಮೂಡುತ್ತದೆ.  ಒಬ್ಬರಿಂದ ನಿರ್ಲಕ್ಷ್ಯಗೊಂಡಾಗ ನಿರಾಸೆಯಾಗುವುದು ಸಹಜ.

ನಿಮ್ಮ ಸಂಬಂಧದಲ್ಲಿ ನಿಮ್ಮ ಸಂಗಾತಿ ಹೆಚ್ಚು ನಿಯಂತ್ರಣ ಮಾಡುವುದಾದರೇ, ಅವರ ಆಲೋಚನೆಗಳು ನಿಮ್ಮ ಮೇಲೆ ಪರಿಣಾಮ  ಬೀರುತ್ತದೆ. ನಿಮ್ಮ ಸ್ವಂತ ಆಲೋಚನೆ ಮತ್ತು ಕೆಲಸಗಳಿಗೆ ಬೆಲೆ ಇರುವುದಿಲ್ಲ. ನೀವು ಏನು ಮಾಡಬೇಕು ಎಂದು ಬಯಸಿರುತ್ತೀರೋ ಅದು ಮಾಡಲು ಸಾಧ್ಯವಾಗುವುದಿಲ್ಲ. ಆಗ ನಿಮ್ಮಲ್ಲಿ ತಪ್ಪು ಮಾಡಿದೆ ಎಂದು ಎನಿಸುತ್ತದೆ. ಆದರೆ ನಿಮ್ಮ ಸಂಗಾತಿಯನ್ನು ಎದುರಿಸಿ, ಅವರಿಗೆ ಅಸಮಾಧಾನ ಮಾಡಲು ನಿಮಗೆ ಮನಸ್ಸು ಒಪ್ಪುವುದಿಲ್ಲ.

ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿ ಮತ್ತು ಬೆಂಬಲ ಬೇಕೆನಿಸಿದಾಗ, ಅವರು ನಿಮ್ಮ ಬಳಿಗೆ  ಬೇಡುತ್ತಾ ಬರುತ್ತಾರೆ. ಆದರೆ ನೀವು ಅವರಿಂದ ಅದೇ ರೀತಿಯ ಪ್ರೀತಿ ನಿರೀಕ್ಷಿಸಿದಾಗ ಮಾತ್ರ ಅವರು ತಿರಸ್ಕಾರ ಮಾಡುತ್ತಾರೆ. ಅವರು ನಿಮ್ಮ ಭಾವನೆಗಳನ್ನು ಗೌರವಿಸುವುದಿಲ್ಲ.
Published by:Sandhya M
First published: