Health Tips: ಮುಟ್ಟಿದರೆ ಮುನಿಯುವ ಸೊಪ್ಪಿಗೆ ಕಿಡ್ನಿಯಲ್ಲಿನ ಕಲ್ಲು ಕರಗಿಸುವ ಶಕ್ತಿಯಿದೆ!

Touch Me Not: ಪ್ರತಿನಿತ್ಯ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಮುಟ್ಟಿದರೆ ಮುನಿ ಗಿಡದ ಎಲೆ ಹಾಗೂ ಬೇರುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಸೀಮಿತ ಪ್ರಮಾಣದಲ್ಲಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆ ಆಗಲಿದೆ.

ಮುಟ್ಟಿದ್ರೆ ಮುನಿಯುವ ಸೊಪ್ಪು

ಮುಟ್ಟಿದ್ರೆ ಮುನಿಯುವ ಸೊಪ್ಪು

  • Share this:
    ಮುಟ್ಟಿದರೆ ಮುನಿ(Touch me Not) ಎಂಬ ಸಸ್ಯದ(Plant) ಹೆಸರು ನೀವು ಕೇಳಿಯೇ ಇರುತ್ತೀರಾ.ಹೆಸರೇ ಸೂಚಿಸುವಂತೆ ಈ ಸಸ್ಯವು ಮುಟ್ಟಿದರೆ ಮುಚ್ಚಿಕೊಳ್ಳುತ್ತದೆ(Sensitive). ಆದ್ದರಿಂದ ಚಿಕ್ಕ ಮಕ್ಕಳಿಗೆ(Childrens) ಈ ಗಿಡದ ಜೊತೆಗೆ ಆಟವಾಡಲು ತುಂಬಾನೇ ಇಷ್ಟ ಪಡುತ್ತಾರೆ. ಕಾರಣ ಇದರಲ್ಲಿ ಇರುವ ಅದ್ಭುತವಾದ ಗುಣಲಕ್ಷಣವೇ ಕಾರಣವಾಗಿದೆ. ಈ ಸಸ್ಯವನ್ನು ಆಂಗ್ಲ ಭಾಷೆಯಲ್ಲಿ ಟಚ್ ಮಿ ನೋಟ್((Touch me Not) ಅಂತ ಕರೆಯುತ್ತಾರೆ ಅಷ್ಟೇ ಅಲ್ಲದೇ ಈ ಸಸ್ಯವನ್ನು ಪತಿವ್ರತೆ, ನಾಚಿಕೆ ಮುಳ್ಳು, ಮುಟ್ಟಿದರೆ ಮುಚುಕ್ ಎಂಬ ಹೆಸರಿನಿಂದ ಈ ಗಿಡವನ್ನು ಕರೆಯುತ್ತಾರೆ.

    ಕಾಯಿಲೆಗಳಿಗೆ ಮನೆಮದ್ದು ಮುಟ್ಟಿದರೆ ಮುನಿ ಸೊಪ್ಪು

    ಈ ನಾಚಿಕೆ ಮುಳ್ಳಿನ ಗಿಡದ ಎಲೆಗಳ ಜೀವಕೋಶಗಳು ಸೂಕ್ಷ್ಮವಾಗಿರುತ್ತೆ ಮತ್ತು ಹುಳಹುಪ್ಪಟೆಗಳಿಂದ ತನ್ನನ್ನ ತಾನು ರಕ್ಷಿಸಿಕೊಳ್ಳುವ ಒಂದು ಬಗೆ ಇದು ಅಷ್ಟೇ. ಇಂತಹ ಗಿಡ ನಿಮ್ಮ ಹಲವಾರು ಕಾಯಿಲೆಗಳಿಗೆ ಮನೆಮದ್ದಾಗಿ ಬಳಕೆಯಾಗಲಿದೆ. ಹಳ್ಳಿಕಡೆಗಳಲ್ಲಿ ನಾಚಿಕೆ ಮುಳ್ಳು ಅಂದ್ರೆ ಅದೊಂದು ಕಳೆಗಿಡವೆಂದೇ ಪ್ರಸಿದ್ಧಿ ಪಡೆದಿದೆ. ಯಾಕಂದ್ರೆ ಈ ಸಸ್ಯ ಎಲ್ಲಿ ಬೇಕಾದ್ರೂ ಬೆಳೆಯುತ್ತೆ. ರಕ್ತಬೀಜಾಸುರನ ಸಂತತಿ ಅಂತ ಕೆಲವರು ಇದನ್ನು ಹೀಗಾಣಿಸುವುದೂ ಉಂಟು.. ಯಾಕಂದ್ರೆ ಒಂದು ಗಿಡ ಸಾವಿರಕ್ಕೂ ಅಧಿಕ ಬೀಜಗಳನ್ನು ಉತ್ಪತ್ತಿ ಮಾಡುತ್ತೆ ಮತ್ತು ಅವು ಗಾಳಿಯಲ್ಲಿ ಹಾರಿ ಬೇರೆ ಪ್ರದೇಶದಲ್ಲಿ ಹುಲುಸಾಗಿ ಬೆಳೆಯುತ್ತೆ.

    ಇದನ್ನೂ ಓದಿ: ಕಾಫಿನಾಡಿನಲ್ಲಿ ಅಪರೂಪದ 100 ವರ್ಷದ ಪಾಪಸ್ ಕಳ್ಳಿ; ಗಿನ್ನೆಸ್ ರೆಕಾರ್ಡ್ ಸೇರುವ ಹೊಸ್ತಿಲಲ್ಲಿ ವಿದೇಶಿ ಗಿಡ!

    1) ಮಲಬದ್ಧತೆ ಸಮಸ್ಯೆ ನಿವಾರಣೆ: ಪ್ರತಿನಿತ್ಯ ಮಲಬದ್ಧತೆ ಸಮಸ್ಯೆಯಿಂದ ಬಳಲುತ್ತಿರುವವರು ಮುಟ್ಟಿದರೆ ಮುನಿ ಗಿಡದ ಎಲೆ ಹಾಗೂ ಬೇರುಗಳನ್ನು ಚೆನ್ನಾಗಿ ಅರೆದು ಅದರ ರಸವನ್ನು ಸೀಮಿತ ಪ್ರಮಾಣದಲ್ಲಿ ಕುಡಿಯುವುದರಿಂದ ಮಲಬದ್ಧತೆ ನಿವಾರಣೆ ಆಗಲಿದೆ.

    2) ಬಾವುಗಳ ನಿವಾರಣೆ: ಗಂಟಲು ಬಾವು ಸೇರಿ ಇತರ ಬಾವುಗಳಿದ್ದರೆ ಮುಟ್ಟಿದರೆ ಮುನಿ ಗಿಡವನ್ನು ಚೆನ್ನಾಗಿ ಅರೆದು ಬಾವು ಉಂಟಾಗಿರುವ ಜಾಗದಲ್ಲಿ ಕಾಟನ್ ಬಟ್ಟೆಯಿಂದ ಸುತ್ತಿದ್ರೆ ಅದಷ್ಟು ಬೇಗ ಬಾವು ನಿವಾರಣೆ ಆಗಲಿದೆ.

    3)ಕಿಡ್ನಿ ಕಲ್ಲು ನಿವಾರಣೆ: ಕಿಡ್ನಿಯಲ್ಲಿ ಕಲ್ಲುಗಳ ಉಂಟಾದರೆ ಅದರ ನೋವು ಅನುಭವಿಸುವವರಿಗೆ ಗೊತ್ತು.. ಕಿಡ್ನಿಯಲ್ಲಿ ಆಗುವ ಕಲ್ಲುಗಳನ್ನು ಸುಲಭವಾಗಿ ಕರಗಿಸಲು ಸಾಧ್ಯವಿಲ್ಲ.. ಇಂಥವರು ಮೂತ್ರಕೋಶದಲ್ಲಿ ಉಂಟಾಗಿರುವ ಕಲ್ಲು ತೆಗೆಯಲು ಮುಟ್ಟಿದರೆಮುನಿ ಸೊಪ್ಪಿನ ಕಷಾಯ ಸೇವನೆ ಮಾಡುತ್ತಾ ಬಂದರೆ ಮೂತ್ರಕೋಶದ ಕಲ್ಲುಗಳನ್ನು ತೆಗೆಯಬಹುದು.

    4) ಬಾಣಂತಿಯರ ಹೊಟ್ಟೆ ಕರಗಿಸಲು: ಮಕ್ಕಳಾದ ಬಳಿಕ ಬಾಣಂತಿಯರು ಹೊಟ್ಟೆ ಕರಗಿಸಲು ಹರಸಾಹಸ ಪಡುತ್ತಾರೆ.. ಮೊದಲಿನಂತೆ ದೇಹವನ್ನು ಸದೃಢವಾಗಿ ಫಿಟ್ ಆಗಿ ಇಟ್ಟುಕೊಳ್ಳಲು ಅವರು ಮಾಡದ ಪ್ರಯತ್ನಗಳೇ ಇರುವುದಿಲ್ಲ.. ಹೀಗಾಗಿ ಇಂಥವರು ಮುಟ್ಟಿದರೆ ಮುನಿ ಗಿಡದ ಸೊಪ್ಪಿನ ರಸವನ್ನು ತಯಾರಿಸಿ ಅದನ್ನು ಹೊಕ್ಕಳಿನ ಭಾಗಕ್ಕೆ ನಿಯಮಿತವಾಗಿ ಲೇಪಿಸಿಕೊಂಡು ಮಸಾಜ್ ಮಾಡುತ್ತಾ ಬಂದರೆ ದಪ್ಪಗಿರುವ ಹೊಟ್ಟೆ ಕರಗಿ ಮೊದಲಿನಂತೆ ಆಗುತ್ತದೆ.

    5) ಮೊಡವೆಗಳ ನಿವಾರಣೆ: ಮುಖದಲ್ಲಿ ಮೊಡವೆ ಗಳನ್ನು ಹೋಗಲಾಡಿಸುವುದು ಹುಡುಗಿಯರಿಗೆ ದೊಡ್ಡ ಸವಾಲು.. ಹೀಗಾಗಿ ಹಲವಾರು ಮನೆಮದ್ದುಗಳನ್ನು ಮಾಡಿದ್ರು ಮೊಡವೆಗಳು ನಿವಾರಣೆ ಆಗುವುದಿಲ್ಲ.. ನಿಯಮಿತವಾಗಿ ಮುಟ್ಟಿದರೆ ಮುನಿ ಸೊಪ್ಪಿನ ರಸವನ್ನು ಮುಖಕ್ಕೆ ಲೇಪನ ಮಾಡಿದರೆ ಮೊಡವೆ ನಿವಾರಣೆ ಆಗಲಿದೆ.

    ಇದನ್ನೂ ಓದಿ: ಮನೆಯಲ್ಲಿ ಸಸ್ಯಗಳ ಆರೈಕೆಗೆ ಇಲ್ಲಿದೆ ಸರಳ ಸೂತ್ರಗಳು

    6) ಗಾಯಗಳಿಗೆ ಸೂಕ್ತ ಪರಿಹಾರ: ಸಮಾನವಾಗಿ ಗಾಯವಾದಾಗ ಪ್ರತಿಯೊಬ್ಬರೂ ಅರಿಶಿಣವನ್ನು ಬಳಕೆ ಮಾಡುತ್ತಾರೆ. ಹರಿಶಿಣ ಇಲ್ಲದ ವೇಳೆ ಗಾಯವಾಗಿ ಕೈಯಲ್ಲಿ ರಕ್ತಸ್ರಾವವಾಗುತ್ತಿದ್ದರೆ, ಮುಟ್ಟಿದರೆ ಮುನಿ ಸೊಪ್ಪಿನ ಗಿಡವನ್ನು ಜಜ್ಜಿ ಅದರ ರಸವನ್ನು ಗಾಯದಮೇಲೆ ಹಾಕಿದರೆ ರಕ್ತಸ್ರಾವ ನಿಲ್ಲಲಿದೆ.

    7) ಚರ್ಮ ರೋಗಗಳ ನಿವಾರಣೆ: ತುರಿಕೆ ಹಾಗೂ ಇತರ ಚರ್ಮ ರೋಗದ ಕಾಯಿಲೆಗಳಿಂದ ಬಳಲುತ್ತಿರುವವರು ಮುಟ್ಟಿದರೆ ಮುನಿ ಗಿಡದ ರಸವನ್ನ ಹಚ್ಚಿಕೊಳ್ಳುವುದರಿಂದ ಚರ್ಮರೋಗದ ಸಮಸ್ಯೆಗಳು ನಿವಾರಣೆಯಾಗಲಿವೆ.
    Published by:ranjumbkgowda1 ranjumbkgowda1
    First published: