Buffet In Bengaluru: ಬೆಂಗಳೂರಿನ ಈ 5 ರೆಸ್ಟೊರೆಂಟ್​ಗಳು ಬಫೆಟ್​ಗೆ ಫೇಮಸ್​ ಅಂತೆ - ನೀವೂ ಟ್ರೈ ಮಾಡಿ

Job News: ಬೆಂಗಳೂರಿನ ಕೆಲ ಪ್ರಮುಖ ಏರಿಯಾಗಳ ಆಯ್ದ ಬೆಸ್ಟ್​ ಬಫೆಟ್​ ಹೋಟೆಲ್​ಗಳ ಲಿಸ್ಟ್ ಅನ್ನು ನಾವಿಲ್ಲಿ ನೀಡಿದ್ದು, ಒಮ್ಮೆಯಾದರೂ ವಿಸಿಟ್​ ಮಾಡಲೇಬೇಕು ಎಂದರೆ ತಪ್ಪಾಗಲಾರದು.  ಅಲ್ಲದೇ ಈ ರೆಸ್ಟೊರೆಂಟ್​ಗಳು ನಿಮ್ಮನ್ನ ಪದೇ ಪದೇ ಕೈ ಬೀಸಿ ಕರೆಯದೇ  ಇರದು. 

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಯಾವಾಗಲೂ ಒಂದು ರೀತಿಯ ಆಹಾರ (Food) ತಿಂದು ಬೋರ್​ ಆಗಿದ್ರೆ, ಅದರಲ್ಲೂ ಬೆಂಗಳೂರಿನಲ್ಲಿ (Bengaluru)  ಬಫೆಟ್​ (Buffet) ಊಟ ಎಲ್ಲಿ ಬೆಸ್ಟ್​ ಎಂದು ಹುಡುಕಾಡುತ್ತಿದ್ರೆ ನಿಮ್ಮ ಸಹಾಯಕ್ಕೆ ನಾವಿದ್ದೇವೆ. ಬೆಂಗಳೂರಿನ ಕೆಲ ಪ್ರಮುಖ ಏರಿಯಾಗಳ ಆಯ್ದ ಬೆಸ್ಟ್​ ಬಫೆಟ್​ ಹೋಟೆಲ್​ಗಳ ಲಿಸ್ಟ್ ಅನ್ನು ನಾವಿಲ್ಲಿ ನೀಡಿದ್ದು, ಒಮ್ಮೆಯಾದರೂ ವಿಸಿಟ್​ ಮಾಡಲೇಬೇಕು ಎಂದರೆ ತಪ್ಪಾಗಲಾರದು.  ಅಲ್ಲದೇ ಈ ರೆಸ್ಟೊರೆಂಟ್​ಗಳು ನಿಮ್ಮನ್ನ ಪದೇ ಪದೇ ಕೈ ಬೀಸಿ ಕರೆಯದೇ  ಇರದು. 

ಎಬೊನಿ - ಹೋಟೆಲ್ ಐವರಿ ಟವರ್, ಅಶೋಕ್​ ನಗರ್

ರೂಫ್​ ಟಾಪ್​ನಲ್ಲಿ ಬಫೆಟ್​ ಸೌಲಭ್ಯ ನೀಡುವ ಈ ರೆಸ್ಟೋರೆಂಟ್​ ನಿಮ್ಮನ್ನ ಎಲ್ಲಾ ಒತ್ತಡಗಳಿಂದ ದೂರ ಮಾಡುವುದರಲ್ಲಿ ಅನುಮಾನವಿಲ್ಲ. ನಿಮಗೆ ಮಧ್ಯಾಹ್ನದ ಲಂಚ್​ ಬಾಕ್ಸ್ ಬೇಡ ಎನಿಸಿ, ನೀವು ಅಶೋಕ್​ ನಗರದ ಸುತ್ತ ಮುತ್ತಲಿದ್ದರೆ ಇಲ್ಲಿಗೆ ವಿಸಿಟ್​ ಮಾಡಿ, ಎಂಜಾಯ್​ ಮಾಡಿ.

ವಿಳಾಸ: ಟವರ್-ಬಿ, 3ನೇ ಮಹಡಿ, 1, ಮಹಾತ್ಮ ಗಾಂಧಿ ರೆಡ್, ಬೆಂಗಳೂರು, ಕರ್ನಾಟಕ 2000

ಮೊಬೈಲ್​ ನಂಬರ್: 080 4178 3344

ಜೀ ಹಝೂರ್​, ವಿಜಯನಗರ

ಮೊಘಲ್ ದರ್ಬಾರ್‌ನಂತೆ ಕಾಣುವಂತೆ ಅಲಂಕೃತವಾಗಿರುವ ರೆಸ್ಟೋರೆಂಟ್ ಊಟದ ಸಮಯದಲ್ಲಿ ರಾಜಮನೆತನದ ರೀತಿ ಔತಣವನ್ನು ನೀಡುತ್ತದೆ. ಬಿಸಿಯಾದ ಶೋರ್ಬಾಸ್, ಕಾರ್ನ್ ಕಬಾಬ್‌ಗಳು, ಪುಲಾವ್‌ಗಳು, ಮಟನ್ ಕರಿಗಳು ಮತ್ತು ರಾಜ್ಮಾ ಹೀಗೆ ನಿಮಗೆ ಬೇಕಾದ ಎಲ್ಲಾ ರುಚಿಕರ ಆಹಾರಗಳನ್ನು ಇದು ಒದಗಿಸುತ್ತದೆ. ಜಾಮೂನು, ರಸಗುಲ್ಲಾ ಮತ್ತು ಪೇಸ್ಟ್ರಿಗಳನ್ನು ಊಟದ ಕೊನೆಯಲ್ಲಿ ಸವಿಯಲ್ಲಿ ಮರೆಯದಿರಿ.

ವಿಳಾಸ: ಐಟಿಪಿಎಲ್ ಮುಖ್ಯ ರಸ್ತೆ, ವೈದೇಹಿ ಆಸ್ಪತ್ರೆಯ ಪ್ರವೇಶದ್ವಾರದ ಎದುರು, ವೈದೇಹಿ ಸರ್ಕಲ್ ಬಳಿ, ವಿಜಯನಗರ, ಇಪಿಐಪಿ ವಲಯ, ವೈಟ್‌ಫೀಲ್ಡ್, ಬೆಂಗಳೂರು,

ಮೊಬೈಲ್ ನಂಬರ್: 098864 61108

ಪಂಜಾಬ್ ಬಿಸ್ಟ್ರೋ ನಾಗವರ

ವಾರದ ದಿನಗಳಲ್ಲಿ, ಚಿಕನ್ ಟಿಕ್ಕಾ, ಸರ್ಸನ್ ಡಾ ಸಾಗ್, ಬಟರ್ ಚಿಕನ್ ಮತ್ತು ರೊಟ್ಟಿಗಳಂತಹ ರುಚಿಕರವಾದ ಆಹಾರಗಳನ್ನು ಇಲ್ಲಿನ ಬಫೆಟ್​ ಹೊಂದಿದ್ದು, ಕೊನೆಯದಾಗಿ ಪಾನ್​ ಹೊತೆ ನಿಮ್ಮ ಊಟವನ್ನು ಮುಗಿಸಿ. ನೀವು ಮಧ್ಯಾಹ್ನ ರುಚಿಕರವಾದ ಊಟ ಹುಡುಕುತ್ತಿದ್ರೆ , ಇದು ಉತ್ತಮವಾದ ಸ್ಥಳ ಎನ್ನಬಹುದು.

ವಿಳಾಸ: ನೆಲ ಮಹಡಿ ಎಂಫರ್​ ಬಿಲ್ಡಿಂಗ್, ಎಂಎಸ್​ ರಾಮಯ್ಯ ಉತ್ತರ ನಗರ, ಮಾನ್ಯತಾ ಟೆಕ್ ಪಾರ್ಕ್, ನಾಗವಾರ, ಬೆಂಗಳೂರು, ಕರ್ನಾಟಕ 2006

ಮೊಬೈಲ್ ನಂಬರ್: 080 4655 8829

ಎಬಿಸ್​ ಬಾರ್ಬೆಕ್ಯೂ, ಮಾರತಹಳ್ಳಿ

ಮಾಂಸ, ಮೀನು ಮತ್ತು ತರಕಾರಿಗಳನ್ನುನೀವಿಲ್ಲಿ ತಿನ್ನಬಹುದು. ಅಲ್ಲದೆ, ವಿಶ್ ಗ್ರಿಲ್‌ನ ಮೊಲ, ಎಮು, ಶಾರ್ಕ್ ಮತ್ತು ಆಕ್ಟೋಪಸ್‌ನಂತಹ ವಿಭಿನ್ನ ಆಹಾರಗಳನ್ನು ಇಲ್ಲಿ ನೀಡಲಾಗುತ್ತದೆ. ನೈಟ್ರೋಜನ್ ಪಾನಿ ಪುರಿ, ತೆಪ್ಪನ್ಯಾಕಿ ಐಸ್ ಕ್ರೀಮ್, ಫಿಯರಿ ಪಾನ್ ಮತ್ತು ಫ್ರೈಡ್ ಕಲ್ಲಂಗಡಿಗಳಂತಹ ಸಿಗ್ನೇಚರ್ ಆಹಾರಗಳನ್ನು ನೀವಿಲ್ಲಿ ಮಿಸ್​ ಮಾಡಿಕೊಳ್ಳಬಾರದು.

ಇದನ್ನೂ ಓದಿ:ಖಡಕ್ ರೊಟ್ಟಿ, ಗಟ್ಟಿ ಚಟ್ನಿ ತಿನ್ಬೇಕು ಅಂದ್ರೆ ಬೆಂಗಳೂರಿನ ಈ ಟಾಪ್ 5 ಸ್ಥಳಗಳಿಗೆ ಮಿಸ್​ ಮಾಡ್ದೇ ಹೋಗಿ

ವಿಳಾಸ: 3ನೇ ಫ್ಲೋರ್, 90/4, ಮಾರತಹಳ್ಳಿ - ಸರ್ಜಾಪುರ್ ಔಟರ್ ರಿಂಗ್ ರೋಡ್​, ಪಾರ್ಕ್ ಪ್ಲಾಜಾ ಹೋಟೆಲ್ ಹತ್ತಿರ, ಮಾರತಹಳ್ಳಿ ವಿಲೇಜ್, ಮುನ್ನೇಕೊಲ್ಲಲ್, ಬೆಂಗಳೂರು, ಕರ್ನಾಟಕ.

ಮೊಬೈಲ್​ ನಂಬರ್: 073373 83765

ಎಂ ಕೆಫೆ - ಬೆಂಗಳೂರು ಮ್ಯಾರಿಯಟ್ ಹೋಟೆಲ್, ವೈಟ್‌ಫೀಲ್ಡ್,

ತಂದೂರಿ ಪನೀರ್, ಮಸಾಲೆಯುಕ್ತ ಚಿಕನ್ ಟಿಕ್ಕಾ ಮತ್ತು ಮೃದುವಾದ ಬ್ರೆಡ್‌ಗಳನ್ನು ಇಲ್ಲಿ ಮಿಸ್​ ಮಾಡಕೊಳ್ಳಬಾರದು. ಮ್ಯಾಕರೂನ್‌ಗಳು, ಪರ್ಫೈಟ್‌ಗಳು ಮತ್ತು ಪನ್ನಾ ಕೋಟಾಸ್‌ ಅನ್ನು ಇಲ್ಲ ಒಮ್ಮೆ ತಿಂದರೆ ಪದೇ ಪದೇ ಹೋಗದೇ ಇರಲಾರಿರಿ. ಹಾಗೆಯೇ ಇಲ್ಲಿ ಸಹ ಕೊನೆಯಲ್ಲಿ ಪಾನ್​ ಸವಿಯಲು ಮರೆಯದಿರಿ.

ಇದನ್ನೂ ಓದಿ: ಜಯನಗರದ ಬೆಸ್ಟ್​ ಬಫೆಟ್​ ರೆಸ್ಟೊರೆಂಟ್​ಗಳಿವು - ಆ ಕಡೆ ಹೋದ್ರೆ ಮಿಸ್​ ಮಾಡ್ದೇ ಹೋಗಿ

ವಿಳಾಸ: ಪ್ಲಾಟ್ ಸಂಖ್ಯೆ 75, 8ನೇ ರಸ್ತೆ, ಇಪಿಐಪಿ ವಲಯ, ವೈಟ್‌ಫೀಲ್ಡ್, ಬೆಂಗಳೂರು, ಕರ್ನಾಟಕ 560066

ಮೊಬೈಲ್ ನಂಬರ್:  080 4943 5000
Published by:Sandhya M
First published: