ರೋಮಾನಿಯಾದ ಉನ್ನತ ಹುದ್ದೆಗೆ ಬಂದ ಅರ್ಜಿಗಳೆಷ್ಟು ಗೊತ್ತಾ !

news18
Updated:July 23, 2018, 8:21 PM IST
ರೋಮಾನಿಯಾದ ಉನ್ನತ ಹುದ್ದೆಗೆ ಬಂದ ಅರ್ಜಿಗಳೆಷ್ಟು ಗೊತ್ತಾ !
news18
Updated: July 23, 2018, 8:21 PM IST
-ನ್ಯೂಸ್ 18 ಕನ್ನಡ

ಭಾರತೀಯ ರೈಲ್ವೆ ಸಂಸ್ಥೆ ಕೆಲ ತಿಂಗಳ ಹಿಂದೆ ಆಟೊಮೊಟಿವ್ ರೊಕೊ ಪೈಲೆಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿತ್ತು. ರೈಲ್ವೆ ಆಹ್ವಾನಿಸಿದ ಒಟ್ಟು 90,000 ಹುದ್ದೆಗಳಿಗೆ ಹರಿದು ಬಂದ ಅರ್ಜಿಗಳು 2.5 ಕೋಟಿಗಿಂತ ಹೆಚ್ಚು. ಈ ಅರ್ಜಿಗಳನ್ನು ವಿಂಗಡಿಸುವುದೇ ರೈಲ್ವೆ ಅಧಿಕಾರಿಗಳ ಕೆಲಸವಾಗಿದ್ದು ಬೇರೆ ಮಾತು.  ಹಾಗೆಯೇ 2400 ಎಫ್​ಡಿಎ-ಎಸ್​ಡಿಎ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದಾಗ ಬಂದು ಬಿದ್ದದ್ದು ಬರೋಬ್ಬರಿ 19 ಲಕ್ಷಕ್ಕೂ ಹೆಚ್ಚಿನ ಅಪ್ಲಿಕೇಶನ್​ಗಳು. ಇವೆರೆಡು ನಮ್ಮ ದೇಶದ ನಿರುದ್ಯೋಗಕ್ಕೆ ಹಿಡಿದ ಕನ್ನಡಿಯಾದರೆ ರೋಮಾನಿಯಾ ದೇಶದ ಕಥೆಯೇ ಬೇರೆ. ಇತ್ತೀಚೆಗೆ ರೋಮಾನಿಯಾದ  ಪ್ರತಿಷ್ಠಿತ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿತ್ತು. ಕೊನೆಯ ದಿನಾಂಕ ಮುಗಿದ ಮೇಲೆ ಅರ್ಜಿಗಳನ್ನು ಪರಿಶೀಲಿಸಲು ಮುಂದಾದ ಅಧಿಕಾರಿಗಳಿಗೆ ಮಾತ್ರ ಅಚ್ಚರಿ ಕಾದಿತ್ತು.

ರೋಮೇನಿಯಾ ಸರ್ಕಾರ ಇತ್ತೀಚೆಗೆ ಭ್ರಷ್ಟಾಚಾರ ನಿಗ್ರಹ ದಳದ ಮುಖ್ಯಾಧಿಕಾರಿ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದರು. ಈ ಹಿಂದೆ ಹುದ್ದೆಯಲ್ಲಿದ್ದ ಲಾರಾ ಕೊಡ್ರುಟಾ ಕೊವೆಸಿ ಅವರನ್ನು ಜುಲೈ 9 ರಂದು ವಜಾಗೊಳಿಸಲಾಗಿತ್ತು. ಖಾಲಿ ಉಳಿದಿದ್ದ ಪ್ರಾಸಿಕ್ಯೂಟರ್​ ಹುದ್ದೆಗಾಗಿ ಜಾಹೀರಾತು ನೀಡಿ ಅರ್ಜಿ ಆಹ್ವಾನಿಸಲಾಗಿತ್ತು. ಆದರೆ ಕೊನೆಯ ದಿನಾಂಕ ಮುಗಿದರೂ ಯಾವುದೇ ಅರ್ಜಿಗಳು ಬರದೇ ಅಚ್ಚರಿ ಮೂಡಿಸಿದೆ.

ರೊಮೇನಿಯಾ  ಭ್ರಷ್ಟಾಚಾರ ನಿಗ್ರಹ ನಿರ್ದೇಶನಾಲಯ ಹುದ್ದೆಗಾಗಿ ಆಹ್ವಾನಿಸಿದ ಈ ಪ್ರತಿಷ್ಠಿತ ಹುದ್ದೆಗೆ ಯಾವುದೇ ಅರ್ಜಿ ಬರದಿರುವುದು ಕಾನೂನು ಸಚಿವ ಟುಡೊರೆಲ್ ಟೊಡರ್ ನಿದ್ದೆಗೆಡಿಸಿದೆ. ಈ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಸಚಿವರು ದೇಶದ ಬದ್ಧತೆ ಮತ್ತು ಭ್ರಷ್ಟಾಚಾರವನ್ನು ತಡೆಯುವ ಬಗ್ಗೆ ರೋಮೇನಿಯನ್ನರಿಗೆ ಮನವರಿಕೆ ಮಾಡಿಕೊಡಲು ಮುಂದಾಗಿದ್ದಾರೆ.

2006 ರಲ್ಲಿ ನೇಮಕಗೊಂಡಿದ್ದ ಕೊವೆಸಿ ರೋಮೇನಿಯಾ ದೇಶದ ಮೊದಲ ಮಹಿಳಾ ಪ್ರಾಸಿಕ್ಯೂಟರ್ ಆಗಿದ್ದರು. ಆದರೆ ಭ್ರಷ್ಟಾಚಾರ ನಿರ್ಮಾಲನಾ ತಂಡದಲ್ಲಿ ಸಾರ್ವಾಧಿಕಾರಿಯಾಗಿ ವರ್ತಿಸುತ್ತಿದ್ದ ಕೊವೆಸಿ ಅವರು ತಪ್ಪು ಮಾಹಿತಿಗಳಿಂದ ಕೆಲವರ ಮೇಲೆ ದಾಳಿ ಮಾಡಿದ್ದರು. ಯಾವುದೇ ಪುರಾವೆಗಳಿಲ್ಲದೆ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳಿಂದ ಕೊವೆಸಿ ವಿರುದ್ಧ ಅನೇಕ ದೂರುಗಳು ದಾಖಲಾಗಿತ್ತು. ಸಾರ್ವಜನಿಕರ ವಿಶ್ವಾಸ ಪಡೆಯುವಲ್ಲಿ ಎಡೆವಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ ಲಾರಾ ಕೊಡ್ರುಟಾ ಕೊವೆಸಿ ವಜಾಗೊಳಿಸಲಾಗಿತ್ತು.

ಅಲ್ಲದೆ ರೋಮೇನಿಯಾ ಮಂತ್ರಿಗಳ ಭ್ರಷ್ಟಾಚಾರವನ್ನು ಹೊರ ಜಗತ್ತಿಗೆ ತಿಳಿಸುವಲ್ಲಿಯು ಕೊವೆಸಿ ಪ್ರಮುಖ ಪಾತ್ರವಹಿಸಿದ್ದರು ಎಂದು ಹೇಳಲಾಗಿದೆ. ಆದರೆ ಇಂತಹ ಒಂದು ಉನ್ನತ ಹುದ್ದೆಗೆ ಯಾವುದೇ ಅರ್ಜಿಗಳು ಬರದಿರುವುದು ಭ್ರಷ್ಟಾಚಾರದ ವಿರುದ್ಧ ರೋಮೇನಿಯನ್ನ ಅಸಮಾಧಾನವನ್ನು ಸೂಚಿಸುತ್ತಿದ್ದೆಯೇ ಅಥವಾ ದೇಶ ಭ್ರಷ್ಟ ಮುಕ್ತವಾಗಿದೆ ಎಂದು ಜನರು ನಂಬಿದ್ದಾರೆಯೇ ಎಂಬ ಗೊಂದಲ ಸೃಷ್ಟಿಸಿದೆ.
First published:July 23, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...