ವೈನ್​ನಲ್ಲಿದೆ ಆರೋಗ್ಯದ ಗುಟ್ಟು: ಅತ್ಯುತ್ತಮ ವೈನ್ ಸಿಗುವ ಭಾರತದ ಟಾಪ್ 5 ಸ್ಥಳಗಳು

news18
Updated:June 27, 2018, 4:43 PM IST
ವೈನ್​ನಲ್ಲಿದೆ ಆರೋಗ್ಯದ ಗುಟ್ಟು: ಅತ್ಯುತ್ತಮ ವೈನ್ ಸಿಗುವ ಭಾರತದ ಟಾಪ್ 5 ಸ್ಥಳಗಳು
news18
Updated: June 27, 2018, 4:43 PM IST
ನ್ಯೂಸ್ 18 ಕನ್ನಡ

ಆಲ್ಕೋಹಾಲ್ ಎಂದರೆ ಮೂಗು ಮುರಿಯುತ್ತಿದ್ದ ಭಾರತೀಯರು ವೈನ್ ಸಂಸ್ಕೃತಿಗೆ ಒಗ್ಗಿಕೊಳ್ಳುತ್ತಿದ್ದಾರೆ. ಪ್ರತಿನಿತ್ಯ ವೈನ್ ಕುಡಿಯುವುದರಿಂದ ಹೃದಯ ಸಂಬಂಧಿ, ಕ್ಯಾನ್ಸರ್, ಸ್ಟ್ರೋಕ್ ಮುಂತಾದ ಕಾಯಿಲೆಗಳು ದೂರವಾಗುತ್ತವೆ ಎಂದು ಇತ್ತೀಚಿನ ಸಂಶೋಧನೆ ತಿಳಿಸಿದೆ. ಅಷ್ಟೇ ಅಲ್ಲದೆ ವೈನ್ ಕುಡಿಯುವವರ ತುಂಬಾ ರೋಮ್ಯಾಂಟಿಕ್ ಆಗಿರುತ್ತಾರೆ ಎಂಬುದು ಅಧ್ಯಯನದಿಂದ ಸಾಬೀತಾಗಿದೆ. ಆರೋಗ್ಯಕ್ಕೆ ವೈನ್ ಈಸ್ ಫೈನ್ ಎನ್ನಲಾಗುತ್ತಿದ್ದು, ಭಾರತದ ಯಾವ ನಗರದಲ್ಲಿ ಅತ್ಯುತ್ತಮ ವೈನ್​ನ ರುಚಿ ಸವಿಯಬಹುದು ಎಂದು ಇಲ್ಲಿ ತಿಳಿಸಲಾಗಿದೆ.

1- ಸುಲಾ ವೈನ್ಯಾರ್ಡ್, ನಾಸಿಕ್ - 1997ರಲ್ಲಿ ಸುಲಾ ದ್ರಾಕ್ಷಿತೋಟವನ್ನು ಮಹಾರಾಷ್ಟ್ರದ ನಾಸಿಕ್​ನಲ್ಲಿ ಪ್ರಾರಂಭಿಸಲಾಗಿತ್ತು. ಪ್ರತಿ ವರ್ಷ ಈ ವೈನ್​ಯಾರ್ಡ್​ನಲ್ಲಿ 'ಸುಲಾ ಫೆಸ್ಟ್'​ ಆಯೋಜಿಸಲಾಗುತ್ತಿದ್ದು, ಇದನ್ನು ಭಾರತದ ಅತ್ಯುತ್ತಮ 'ವೈನ್ ಟೂರ್' ಎಂದು ಪರಿಗಣಿಸಲಾಗಿದೆ. ಇಲ್ಲಿನ ವೈನ್ ರುಚಿಯನ್ನು ಸವಿಯಲು ದೇಶ ವಿದೇಶಗಳಿಂದ ಜನರು ಆಗಮಿಸುವುದರಿಂದ ಇದನ್ನು 'ಮೆಕ್ಕಾ ಆಫ್ ವೈನ್ಸ್'​ ಎಂದು ಕರೆಯಲಾಗುತ್ತದೆ. ಸುಲಾ ಫೆಸ್ಟ್ ಅಲ್ಲದೆ ಇಲ್ಲಿನ ರೆಸ್ಟೊರೆಂಟ್​ಗಳಲ್ಲಿ ಇಟಾಲಿಯನ್ ಆಹಾರದೊಂದಿಗೆ ವರ್ಷವಿಡೀ ರುಚಿಕರವಾದ ವೈನ್​ ದೊರೆಯುತ್ತದೆ.

2- ಚಟ್ಯೂ ಡಿ'ಒರಿ, ಡಿಂದೋರಿ, ಮಧ್ಯಪ್ರದೇಶ - ನಾಶಿಕ್​​ನಿಂದ ಕೇವಲ 22 ಕಿ.ಮೀ ದೂರದಲ್ಲಿರುವ ಚಟ್ಯೂ ಡಿ'ಒರಿಯ ದ್ರಾಕ್ಷಿ ತೋಟವು 200 ಎಕರೆ ಪ್ರದೇಶವನ್ನು ಒಳಗೊಂಡಿದೆ. ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕವನ್ನು ಬಳಸದೆ ಇರುವುದು ಇಲ್ಲಿನ ದ್ರಾಕ್ಷಿ ತೋಟದ ವಿಶೇಷ. ಅತ್ಯುತ್ತಮ ನೈಸರ್ಗಿಕ ವೈನ್ ಸಿಗುವ ಪ್ರದೇಶ ಎಂದು ಖ್ಯಾತಿ ಪಡೆದಿರುವ ಚಟ್ಯೂ ಡಿ'ಒರಿ ವೈನ್​ಯಾರ್ಡ್​​ನಲ್ಲಿ ಮನರಂಜನೆಗೆ ಅವಕಾಶವಿದೆ. ಈ ವೈನ್​ಯಾರ್ಡ್​ನಲ್ಲಿ ಜಲಕ್ರೀಡೆ, ಐಷಾರಾಮಿ ಫಾರ್ಮ್​ಹೌಸ್, ಈಜುಕೊಳಗಳಿದ್ದು, ದ್ರಾಕ್ಷಿ ರಸದೊಂದಿಗೆ ರಜಾದಿನಗಳನ್ನು ಕಳೆಯಲು ಹೇಳಿ ಮಾಡಿಸಿದ ತಾಣ ಎನ್ನಲಾಗಿದೆ.

3- ಗ್ರೋವರ್ ವೈನ್​ಯಾರ್ಡ್​​, ನಂದಿ ಹಿಲ್ಸ್​, ಕರ್ನಾಟಕ -ನಂದಿ ಬೆಟ್ಟಗಳ ತಪ್ಪಲಿನಲ್ಲಿರುವ ಈ ವೈನ್​ಯಾರ್ಡ್​ ಬೆಂಗಳೂರಿನಿಂದ 40 ಕಿ.ಮೀ ದೂರದಲ್ಲಿದೆ. ಇಲ್ಲಿನ ದ್ರಾಕ್ಷಿತೋಟದಲ್ಲಿ ಕಾಬರ್ನೆಟ್ ಸುವಿಗ್ನಾನ್, ಶಿರಾಜ್, ವಿಯೊಗ್ನೀರ್ ಮತ್ತು ಸೌವಿಗ್ನಾನ್ ಬ್ಲಾಂಕ್ ದ್ರಾಕ್ಷಿಗಳನ್ನು ಬೆಳೆಯಲಾಗುತ್ತದೆ. ನಂದಿ ಬೆಟ್ಟ ಕರ್ನಾಟಕದ ಪ್ರಸಿದ್ಧ ಪ್ರವಾಸಿ ತಾಣವಾಗಿದ್ದು, ಇಲ್ಲಿ ಕೂಡ ವೈನ್ ಫೇಸ್ಟ್​ ಅನ್ನು ಆಯೋಜಿಸಬಹುದು. ಇಲ್ಲಿ ಭೇಟಿ ಕೊಟ್ಟರೆ ಪ್ರಕೃತಿ ಸೌಂದರ್ಯದೊಂದಿಗೆ ವೈನ್​ ರಸವನ್ನು ಸವಿಯಬಹುದು.

4. ಫ್ರ್ಯಾಟೆಲ್ಲಿ ವೈನ್ಸ್, ಅಕ್ಲುಜ್, ಮಹಾರಾಷ್ಟ್ರ- ಪುಣೆಯಿಂದ 175 ಕಿ.ಮೀ ದೂರದಲ್ಲಿರುವ ಫ್ರ್ಯಾಟೆಲ್ಲಿ ವೈನ್ಸ್​ನಲ್ಲಿ 13 ವಿಧದ ವೈನ್ ಅನ್ನು ತಯಾರಿಸಲಾಗುತ್ತದೆ. ವಿಶ್ವ ಪ್ರಸಿದ್ಧ ಕಾಬರ್ನೆಟ್ ಸುವಿಗ್ನಾನ್ ಮತ್ತು ಸಂಗಿವೊಸೆ ಮಿಶ್ರಿತ ಸೆಟೆ ವೈನ್ ಇಲ್ಲಿನ ಅತ್ಯಂತ ಪ್ರಸಿದ್ದ ವೈನಾಗಿದೆ. ಇಲ್ಲಿನ ದ್ರಾಕ್ಷಿತೋಟಗಳಲ್ಲಿ ಹೆಚ್ಚಾಗಿ ಯುರೋಪಿಯನ್ ತಳಿಗಳನ್ನು ಬೆಳೆಯಲಾಗುತ್ತಿದ್ದು, ಪಾಶ್ಚಾತ್ಯ ಶೈಲಿಯ ವೈನ್​ಗಳಿಗೆ ಫ್ರ್ಯಾಟೆಲ್ಲಿ ವೈನ್ಸ್ ಪ್ರಸಿದ್ದಿ ಪಡೆದಿದೆ.

5. ವ್ಯಾಲೀ ಡಿ ವಿನ್ ವೈನ್ಯಾರ್ಡ್ (ಜಂಪಾ ವೈನ್ಸ್), ನಾಶಿಕ್ - ಮುಂಬೈ ಮತ್ತು ನಾಶಿಕ್​ ಹೆದ್ದಾರಿಯಲ್ಲಿ ಸಂಚರಿಸುವಾಗ ವ್ಯಾಲೆ ಡಿ ವಿನ್ ದ್ರಾಕ್ಷಿತೋಟಗಳು ಕಂಡು ಬರುತ್ತದೆ. ಇಲ್ಲಿನ ಜಂಪಾ ವೈನ್ಸ್​ ವಿಶ್ವ ಪ್ರಸಿದ್ಧಿ ಪಡೆದಿದೆ. ​ಚೆನಿನ್ ಬ್ಲಾಂಕ್, ಸುವಿಗ್ನಾನ್ ಬ್ಲಾಂಕ್, ಕಾರ್ಬನೆಟ್ ಸುವಿಗ್ನಾನ್, ಶಿರಾಜ್, ಮತ್ತು ಸ್ಪಾರ್ಕ್ಲಿಂಗ್ ರೋಸ್ ಮತ್ತು ಬ್ರುಟ್ ದ್ರಾಕ್ಷಿ ತಳಿಗಳ ವೈನ್ ಇಲ್ಲಿ ತಯಾರಿಸಲಾಗುತ್ತದೆ.
First published:June 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...