• Home
  • »
  • News
  • »
  • lifestyle
  • »
  • Travel Places: ವಿದೇಶ ಪ್ರವಾಸಕ್ಕೆ ಪ್ಲ್ಯಾನ್ ಮಾಡ್ತಿದ್ರೆ ಈ ಸ್ಥಳಗಳು ನಿಮ್ಮ ಲಿಸ್ಟ್​ನಲ್ಲಿರಲಿ

Travel Places: ವಿದೇಶ ಪ್ರವಾಸಕ್ಕೆ ಪ್ಲ್ಯಾನ್ ಮಾಡ್ತಿದ್ರೆ ಈ ಸ್ಥಳಗಳು ನಿಮ್ಮ ಲಿಸ್ಟ್​ನಲ್ಲಿರಲಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

World Travel Places: ನೀವು ಪ್ರಪಂಚ ಸುತ್ತಲು ಪ್ಲಾನ್‌ ಮಾಡುತ್ತಿದ್ದರೆ, ನಿಮ್ಮ ಪ್ರವಾಸದಲ್ಲಿ (Travel) ಮೊದಲಿರಬೇಕಾದ ಐದು ಅಗ್ರ ಸ್ಥಳಗಳು ಹಾಗೂ ಅಲ್ಲಿ ನೀವು ಭೇಟಿ ನೀಡಬಹುದಾದ ತಾಣಗಳ ಬಗೆಗಿನ ಮಾಹಿತಿ ಇಲ್ಲಿದೆ.

  • Trending Desk
  • 2-MIN READ
  • Last Updated :
  • Share this:

ಪ್ರಪಂಚವನ್ನು(World)  ನೋಡಬೇಕು ಅನ್ನೋದು ಬಹಳ ಜನರ ಜೀವನದ ಬಹುದೊಡ್ಡ ಬಯಕೆ. ವಿಶಾಲ ಪ್ರಪಂಚದ ವೈವಿಧ್ಯತೆಯನ್ನ ನೋಡಬೇಕು. ಅಲ್ಲಿನ ಪರಿಸರವನ್ನು ಅನುಭವಿಸಬೇಕು. ವಿಭಿನ್ನ ಸಂಸ್ಕೃತಿ (Tradition) ಬಗ್ಗೆ ತಿಳಿದುಕೊಳ್ಳಬೇಕು. ಅಲ್ಲಿನ ನಿಸರ್ಗವನ್ನು ಕಣ್ತುಂಬಿಕೊಳ್ಳಬೇಕು.. ಹೀಗೆ ಕೊನೆಯಿಲ್ಲದ ಆಸೆಗಳು ಹಲವರಲ್ಲಿರುತ್ತವೆ. ನೀವು ಪ್ರಪಂಚ ಸುತ್ತಲು ಪ್ಲಾನ್‌ ಮಾಡುತ್ತಿದ್ದರೆ, ನಿಮ್ಮ ಪ್ರವಾಸದಲ್ಲಿ (Travel) ಮೊದಲಿರಬೇಕಾದ ಐದು ಅಗ್ರ ಸ್ಥಳಗಳು ಹಾಗೂ ಅಲ್ಲಿ ನೀವು ಭೇಟಿ ನೀಡಬಹುದಾದ ತಾಣಗಳ ಬಗೆಗಿನ ಮಾಹಿತಿ ಇಲ್ಲಿದೆ.


1) ಯುರೋಪ್: ಅತ್ಯದ್ಭುತ ನಿಸರ್ಗದ ಸೌಂದರ್ಯ ಯುರೋಪನ್ನು ಇನ್ನಷ್ಟು ಸುಂದರವಾಗಿಸಿದೆ. ಅದರಲ್ಲೂ ಚಳಿಗಾಲದಲ್ಲಿ ಇಲ್ಲಿನ ಐಸ್ಲ್ಯಾಂಡ್ನಲ್ಲಿ ಉತ್ತರದ ದೀಪಗಳನ್ನು ನೋಡಬಹುದಾಗಿದೆ. ಇದು ಬರೀ ಇತಿಹಾಸದಲ್ಲಿ ಮಾತ್ರ ಶ್ರೀಮಂತವಾಗಿರದೇ ಪ್ರವಾಸೀ ತಾಣಗಳಲ್ಲೂ ಶ್ರೀಮಂತವಾಗಿದೆ. ಹಾಗಾಗಿಯೇ ಜನರು ಪದೇ ಪದೇ ಯುರೋಪ್‌ ಪ್ರವಾಸ ಕೈಗೊಳ್ಳಲು ಬಯಸುತ್ತಾರೆ.


ಯುರೋಪ್‌ ಸಾಹಸಮಯ ಪ್ರಯಾಣಗಳಿಗೆ ಹೆಚ್ಚು ಉತ್ತಮವಾಗಿದೆ. ನೀವು ಇಲ್ಲಿನ ಮಾಂಟೆನೆಗ್ರೊದಲ್ಲಿ ಬೆರಗುಗೊಳಿಸುವ ಕಡಲತೀರಗಳನ್ನು ನೋಡಬಹುದು. ಜೊತೆಗೆ ರೊಮೇನಿಯಾದ ಬುಕಾರೆಸ್ಟ್‌ನಂತಹ ಉತ್ಸಾಹಭರಿತ ನಗರಗಳು ನಿಮ್ಮನ್ನು ಬೆರಗುಗೊಳಿಸುವುದರಲ್ಲಿ ಸಂಶಯವೇ ಇಲ್ಲ.


2) ಏಷ್ಯಾ: ವಿಭಿನ್ನ ಪ್ರವಾಸದ ಅನುಭವವನ್ನು ಬಯಸುವವರಿಗೆ ಏಷ್ಯಾ ಬೆಸ್ಟ್ ಜಾಗ. ಜಪಾನ್‌ನ ಪುರಾತನ ದೇವಾಲಯಗಳು, ಇಕೆಬಾನಾ ಮತ್ತು ಬೋನ್ಸಾಯ್ ಉದ್ಯಾನಗಳು, ಚೀನಾದ ಮಹಾಗೋಡೆಯಂಥ ಅದ್ಭುತಗಳು, ಲ್ಯಾಂಟರ್ನ್ ಹಬ್ಬಗಳು ನಿಮ್ಮನ್ನು ಖಂಡಿತಾ ಬೆರಗುಗೊಳಿಸುತ್ತವೆ.


ಅಲ್ಲದೇ ನೇಪಾಳ, ಥೈಲ್ಯಾಂಡ್‌ ಬಗ್ಗೆ ಕೂಡ ನೀವು ಕೇಳಿರಬಹುದು. ಕೇಳಿರುವುದಕ್ಕಿಂತ ಹೆಚ್ಚಿನ ಸಂತೋಷವನ್ನು ನೀಡಬಹುದಾದ ಸ್ಥಳಗಳನ್ನು ಏಷ್ಯಾ ನಿಮಗೆ ಪರಿಚಯಿಸುತ್ತದೆ. ಆದ್ದರಿಂದ ಇದು ಪ್ರತಿಯೊಬ್ಬರಿಗೂ ವಿಶಿಷ್ಟ ಅನುಭವ ನೀಡುವ ಖಂಡ. ವೈವಿಧ್ಯಮಯ ಸಂಸ್ಕೃತಿಯನ್ನು ನೋಡಬಹುದಾದ ಅವಕಾಶವನ್ನು ಇದು ನಿಮಗೆ ನೀಡುತ್ತದೆ ಅನ್ನೋದ್ರಲ್ಲಿ ಡೌಟೇ ಇಲ್ಲ.


ಇದನ್ನೂ ಓದಿ: ಮಣ್ಣಿನ ಲೋಟದಲ್ಲಿ ಟೀ ಕುಡಿದರೆ ಯಾವ್ದೇ ಸೋಂಕು ನಿಮ್ಮನ್ನ ಮುಟ್ಟಕ್ಕೆ ಆಗಲ್ಲ


3) ಆಸ್ಟ್ರೇಲಿಯಾ: ಆಸ್ಟ್ರೇಲಿಯಾವು ಇಲ್ಲಿನ ವಿಶಿಷ್ಟ ಪ್ರಾಣಿಗಳನ್ನು ನೋಡುವಂಥ ಅವಕಾಶ ನೀಡುತ್ತದೆ. ಇದು ಅಪರೂಪದ ಪ್ರಾಣಿಗಳಾದ ಕೋಲಾ ಕರಡಿಗಳು, ಕಾಂಗರೂಗಳು ಮತ್ತು ಪ್ಲಾಟಿಪಸ್‌ಗಳು ಸೇರಿದಂತೆ ವಿವಿಧ ಪ್ರಾಣಿಗಳಿಗೆ ನೆಲೆಯಾಗಿದೆ. ಇಲ್ಲಿ ನೀವು ಭೇಟಿ ನೀಡಬೇಕಾದ ಸ್ಥಳವೆಂದರೆ ಆಲಿಸ್ ಸ್ಪ್ರಿಂಗ್ಸ್‌ನಲ್ಲಿರುವ ಕಾಂಗರೂ ಅಭಯಾರಣ್ಯ, ಸಿಡ್ನಿ ಒಪೇರಾ ಹೌಸ್, ಉಲುರು(ಆಯರ್ಸ್ ರಾಕ್), ಗ್ರೇಟ್‌ ಬ್ಯಾರಿಯರ್‌ ರೀಫ್‌ ಮೆರಿನ್‌ ಪಾರ್ಕ್‌, ಸಿಡ್ನಿ ಹಾರ್ಬರ್‌ ಬ್ರಿಡ್ಜ್‌ ಹೀಗೆ ಇಲ್ಲಿನ ವಿಶೇಷ ಸ್ಥಳಗಳಿಗೆ ನೀವು ಭೇಟಿ ನೀಡಬಹುದು.


4)ದಕ್ಷಿಣ ಅಮೇರಿಕ: ದಕ್ಷಿಣ ಅಮೇರಿಕಾವು ನಿಮಗೆ ವಿಶಿಷ್ಟ ಅನುಭವ ನೀಡುತ್ತದೆ. ಬ್ರೆಜಿಲ್‌ನಲ್ಲಿ ಮಳೆಕಾಡುಗಳ ಮೂಲಕ ನಡೆಯುವುದರಿಂದ ಹಿಡಿದು ಪೆರುವಿನ ಲಾಮಾಗಳನ್ನು ನೋಡುವವರೆಗೆ ವಿಭಿನ್ನ ಅನುಭವಗಳನ್ನು ನೀಡುತ್ತದೆ. ಇದು ವಿಶ್ವದ ಅತ್ಯಂತ ಪ್ರಮುಖ ಐತಿಹಾಸಿಕ ತಾಣಗಳಲ್ಲಿ ಒಂದಾದ ಮಚು ಪಿಚುಗೆ ನೆಲೆಯಾಗಿದೆ. ನಿಮ್ಮ ವಿದೇಶಿ ಪ್ರವಾಸದ ಲಿಸ್ಟ್‌ ನಲ್ಲಿ ಇರಲೇಬೇಕಾದ ಸ್ಥಳಗಳಲ್ಲಿ ಇದು ಮುಖ್ಯವಾಗಿದೆ.
5)ಅಮೆರಿಕ : ವಿಶ್ವದ ಅತ್ಯಂತ ವೈವಿಧ್ಯಮಯ ದೇಶಗಳಲ್ಲಿ ಒಂದಾಗಿರುವ ಅಮೆರಿಕವು ಉತ್ಸಾಹದ ಜೀವನಕ್ಕೆ ಹೆಸರಾಗಿದೆ. ನೀವು ಅಮೆರಿಕಕ್ಕೆ ಮೊದಲ ಬಾರಿಗೆ ಪ್ರವಾಸ ಕೈಗೊಂಡರೆ ಇಲ್ಲಿನ ನ್ಯೂಯಾರ್ಕ್‌ ಸಿಟಿಯನ್ನು ನೋಡಲೇಬೇಕು. ಅಮೆರಿಕಾದ ಅತ್ಯಂತ ಸಾಂಪ್ರದಾಯಿಕ ನಗರಗಳಲ್ಲಿ ಒಂದಾದ ನ್ಯೂಯಾರ್ಕ್ ನಗರವು ಒಂದು.


ಇದು ವಿಭಿನ್ನ ಸಂಸ್ಕೃತಿ, ಪಾಕಪದ್ಧತಿ, ಕಲೆ ಮತ್ತು ಮನರಂಜನೆಯನ್ನು ನಿಮಗೆ ಒದಗಿಸುತ್ತದೆ. ದಿ ಬಿಗ್ ಆಪಲ್ ಎಂದು ಕರೆಯಲ್ಪಡುವ ನ್ಯೂ ಯಾರ್ಕ್‌ ಸಿಟಿ ದಿ ಮೆಟ್ರೋಪಾಲಿಟನ್, ಮ್ಯೂಸಿಯಂ ಆಫ್ ಆರ್ಟ್ ಸೇರಿದಂತೆ ಹಲವಾರು ವಸ್ತು ಸಂಗ್ರಹಾಲಯಗಳನ್ನು ನಿಮಗೆ ಪರಿಚಯಿಸುತ್ತದೆ. ಅಲ್ಲದೇ ಬ್ರಾಡ್‌ವೇ ಪ್ರದರ್ಶನಗಳು ಸೇರಿದಂತೆ ವಿಶಿಷ್ಟ ಅನುಭವನ್ನು ಪಡೆಯಬಹುದು.


ಇದನ್ನೂ ಓದಿ: ಕಾಲಿನಲ್ಲಿ ಈ ಸಮಸ್ಯೆ ಕಾಣಿಸಿದ್ರೆ ನೆಗ್ಲೆಕ್ಟ್​ ಮಾಡ್ಬೇಡಿ, ಲಿವರ್ ಸಮಸ್ಯೆಯ ಲಕ್ಷಣವಂತೆ


ಇನ್ನು ನೀವು ವಾಷಿಂಗ್ಟನ್ ಡಿಸಿಯಲ್ಲಿ ನ್ಯಾಷನಲ್‌ ಆರ್ಟ್‌ ಗ್ಯಾಲರಿ, ನ್ಯಾಷನಲ್‌ ಏರ್‌ ಮತ್ತು ಸ್ಪೇಸ್‌ ಮ್ಯೂಸಿಯಂ ಸೇರಿದಂತೆ ಹಲವಾರು ಪ್ರದೇಶಗಳನ್ನು ನೋಡಬಹುದಾಗಿದೆ.

Published by:Sandhya M
First published: