• Home
 • »
 • News
 • »
 • lifestyle
 • »
 • Indian Breakfast Recipe: ಬಾಯಲ್ಲಿ ನೀರೂರಿಸುವ ರುಚಿಕರ ದೇಸೀ ಉಪಹಾರಗಳಿವು, ನೀವೂ ಒಮ್ಮೆ ಟ್ರೈ ಮಾಡಿ

Indian Breakfast Recipe: ಬಾಯಲ್ಲಿ ನೀರೂರಿಸುವ ರುಚಿಕರ ದೇಸೀ ಉಪಹಾರಗಳಿವು, ನೀವೂ ಒಮ್ಮೆ ಟ್ರೈ ಮಾಡಿ

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

ದೇಶದ ವಿವಿಧ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ 54 ರುಚಿಕರವಾದ ದೇಸಿ ಉಪಹಾರಗಳಲ್ಲಿ ಕೆಲವು ಉಪಹಾರಗಳ ಬಗ್ಗೆ ನಾವಿಂದು ನಿಮಗೆ ತಿಳಿಸಿ ಕೊಡಲಿದ್ದೇವೆ. ಇಲ್ಲಿನ ಪ್ರತಿಯೊಂದು ಉಪಹಾರವೂ ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇವುಗಳಲ್ಲಿ ಪ್ರತಿಯೊಂದು ಆಹಾರವೂ ವಿಭಿನ್ನ ಮತ್ತು ಬಹು ರುಚಿಯಾಗಿವೆ.

ಮುಂದೆ ಓದಿ ...
 • Share this:

ಜಗತ್ತಿನಾದ್ಯಂತ ಭಾರತವು (India) ಉತ್ತಮ ಉಪಹಾರಗಳಿಗೆ ಪ್ರಸಿದ್ದವಾಗಿದೆ. ಇಲ್ಲಿನ ಉಪಹಾರಗಳು (Breakfast) ದೇಹಕ್ಕೆ ಮಾತ್ರ ಚೈತನ್ಯ ನೀಡಲಾರದು, ಮನಸ್ಸಿಗೂ ಮುದ ನೀಡುತ್ತವೆ. ದೇಸಿ ಉಪಹಾರಕ್ಕೆ ಇರುವ ಶಕ್ತಿಯೇ ಅಂತಹದು. ಭಾರತದಲ್ಲಿ 'ರಾಜನಂತೆ ಉಪಹಾರ' ಮಾಡು ಎಂಬ ಗಾದೆ ಮಾತು ಆಗಾಗ ಕೇಳುತ್ತಲೆ ಇರುತ್ತೇವೆ. ಬೆಳಿಗ್ಗೆ ಉತ್ತಮ ಆಹಾರವನ್ನು ಸೇವಿಸಬೇಕು ಎಂಬ ಸಂದೇಶವನ್ನು ಈ ಗಾದೆ ಮಾತು ತಿಳಿಸುತ್ತದೆ. ಮುಂಜಾನೆ ಹೊಟ್ಟೆ ತುಂಬಾ ತಿಂದು ಒಂದು ಕಪ್‌ ಚಹಾ (Tea) ಕುಡಿದರೆ ಅಲ್ಲಿಗೆ ಬೆಳಿಗ್ಗೆಯೆ ಉಪಹಾರ ಸಂಪೂರ್ಣವಾದಂತೆ. ಭಾರತೀಯ ಉಪಹಾರಗಳು ನಿಮ್ಮ ಬೆಳಿಗ್ಗೆಯನ್ನು ಆರೋಗ್ಯಕರವಾಗಿ (Healthy) ಮತ್ತು ಸರಿಯಾಗಿ ಪ್ರಾರಂಭಿಸುವುದಕ್ಕೆ ದಾರಿ ಮಾಡಿಕೊಡುತ್ತವೆ.


ಆದ್ದರಿಂದ ದೇಶದ ವಿವಿಧ ಪ್ರದೇಶಗಳಲ್ಲಿ ಪ್ರಸಿದ್ಧವಾಗಿರುವ 54 ಇಂತಹ ರುಚಿಕರವಾದ ದೇಸಿ ಉಪಹಾರಗಳಲ್ಲಿ ಕೆಲವು ಉಪಹಾರಗಳ ಬಗ್ಗೆ ನಾವಿಂದು ನಿಮಗೆ ತಿಳಿಸಿ ಕೊಡಲಿದ್ದೇವೆ. ಇಲ್ಲಿನ ಪ್ರತಿಯೊಂದು ಉಪಹಾರವು ತನ್ನದೇ ಆದ ವಿಶೇಷತೆಯನ್ನು ಹೊಂದಿದೆ. ಇವುಳಲ್ಲಿ ಪ್ರತಿಯೊಂದು ಆಹಾರವು ವಿಭಿನ್ನ ಮತ್ತು ಬಹು ರುಚಿಯಾಗಿದ್ದರೂ ಸಹ, ಇಲ್ಲಿ ನಾವು ಭಾರತದ ಐದು ಉಪಹಾರಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದೇವೆ.


ಭಾರತದ ಪ್ರಮುಖ ಐದು ದೇಸಿ ಉಪಹಾರಗಳು
1) ಗಿರ್ದಾ ಮತ್ತು ಕಹ್ವಾ
ಹಸಿರು ಚಹಾ ಎಲೆಗಳು, ಕೇಸರಿ, ದಾಲ್ಚಿನ್ನಿ, ಏಲಕ್ಕಿ ಮತ್ತು ಲವಂಗಗಳಿಂದ ಮಾಡಿದ ಪಾನೀಯ ಕಹ್ವಾದೊಂದಿಗೆ, ಸಾಂಪ್ರದಾಯಿಕವಾಗಿ ಹುದುಗಿಸಿ ತಯಾರಿಸಿದ ಕಾಶ್ಮೀರಿ ಬ್ರೆಡ್ ಗಿರ್ದಾ, ಉಪಹಾರವು ಕಾಶ್ಮೀರ ಕಣಿವೆಯಲ್ಲಿ ಅತ್ಯಂತ ಪ್ರಸಿದ್ಧ ಉಪಹಾರವಾಗಿದೆ. ಇದನ್ನು ತಯಾರಿಸಲು ಸುಲಭವಾಗಿದ್ದರೂ, ಇದಕ್ಕೆ ಬೇಕಾಗುವ ಬ್ರೆಡ್ ಅನ್ನು ಕನಿಷ್ಠ 12 ಗಂಟೆಗಳ ಕಾಲ ಹುದುಗಿಸುವ ಅಗತ್ಯವಿದೆ.


ಗಿರ್ದಾ ಕ್ಕೆ ಬೇಕಾಗುವ ಪದಾರ್ಥಗಳು,
(6 ಜನರಿಗೆ)


 • 1 ಕಪ್ ಮೈದಾ ಹಿಟ್ಟು

 • 1 ಕಪ್ ಗೋಧಿ ಹಿಟ್ಟು/ಅಟ್ಟಾ

 • 2 ಚಮಚ ತುಪ್ಪ ರುಚಿಗೆ ಉಪ್ಪು

 • 1/2 ಟೀಸ್ಪೂನ್ ಬೇಕಿಂಗ್ ಪೌಡರ್

 • 1 ಟೀಸ್ಪೂನ್ ಗಸಗಸೆ ಬೀಜಗಳು


ಗಿರ್ದಾ ತಯಾರಿಸುವ ವಿಧಾನ:

 • ಮೈದಾವನ್ನು ಒಂದು ಬಟ್ಟಲಿನಲ್ಲಿ ತೆಗೆದುಕೊಂಡು, ಮೃದುವಾದ ಹಿಟ್ಟಿನ ಹದಕ್ಕೆ ಬೆರೆಸಿಕೊಳ್ಳಿ. ಕವರ್ ಮಾಡಿ ಮತ್ತು ಅದನ್ನು ಕನಿಷ್ಠ 12 ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ಹುದುಗಿಸಲು ಬಿಡಿ.

 • ನೀವು ಬ್ರೆಡ್ ಮಾಡಲು ಸಿದ್ಧರಾದಾಗ, ಗೋಧಿ ಹಿಟ್ಟು, ಸಕ್ಕರೆ, ಉಪ್ಪು ಮತ್ತು ಬೇಕಿಂಗ್ ಪೌಡರ್ ಸೇರಿಸಿ.

 • ಅಗತ್ಯವಿರುವಷ್ಟು ನೀರು ಸೇರಿಸಿ ಮೃದುವಾದ ಹಿಟ್ಟನ್ನು ತಯಾರಿಸಿಕೊಳ್ಳಿ.

 • ಆ ಹಿಟ್ಟನ್ನು ರೋಲ್ ಔಟ್ ಮಾಡಿ. ಗಸಗಸೆ ಬೀಜಗಳನ್ನು ಮೇಲ್ಭಾಗದಲ್ಲಿ ಒತ್ತಿ ಮತ್ತು ಬಿಸಿ ಬಾಣಲೆಯಲ್ಲಿ ಬೇಯಿಸಿ.

 • ನೀವು ಇನ್ನೊಂದು ಬದಿಗೆ ತಿರುಗಿಸಿ ಮತ್ತು ಕಡಿಮೆ ಉರಿಯಲ್ಲಿ ಬೇಯಿಸಬಹುದು.

 • ಬ್ರೆಡ್‌ ಅನ್ನು ಬಡಿಸುವ ಮೊದಲು ಅದಕ್ಕೆ ತುಪ್ಪದಿಂದ ಬ್ರಷ್ ಮಾಡಿ.


ಇದನ್ನೂ ಓದಿ:  Lemon Pickles Benefits: ನಿಂಬೆ ಉಪ್ಪಿನಕಾಯಿ ತಿಂದ್ರೆ ನಿಮ್ಮ ಹಾರ್ಟ್​ಗೆ ಸಹಾಯ ಮಾಡುತ್ತೆ


ಕಹ್ವಾ ತಯಾರಿಸುವ ವಿಧಾನ:


 • ಬಾಣಲೆಯಲ್ಲಿ ಮೂರು ಲೋಟ ನೀರನ್ನು ಬಿಸಿ ಮಾಡಿ.

 • 10 ರಿಂದ 12 ಕೇಸರಿ ಎಳೆಗಳು, ಅರ್ಧ ಇಂಚಿನ ದಾಲ್ಚಿನ್ನಿ ಕಡ್ಡಿ, ಒಂದು ಲವಂಗ, ಅರ್ಧ ಚಮಚ ಒಣಗಿದ ಗುಲಾಬಿ ದಳಗಳು ಮತ್ತು ಒಂದು ಪುಡಿಮಾಡಿದ ಏಲಕ್ಕಿಯನ್ನು ನೀರಿನಲ್ಲಿ ಸೇರಿಸಿ ಮತ್ತು 3-4 ನಿಮಿಷಗಳ ಕಾಲ ಕುದಿಸಲು ಬಿಡಿ.

 • ಗ್ಯಾಸ್‌ ಅನ್ನು ಆಫ್‌ ಮಾಡಿ ಮತ್ತು ನೀರಿಗೆ ಹಸಿರು ಚಹಾವನ್ನು ಸೇರಿಸಿ. ಚಹಾವನ್ನು ಒಂದು ನಿಮಿಷ ಕುದಿಯಲು ಬಿಡಿ.

 • ಚಹಾವನ್ನು 2 ಕಪ್‌ಗಳಾಗುವಷ್ಟು ಕುದಿಸಿ.

 • ಎರಡು ಚಮಚ ಬಾದಾಮಿ ಚೂರುಗಳು ಮತ್ತು ಕೇಸರಿಯ ಕೆಲವು ಎಳೆಗಳನ್ನು ಸೇರಿಸಿ. ನಿಮ್ಮ ಕಹ್ವಾ ಸ್ವಲ್ಪ ಸಿಹಿಯಾಗಿರಬೇಕೆಂದರ ಒಂದು ಚಮಚ ಜೇನುತುಪ್ಪವನ್ನು ಸೇರಿಸಿ.

 • ಬಿಸಿಯಾಗಿ ಬಡಿಸಿ.


2) ಪುಟ್ಟು ಕಡಲೆ/ ಬ್ಲಾಕ್‌ ಚನಾ ಪಲ್ಯ
ಈ ದಕ್ಷಿಣ ಭಾರತದ ಉಪಹಾರದ ಪ್ರಮುಖ ಅಂಶವೆಂದರೆ ಕಪ್ಪು ಕಡಲೆಕಾಳು. ಇದು ಆಹಾರಕ್ಕೆ ಪ್ರೋಟೀನ್ ಮತ್ತು ವಿಟಮಿನ್ ಅಂಶಗಳನ್ನು ಸಮೃದ್ಧವಾಗಿ ನೀಡುತ್ತದೆ. ಹೀಗಾಗಿ ಆರೋಗ್ಯವನ್ನು ಹೆಚ್ಚಿಸುವುದರ ಜೊತೆಗೆ ರುಚಿಕರವಾದ ರುಚಿಯನ್ನು ನೀಡುತ್ತದೆ.


ಪುಟ್ಟು ಕಡಲೆ ಪಲ್ಯಕೆ ಬೇಕಾಗುವ ಸಾಮಾಗ್ರಿಗಳು
(4 ಜನರಿಗೆ)


 • ಕಪ್ಪು ಚನಾ: 2 ಕಪ್ ಬೇಯಿಸಿದ ಕಾಳುಗಳು (ಒಣಗಿದ ಚನಾವನ್ನು ಕನಿಷ್ಠ 8 ಗಂಟೆಗಳ ಕಾಲ ಸಾಕಷ್ಟು ನೀರಿನಲ್ಲಿ ನೆನೆಸಿಡಿ).

 • ಅರಿಶಿನ ಪುಡಿ 1/4 ಟೀಸ್ಪೂನ್

 • ರುಚಿಗೆ ತಕ್ಕಷ್ಟು ಉಪ್ಪು


ಹುರಿಯಲು ಬೇಕಾಗುವ ಸಾಮಗ್ರಿಗಳು

 • ತಾಜಾ ತುರಿದ ತೆಂಗಿನಕಾಯಿ: 3/4 ಕಪ್

 • ಸಣ್ಣ ಕೆಂಪು ಈರುಳ್ಳಿ: 2 (ಕತ್ತರಿಸಿದ)

 • ಬೆಳ್ಳುಳ್ಳಿ: 2

 • ಕೊತ್ತಂಬರಿ ಬೀಜಗಳು: 1 ಟೀಸ್ಪೂನ್‌ ಅಥವಾ ಕೊತ್ತಂಬರಿ ಪುಡಿಗೆ ಬದಲಾಗಿ

 • 1 tsp ಗರಂ ಮಸಾಲಾ

 • ಫೆನ್ನೆಲ್ ಬೀಜಗಳು 1 ಟೀಸ್ಪೂನ್

 • ಏಲಕ್ಕಿ1 ಪಾಡ್

 • ದಾಲ್ಚಿನ್ನಿ ಕಡ್ಡಿ 1/2 ಇಂಚು

 • ಸ್ಟಾರ್ ಸೋಂಪು 1

 • ಕರಿಮೆಣಸು 10

 • ಕರಿಬೇವಿನ ಎಲೆಗಳು ಸ್ವಲ್ಪ

 • ತೆಂಗಿನ ಎಣ್ಣೆ: 1 tbsp


ಗ್ರೇವಿಗಾಗಿ:

 • ಈರುಳ್ಳಿ: 1 ಕಪ್ (ಕತ್ತರಿಸಿದ)

 • ಕೆಂಪು ಸಣ್ಣ ಈರುಳ್ಳಿ: 2-4 (ಕತ್ತರಿಸಿದ)

 • ಹಸಿರು ಮೆಣಸಿನಕಾಯಿ: 3 (ಉದ್ದಕ್ಕೆ ಸೀಳಿ)

 • ಕೆಂಪು ಮೆಣಸಿನ ಪುಡಿ: 1 ಟೀಸ್ಪೂನ್

 • ಅರಿಶಿನ ಪುಡಿ: 1/4 ಟೀಸ್ಪೂನ್

 • ಸಾಸಿವೆ : 1/2 ಟೀಸ್ಪೂನ್

 • ಒಣಗಿದ ಕೆಂಪು ಮೆಣಸಿನಕಾಯಿ: 2

 • ತೆಂಗಿನ ತುರಿ ಸ್ವಲ್ಪ

 • ಕರಿಬೇವಿನ ಎಲೆಗಳು ಸ್ವಲ್ಪ

 • ತೆಂಗಿನ ಎಣ್ಣೆ: 1/2 ಟೀಸ್ಪೂನ್

 • ರುಚಿಗೆ ತಕ್ಕಷ್ಟು ಉಪ್ಪು


ಇದನ್ನೂ ಓದಿ:  Morning Breakfast: ಬೆಳಗಿನ ತಿಂಡಿಗೆ ಆರೋಗ್ಯಕರ ಕ್ಯಾಬೇಜ್ ಖೀರ್ ಮಾಡಿ ಸೇವಿಸಿ!


ಪುಟ್ಟು ಕಡಲೆ ಪಲ್ಯ ಮಾಡುವ ವಿಧಾನ:


 • ಕಪ್ಪು ಚನ್ನವನ್ನು ರಾತ್ರಿಯಿಡೀ ನೆನೆಸಿ ಮತ್ತು 5-6 ಸೀಟಿಗಳು ಬರುವ ಹಾಗೆ ಕುಕ್ಕರ್‌ನಲ್ಲಿ ಅದಕ್ಕೆ ಸಾಕಷ್ಟು ನೀರು, ಸ್ವಲ್ಪ ಅರಿಶಿನ ಪುಡಿ ಮತ್ತು ಉಪ್ಪನ್ನು ಸೇರಿಸಿ ಬೇಯಿಸಿ. ನಂತರ ಕುಕ್ಕರ್‌ ತೆರೆಯಿರಿ. ಗ್ರೇವಿಗಾಗಿ ಕಪ್ಪು ಕಡಲೆಯನ್ನು ಸ್ವಲ್ಪ ತೆಗೆದಿಡಿ.

 • ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಮಸಾಲೆಯನ್ನು ಸೇರಿಸಿ.

 • ಕೆಲವು ಸೆಕೆಂಡುಗಳ ಕಾಲ ಹುರಿಯಿರಿ.

 • ಕತ್ತರಿಸಿದ ಈರುಳ್ಳಿ, ಬೆಳ್ಳುಳ್ಳಿ ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ. ಒಂದು ನಿಮಿಷ ಹುರಿಯಿರಿ. ಈಗ ತುರಿದ ತೆಂಗಿನಕಾಯಿ ಸೇರಿಸಿ.

 • ತೆಂಗಿನಕಾಯಿ ತುರಿ ಮಧ್ಯಮ ಕಂದು ಬಣ್ಣಕ್ಕೆ ಬರುವವರೆಗೆ ಕಡಿಮೆ ಉರಿಯಲ್ಲಿ ಹುರಿಯಿರಿ. ನಂತರ ಅದನ್ನು ತಣ್ಣಗಾಗಲು ಬಿಡಿ.

 • ಹುರಿದ ತೆಂಗಿನಕಾಯಿ ಮಸಾಲವನ್ನು ಬ್ಲೆಂಡರ್‌ಗೆ ವರ್ಗಾಯಿಸಿ ಮತ್ತು ಪದಾರ್ಥಗಳನ್ನು ಸ್ವಲ್ಪ ನೀರು ಸೇರಿಸಿ ನಯವಾದ ಪೇಸ್ಟ್‌ ಆಗುವವರೆಗೂ ರುಬ್ಬಿಕೊಳ್ಳಿ.

 • ದೊಡ್ಡ ಬಾಣಲೆಯಲ್ಲಿ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಸಾಸಿವೆ ಕಾಳು, ಒಣ ಕೆಂಪು ಮೆಣಸಿನಕಾಯಿಗಳನ್ನು ಸೇರಿಸಿ.

 • ಈಗ ಕತ್ತರಿಸಿದ ತೆಂಗಿನ ಕಾಯಿಯ ತುಂಡಗಳನ್ನು ಸೇರಿಸಿ ಮತ್ತು ಕಂದು ಬಣ್ಣ ಬರುವವರೆಗೆ ಹುರಿಯಿರಿ. ಕತ್ತರಿಸಿದ ಈರುಳ್ಳಿ, ಕತ್ತರಿಸಿದ ಕೆಂಪು ಸಣ್ಣ ಈರುಳ್ಳಿ, ಹಸಿರು ಮೆಣಸಿನಕಾಯಿಗಳು, ಉಪ್ಪು ಮತ್ತು ಕರಿಬೇವಿನ ಎಲೆಗಳನ್ನು ಸೇರಿಸಿ.

 • ತಿಳಿ ಕಂದು ಬಣ್ಣ ಬರುವವರೆಗೆ ಹುರಿಯಿರಿ.

 • ಅರಿಶಿನ ಪುಡಿ, ಮತ್ತು ಕೆಂಪು ಮೆಣಸಿನ ಪುಡಿ ಸೇರಿಸಿ, ಕೆಲವು ಸೆಕೆಂಡುಗಳ ಕಾಲ ಹುರಿಯಿರಿ ಮತ್ತು ಬೇಯಿಸಿದ ಕಡಲೆಯಿಂದ ತೆಗೆದಿರಿಸಿದ ಕಡಲೆಗಳನ್ನು ಸೇರಿಸಿ.

 • ಈಗ ರುಬ್ಬಿದ ತೆಂಗಿನಕಾಯಿ ಪೇಸ್ಟ್ ಮತ್ತು ಬೇಯಿಸಿದ ಕಡಲೆ ಸೇರಿಸಿ.

 • ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಉಪ್ಪನ್ನು ಸೇರಿಸಿ.

 • ಗ್ರೇವಿಯನ್ನು ಚೆನ್ನಾಗಿ ಬೇಯಿಸಿ.

 • ಬಿಸಿಯಾಗಿ ಬಡಿಸಿ.


3) ಖಮನ್ ಢೋಕ್ಲಾ
ಗುಜರಾತಿ ಪಾಕಪದ್ಧತಿಯಲ್ಲಿ ಅಚ್ಚುಮೆಚ್ಚಿನ ಢೋಕ್ಲಾ 11 ನೇ ಶತಮಾನದಷ್ಟು ಹಿಂದಿನದು ಎಂದು ಹೇಳಲಾಗುತ್ತದೆ. ಬೇಳೆ ಹಿಟ್ಟಿನಿಂದ ಈ ಉಪಹಾರವನ್ನು ತಯಾರಿಸಲಾಗುತ್ತದೆ.


ಖಮನ್ ಧೋಕ್ಲಾಗೆ ಬೇಕಾಗುವ ಸಾಮಾಗ್ರಿಗಳು
(4 ಜನರಿಗೆ)


 • ಮೊಸರು 1 ಕಪ್

 • ರುಚಿಗೆ ಉಪ್ಪು

 • ಹಸಿರು ಮೆಣಸಿನಕಾಯಿ 2-3

 • ಶುಂಠಿ 1 1/2 ಇಂಚಿನ ತುಂಡು

 • ಅರಿಶಿನ ಪುಡಿ 1/2 ಟೀಸ್ಪೂನ್

 • ಎಣ್ಣೆ 2 ಟೇಬಲ್ಸ್ಪೂನ್

 • ಸೋಡಾ ಬೈಕಾರ್ಬನೇಟ್ 1 ಟೀಸ್ಪೂನ್

 • ನಿಂಬೆ ರಸ 1 ಟೀಸ್ಪೂನ್

 • ಸಾಸಿವೆ ಬೀಜಗಳು 1 ಟೀಸ್ಪೂನ್

 • ಕತ್ತರಿಸಿದ ತಾಜಾ ಕೊತ್ತಂಬರಿ ಸೊಪ್ಪು 2 ಟೇಬಲ್ಸ್ಪೂನ್

 • ತೆಂಗಿನ ತುರಿ 1/4 ಕಪ್‌


ಇದನ್ನೂ ಓದಿ:  Old People‘s Health: ಹಿರಿಯರು ಇರಲಮ್ಮ ಮನೆಯಲ್ಲಿ, ಈ ವಸ್ತುಗಳಿರಲಿ ಅವರು ತಿನ್ನುವ ಆಹಾರದಲ್ಲಿ!


ಖಮನ್ ಢೋಕ್ಲಾ ತಯಾರಿಸುವ ವಿಧಾನ


 • ಒಂದು ಬಟ್ಟಲಿನಲ್ಲಿ ಬೇಳೆ ಹಿಟ್ಟನ್ನು (ಕಡಲೆ ಹಿಟ್ಟು/ಬೇಸನ್) ತೆಗೆದುಕೊಳ್ಳಿ. ಅದಕ್ಕೆ ಮೊಸರು ಮತ್ತು ಬೆಚ್ಚಗಿನ ನೀರನ್ನು ಸೇರಿಸಿ ಮತ್ತು ಅದನ್ನು ಗಂಟಿಲ್ಲದೇ ಚೆನ್ನಾಗಿ ಕಲಸಿ. ಮಿಶ್ರಣವು ಸ್ವಲ್ಪ ಗಟ್ಟಿಯಾಗಿರುವಂತೆ ನೋಡಿಕೊಳ್ಳಿ. ಅದಕ್ಕೆ ಉಪ್ಪನ್ನು ಸೇರಿಸಿ. ಮೂರರಿಂದ ನಾಲ್ಕು ಗಂಟೆಗಳ ಕಾಲ ಹುದುಗಿಸಲು ಮುಚ್ಚಿಡಿ.

 • ಹಸಿರು ಮೆಣಸಿನಕಾಯಿ ಮತ್ತು ಶುಂಠಿಯನ್ನು ಪೇಸ್ಟ್ ಆಗಿ ರುಬ್ಬಿಕೊಳ್ಳಿ. ಬೇಳೆ ಹಿಟ್ಟಿನ ಮಿಶ್ರಣವು ಹುದುಗಿದಾಗ, ಅರಿಶಿನ ಪುಡಿ ಮತ್ತು ಹಸಿರು ಮೆಣಸಿನಕಾಯಿ-ಶುಂಠಿ ಪೇಸ್ಟ್ ಅನ್ನು ಸೇರಿಸಿ.

 • ಮಸಾಲೆಯನ್ನು ಸೇರಿಸಿ ಮತ್ತು ಅದನ್ನು ಚೆನ್ನಾಗಿ ಮಿಶ್ರಣ ಮಾಡಿ. ಸ್ಟೀಮರ್ ಅನ್ನು ಬಿಸಿ ಮಾಡಿ. ಢೋಕ್ಲಾ ಅಚ್ಚು ಅಥವಾ ಕೇಕ್ ಟಿನ್ ಅನ್ನು ಗ್ರೀಸ್ ಮಾಡಿ.

 • ಸಣ್ಣ ಬಟ್ಟಲಿನಲ್ಲಿ ಸೋಡಾ ಬೈಕಾರ್ಬನೇಟ್, ಒಂದು ಟೀಚಮಚ ಎಣ್ಣೆ ಮತ್ತು ನಿಂಬೆ ರಸವನ್ನು ತೆಗೆದುಕೊಳ್ಳಿ. ಮಿಶ್ರಣ ಮಾಡಿ ಮತ್ತು ಬೇಳೆ ಹಿಟ್ಟಿನ ಮಿಶ್ರಣಕ್ಕೆ ಸೇರಿಸಿ.

 • ಗ್ರೀಸ್ ಮಾಡಿದ ಥಾಲಿಗೆ ಹಿಟ್ಟನ್ನು ಸುರಿಯಿರಿ ಮತ್ತು ಅದನ್ನು ಸ್ಟೀಮರ್ನಲ್ಲಿ ಇರಿಸಿ. ಹತ್ತರಿಂದ ಹನ್ನೆರಡು ನಿಮಿಷಗಳ ಕಾಲ ಮುಚ್ಚಿರಿ.

 • ಸ್ವಲ್ಪ ತಣ್ಣಗಾದಾಗ ಚೌಕಾಕಾರವಾಗಿ ಕತ್ತರಿಸಿ ಸರ್ವಿಂಗ್ ಬೌಲ್/ಪ್ಲೇಟ್ ನಲ್ಲಿ ಇಡಿ.

 • ಉಳಿದ ಎಣ್ಣೆಯನ್ನು ಸಣ್ಣ ಬಾಣಲೆಯಲ್ಲಿ ಬಿಸಿ ಮಾಡಿ ಅದಕ್ಕೆ ಸಾಸಿವೆ ಕಾಳುಗಳನ್ನು ಸೇರಿಸಿ. ಅವು ಸಿಡಿಯಲು ಆರಂಭವಾದಾಗ ಅದನ್ನು ತೆಗೆದುಕೊಂಡು ಢೋಕ್ಲಾಗಳ ಮೇಲೆ ಸುರಿಯಿರಿ.

 • ಕೊತ್ತಂಬರಿ ಸೊಪ್ಪು ಮತ್ತು ತೆಂಗಿನಕಾಯಿ ತುರಿಯಿಂದ ಅಲಂಕರಿಸಿ.


4) ಚಕುಲಿ
ಇದು ವಿಶೇಷವಾಗಿ ಒಡಿಶಾದಲ್ಲಿ ಜನಪ್ರಿಯ ಉಪಹಾರವಾಗಿದೆ.


ಚಕುಲಿಗೆ ಬೇಕಾಗುವ ಪದಾರ್ಥಗಳು
1 ಕಪ್ ಉದ್ದಿನ ಬೇಳೆ 2 ಕಪ್ ಅಕ್ಕಿ, ರುಚಿಗೆ ಉಪ್ಪು, ಅಗತ್ಯವಿರುವಂತೆ ನೀರು, ಅಗತ್ಯವಿರುವಂತೆ ಅಡುಗೆ ಎಣ್ಣೆ


ಚಕುಲಿ ಮಾಡುವ ವಿಧಾನ:


ಹಿಟ್ಟಿಗೆ:


 • ಉದ್ದಿನಬೇಳೆ ಮತ್ತು ಅಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ತೊಳೆದು ನೆನೆಸಿಡಿ. ನಂತರ, ಹೆಚ್ಚುವರಿ ನೀರನ್ನು ತೆಗೆದು ಮತ್ತು ನುಣ್ಣಗೆ ಪೇಸ್ಟ್ ಮಾಡಿಕೊಳ್ಳಿ. ನಂತರ ಅಕ್ಕಿ ಮತ್ತು ಉದ್ದಿನ ಬೇಳೆಯ ಪೇಸ್ಟ್‌ಗೆ ಅಗತ್ಯವಿರುವಷ್ಟು ನೀರಿನ್ನು ಸೇರಿಸಿ. ನಯವಾದ ಬ್ಯಾಟರ್ ಮಾಡಲು ಅಗತ್ಯವಿರುವಷ್ಟು ನೀರನ್ನು ನಿಧಾನವಾಗಿ ಸೇರಿಸಿ.

 • ಹುದುಗುವಿಕೆಗಾಗಿ ಈ ಮಿಶ್ರಣವನ್ನು 4 ರಿಂದ 5 ಗಂಟೆಗಳ ಕಾಲ ನೆನೆಸಿಡಿ.

 • ಹಿಟ್ಟನ್ನು ಸ್ವಲ್ಪ ತೆಳ್ಳಗೆ ಮಾಡಲು ಪೇಸ್ಟ್‌ಗೆ ಉಪ್ಪು ಮತ್ತು ನೀರನ್ನು ಸೇರಿಸಿ. ಹಿಟ್ಟು ಹೆಚ್ಚು ನೀರಿಲ್ಲದಂತೆ ನೋಡಿಕೊಳ್ಳಿ.


ಇದನ್ನೂ ಓದಿ:  Morning Breakfast: ಬೆಳಗಿನ ತಿಂಡಿಗೆ ಗುಜರಾತ್ ಸ್ಟ್ರೀಟ್ ಸ್ಟೈಲ್ ನ ಗುಗ್ರಾ ಸ್ಯಾಂಡ್ ವಿಚ್ ರೆಸಿಪಿ ಮಾಡುವುದು ಹೇಗೆ?


ಪ್ಯಾನ್‌ಕೇಕ್‌ಗಾಗಿ:


 • ನಾನ್ ಸ್ಟಿಕ್ ಪ್ಯಾನ್ ಅನ್ನು ಮಧ್ಯಮ ಉರಿಯಲ್ಲಿ ಬಿಸಿ ಮಾಡಿ.

 • ಪ್ಯಾನ್ ಬಿಸಿಯಾದಾಗ, ಅಡುಗೆ ಎಣ್ಣೆಯಿಂದ ಚೆನ್ನಾಗಿ ಗ್ರೀಸ್ ಮಾಡಿ.

 • ಒಂದು ಲೋಟ ಹಿಟ್ಟನ್ನು ತೆಗೆದುಕೊಂಡು ಅದನ್ನು ವೃತ್ತಾಕಾರದಲ್ಲಿ ಬಾಣಲೆಯ ಮೇಲೆ ಹರಡಿ.

 • ಸ್ವಲ್ಪ ಸಮಯದ ನಂತರ, ಕೆಳಗಿನ ಭಾಗವು ಕಂದು ಬಣ್ಣಕ್ಕೆ ತಿರುಗಿದ ನಂತರ, ಅದನ್ನು ಇನ್ನೊಂದು ಬದಿಗೆ ತಿರುಗಿಸಿ.

 • ಪ್ಯಾನ್‌ಕೇಕ್ ಅನ್ನು ಎರಡೂ ಬದಿಗಳಲ್ಲಿ ಚೆನ್ನಾಗಿ ಬೇಯಿಸಿದಾಗ, ಸ್ಟವ್ ಆಫ್ ಮಾಡಿ.

 • ಬಿಸಿಯಾಗಿ ಬಡಿಸಿ.


5) ಎಗ್ ಷಾಪ್‌


ಮೊಟ್ಟೆ, ಆಲೂಗಡ್ಡೆ ಮತ್ತು ಮಸಾಲೆಗಳೊಂದಿಗೆ ಮಾಡಿದ ಕಟ್ಲೆಟ್, ಈ ಉಪಹಾರವು ನಾಗಾಲ್ಯಾಂಡ್‌ನ ಪರಿಪೂರ್ಣ ಉಪಹಾರವಾಗಿದೆ. ಇದನ್ನು ಬೆಳಗಿನ ಉಪಾಹಾರವಾಗಿ ಸೇವಿಸುವುದರ ಜೊತೆಗೆ ಸಂಜೆಯ ವೇಳೆಯಲ್ಲಿ ಕರಿದ ತಿಂಡಿಯಾಗಿಯೂ ಸೇವಿಸಬಹುದು.


ಮೊಟ್ಟೆಯ ಷಾಪ್‌ಗೆ ಬೇಕಾದ ಪದಾರ್ಥಗಳು


 • 4 ಮೊಟ್ಟೆಗಳು,

 • ಬೇಯಿಸಿ ಮತ್ತು ಹಿಸುಕಿದ 3 ಆಲೂಗಡ್ಡೆ

 • 1 ಈರುಳ್ಳಿ, ಸಣ್ಣದಾಗಿ ಕತ್ತರಿಸಿದ

 • 2 ಹಸಿರು ಮೆಣಸಿನಕಾಯಿಗಳು ಸಣ್ಣದಾಗಿ ಕತ್ತರಿಸಿದ

 • 1 ಟೀಸ್ಪೂನ್ ಜೀರಿಗೆ ಪುಡಿ

 • 1/2 ಟೀಚಮಚ ಅರಿಶಿನ ಪುಡಿ

 • ಉಪ್ಪು, ರುಚಿಗೆ

 • 2 ಒಡೆದ ಮೊಟ್ಟೆಗಳು

 • 2 ಕಪ್ ಗೋಧಿ ಬ್ರೆಡ್ ತುಂಡುಗಳು

 • ಎಣ್ಣೆ ಸ್ವಲ್ಪ ಹುರಿಯಲು


ಇದನ್ನೂ ಓದಿ:  Cooking Tips: ಮನೆಯಲ್ಲಿಯೇ ಕೇಕ್​ ಸೂಪರ್ ಆಗಿ ಮಾಡ್ಬೇಕು ಅಂದ್ರೆ ಈ ವಿಚಾರಗಳನ್ನು ಮರಿಬೇಡಿ


ಮೊಟ್ಟೆಯ ಷಾಪ್‌ ಮಾಡುವ ವಿಧಾನ:


 • ದೊಡ್ಡ ಬಟ್ಟಲಿನಲ್ಲಿ, ಆಲೂಗಡ್ಡೆ ಮತ್ತು ಬೇಯಿಸಿದ ಮೊಟ್ಟೆಗಳನ್ನು ಸೇರಿಸಿ ಮತ್ತು ಒಟ್ಟಿಗೆ ಚೆನ್ನಾಗಿ ಮ್ಯಾಶ್ ಮಾಡಿ.

 • ಬಾಣಲೆಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಮತ್ತು ಈರುಳ್ಳಿ ಮತ್ತು ಹಸಿರು ಮೆಣಸಿನಕಾಯಿಯನ್ನು ಹಾಕಿ.

 • ಕಂದು ಬಣ್ಣ ಬರುವವರೆಗೆ ಹುರಿಯಿರಿ.

 • ಉಪ್ಪು, ಅರಿಶಿನ ಮತ್ತು ಜೀರಿಗೆ ಪುಡಿ ಹಾಕಿ 2 ನಿಮಿಷ ಫ್ರೈ ಮಾಡಿ. ಅದಕ್ಕೆ ನಂತರ ಮ್ಯಾಶ್‌ ಮಾಡಿದ ಆಲೂಗಡ್ಡೆ ಮತ್ತು ಮೊಟ್ಟೆ ಎಲ್ಲವನ್ನು ಸೇರಿಸಿ.

 • ಅದಕ್ಕೆ ಹುರಿದ ಈರುಳ್ಳಿ ಮಿಶ್ರಣವನ್ನು ಸೇರಿಸಿ ಮತ್ತು ಸುವಾಸನೆಯು ಚೆನ್ನಾಗಿ ಬರಲು ಮಿಶ್ರಣ ಮಾಡಿ. ಇದರ ಜೊತೆಗೆ ಹೆಚ್ಚು ಉರಿಯಲ್ಲಿ ಪ್ಯಾನ್‌ ಅನ್ನು ಇಟ್ಟು ಅದಕ್ಕೆ ಎಣ್ಣೆ ಹಾಕಿ ಬಿಸಿ ಮಾಡಿ. ಮೊಟ್ಟೆ ಮತ್ತು ಆಲೂಗಡ್ಡೆ ಮಿಶ್ರಣವನ್ನು ಕಟ್ಲೆಟ್‌ಗಳ ರೀತಿ ಮಾಡಿ.

 • ನಂತರ ಅವುಗಳನ್ನು ಒಡೆದ ಮೊಟ್ಟೆಯಲ್ಲಿ ಅದ್ದಿ ಮತ್ತು ಬ್ರೆಡ್ ತುಂಡುಗಳ ಮೇಲೆ ಸುತ್ತಿ.

 • ಈ ಕಟ್ಲೆಟ್‌ಗಳನ್ನು ಗೋಲ್ಡನ್ ಬಣ್ಣ ಬರುವವರೆಗೆ ಡೀಪ್ ಫ್ರೈ ಮಾಡಿ.

Published by:Ashwini Prabhu
First published: