• Home
 • »
 • News
 • »
 • lifestyle
 • »
 • Tooth Pain: ನಿಮ್ಮ ಹಲ್ಲಿನಲ್ಲಿ ನೋವು ಇದೆಯೇ? ಹಾಗಿದ್ರೆ ಮನೆಯಲ್ಲಿರುವ ವಸ್ತುವಿನಲ್ಲೇ ಸಿಗುತ್ತೆ ಪರಿಹಾರ!

Tooth Pain: ನಿಮ್ಮ ಹಲ್ಲಿನಲ್ಲಿ ನೋವು ಇದೆಯೇ? ಹಾಗಿದ್ರೆ ಮನೆಯಲ್ಲಿರುವ ವಸ್ತುವಿನಲ್ಲೇ ಸಿಗುತ್ತೆ ಪರಿಹಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹಲ್ಲು ನೋವಿನ ಈ ಸಮಸ್ಯೆಯನ್ನು ಸಾಮಾನ್ಯವಾಗಿ ಮೋಲಾರ್ ಅಥವಾ ರೂಟ್ ನೋವು ಎಂದೂ ಕರೆಯುತ್ತಾರೆ. ಕೆಲವೊಮ್ಮೆಈ ನೋವು ತುಂಬಾ ತೀವ್ರವಾಗಿರುತ್ತದೆ. ನಿಮ್ಮ ಸಂಪೂರ್ಣ ಬಾಯಿ ಊದಿಕೊಳ್ಳುವ ಸಾಧ್ಯತೆ ಹೆಚ್ಚು. ಹಲ್ಲುನೋವು ಅಥವಾ ರೂಟ್ ನೋವು ಹೆಚ್ಚು ಗಟ್ಟಿ ಪದಾರ್ಥಗಳನ್ನು ಸೇವನೆ ಮಾಡುವವರಲ್ಲಿ ಇದು ಕಂಡು ಬರುತ್ತದೆ.

ಮುಂದೆ ಓದಿ ...
 • Share this:

  ಮಕ್ಕಳಿಂದ (Children’s) ಹಿಡಿದು ವೃದ್ಧರವರೆಗೆ ಜನರು (Aged People) ಹಲ್ಲು ನೋವು (Tooth Pain) ತೊಂದರೆ ಅನುಭವಿಸುತ್ತಾರೆ. ಹಲ್ಲು ನೋವು ಅನೇಕ ಜನರು ಅನುಭವಿಸುವ ಸಾಮಾನ್ಯ ಸಮಸ್ಯೆ (Problem). ಆದ್ರೆ ಈ ಸಮಸ್ಯೆ ಎಷ್ಟು ಚಿಕ್ಕದಾಗಿದೆ ಅಂತಾ ಅನ್ನಿಸುತ್ತೋ ಅಷ್ಟೇ ಗಂಭೀರ ಮತ್ತು ವ್ಯಕ್ತಿಯು ಸಾಕಷ್ಟು ನೋವು ಅನುಭವಿಸುವಂತೆ ಮಾಡುತ್ತದೆ. ಅಂದರೆ ಹಲ್ಲು ನೋವು ವಾಸ್ತವದಲ್ಲಿ ಹೆಚ್ಚು ಗಂಭೀರವಾಗಿದೆ. ಹಲ್ಲುನೋವು ಎಷ್ಟು ಭಯಾನಕವಾಗಿದೆ ಎಂಬುದನ್ನು ನೋವಿನಿಂದ ಬಳಲುತ್ತಿರುವವರನ್ನು ಕೇಳಿ ನೋಡಿ. ಹಲ್ಲು ನೋವು ಉಂಟಾದಾಗ ಮಾತನಾಡಲು, ತಿನ್ನಲು ಮತ್ತು ಕುಡಿಯಲು ತುಂಬಾ ಕಷ್ಟವಾಗುತ್ತದೆ. ಜೊತೆಗೆ ಕೆನ್ನೆಗಳು ಊದಿಕೊಳ್ಳುತ್ತವೆ.


  ಕಾಡುವ ಹಲ್ಲು ನೋವಿನ ಸಮಸ್ಯೆ


  ಹಲ್ಲು ನೋವಿನ ಈ ಸಮಸ್ಯೆಯನ್ನು ಸಾಮಾನ್ಯವಾಗಿ ಮೋಲಾರ್ ಅಥವಾ ರೂಟ್ ನೋವು ಎಂದೂ ಕರೆಯುತ್ತಾರೆ. ಕೆಲವೊಮ್ಮೆ ಈ  ನೋವು ತುಂಬಾ ತೀವ್ರವಾಗಿರುತ್ತದೆ. ನಿಮ್ಮ ಸಂಪೂರ್ಣ ಬಾಯಿ ಊದಿಕೊಳ್ಳುವ ಸಾಧ್ಯತೆ ಹೆಚ್ಚು. ಹಲ್ಲುನೋವು ಅಥವಾ ರೂಟ್ ನೋವು ಹೆಚ್ಚು ಗಟ್ಟಿ ಪದಾರ್ಥಗಳನ್ನು ಸೇವನೆ ಮಾಡುವವರಲ್ಲಿ ಇದು ಕಂಡು ಬರುತ್ತದೆ.


  ಜೊತೆಗೆ ಬ್ಯಾಕ್ಟೀರಿಯಾ ಮತ್ತು ಸೋಂಕು ಕೂಡ ರೂಟ್ ಹಲ್ಲು ನೋವಿಗೆ ಕಾರಣವಾಗಬಹುದು. ಹಲ್ಲಿನ ಒಳಗೆ ತಿರುಳು ಇದೆ. ಇದು ನರ ಅಂಗಾಂಶ ಮತ್ತು ರಕ್ತನಾಳಗಳಿಂದ ತುಂಬಿದೆ. ಈ ತಿರುಳನ್ನು ಹೊಂದಿರುವ ಈ ನರಗಳು ನಿಮ್ಮ ದೇಹದಲ್ಲಿ ಅತ್ಯಂತ ಸೂಕ್ಷ್ಮವಾಗಿವೆ. ಈ ನರಗಳು ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾದಾಗ ತೀವ್ರ ನೋವುಂಟು ಮಾಡುತ್ತವೆ.


  ಇದನ್ನೂ ಓದಿ: ಪ್ಲಮ್ ಹಣ್ಣು ಸೇವನೆಯಿಂದ ಲಾಭವೇನು ಗೊತ್ತಾ? ನಟಿ ಭಾಗ್ಯಶ್ರೀ ತಿಳಿಸಿಕೊಡುತ್ತಾರೆ ಓದಿ


  ದವಡೆ ನೋವಿಗೆ ಚಿಕಿತ್ಸೆ ಏನು?


  ಸೌಮ್ಯವಾದ ಹಲ್ಲು ನೋವು ಚಿಕಿತ್ಸೆಯಿಲ್ಲದೆಯೂ ವಾಸಿಯಾಗುತ್ತದೆ. ಆದರೆ ಇದು ಸೋಂಕಿನಿಂದಾಗಿ ಹೆಚ್ಚು ನೋವು ಉಂಟಾಗುತ್ತಿದ್ದರೆ ನೀವು ದಂತ ವೈದ್ಯರನ್ನು ಭೇಟಿ ಮಾಡಬೇಕು. ಆದಾಗ್ಯೂ ಕೆಲವು ಮನೆಮದ್ದುಗಳು ಹಲ್ಲು ನೋವಿನಿಂದ ಪರಿಹಾರ ನೀಡುತ್ತದೆ.


  ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಗಾರ್ಗಲಿಂಗ್ ಮಾಡಿ


  IRJPMS ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಉಪ್ಪು ನೈಸರ್ಗಿಕ ಸೋಂಕು ನಿವಾರಕ ಪದಾರ್ಥ. ಉಗುರು ಬೆಚ್ಚಗಿನ ನೀರಿನಲ್ಲಿ ಉಪ್ಪನ್ನು ಬೆರೆಸಿ ಬಾಯಿ ಮುಕ್ಕಳಿಸಿದರೆ ಹಲ್ಲು ನೋವಿನಿಂದ ತ್ವರಿತ ಪರಿಹಾರ ಸಿಗುತ್ತದೆ.


  ವೈದ್ಯರು ಸಹ ಮೊದಲು ಇದನ್ನೇ ಪ್ರಥಮ ಚಿಕಿತ್ಸೆಯಾಗಿ ಶಿಫಾರಸು ಮಾಡುತ್ತಾರೆ. ಬಾಯಲ್ಲಿ ನೀರು ತೆಗೆದುಕೊಂಡು ಸ್ವಲ್ಪ ಹೊತ್ತು ಮುಚ್ಚಿ ನಂತರ ಉಗುಳಬೇಕು. ಈ ಪ್ರಕ್ರಿಯೆಯನ್ನು ದಿನಕ್ಕೆ 4 ರಿಂದ 5 ಬಾರಿ ಪುನರಾವರ್ತಿಸಿ.


  ಅಡಿಗೆ ಸೋಡಾ ಪೇಸ್ಟ್


  ಹಲ್ಲುನೋವು ನಿವಾರಣೆಗೆ ಅಡುಗೆ ಸೋಡಾ ಉಪಯುಕ್ತ. ನಿಮ್ಮ ಸಾಮಾನ್ಯ ಟೂತ್‌ಪೇಸ್ಟ್‌ಗೆ ಅಡಿಗೆ ಸೋಡಾ ಸೇರಿಸಿ. ಮತ್ತು ಅದನ್ನು ನೇರವಾಗಿ ನೋಯುತ್ತಿರುವ ಹಲ್ಲಿನ ಮೇಲೆ ಅನ್ವಯಿಸಿ. ಇದರಿಂದ ಕೆಲವೇ ನಿಮಿಷಗಳಲ್ಲಿ ನೋವಿನಿಂದ ಮುಕ್ತಿ ಪಡೆಯಬಹುದು.


  ಹಲ್ಲು ನೋವು ಪೀಡಿತ ಪ್ರದೇಶಕ್ಕೆ ಐಸ್ ಅನ್ವಯಿಸಿ


  ಎನ್ಸಿಬಿಐ ವರದಿ ಪ್ರಕಾರ, ಯಾವುದೇ ರೀತಿಯ ಉರಿಯೂತ ಗುಣಪಡಿಸಲು ಐಸ್ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ನಿಮಗೆ ಹಲ್ಲುನೋವು ಇದ್ದರೆ ನಿಮ್ಮ ಕೆನ್ನೆಯ ಭಾಗದಲ್ಲಿ ಐಸ್ ಪ್ಯಾಕ್ ಅನ್ನು ಬಳಸಿ.ಕನಿಷ್ಠ 15 ನಿಮಿಷಗಳ ಕಾಲ ಇದನ್ನು ಮಾಡಿ. ತೀವ್ರವಾದ ನೋವಿದ್ದವರು ದಿನಕ್ಕೆ ಹಲವು ಬಾರಿ ಪುನರಾವರ್ತಿಸಿ.


  ವೆನಿಲ್ಲಾ ರಸ


  ವೆನಿಲ್ಲಾವನ್ನು ಶೇಕ್ ಅಥವಾ ಐಸ್ ಕ್ರೀಂನಲ್ಲಿ ಬಳಸುತ್ತಾರೆ. ವಾಸ್ತವದಲ್ಲಿ ವೆನಿಲ್ಲ ಅನೇಕ ಔಷಧೀಯ ಗುಣ ಹೊಂದಿದೆ. ಇದು ಹಲ್ಲುನೋವು ನಿವಾರಣೆಗೆ ತುಂಬಾ ಸಹಕಾರಿ.


  ಹತ್ತಿ ಉಂಡೆಯ ಮೇಲೆ ವೆನಿಲ್ಲಾ ರಸದ ಕೆಲವು ಹನಿ ಹಾಕಿ ಮತ್ತು ನೋವಿನ ಹಲ್ಲಿನ ಮೇಲೆ ಸುಮಾರು 15 ನಿಮಿಷಗಳ ಕಾಲ ಇರಿಸಿ. ಕೆಲವು ನಿಮಿಷಗಳ ಕಾಲ ವಿಶ್ರಾಂತಿ ಪಡೆಯಿರಿ ಮತ್ತು ನೋವು ಕ್ರಮೇಣ ಕಡಿಮೆಯಾಗುತ್ತದೆ.


  ಟೀ ಬ್ಯಾಗ್


  ಹಲ್ಲುನೋವಿನಿಂದ ಉಂಟಾಗುವ ನೋವನ್ನು ತೊಡೆ ದುಹಾಕಲು ವಿವಿಧ ರೀತಿಯ ಟೀ ಬ್ಯಾಗ್ ಶಿಫಾರಸು ಮಾಡಲಾಗುತ್ತದೆ. ಚಹಾದ ಉಷ್ಣತೆಯು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಟೀ ಬ್ಯಾಗ್ ಅನ್ನು ನೇರವಾಗಿ ನೋಯುತ್ತಿರುವ ಹಲ್ಲಿನ ಮೇಲೆ ಅನ್ವಯಿಸುವುದರಿಂದ ನೋವನ್ನು ಬಹಳ ಮಟ್ಟಿಗೆ ಕಡಿಮೆ ಮಾಡಬುಹುದು.


  ಇದನ್ನೂ ಓದಿ: ನೋಟದಲ್ಲೇ ಹೃದಯಕ್ಕೆ ಲಗ್ಗೆಯಿಡುವ ಹೂಗಳು, ಹೃದಯದ ಆರೋಗ್ಯವನ್ನೂ ಕಾಪಾಡುತ್ತವಂತೆ!


  ಲವಂಗ


  ಲವಂಗವನ್ನು ನೋವಿನ ಹಲ್ಲಿನ ಮೇಲೆ ಇಟ್ಟಾಗ ಪರಿಹಾರ ಸಿಗುತ್ತದೆ. ಬ್ಯಾಕ್ಟೀರಿಯಾ ಮತ್ತು ನಂಜುನಿರೋಧಕ ಗುಣಲಕ್ಷಣಗಳು ಸೋಂಕನ್ನು ಕಡಿಮೆ  ಮಾಡುತ್ತದೆ.

  Published by:renukadariyannavar
  First published: