Blood Glucose Levels: ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿರ್ಧರಿಸುವ ವಿಭಿನ್ನ ಉಪಕರಣಗಳು!

ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಇದು ದೀರ್ಘಕಾಲದಿಂದ ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡುತ್ತಿದೆ. ಮಧುಮೇಹ ಬಂದರೆ ಇಂದು ಹೆಚ್ಚಿನವರು ಭಯಪಡುತ್ತಾರೆ ಹಾಗೂ ತಮಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಿಲ್ಲವೆಂದು ಭಯಪಡುತ್ತಾರೆ.

ಪ್ರಾತಿನಿಧಿಕ ಚಿತ್ರ (Photo: Google)

ಪ್ರಾತಿನಿಧಿಕ ಚಿತ್ರ (Photo: Google)

  • Share this:

ತಂತ್ರಜ್ಞಾನ ಹಾಗೂ ಆರೋಗ್ಯ ಸಂರಕ್ಷಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ಅನೇಕ ಮಾರ್ಪಾಡುಗಳಾಗಿದ್ದು ಸಂಶೋಧನೆಗಳು ಹಾಗೂ ಆವಿಷ್ಕಾರಗಳಿಂದ ರೋಗ ಪತ್ತೆಯು ಈಗ ಸುಲಭವಾಗಿ ಕಂಡುಹಿಡಿಯಬಹುದಾಗಿದೆ. ಆರೋಗ್ಯ ವ್ಯವಸ್ಥೆಯ ಮೇಲೆ ಈ ಅನ್ವೇಷಣೆಗಳು ಧನಾತ್ಮಕ ಪರಿಣಾಮ ಬೀರಿದ್ದು ಈ ಹೊಸ ತಂತ್ರಜ್ಞಾನಗಳು ಮಧುಮೇಹದಂತಹ ದೀರ್ಘ ಕಾಲದ ಅಸ್ವಸ್ಥತೆಗಳನ್ನು ಇದು ನಿವಾರಿಸಿದೆ. ವಿಶ್ವದಲ್ಲಿ ಹೆಚ್ಚಿನ ಸಂಖ್ಯೆಯ ಜನರು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದು ಇದು ದೀರ್ಘಕಾಲದಿಂದ ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡುತ್ತಿದೆ. ಮಧುಮೇಹ ಬಂದರೆ ಇಂದು ಹೆಚ್ಚಿನವರು ಭಯಪಡುತ್ತಾರೆ ಹಾಗೂ ತಮಗೆ ಸಾಮಾನ್ಯ ಜೀವನ ನಡೆಸಲು ಸಾಧ್ಯವಿಲ್ಲವೆಂದು ಭಯಪಡುತ್ತಾರೆ.


ಇನ್ಸುಲಿನ್ ಆವಿಷ್ಕಾರದಿಂದ ಹಿಡಿದು ಮೌಖಿಕ ಏಜೆಂಟ್‌ಗಳವರೆಗೆ ಗುಕ್ಲೋಸ್ ಪರೀಕ್ಷೆಯನ್ನು ತಂತ್ರಜ್ಞಾನ ಪ್ಲಾಟ್‌ಫಾರ್ಮ್‌ಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ. ಇಂದಿನ ಲೇಖನದಲ್ಲಿ ನೀಡಲಾಗಿರುವ ವಿವಿಧ ಉಪಕರಣಗಳು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಮಾಪನ ಮಾಡಲು ಬಳಸಲಾಗುತ್ತದೆ. ಹಲವಾರು ತಂತ್ರಜ್ಞಾನಗಳನ್ನು ಆಧರಿಸಿ ಈ ಅನ್ವೇಷಣೆಗಳನ್ನು ನಡೆಸಲಾಗಿದ್ದು ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿರ್ವಹಿಸಲು ನೆರವಾಗಿದೆ. ಇದರಿಂದ ಯಾವುದೇ ಪ್ರಯಾಸವಿಲ್ಲದೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ಧರಿಸಬಹುದಾಗಿದ್ದು ಮಧುಮೇಹವನ್ನು ನಿಯಂತ್ರಣದಲ್ಲಿಡಬಹುದಾದ ವಿಧಾನಗಳನ್ನು ಅನುಸರಿಸಬಹುದಾಗಿದೆ.


ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ನಿರ್ಧರಿಸುವ ಸಾಧನಗಳು


ನಿರಂತರ ಗ್ಲುಕೋಸ್ ಮಾನಿಟರಿಂಗ್(Glucose Monitoring):


ಗ್ಲುಕೋಸ್ ಮಾನಿಟರಿಂಗ್ ಸಿಸ್ಟಮ್ ಅಥವಾ ಸಿಜಿಎಂ ಎಂದು ಕರೆಯಲಾದ ಈ ಉಪಕರಣವನ್ನು ತ್ವಚೆಯಲ್ಲಿ ಸೆನ್ಸರ್ ಅನ್ನು ಇರಿಸುವ ಮೂಲಕ ಗ್ಲುಕೋಸ್ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲಾಗುತ್ತದೆ.


Flipkart sale: ರಿಯಲ್​ಮಿ ಸ್ಮಾರ್ಟ್​ಫೋನ್​ ಖರೀದಿಸುವವರಿಗೆ ಒಂದೊಳ್ಳೆ ಅವಕಾಶ… 8 ಸಾವಿರದಷ್ಟು ರಿಯಾಯಿತಿ!

ಆಕ್ರಮಣಕಾರಿಯಲ್ಲದ ಗ್ಲುಕೋಸ್ ಮಾನಿಟರಿಂಗ್:


ತಂತ್ರಜ್ಞಾನದಲ್ಲಿ ಅದ್ವಿತೀಯ ಪ್ರಗತಿಯನ್ನು ಸಾಧಿಸಿರುವ ಸಂಶೋಧಕರು ಆಕ್ರಮಣಶೀಲವಲ್ಲದ ಗ್ಲುಕೋಸ್ ಮಾನಿಟರಿಂಗ್ ವ್ಯವಸ್ಥೆಯನ್ನು ಅನ್ವೇಷಿಸಿದ್ದಾರೆ. ಇದನ್ನು ವಾಚ್ ಆಗಿ ಧರಿಸಬಹುದು. ಇದು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಬೆವರಿನ ಮೂಲಕ ಮೇಲ್ವಿಚಾರಣೆ ನಡೆಸಲು ಸಾಧ್ಯವಾಗುತ್ತದೆ.


ಮುಚ್ಚಿದ ಕುಣಿಕೆ ಇರುವ ಇನ್ಸುಲಿನ್(Insulin):


ಡೆಲಿವರಿ ವ್ಯವಸ್ಥೆ: ಕೃತಕ ಮೇದೋಜ್ಜೀರಕ ಗ್ರಂಥಿ ಇಲ್ಲವೇ ಮುಚ್ಚಿದ ಕುಣಿಕೆ ಇರುವ ಇನ್ಸುಲಿನ್ ಟೈಪ್ 1 ಮಧುಮೇಹದ ಹೊಂದಿರುವ ಜನರಿಗೆ ಅತ್ಯುತ್ತಮ ಚಿಕಿತ್ಸಕ ವಿಧಾನವಾಗಿದೆ. ಇದು ರಕ್ತದ ಗ್ಲುಕೋಸ್ ಮಟ್ಟವನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಿದೆ. ಮೇದೋಜೀರಕ ಗ್ರಂಥಿಯನ್ನು ಅನುಸರಣೆ ಮಾಡುವ ಮೂಲಕ ಇನ್ಸುಲಿನ್ ಮಟ್ಟದ ನಿಯಂತ್ರಣಕ್ಕೆ ಸಹಕಾರಿಯಾಗಿದೆ.


ಬಾಹ್ಯಾಕಾಶದಲ್ಲಿ ವಿಭಿನ್ನವಾಗಿ ತನ್ನ 50ನೇ ಹುಟ್ಟುಹಬ್ಬ ಆಚರಿಸಿಕೊಂಡ ನಾಸಾ ಗಗನಯಾತ್ರಿ!

ಸ್ಮಾರ್ಟ್ ಇನ್ಸುಲಿನ್ ಪೆನ್‌ಗಳು


ಮಧುಮೇಹ ಇರುವವರಿಗೆ ಇನ್ಸುಲಿನ್ ವಿತರಿಸಲು ಈ ಪೆನ್‌ಗಳು ಸಹಕಾರಿಯಾಗಿದೆ. ಈ ಇನ್ಸುಲಿನ್ ಪೆನ್‌ಗಳು ಮೆಮೊರಿ ಹಾಗೂ ಸ್ಮಾರ್ಟ್ ಅಲ್ಗಾರಿದಮ್‌ಗಳನ್ನು ಹೊಂದಿದ್ದು ಈ ಪೆನ್ನುಗಳನ್ನು ಮರುಬಳಕೆ ಮಾಡಬಹುದಾಗಿದೆ. ಸೇವಿಸುವ ಆಹಾರ ಹಾಗೂ ದೈಹಿಕ ಚಟುವಟಿಕೆಯನ್ನು ಆಧರಿಸಿ ಇದು ಇನ್ಸುಲಿನ್ ಪ್ರಮಾಣವನ್ನು ಲೆಕ್ಕಹಾಕಲು ಸಹಕಾರಿಯಾಗಿದೆ.


7ಶುಗರ್ (Sugar) ಡಿಜಿಟಲ್ ಹೆಲ್ತ್ ಪ್ಲಾಟ್‌ಫಾರ್ಮ್:


ಸಂಪರ್ಕಿತ ಗ್ಲುಕೋಮೀಟರ್, ಸಿಜಿಎಮ್ ಸೆನ್ಸರ್‌ಗಳು, ಸ್ಮಾರ್ಟ್‌ ವಾಚ್‌ಗಳಂತಹ ವಿವಿಧ ಮೂಲಗಳನ್ನೊಳಗೊಂಡ ಮಧುಮೇಹ ನಿರ್ವಹಣೆಗೆ ಸಂಬಂಧಿಸಿದ ಅಪಾರ ಪ್ರಮಾಣದ ಮಾಹಿತಿಯನ್ನೊಳಗೊಂಡಿರುವ ಉಪಕರಣಗಳೊಂದಿಗೆ ಇದೀಗ ನಾವು ಕಡಿಮೆ ಸಮಯದಲ್ಲಿ ನಿಖರವಾಗಿ ಮಧುಮೇಹವನ್ನು ಪತ್ತೆಹಚ್ಚಬಹುದಾಗಿದೆ.


First published: