ವಿಟಮಿನ್​ ಮಾತ್ರೆಗಳನ್ನು ಸೇವಿಸುವ ಮುನ್ನ ಈ ಸುದ್ದಿಯನ್ನು ಓದಿ

ಮಾಂಸ, ಡೈರಿ ಉತ್ಪನ್ನಗಳು, ತರಕಾರಿಗಳಲ್ಲಿ ವಿಟಮಿನ್ ಎ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಈ ಆಹಾರಗಳನ್ನು ದಿನ ನಿತ್ಯ ಸೇವಿಸುವುದರಿಂದ ಕೂಡ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಿಕೊಳ್ಳಬಹುದು.

news18-kannada
Updated:June 17, 2020, 7:22 AM IST
ವಿಟಮಿನ್​ ಮಾತ್ರೆಗಳನ್ನು ಸೇವಿಸುವ ಮುನ್ನ ಈ ಸುದ್ದಿಯನ್ನು ಓದಿ
ಪ್ರಾತಿನಿಧಿಕ ಚಿತ್ರ
  • Share this:
ದೇಹದಲ್ಲಿ ಪೌಷ್ಟಿಕಾಂಶದ ಕೊರತೆ ಉಂಟಾದರೆ ಅನಾರೋಗ್ಯದ ಸಮಸ್ಯೆಗಳು ಕಂಡು ಬರುತ್ತದೆ. ಒಬ್ಬ ವ್ಯಕ್ತಿಯ ದೇಹದಲ್ಲಿ ವಿಟಮಿನ್ ಅಂಶದಲ್ಲಿ ಏರುಪೇರಾಗುವುದು ಸಾಮಾನ್ಯ. ಹೀಗಾಗಿ ಪೋಷಕಾಂಶದ ಕೊರತೆ ಕಂಡು ಬಂದರೆ ವೈದ್ಯರೇ ವಿಟಮಿನ್ಮಾತ್ರೆಗಳನ್ನು ನಿಯಮಿತ ಅವಧಿವರೆಗೆ ತೆಗೆದುಕೊಳ್ಳಲು ಸೂಚಿಸುತ್ತಾರೆ. ಆದರೆ ಕೆಲವರು ಯಾವುದೇ ಸಲಹೆಗಳಿದ್ದೆ ವಿಟಮಿನ್ಮಾತ್ರೆಗಳನ್ನು ಸೇವಿಸುತ್ತಾರೆ. ಇದು ಅತ್ಯಂತ ಅಪಾಯಕಾರಿ ಎಂದು ಇತ್ತೀಚಿನ ಸಂಶೋಧನೆಯೊಂದು ಕಂಡು ಕೊಂಡಿದೆ. ದೇಹದಲ್ಲಿ ವಿಟಮಿನ್ ಪ್ರಮಾಣವು ಹೆಚ್ಚಾದರೆ ಮೂಳೆಗಳು ಸವೆತಕ್ಕೊಳಗಾಗುತ್ತದೆ. ಇದರಿಂದ ಎಲುಬುಗಳು ದುರ್ಬಲಗೊಂಡು ಮುರಿತಕ್ಕೆ ಒಳಗಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಮಾಂಸ, ಡೈರಿ ಉತ್ಪನ್ನಗಳು, ತರಕಾರಿಗಳಲ್ಲಿ ವಿಟಮಿನ್ ಎ ಅಂಶವು ಅಧಿಕ ಪ್ರಮಾಣದಲ್ಲಿರುತ್ತದೆ. ಈ ಆಹಾರಗಳನ್ನು ದಿನ ನಿತ್ಯ ಸೇವಿಸುವುದರಿಂದ ಕೂಡ ಪೌಷ್ಟಿಕಾಂಶದ ಕೊರತೆಯನ್ನು ನೀಗಿಸಿಕೊಳ್ಳಬಹುದು. ಆದರೆ ಇದರ ಅರಿವಿನ ಕೊರತೆ ಮತ್ತು ಇತ್ತೀಚಿನ ಜೀವನ ಶೈಲಿಯಲ್ಲಿ ವಿಟಮಿನ್ ಮಾತ್ರೆಗಳ ಮೊರೆ ಹೋಗುವವರೇ ಹೆಚ್ಚು.

ಈ ಕುರಿತು ಇಲಿಗಳ ಮೇಲೆ  ಅಧ್ಯಯನ ನಡೆಸಲಾಗಿದೆ. ಇಲ್ಲಿ ಇಲಿಗಳಿಗೆ ವಿಟಮಿನ್ ಎ ಡೋಸ್​ಗಳನ್ನು ನೀಡಲಾಗಿತ್ತು. ಈ ವೇಳೆ ಕೇವಲ ಎಂಟು ದಿನಗಳಲ್ಲೇ  ಇಲಿಗಳ ಮೂಳೆಗಳು ದುರ್ಬಲವಾಗಿರುವುದು ಕಂಡು ಬಂದಿದೆ. ಹೀಗಾಗಿ ಇದೇ ಪ್ರಮಾಣದ ವಿಟಮಿನ್​ ಎ ಮಾತ್ರೆಗಳನ್ನು ಸೇವಿಸುವ ಮನುಷ್ಯರ ಎಲುಬುಗಳ ಮೇಲೆ ಕೂಡ ಪರಿಣಾಮ ಬೀರಲಿದೆ ಎಂದು ಸಂಶೋಧಕರು ಶಿಫಾರಸ್ಸು ಮಾಡಿದೆ.

ದೇಹದಲ್ಲಿ ವಿಟಮಿನ್ ಅಂಶಗಳ ಕೊರತೆಯಿಂದ ವಿಟಮಿನ್ ಎ ಮಾತ್ರೆಗಳ ಮೊರೆ ಹೋಗುತ್ತಾರೆ. ಆದರೆ ಇದರ ಅತಿಯಾದ ಸೇವನೆಯಿಂದ ಮೂಳೆಗಳು ದುರ್ಬಲಗೊಳ್ಳುತ್ತದೆ. ಅಲ್ಲದೆ ಇದರಿಂದ ಅನಾರೋಗ್ಯದ ಅಪಾಯ ಕೂಡ ಹೆಚ್ಚುತ್ತದೆ ಎಂದು ಈ ಅಧ್ಯಯನದಿಂದ ತಿಳಿದು ಬಂದಿದೆ. ವಿಟಮಿನ್ ಎ ಕೊರತೆಯನ್ನು ಸಾಮಾನ್ಯವಾಗಿ ನಾವು ಸೇವಿಸುವ ಸಮತೋಲಿತ ಆಹಾರದಿಂದ ನೀಗಿಸಿಕೊಳ್ಳಬಹುದು. ಇದಕ್ಕಾಗಿ ಪೌಷ್ಟಿಕಾಂಶವಿರುವ ಆಹಾರಗಳನ್ನು ಸೇವಿಸಬೇಕಾಗುತ್ತದೆ ಎಂದು ಎಂದು ಪ್ರೊಫೆಸರ್ ಉಲ್ಫ್ ಲೆರ್ನರ್ ತಿಳಿಸಿದ್ದಾರೆ.

ಯುಟ್ಯೂಬ್​​​ನಿಂದ ಕಣ್ಮರೆಯಾದ ಬಹುತಾರಾಗಣದ ‘ಬದಲಾಗು..ನೀನು’ ಹಾಡು

Video Viral: ದನಕರುಗಳಿಗೆ ದರ್ಶನ್ ಮೇವು ಕಟಾವು; ಡಿಬಾಸ್ ಈಗ ಪಕ್ಕಾ ಕೃಷಿಕ!
First published:June 17, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading