Health Tips: ಅತಿಯಾಗಿ ನಿದ್ರಿಸುವ ಅಭ್ಯಾಸ ನಿಮಗಿದೆಯಾ? ಆದರೆ ತಪ್ಪದೇ ಈ ಲೇಖನ ಓದಿ ನೋಡಿ

 ಹೆಚ್ಚು ಆಹಾರ ಸೇವನೆ  ಮತ್ತು ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಾವಧಿಯ ಅತಿಯಾದ ನಿದ್ದೆ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ ಬೀರುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ಆರೋಗ್ಯಯುತ ಜೀವನ ನಡೆಸಬೇಕಾದರೆ ನಿದ್ರೆಯು (Sleep) ಬಹು ಮುಖ್ಯಪಾತ್ರವನ್ನು ವಹಿಸುತ್ತದೆ. ಇದು ದಿನವಿಡೀ ದೇಹವನ್ನು ಉಲ್ಲಾಸದಾಯಕವಾಗಿ ಇಡಲು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯು ದಿನದಲ್ಲಿ ಸುಮಾರು 6-8 ಗಂಟೆಗಳ ಕಾಲ ನಿದ್ರಿಸಬೇಕು. ಆದರೆ ಅಗತ್ಯಕ್ಕಿಂತ ಹೆಚ್ಚು ನಿದ್ರೆ ಮಾಡಿದರೆ ಅಪಾಯ ಖಂಡಿತ ನಮಗೆ ಕಟ್ಟಿಟ್ಟಬುತ್ತಿ. ಹೌದು ಅಗತ್ಯಕ್ಕಿಂತ ಹೆಚ್ಚು ಅವಧಿ ನಿದ್ದೆ ಮಾಡಿದರೆ ಆರೋಗ್ಯ (Health) ಸಂಬಂಧಿ ಸಮಸ್ಯೆಗಳು ನಮ್ಮನ್ನು ಕಾಡಬಹುದು. ಹೆಚ್ಚು ಆಹಾರ ಸೇವನೆ  ಮತ್ತು ಹೆಚ್ಚು ನಿದ್ದೆ ಮಾಡುವುದು ಆರೋಗ್ಯಕ್ಕೆ ಕೆಟ್ಟ ಪರಿಣಾಮ ಬೀರುತ್ತದೆ. ದೀರ್ಘಾವಧಿಯ ಅತಿಯಾದ ನಿದ್ದೆ ದೇಹ ಮತ್ತು ಮನಸ್ಸಿನ ಮೇಲೆ ಸಾಕಷ್ಟು ಕೆಟ್ಟ ಪರಿಣಾಮ (Bad Effect) ಬೀರುತ್ತದೆ.

    ತಲೆನೋವಿನ ಸಮಸ್ಯೆ ಎದುರಾಗಬಹುದು

    ನಿದ್ರೆ ಕಡಿಮೆಯಾದರೂ ತಲೆನೋವಿನ ಸಮಸ್ಯೆ ಎದುರಾಗುತ್ತದೆ ಆದರೆ ಅತಿಯಾದ ನಿದ್ರೆ ಮಾಡಿದರೂ ತಲೆ ನೋವು ಉಂಟಾಗುತ್ತದೆ. ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಸಿರೊಟೋನಿನ್ ಹಾರ್ಮೋನ್ ನಮ್ಮ ನಿದ್ರೆ ಮತ್ತು ಎಚ್ಚರದ ಮಾದರಿಗಳನ್ನು ನಿಯಂತ್ರಿಸುತ್ತದೆ.

    ನೀವು ಹೆಚ್ಚು ನಿದ್ರೆ ಮಾಡಿದರೆ, ಅದು ಸಿರೊಟೋನಿನ್ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದು ನ್ಯುರೋಟ್ರಾನ್ಸ್ ಮೀಟರ್ ಅನ್ನು ಅಡ್ಡಿಪಡಿಸುತ್ತದೆ. ಇದರಿಂದಾಗಿ ತಲೆನೋವು ಕಾಣಿಸಿಕೊಳ್ಳಬಹುದು. ಮತ್ತೊಂದೆಡೆ, ದೀರ್ಘ ಸಮಯದವರೆಗೆ ಮಲಗಿದಾಗ, ಇದ್ದಕ್ಕಿದ್ದಂತೆ ತುಂಬಾ ಹಸಿವು ಮತ್ತು ಬಾಯಾರಿಕೆಯ ಅನುಭವವಾಗುತ್ತದೆ. ಇದು ಕೂಡಾ ತಲೆನೋವಿಗೆ ಕಾರಣವಾಗುತ್ತದೆ.

    ದೇಹದಲ್ಲಿ ಬೊಜ್ಜಿನ ಅಂಶವನ್ನು ಹೆಚ್ಚಿಸುತ್ತದೆ

    ಅತಿಹೆಚ್ಚಿನ ನಿದ್ರೆ ಹಾಗೂ ಅತಿ ಕಡಿಮೆ ನಿದ್ರೆ ಇವೆರಡು ನಮ್ಮ ದೇಹದ ತೂಕವನ್ನು ಬದಲಾಯಿಸುವಲ್ಲಿ ಮುಖ್ಯಪಾತ್ರವನ್ನು ವಹಿಸುತ್ತದೆ. ಹೌದು ದಿನಕ್ಕೆ ಏಳೆಂಟು ಗಂಟೆ ಮಲಗುವವರಿಗಿಂತ ಒಂಬತ್ತು ಹತ್ತು ಗಂಟೆಗಳ ಕಾಲ ಮಲಗುವವರಿಗೆ ಬೊಜ್ಜು ಬರುವ ಸಂಭವ 21% ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನಗಳು ತಿಳಿಸಿವೆ. ಬಳ್ಳಿಯಂತೆ ಬಳಕಬೇಕಾದರೆ ನಿದ್ದೆಗೆ ನಿರ್ದಿಷ್ಟ ಅವಧಿ ಕೊಡಿ.

    ಇದನ್ನೂ ಓದಿ: World Hypertension Day: ಅಧಿಕ ರಕ್ತದೊತ್ತಡ ನಿಮ್ಮ ಹೃದಯಕ್ಕೆ ಅಪಾಯವಂತೆ - ಈ ಲಕ್ಷಣಗಳು ಕಂಡುಬಂದ್ರೆ ಎಚ್ಚರ

    ಅತಿಯಾದ ನಿದ್ದೆಯಿಂದ ಖಿನ್ನತೆ ಸಮಸ್ಯೆ

    ಸಾಮಾನ್ಯವಾಗಿ ಎಲ್ಲರೂ ನಿದ್ರೆ ಕಮ್ಮಿಯಾದರೆ ಖಿನ್ನತೆಯ ಸಮಸ್ಯೆ ಕಾಡುತ್ತದೆ ಎಂದು ನಂಬಿದ್ದಾರೆ. ಆದರೆ ವಾಸ್ತವದಲ್ಲಿ ಖಿನ್ನತೆ ಸಾಮಾನ್ಯವಾಗಿ ಅತಿಯಾಗಿ ನಿದ್ರೆ ಮಾಡುವವರಲ್ಲಿ ಖಿನ್ನತೆಯ ಸಮಸ್ಯೆ ಹೆಚ್ಚಿರುತ್ತವೆ. ಅತಿಯಾದ ನಿದ್ದೆಯಿಂದ ಖಿನ್ನತೆ ಸಮಸ್ಯೆ ಎದುರಾಗುತ್ತದೆ. ಇದರ ಜೊತೆಗೆ ನೀವು ಒತ್ತಡವನ್ನು ಸಹ ಎದುರಿಸಬೇಕಾಗಬಹುದು.

    ಬೆನ್ನು ನೋವಿನ ಸಮಸ್ಯೆ ಎದುರಾಗಬಹುದು

    ಅತಿಯಾಗಿ ನಿದ್ರೆ ಮಾಡುವ ಅಭ್ಯಾಸದಿಂದ ಬೆನ್ನು ನೋವಿನ ಸಮಸ್ಯೆ ಆಗಾಗ ಎದುರಾಗುವ ಸಾಧ್ಯತೆ ಇದೆ. ನಾವು ಮಲಗುವ ಹಾಸಿಗೆಯ ಗುಣಮಟ್ಟ ಕೂಡ ಇದಕ್ಕೆ ಕಾರಣವಾಗಿರಬಹುದು. ಅಲ್ಲದೆ ದೀರ್ಘಕಾಲ ಮಲಗಿದ್ದರೆ ಅದು ನಮ್ಮ ಸ್ನಾಯುಗಳ ಮೇಲೆ ಒತ್ತಡವನ್ನು ಉಂಟು ಮಾಡುತ್ತದೆ. ಇದರಿಂದ ಬೆನ್ನು ನೋವು ಸಮಸ್ಯೆ ಎದುರಾಗಬಹುದು.

    ಇದನ್ನೂ ಓದಿ: Chicken in diet: ದಿನನಿತ್ಯ ಎಷ್ಟು ಪ್ರಮಾಣದಲ್ಲಿ ಕೋಳಿ ಮಾಂಸ ಸೇವಿಸಬೇಕು? ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಹೀಗಿರಲಿ

    ಅತಿಯಾದ ಆಯಾಸ ಅನುಭವವಾಗುವುದು

    ಹೌದು ದೀರ್ಘಕಾಲ ಮಲಗಿಕೊಂಡೆ ಇದ್ದರೆ ಇದು ದಿನವಿಡೀ ದಣಿದಿರುವಂತೆ ಅನುಭವವನ್ನು ನೀಡುತ್ತದೆ. ಅಗತ್ಯಕ್ಕಿಂತ ಹೆಚ್ಚೇ ಮಲಗಿದರೂ ಅನೇಕ ಬಾರಿ ಇನ್ನೂ ದಿನವಿಡಿ ಮಲಗಬೇಕು ಎಂದೆನಿಸುತ್ತದೆ.

    ಇದು ಅತಿ ಹೆಚ್ಚು ನಿದ್ದೆ ಮಾಡುವುದರಿಂದ ಉಂಟಾಗುವ ಅಡ್ಡ ಪರಿಣಾಮವಾಗಿದೆ. ಅತಿಯಾದ ವಿಶ್ರಾಂತಿ ಇಂದಾಗಿ ಸ್ನಾಯುಗಳು ಮತ್ತು ನರಗಳು ಗಟ್ಟಿಯಾಗುತ್ತವೆ ಇದರಿಂದ ಅನುಭವವಾಗುತ್ತದೆ ಎಂದು ಅಧ್ಯಯನ ಹೇಳುತ್ತದೆ.

    ಬದುಕುವದಕ್ಕಾಗಿ ವಿಶ್ರಾಂತಿ ಬೇಕು ಅದಕ್ಕಾಗಿ ಮಾತ್ರ ನೀವು ಮಲಗಬೇಕು. ನಿದ್ದೆಯೇ ಬದುಕಾಗಬಾರದೆಂದು ಮನದಟ್ಟು ಮಾಡಿಕೊಳ್ಳಿ. ಒಂದು ನಿಶ್ಚಿತವಾದ ನಿದ್ರಾ ವೇಳಾಪಟ್ಟಿಯನ್ನು ರೂಪಿಸಿಕೊಳ್ಳಿ ಮತ್ತು ಅದಕ್ಕೆ ಬದ್ದರಾಗಿರಿ.ನೀವು ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದು ಸಾಧ್ಯವಾದರೆ ತುಂಬಾ ಒಳ್ಳೆಯದು. ಅದಾಗದಿದ್ದರೆ ಕನಿಷ್ಠ ಪಕ್ಷ ಅದೇ ಸಮಯಕ್ಕೆ ಏಳುವ ಅಭ್ಯಾಸ ರೂಡಿಸಿಕೊಳ್ಳಿ.
    Published by:Swathi Nayak
    First published: