ರಾತ್ರಿಯಲ್ಲಿ ಇದನ್ನು ಹೆಚ್ಚುಕಡಿಮೆ ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ!

ಮತ್ತೊಂದೆಡೆ ಮದ್ಯ ಸೇವನೆ ನಿದ್ದೆ ಪ್ರಚೋದಕ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇದರಿಂದ ನಿದ್ರೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮದ್ಯ ಸೇವಿಸಿ ನಿದ್ದೆ ಮಾಡುವ ಅಭ್ಯಾಸದಿಂದ ನಿದ್ರೆ ಆವರಿಸುತ್ತದೆ ಎಂಬುದು ನಿಜ.

zahir | news18
Updated:January 19, 2019, 6:14 PM IST
ರಾತ್ರಿಯಲ್ಲಿ ಇದನ್ನು ಹೆಚ್ಚುಕಡಿಮೆ ಮಾಡಿದ್ರೆ ಅಪಾಯ ಕಟ್ಟಿಟ್ಟಬುತ್ತಿ!
ಸಾಂದರ್ಭಿಕ ಚಿತ್ರ
  • News18
  • Last Updated: January 19, 2019, 6:14 PM IST
  • Share this:
ನಿದ್ರೆ ಎಂಬುದು ನಮ್ಮ ಆರೋಗ್ಯಕ್ಕೆ ಬಹಳ ಮುಖ್ಯ. ಸರಿಯಾದ ನಿದ್ರೆಯಿಲ್ಲದಿದ್ದರೆ ಹಲವು ರೀತಿಯ ಅನಾರೋಗ್ಯದ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಒಬ್ಬ ವ್ಯಕ್ತಿಯು ಆರೋಗ್ಯವಾಗಿರಬೇಕೆಂದರೆ ಪ್ರತಿದಿನ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು. ಹೀಗಾಗಿ ಹೆಚ್ಚಿನವರು ಒಟ್ಟಾರೆ 8 ತಾಸುಗಳ ಕಾಲ ನಿದ್ರಿಸಲು ಪ್ರಯತ್ನಿಸುತ್ತಾರೆ. ಅದರಲ್ಲೂ ಆಧುನಿಕ ಜೀವನ ಶೈಲಿಯಲ್ಲಿ ಸಮಯ ಸಿಕ್ಕಾಗ ನಿದ್ರಿಸುವವರೇ ಹೆಚ್ಚು. ರಾತ್ರಿ ಪಾಳಯದ ಕೆಲಸದ ನಂತರ ಬಂದು ಬೆಳಿಗ್ಗೆ ಮಲಗುವುದು, ಇಲ್ಲ ರಾತ್ರಿ ಕಡಿಮೆ ನಿದ್ದೆ ಮಾಡಿ, ಅನಂತರ ಸಮಯ ಸಿಕ್ಕರೆ ನಿದ್ರಿಸುವುದು. ಆದರೆ ನೆನಪಿಟ್ಟುಕೊಳ್ಳಿ ಇಂತಹ ಅಭ್ಯಾಸಗಳನ್ನು ರೂಢಿಸಿಕೊಂಡಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಹೊಸ ಸಂಶೋಧನೆಯೊಂದು ರಾತ್ರಿ  6 ಗಂಟೆಗಿಂತ ಕಡಿಮೆ ನಿದ್ರಿಸಿದರೆ ಹೃದಯ ಸಂಬಂಧಿ ಕಾಯಿಲೆಗೆ ಒಳಗಾಗುತ್ತೀರಿ ಎಂದು ತಿಳಿಸಿದೆ.

ರಾತ್ರಿಯಲ್ಲಿ ಆರು ಗಂಟೆಗಿಂತ ಕಡಿಮೆ ನಿದ್ರೆ ಮಾಡುವವರಲ್ಲಿ ಹೃದಯರಕ್ತನಾಳ ಕಾಯಿಲೆಯ ಅಪಾಯ ಹೆಚ್ಚಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಈ ಅಪಾಯದ ಪ್ರಮಾಣ  ಏಳು ಮತ್ತು ಎಂಟು ಗಂಟೆಗಳ ಕಾಲ ನಿದ್ದೆ ಮಾಡುವವರಲ್ಲಿ ಕಡಿಮೆ ಇದೆ. ಎಂಟು ಗಂಟೆಗಳ ಕಾಲ ನಿದ್ದೆ ಮಾಡುವವರಿಗೆ ಹೋಲಿಸಿದರೆ ಆರಕ್ಕಿಂತ ಕಡಿಮೆ ಸಮಯ ನಿದ್ರಿಸುವ ವ್ಯಕ್ತಿಗಳಲ್ಲಿ ಈ ಸಮಸ್ಯೆಯ ಅಪಾಯವು ಶೇ.27 ರಷ್ಟು ಹೆಚ್ಚಿದೆ.

ಅಷ್ಟೇ ಅಲ್ಲದೆ ರಾತ್ರಿಯಲ್ಲಿ ಕಡಿಮೆ ನಿದ್ದೆ ಮಾಡುವವರಲ್ಲಿ ಕೊಬ್ಬು, ಕೊಲೆಸ್ಟ್ರಾಲ್ ಸಮಸ್ಯೆಗಳು ಹೆಚ್ಚಾಗಿರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ. ಅದೇ ರೀತಿ ರಾತ್ರಿಯಲ್ಲಿ 8 ಗಂಟೆಗಳಿಗಿಂತ ಹೆಚ್ಚು ಹೊತ್ತು ಮಲಗುವ ಮಹಿಳೆಯರಿಗೂ ತೊಂದರೆ ತಪ್ಪಿದಲ್ಲ. ಏಕೆಂದರೆ ರಾತ್ರಿ 8 ಗಂಟೆಗಳ ಕಾಲ ನಿದ್ರಿಸುವ ಮಹಿಳೆಯರಲ್ಲಿ ಅಪಧಮನಿಕಾಠಿಣ್ಯ (ರಕ್ತನಾಳಗಳ ಒಳಗೆ ಜಿಡ್ಡು ತುಂಬಿ ಕಠಿಣವಾಗುವುದು)ದ ಅಪಾಯ ಹೆಚ್ಚಾಗಿ ಕಂಡು ಬರುತ್ತದೆ. 3,974 ಬ್ಯಾಂಕ್ ಉದ್ಯೋಗಿಗಳ ಮೇಲೆ ನಡೆಸಲಾದ ಅಧ್ಯಯನದಿಂದ ಹೊಸ ಮಾಹಿತಿಗಳು ಲಭ್ಯವಾಗಿದೆ ಎಂದು ಅಧ್ಯಯನ ತಂಡ ತಿಳಿಸಿದೆ.

ಹೃದಯರಕ್ತನಾಳದ ಕಾಯಿಲೆಯು ಒಂದು ಜಾಗತಿಕ ಸಮಸ್ಯೆಯಾಗಿದ್ದು, ಔಷಧಿಗಳನ್ನು, ದೈಹಿಕ ಚಟುವಟಿಕೆಯನ್ನು ಮತ್ತು ಆಹಾರದ ನಿಯಂತ್ರಣ ಮೂಲಕ ಹಲವಾರು ವಿಧಾನಗಳಿಂದ ಇದನ್ನು ತಡೆಗಟ್ಟಬಹುದು ಎಂದು ಮ್ಯಾಡ್ರಿಡ್​ನ ಸೆಂಟರ್ ನ್ಯಾಶನಲ್ ಡೆ ಇನ್ವೆಸ್ಟಿಗೇಷನ್ಸ್  ಸಂಶೋಧಕ ಜೋಸ್ ಎಮ್ ಆರ್ಡೋವಾಸ್ ಹೇಳಿದ್ದಾರೆ.

ಇದನ್ನೂ ಓದಿ: BUDGET 2019: ರೈತರಿಗೆ ಸಿಹಿ ಸುದ್ದಿ: ಮೋದಿ ಸರ್ಕಾರ ನೀಡಲಿದೆ ಬಂಪರ್ ಪ್ಯಾಕೇಜ್!

ಮತ್ತೊಂದೆಡೆ ಮದ್ಯ ಸೇವನೆ ನಿದ್ದೆ ಪ್ರಚೋದಕ ಎಂದು ಹೆಚ್ಚಿನವರು ಭಾವಿಸಿದ್ದಾರೆ. ಆದರೆ ಇದರಿಂದ ನಿದ್ರೆಯ ಮೇಲೆ ದುಷ್ಪರಿಣಾಮ ಉಂಟಾಗುತ್ತದೆ. ಮದ್ಯ ಸೇವಿಸಿ ನಿದ್ದೆ ಮಾಡುವ ಅಭ್ಯಾಸದಿಂದ ನಿದ್ರೆ ಆವರಿಸುತ್ತದೆ ಎಂಬುದು ನಿಜ. ಆದರೆ ಒಮ್ಮೆ ಎಚ್ಚರವಾದರೆ ಮತ್ತೆ ನಿದ್ರೆಗೆ ಮರಳುವುದು ಕಷ್ಟವಾಗುತ್ತದೆ. ಇದರಿಂದ ನಿದ್ರಾಹೀನತೆಯ ಸಮಸ್ಯೆ ಉಂಟಾಗುತ್ತದೆ ಎಂದು ಆರ್ಡೋವಾಸ್​ ಹೇಳಿದ್ದಾರೆ.

ಇದನ್ನೂ ಓದಿ: ಅಮೆಜಾನ್​ ಭರ್ಜರಿ ಆಫರ್: 80 ಸಾವಿರದ ಟಿವಿಗೆ 43 ಸಾವಿರ ರೂ. ಮಾತ್ರ, ಹಲವು ಉತ್ಪನ್ನಗಳ ಮೇಲೆ ಭಾರೀ ಡಿಸ್ಕೌಂಟ್ಈ ಹೊಸ ಸಂಶೋಧನೆಯಿಂದ ಕೇವಲ 8 ಗಂಟೆಗಳ ಕಾಲ ನಿದ್ರಿಸಿದರೆ ಮಾತ್ರ ಸಾಕುವುದಿಲ್ಲ. ಬದಲಾಗಿ ರಾತ್ರಿಯ ಸಮಯದಲ್ಲೇ ಕನಿಷ್ಠ 6 ಗಂಟೆಗಳ ಕಾಲ ನಿದ್ರೆ ಮಾಡಬೇಕೆಂಬ ಮಹತ್ವದ ಅಂಶ ಬೆಳಕಿಗೆ ಬಂದಿದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಪೇಟಿಎಂ ಜತೆ ಝೊಮ್ಯಾಟೋ: ಇನ್ಮುಂದೆ ಈ ಸೇವೆ ಕೂಡ ಸಿಗಲಿದೆ

First published: January 19, 2019, 6:14 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading