Coffee Side Effects: ಅತಿಯಾಗಿ ಕಾಫಿ ಕುಡಿಯುವ ಅಭ್ಯಾಸ ನಿಮಗಿದೆಯಾ? ಹಾಗಾದ್ರೆ ತಪ್ಪದೇ ಈ ಸ್ಟೋರಿ ಓದಿ

ಒಂದು ಲೋಟ ಕಾಫಿ ಕುಡಿದರೆ ಸಾಲದು, ಇನ್ನೂ ಒಂದು ಲೋಟ ಕುಡಿಯೋಣ ಎಂಬ ಭಾವನೆ ಮೂಡುವುದು. ಹಾಗಾಗಿಯೇ ಜನರು ಕಾಫಿಗೆ ಬಹುಬೇಗ ಅಡಿಕ್ಟ್ ಆಗಿಬಿಡುತ್ತಾರೆ.

ಕಾಫಿ ಚಿತ್ರ

ಕಾಫಿ ಚಿತ್ರ

 • Share this:
  ಕಾಫಿ (Coffee) ಯಾರಿಗೆ ಇಷ್ಟ ಇಲ್ಲಾ ಹೇಳಿ! ಕೆಲವರಂತೂ ಬೆಳಗ್ಗೆ ಎದ್ದ ಕೂಡಲೇ ತಮ್ಮ ದಿನವನ್ನು ಕಾಫಿ ಕುಡಿಯುವುದರ ಮೂಲಕವೇ ಪ್ರಾರಂಭಿಸುತ್ತಾರೆ. ಕಾಫಿಯಲ್ಲಿ ಕಂಡುಬರುವ ಕೆಫೇನ್ ದೇಹಕ್ಕೆ ತಕ್ಷಣ ಶಕ್ತಿಯನ್ನು ನೀಡುವ ಗುಣ ಹೊಂದಿದೆ. ಆದರೆ ಇದು ಆರೋಗ್ಯಕ್ಕೆ ಅಷ್ಟೇ ತೊಂದರೆಯನ್ನು ಕೂಡ ನೀಡುತ್ತದೆ. ಕಾಫಿಯಲ್ಲಿರುವ ಕೆಫಿನ್ (Caffeine) ಅಂಶವು ನೀವು ಮತ್ತೆ ಮತ್ತೆ ಕಾಫಿಯನ್ನು ಕುಡಿಯಬೇಕು ಎಂದು ಅನಿಸುವ ಹಾಗೆ ಮಾಡುತ್ತದೆ. ಅದಕ್ಕಾಗಿಯೇ ಒಂದು ಲೋಟ (Glass) ಕಾಫಿ ಕುಡಿದರೆ ಸಾಲದು, ಇನ್ನೂ ಒಂದು ಲೋಟ ಕುಡಿಯೋಣ ಎಂಬ ಭಾವನೆ ಮೂಡುವುದು. ಹಾಗಾಗಿಯೇ ಜನರು ಕಾಫಿಗೆ ಬಹುಬೇಗ ಅಡಿಕ್ಟ್ (Addiction) ಆಗಿಬಿಡುತ್ತಾರೆ.

  ಇಂದಿನ ಜೀವನ ಶೈಲಿಯಲ್ಲಿ‌ ಅನೇಕರು  ಕಾಫಿಗೆ ದಾಸರಾಗಿ ತಮ್ಮ ನಿಯಮಿತ ಅವಧಿಯ ನಿದ್ದೆಯನ್ನು ತಪ್ಪಿಸುವ ಮೂಲಕ ದೇಹ ಮತ್ತು ಮನಸ್ಸಿಗೆ ಸಾಕಷ್ಟು ವಿಶ್ರಾಂತಿ ಸಿಗದ ಹಾಗೆ ಮಾಡಿಕೊಂಡಿದ್ದಾರೆ. ಮುಂಜಾನೆಯಲ್ಲಿ ಶಕ್ತಿವರ್ಧಿಸುತ್ತದೆ ಎಂಬುದು ಕಾಫಿಯ ಬಗೆಗಿನ ತಪ್ಪು ತಿಳುವಳಿಕೆ. ಕಾಫಿಯಲ್ಲಿರುವ ಕೆಫೇನ್ ಅಡೋನಿಸನ್ ಎನ್ನುವ ಕೆಮಿಕಲ್ ಕೆಲಸ ಮಾಡುವುದನ್ನು ತಡೆಯುತ್ತದೆ. ಇದು ನಿಮಗೆ ನಿದ್ರೆ ಉಂಟುಮಾಡುವಂತಹ ಕೆಮಿಕಲ್. ಇದನ್ನು ತಡೆದು ನಿಮ್ಮಲ್ಲಿ ಏಕಾಗ್ರತೆ ಮತ್ತು ಪ್ರತಿಕ್ರಿಯಿಸುವ ವೇಗವನ್ನು ಹೆಚ್ಚಿಸುತ್ತದೆ.

  ಇದನ್ನೂ ಓದಿ: Coconut Oil And Skin: ನಿಮ್ಮ ತ್ವಚೆಯ ಗುಣ ಯಾವುದು? ಈ ತರದ ಸ್ಕಿನ್ ಇದ್ದೋರು ತೆಂಗಿನೆಣ್ಣೆ ಬಳಸೋ ಮುನ್ನ ಎಚ್ಚರ ವಹಿಸಿ

  ಹೆಚ್ಚು ಕೆಫೀನ್ ಸೇವನೆಯಿಂದಾಗಿ ಆರೋಗ್ಯ ಹದಗೆಡಬಹುದು

  ನಮ್ಮ ಮೆದುಳಿಗೆ ಕೆಫೀನ್ ಅಗತ್ಯವೂ ಕೂಡ ಇದೆ. ಆದರೆ ಮಿತಿಯಲ್ಲಿ ಇರಬೇಕು ಅಷ್ಟೇ. ಹೆಚ್ಚು ಕೆಫೀನ್ ಸೇವನೆಯಿಂದಾಗಿ ಆರೋಗ್ಯ ಹದಗೆಡಬಹುದು ಎಂಬುದು ತಜ್ಞರ ಅಭಿಪ್ರಾಯ. ಮಧ್ಯಾಹ್ನ 3-4 ಗಂಟೆಯ ನಂತರ ಕೆಫೀನ್ ನಿದ್ರೆಯನ್ನು ಹೋಗಲಾಡಿಸಿ ಬಿಡುತ್ತದೆ. ಕೆಲವರು ಒಂದು ಕಪ್  ಕಾಫಿಯನ್ನು ಮಾತ್ರ ಸೇವಿಸಬಹುದು ಮತ್ತು ತಕ್ಷಣವೇ ಹಾಸಿಗೆಗೆ ಜಿಗಿಯಬಹುದು. ಹಾಗಂದ ಮಾತ್ರಕ್ಕೆ ಕಾಫಿಯನ್ನು ಕುಡಿಯಲೇಬಾರದು ಎಂದೇನಿಲ್ಲ.

  ಕೆಫೇನ್ ಗೆ ದಾಸರಾಗುವುದೇ ಕಾಫಿಯ ಬಹು ದೊಡ್ಡ ದುಷ್ಪರಿಣಾಮಗಳಲ್ಲಿ ಒಂದು. ನಾವು ಪ್ರತಿನಿತ್ಯ ಕಾಫಿ ಸೇವನೆ ಮಾಡುವ 300 ಗ್ರಾಂಗಿಂತ ಅಧಿಕವಾಗಿದ್ದರೆ ಇದು ದೀರ್ಘಾವಧಿಯ ದುಷ್ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇದೆ. ಅದೇ ರೀತಿ ಕಾಫಿ ಕುಡಿಯುವುದನ್ನು ನಿಲ್ಲಿಸಿದಾಗ ನಮ್ಮ ಮೆದುಳಿನ ಸೆಲ್ ಗಳು ಕಾಫಿ ಕುಡಿಯುವಂತೆ ನಮ್ಮನ್ನು ಉತ್ತೇಜಿಸುತ್ತದೆ, ಇದರಿಂದ ನಾವು ದೀರ್ಘಾವಧಿ ಕಾಫಿಗೆ ಎಡಿಕ್ಟ್ ಆಗುವ ಸಾಧ್ಯತೆ ಇದೆ.

  ಇದನ್ನೂ ಓದಿ: Tea Preparing Method: ಚಹಾ ಮಾಡುವುದು ಎಲ್ಲರಿಗೂ ಗೊತ್ತು, ಆದ್ರೆ ಚಹಾ ಮಾಡುವ ಸರಿಯಾದ ವಿಧಾನ ಗೊತ್ತಾ? ಇಲ್ಲಿದೆ ಟೇಸ್ಟಿ ಮಾಹಿತಿ!

  ದೇಹಕ್ಕೆ ಖನಿಜಾಂಶಗಳ ಕೊರತೆ

  ಕಾಫಿ ನಿಮ್ಮ ಹೊಟ್ಟೆ ಅದರಲ್ಲಿಯೂ ಮುಖ್ಯವಾಗಿ ನಿಮ್ಮ ಮೂತ್ರಪಿಂಡಗಳ ಕ್ಯಾಲ್ಸಿಯಂ, ಜಿಂಕ್, ಮ್ಯಾಗ್ನೀಶಿಯಂ ಮತ್ತಿತರ ಖನಿಜಾಂಶಗಳನ್ನು ಹಿಡಿದಿಡುವ ಶಕ್ತಿಯನ್ನು ಕುಂದಿಸುತ್ತದೆ. ಜೀರ್ಣಕ್ರಿಯೆಯ ದೃಷ್ಟಿಯಿಂದ ನೋಡಿದಾಗ ಇದು ಆತಂಕಕಾರಿ ಸ್ಥಿತಿ. ಚಯಾಪಚಯ ಕ್ರಿಯೆ ಖನಿಜಾಂಶಗಳು ಅತ್ಯಗತ್ಯ.

  ಹೊಟ್ಟೆ ಹುಣ್ಣಿಗೆ ಕಾರಣವಾಗಬಹುದು

  ಕಾಫಿಯಲ್ಲಿರುವ ಕೆಫೇನ್ ಮತ್ತಿತರ ಆಸಿಡ್ ಗಳು ಹೊಟ್ಟೆಗೆ ಹಾನಿಕಾರವಾದವು. ಇವು ಸಣ್ಣ ಕರುಳಿನ ಮೇಲೆ ದುಷ್ಪರಿಣಾಮವುಂಟುಮಾಡುತ್ತದೆ. ಇದಲ್ಲದೆ ಹೊಟ್ಟೆಯಲ್ಲಿ ಸೆಳೆತ, ಮಲಬದ್ಧತೆ ಮತ್ತು ಭೇದಿಯಾಗುವ ಸಾಧ್ಯತೆಗಳು ಹೆಚ್ಚುತ್ತದೆ. ಕಾಫಿ ಕುಡಿಯುವ ಮುಂಚೆ ಅಥವ ನಂತರ ನೀರು ಕುಡಿಯದಿದ್ದರೆ ಅಥವ ಹೆಚ್ಚು ಕಾಫಿ ಕುಡಿಯುವುದರಿಂದ ಇದು ಅಲ್ಸರ್ ಮತ್ತು ಅಸಿಡಿಟಿಗೆ ಕಾರಣವಾಗುತ್ತದೆ.

  ತಲೆನೋವು ಮತ್ತು ಭ್ರಮೆಗಳಿಗೆ ಕಾರಣವಾಗಬಹುದು

  ನಮ್ಮ ದೇಹದಲ್ಲಿ ಕೆಫೀನ್‌ನ ನಿರಂತರ ಉಪಸ್ಥಿತಿಯು ನಿಮ್ಮ ಹೃದಯ ಬಡಿತವನ್ನು ಹೆಚ್ಚಿಸುತ್ತದೆ ಮತ್ತು ನಿಮ್ಮ ಕೇಂದ್ರ ನರಮಂಡಲವನ್ನು ಉತ್ತೇಜಿಸುತ್ತದೆ. ಈ ಪರಿಣಾಮವು ನಿರ್ಜಲೀಕರಣದೊಂದಿಗೆ ನಿರಂತರ ತಲೆನೋವು ಉಂಟುಮಾಡಬಹುದು ಮತ್ತು ಅಡ್ರಿನಾಲಿನ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಕೆಫೀನ್ ಮಿತಿಮೀರಿದ ಸೇವನೆಯು ರಾತ್ರಿಯಲ್ಲಿ ನಿದ್ರಿಸುವಾಗ ಭ್ರಮೆಗಳಿಗೆ ಕಾರಣವಾಗಬಹುದು ಅಥವಾ ನಿಮ್ಮನ್ನು ನಡುಗುವಂತೆ ಮಾಡಬಹುದು.
  Published by:Swathi Nayak
  First published: