ಸ್ನಾಯು ಬಲ ಹೆಚ್ಚಿಸಲು ಸೋಯಾ ಹಾಲು ಉತ್ತಮ; ಅಧ್ಯಯನ

news18
Updated:August 8, 2018, 4:04 PM IST
ಸ್ನಾಯು ಬಲ ಹೆಚ್ಚಿಸಲು ಸೋಯಾ ಹಾಲು ಉತ್ತಮ; ಅಧ್ಯಯನ
news18
Updated: August 8, 2018, 4:04 PM IST
-ನ್ಯೂಸ್ 18 ಕನ್ನಡ

ಮಹಿಳೆಯರು ಆರೋಗ್ಯ ಹೆಚ್ಚಿಸಿಕೊಳ್ಳಲು ಸೋಯಾ ಮತ್ತು ಟೋಫು ಹಾಲು ಕುಡಿಯುವುದು ಉತ್ತಮ ಎಂದು ಅಧ್ಯಯನವೊಂದು ತಿಳಿಸಿದೆ. ಈ ಹಾಲಿನಲ್ಲಿ ಪ್ರೋಟೀನ್ ಹೆಚ್ಚಿರುವುದರಿಂದ ಸ್ನಾಯುಗಳು ಬಲಗೊಳ್ಳುತ್ತದೆ. ಹಾಗೆಯೇ ಮೆಟಬಾಲಿಕ್ ಆರೋಗ್ಯವನ್ನು ಹೆಚ್ಚಿಸುತ್ತದೆ. ಇಲಿಗಳ ಮೇಲೆ ನಡೆಸಲಾದ ಈ ಅಧ್ಯಯನದಿಂದ ಸ್ನಾಯುಗಳು ಗಟ್ಟಿ ಮುಟ್ಟಾಗುವುದು ತಿಳಿದು ಬಂದಿದೆ. ಸೋಯಾ ಹಾಲು ಕುಡಿದ ಇಲಿಗಳ ಟಿಬಿಯಾ ಮೂಳೆಗಳು ಬಲಿಷ್ಠವಾಗಿದ್ದು, ಮೊಣಕಾಲು ಮತ್ತು ಪಾದಗಳ ಮೂಳೆಗಳು ಇತರೆ ಇಲಿಗಳ ಮೂಳೆಗಿಂತ ಬಲಗೊಂಡಿರುವುದು ಈ ಅಧ್ಯಯನದಿಂದ ಸಾಬೀತಾಗಿದೆ.

ಋತುಬಂಧದ ಸಮಯದಲ್ಲಿ ಮಹಿಳೆಯರಲ್ಲಿ ಆಸ್ಟಿಯೊಪೊರೊಸಿಸ್, ಸ್ಥೂಲಕಾಯತೆ, ದಣಿವು ಸೇರಿದಂತೆ ಅನೇಕ ಸಮಸ್ಯೆಗಳು ಕಾಣಿಸುತ್ತದೆ. ಸೋಯಾ ಹಾಲಿನಲ್ಲಿ ಪ್ರೊಟೀನ್ ಅಂಶ ಹೆಚ್ಚಾಗಿರುವುದರಿಂದ ಋತುಬಂಧದ ಸಂದರ್ಭದಲ್ಲಿ ಮಹಿಳೆಯರ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಸಂಶೋಧಕರು ತಿಳಿಸಿದ್ದಾರೆ.

'ಸೋಯಾ ಆಹಾರಗಳನ್ನು ಸೇವಿಸುವ ಮಹಿಳೆಯರ ಸ್ನಾಯುಗಳು ಬಲಗೊಂಡಿರುವುದು ಸಂಶೋಧನೆಯಿಂದ ಗೊತ್ತಾಗಿದೆ. ಸೋಯಾ ಮತ್ತು ತೋಫು ಹಾಲು ಕೂಡ ಆರೋಗ್ಯಕ್ಕೆ ಉತ್ತಮವಾಗಿದ್ದು ಇದು ಋತುಬಂಧದ ಸಮಯದಲ್ಲಿ ಮಹಿಳೆಯರ ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ' ಎಂದು ಅಮೆರಿಕದ​ ಮಿಸೌರಿ ವಿಶ್ವವಿದ್ಯಾಲಯದ ಪ್ರೊಫೆಸರ್ ಪಮೆಲಾ ಹಿಂಟನ್ ತಿಳಿಸಿದ್ದಾರೆ.

ಕಡಿಮೆ ದೈಹಿಕ ಮಟ್ಟವನ್ನು ಹೊಂದಿರುವ ಇಲಿಗಳ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ಸೋಯಾ ಆಹಾರದ ಪರಿಣಾಮಗಳನ್ನು ಪರಿಶೀಲಿಸಲಾಗಿತ್ತು. ಸೋಯಾ ಆಹಾರವನ್ನು ಸೇವಿಸಿರುವ ಇಲಿಗಳ ಮೂಳೆ ಮತ್ತು ಮೆಟಾಬಾಲಿಕ್ ಕ್ರಿಯೆಯನ್ನು ಜೋಳವನ್ನು ತಿಂದ ಇಲಿಗಳಿಗೆ ಹೋಲಿಸಿದರೆ ಪ್ರಬಲ ವ್ಯತ್ಯಾಸ ಕಂಡುಬಂದಿದೆ. ಸೋಯಾ ಆಹಾರದಿಂದ ಇಲಿಗಳ ಟಿಬಿಯಾ ಮೂಳೆಗಳು ಬಲಗೊಂಡಿದ್ದು, ಅಂಡಾಶಯದ ಹಾರ್ಮೊನುಗಳು ಸುಧಾರಿಸಿರುವುದು ಕಂಡು ಬಂದಿರುವುದಾಗಿ ಅಧ್ಯಯನ ತಂಡ ತಿಳಿಸಿದೆ.

ಏಷ್ಯಾದ ದೇಶಗಳ ಆಹಾರ ಪದ್ದತಿಗಳಲ್ಲಿ ಸೋಯಾವನ್ನುಸೇರಿಸುವುದರಿಂದ ಏಷ್ಯನ್ ಜನರು ಸೋಯಾ ಹಾಲಿನ ಮೊರೆ ಹೋಗಬೇಕಾದ ಅಗತ್ಯವಿಲ್ಲ. ಆದರೆ ತೋಫು ಅಥವಾ ಇತರೆ ಸೋಯಾ ಆಹಾರಗಳನ್ನು ತಮ್ಮ ಆಹಾರ ಕ್ರಮದಲ್ಲಿ ಅಳವಡಿಸಿದರೆ ಮೂಳೆಗಳು ಬಲಗೊಳ್ಳುವುದಲ್ಲದೆ, ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು ಎಂದು ಸಂಶೋಧಕರು ತಿಳಿಸಿದ್ದಾರೆ.
First published:August 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ