• Home
  • »
  • News
  • »
  • lifestyle
  • »
  • Lungs Cancer Day: ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ, ಶ್ವಾಸಕೋಶದ ಆರೋಗ್ಯ ಸುಧಾರಿಸಲು ಆಯುರ್ವೇದದ ಸಲಹೆ

Lungs Cancer Day: ಇಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ, ಶ್ವಾಸಕೋಶದ ಆರೋಗ್ಯ ಸುಧಾರಿಸಲು ಆಯುರ್ವೇದದ ಸಲಹೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಶ್ವಾಸಕೋಶದ ಮೂಲಕ ದೇಹದೊಳಗಿನ ಅಂಗಗಳಿಗೆ ಆಮ್ಲಜನಕ ಸಾಗಿಸುವಾಗ ಹಲವು ಬಾರಿ ಮಾಲಿನ್ಯವು ಪ್ರವೇಶಿಸುತ್ತದೆ. ಶ್ವಾಸಕೋಶದ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹಲವು ಪರಿಹಾರಗಳ ಬಗ್ಗೆ ಹೇಳಲಾಗಿದೆ. ಹಲವು ಔಷಧೀಯ ಸಸ್ಯಗಳು ಶ್ವಾಸಕೋಶದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ.

  • Share this:

    ಪ್ರತಿ ವರ್ಷ ಆಗಸ್ಟ್ 1 (August) ರಂದು ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ (World Lungs Cancer Day) ಆಚರಣೆ ಮಾಡಲಾಗುತ್ತದೆ. ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ (Awareness) ಮೂಡಿಸುವುದು ಶ್ವಾಸಕೋಶ ಕ್ಯಾನ್ಸರ್ ದಿನಾಚರಣೆಯ ಉದ್ದೇಶವಾಗಿದೆ. ಶ್ವಾಸಕೋಶದ ಕ್ಯಾನ್ಸರ್ ಗೆ ನಿಮ್ಮ ಅಭ್ಯಾಸ, ಜೀವನಶೈಲಿ ಮುಖ್ಯ ಕಾರಣವಾಗಿರುತ್ತದೆ. ಶ್ವಾಸಕೋಶ ಕ್ಯಾನ್ಸರ್ ಗೆ ಕಾರಣವಾಗುವ ಅಂಶಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು ತುಂಬಾ ಅವಶ್ಯಕವಾಗಿದೆ. ಶ್ವಾಸಕೋಶವು ದೇಹದ ಪ್ರಮುಖ ಅಂಗಗಳಲ್ಲಿ ಒಂದು. ಅದು ನಿಲ್ಲದೆ ನಿರಂತರವಾಗಿ ಕಾರ್ಯ ನಿರ್ವಹಿಸುತ್ತದೆ. ಶ್ವಾಸಕೋಶದ ಮೂಲಕ ಉಸಿರಾಡುವಾಗ ಆಮ್ಲಜನಕ ದೇಹದೊಳಗೆ ಪ್ರವೇಶಿಸುವ ಮೂಲಕ ಉಳಿದೆಲ್ಲಾ ಅಂಗಗಳ ಕಾರ್ಯ ಚಟುವಟಿಕೆಗೆ ಸಹಾಯ ಮಾಡುತ್ತದೆ.


    ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನ


    ಶ್ವಾಸಕೋಶದ ಮೂಲಕ ದೇಹದೊಳಗಿನ ಅಂಗಗಳಿಗೆ ಆಮ್ಲಜನಕ ಸಾಗಿಸುವಾಗ ಹಲವು ಬಾರಿ ಮಾಲಿನ್ಯವು ಪ್ರವೇಶಿಸುತ್ತದೆ. ಹೆಚ್ಚುತ್ತಿರುವ ಮಾಲಿನ್ಯ, ಧೂಳು, ವೈರಸ್ ಸೋಂಕಿನಿಂದ ಶ್ವಾಸಕೋಶಗಳು ದುರ್ಬಲವಾಗುತ್ತವೆ. ಇದು ಅಸ್ತಮಾ, ಉಸಿರಾಟದ ಸೋಂಕು ರೋಗಗಳಿಗೆ ಕಾರಣವಾಗುತ್ತದೆ. ಜೊತೆಗೆ ಶ್ವಾಸಕೋಶದಲ್ಲಿ ಕಫ ಶೇಖರಣೆಯಾಗಿ ಉಸಿರಾಟಕ್ಕೆ ತೊಂದರೆ ಉಂಟು ಮಾಡುತ್ತದೆ.


    ಶ್ವಾಸಕೋಶದ ಆರೋಗ್ಯಕ್ಕಾಗಿ ಆಯುರ್ವೇದದಲ್ಲಿ ಹಲವು ಪರಿಹಾರಗಳ ಬಗ್ಗೆ ಹೇಳಲಾಗಿದೆ. ಆಯುರ್ವೇದದ ಪ್ರಕಾರ, ಹಲವು ಔಷಧೀಯ ಸಸ್ಯಗಳು ಶ್ವಾಸಕೋಶದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿಯಾಗಿದೆ. ಚರಕ್ ಫಾರ್ಮಾ ಪ್ರೈವೇಟ್ ಲಿಮಿಟೆಡ್‌ನ ವೈದ್ಯಕೀಯ ಸಲಹೆಗಾರ ಡಾ. ಮನೀಶಾ ಮಿಶ್ರಾ ಗೋಸ್ವಾಮಿ, ಶ್ವಾಸಕೋಶ ಆರೋಗ್ಯಕ್ಕೆ ಕೆಲವು ಆಯುರ್ವೇದ ಸಲಹೆ ಹೇಳಿದ್ದಾರೆ.


    ಇದನ್ನೂ ಓದಿ: ಶ್ವಾಸಕೋಶ ತೊಂದರೆ, ಉಸಿರಾಟ ಸಮಸ್ಯೆಗೆ ಮನೆಯಲ್ಲೇ ಹೀಗೆ ಪರಿಹಾರ ಮಾಡಿ!


    ಹಿಪ್ಪಲಿ


    ಹಿಪ್ಪಲಿ ಶ್ವಾಸಕೋಶದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಜೊತೆಗೆ ಉಸಿರಾಟದ ವ್ಯವಸ್ಥೆಗೆ ಅಮೃತದ ಔಷಧವಾಗಿದೆ. ಆಯುರ್ವೇದದ ಪ್ರಕಾರ, ಹಿಪ್ಪಲಿಯನ್ನು ಹೆಚ್ಚುತ್ತಿರುವ ಕ್ರಮದಲ್ಲಿ ಅಂದರೆ ಹಾಲಿನೊಂದಿಗೆ ಸೇವಿಸಬೇಕು. 15 ದಿನಗಳವರೆಗೆ ಒಂದೊಂದಾಗಿ ಹೆಚ್ಚಿಸಿ ಮತ್ತು ಅದೇ ಕ್ರಮದಲ್ಲಿ ಕಡಿಮೆ ಮಾಡಬೇಕು. ಇದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಹಿಪ್ಪಲಿಯನ್ನು ಜೇನುತುಪ್ಪದೊಂದಿಗೆ ಬಳಸುವುದರಿಂದ ಶೀತ ಮತ್ತು ಕೆಮ್ಮಿನಂತಹ ಅನೇಕ ಉಸಿರಾಟದ ತೊಂದರೆಗಳು ಗುಣವಾಗುತ್ತವೆ.


    ಒಣ ಶುಂಠಿ


    ಒಣ ಶುಂಠಿ ಶ್ವಾಸಕೋಶದಲ್ಲಿ ಸೋಂಕಿನಿಂದ ಉಂಟಾಗುವ ಉರಿಯೂತ ನಿವಾರಿಸುತ್ತದೆ. ಉಸಿರಾಟದ ಪ್ರದೇಶವನ್ನು ಸ್ವಚ್ಛವಾಗಿಡುತ್ತದೆ. ಉಸಿರಾಟದ ಪ್ರಕ್ರಿಯೆಯನ್ನು ಸುಗಮಗೊಳಿಸುತ್ತದೆ. ಗಂಟಲಿನ ಊತ ಕಡಿಮೆ ಮಾಡುತ್ತದೆ. ನೋಯುತ್ತಿರುವ ಗಂಟಲು ಮತ್ತು ಕೆಮ್ಮಿಗೆ ಪರಿಹಾರ ನೀಡುತ್ತದೆ. ಒಣ ಶುಂಠಿಯು ನಿಮ್ಮ ದೇಹದ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶ್ವಾಸಕೋಶದ ಸೋಂಕನ್ನು ದೂರವಿಡುತ್ತದೆ.


    ಬಿಭಿತಕಿ


    ಬಿಭಿತಕಿ ಎಂದರೆ ಅದು ಜನಮಾನಸದಲ್ಲಿ ಪ್ರಸಿದ್ಧವಾಗಿದೆ. ತ್ರಿಫಲ ಈ ಆಯುರ್ವೇದ ಔಷಧದ ಒಂದು ಘಟಕ ಪದಾರ್ಥ. ಒಣ ಕೆಮ್ಮು, ನೆಗಡಿ ಮತ್ತು ಗಂಟಲು ನೋವಿಗೆ ಇದು ಪ್ರಯೋಜನಕಾರಿ. ಬಿಭಿತಕಿ ಎಲ್ಲಾ ರೀತಿಯ ಕೆಮ್ಮು ಮತ್ತು ಉಸಿರಾಟ ವ್ಯವಸ್ಥೆಯ ರೋಗಗಳಲ್ಲಿ ಪ್ರಯೋಜನಕಾರಿ. ಇದು ಗಂಟಲಿನ ಊತ ಕಡಿಮೆ ಮಾಡುತ್ತದೆ. ಕಫ ತೆಗೆದು ಹಾಕುತ್ತದೆ. ಶ್ವಾಸನಾಳ ಕಾಯಿಲೆಗೆ ಪರಿಹಾರ ನೀಡುತ್ತದೆ.


    ಮುಲೇತಿ


    ಆಯುರ್ವೇದದ ಪ್ರಕಾರ ಮುಲೇತಿ ಸಿಹಿ ಮತ್ತು ತಂಪಾಗಿಸುವ ಗುಣಲಕ್ಷಣಗಳಿಂದಾಗಿ ಲೈಕೋರೈಸ್ ಶ್ವಾಸನಾಳದ ಸೋಂಕು ನಿವಾರಣೆಗೆ ಪ್ರಯೋಜನಕಾರಿ. ಶೀತ ಮತ್ತು ಕೆಮ್ಮು ಮುಂತಾದ ಅನೇಕ ಉಸಿರಾಟ ಸಮಸ್ಯೆ ನಿವಾರಿಸಲು ಮೂಲೇತಿ ಬಳಸುತ್ತಾರೆ. ಲೈಕೋರೈಸ್ ಶ್ವಾಸಕೋಶ ಮತ್ತು ಗಂಟಲಿನಲ್ಲಿ ಸಂಗ್ರಹವಾಗುವ ದಪ್ಪ ಲೋಳೆ ಕರಗಿಸಿ ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಗಂಟಲು ನೋವು ಮತ್ತು ಕೆಮ್ಮಿಗೆ ಪರಿಹಾರ ನೀಡುತ್ತದೆ.


    ತುಳಸಿ


    ತುಳಸಿಯು ಅತ್ಯಂತ ಶಕ್ತಿಯುತ ಔಷಧ. ಇದರ ಬಳಕೆಯು ಉಸಿರಾಟದ ಕಾಯಿಲೆ ನಿವಾರಣೆಗೆ ಪ್ರಯೋಜನಕಾರಿಯಾಗಿದೆ. ಯುಜೆನಾಲ್ ತುಳಸಿ ಎಲೆಗಳಲ್ಲಿ ಇದೆ. ಶೀತ, ಕೆಮ್ಮು ಮುಂತಾದ ಸಮಸ್ಯೆ ತಡೆಯುತ್ತದೆ. ತುಳಸಿ ಎಲೆಗಳನ್ನು ಪ್ರತಿದಿನ ಸೇವಿಸುವುದು ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಉಸಿರಾಟ ಸೋಂಕು, ಅನೇಕ ಶ್ವಾಸಕೋಶದ ಕಾಯಿಲೆ ತಡೆಯುತ್ತದೆ.


    ಇದನ್ನೂ ಓದಿ: ದೈನಂದಿನ ತ್ವಚೆಯ ಕಾಳಜಿ ಹೀಗಿರಲಿ! ಆಹಾರದಲ್ಲಿ ಇವುಗಳನ್ನು ಮಿಸ್ ಮಾಡಬೇಡಿ


    ಕೆಲವು ಪರಿಹಾರ


    ಅನುಲೋಮ-ವಿಲೋಮ್, ಪ್ರಾಣಾಯಾಮ, ಭ್ರಮರಿ, ಕಪಾಲಭಾತಿ ಮುಂತಾದ ಚಟುವಟಿಕೆಗಳು ಶ್ವಾಸಕೋಶದ ಆರೋಗ್ಯ ಸುಧಾರಿಸುತ್ತದೆ. ಆಹಾರದಲ್ಲಿ ತಂಪು ಆಹಾರ ತ್ಯಜಿಸುವುದು ಉಸಿರಾಟದ ಕಾಯಿಲೆ ದೂರವಿಡುತ್ತದೆ.

    Published by:renukadariyannavar
    First published: