• Home
  • »
  • News
  • »
  • lifestyle
  • »
  • Bread Day: ಇಂದು ವಿಶ್ವ ಹೋಂಮೇಡ್ ಬ್ರೆಡ್ ಡೇ, ತೂಕ ಇಳಿಸಲು ಈ ಬ್ರೆಡ್ ಪ್ರಯೋಜನ ನೀಡುತ್ತೆ!

Bread Day: ಇಂದು ವಿಶ್ವ ಹೋಂಮೇಡ್ ಬ್ರೆಡ್ ಡೇ, ತೂಕ ಇಳಿಸಲು ಈ ಬ್ರೆಡ್ ಪ್ರಯೋಜನ ನೀಡುತ್ತೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರತನಕ ಬ್ರೆಡ್ ಸೇವಿಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆ ನಿಯಂತ್ರಣಕ್ಕೆ ಬ್ರೆಡ್ ಸೇವನೆ ಮಾಡುತ್ತಾರೆ. ಬ್ರೆಡ್ ತಿನ್ನೋಕೆ ರುಚಿ ಆಗಿರುತ್ತದೆ. ಆದರೆ ಅದನ್ನ ಮನೆಯಲ್ಲೇ ಮಾಡಿ ಸೇವಿಸುವುದು ಆರೋಗ್ಯಕರ.

  • Share this:

    ಬೆಳಗಿನ ಉಪಾಹಾರಕ್ಕೆ ಸಾಕಷ್ಟು ತಿಂಡಿಗಳ ಪಾಕವಿಧಾನಗಳಿವೆ. ಆದರೂ ಜನರು ಇತ್ತೀಚಿನ ದಿನಗಳಲ್ಲಿ ಬ್ರೆಡ್ ಸೇವಿಸುತ್ತಾರೆ. ಸ್ಯಾಂಡ್ ವಿಚ್, ವೆಜಿಟೇಬಲ್ ಮತ್ತು ನಾನ್ ವೆಜಿಟೇಬಲ್ ಬ್ರೆಡ್ ಸ್ಯಾಂಡ್ ವಿಚ್ ಹಾಗೂ ಬ್ರೆಡ್ ಮತ್ತು ಸಾಸ್ ತಿನ್ನೋಕೆ ಹೆಚ್ಚು ಇಷ್ಟ ಪಡುತ್ತಾರೆ. ಮನೆಯಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರತನಕ ಬ್ರೆಡ್ ಸೇವಿಸುತ್ತಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಬೊಜ್ಜು ಸಮಸ್ಯೆ ನಿಯಂತ್ರಣಕ್ಕೆ ಬ್ರೆಡ್ ಸೇವನೆ ಮಾಡುತ್ತಾರೆ. ಬ್ರೆಡ್ ತಿನ್ನೋಕೆ ರುಚಿ ಆಗಿರುತ್ತದೆ. ಆದರೆ ಅದನ್ನ ಮನೆಯಲ್ಲೇ ಮಾಡಿ ಸೇವಿಸುವುದು ಆರೋಗ್ಯಕರ. ಬಿಳಿ ಬ್ರೆಡ್ ಸೇವನೆ ಆರೋಗ್ಯಕ್ಕೆ ಹಲವು ಸಮಸ್ಯೆ ಉಂಟು ಮಾಡುತ್ತದೆ.


    ಇಂದು ವಿಶ್ವ ಹೋಂಮೇಡ್ ಬ್ರೆಡ್ ಡೇ


    ಇಂದು ವಿಶ್ವ ಹೋಂಮೇಡ್ ಬ್ರೆಡ್ ಡೇ. ಮನೆಯಲ್ಲೇ ಮಾಡಿದ ಬ್ರೆಡ್ ಸೇವನೆ ಹೆಚ್ಚು ಆರೋಗ್ಯಕರ ಎಂಬ ಸಂದೇಶ ಮತ್ತು ಜಾಗೃತಿ ಮೂಡಿಸುತ್ತದೆ ಈ ದಿನದ ಆಚರಣೆ. ಮಾರುಕಟ್ಟೆಯಲ್ಲಿ ಲಭ್ಯವಿರುವ ರೆಡಿ ಮಾಡಿದ ಬ್ರೆಡ್ ಅನಾರೋಗ್ಯಕರ. ಇದನ್ನು ಉಪಹಾರದಲ್ಲಿ ಸೇರಿಸಿದರೆ ಆರೋಗ್ಯ ಸಮಸ್ಯೆ ಹೆಚ್ಚಿಸುತ್ತದೆ.


    ಯಾಕೆಂದರೆ ಅವುಗಳನ್ನು ಬಳಕೆ ಮಾಡುವುದು ಟೇಸ್ಟಿ ಮತ್ತು ತ್ವರಿತ ಉಪಹಾರ ತಯಾರಿಸಲು. ಆದರೆ ತೂಕ ನಷ್ಟದ ವಿಷಯಕ್ಕೆ ಬಂದಾಗ ಆಹಾರದಿಂದ ಬ್ರೆಡ್ ನ್ನು ಹೊರಗಿಡುವಂತೆ ಸಲಹೆ ನೀಡ್ತಾರೆ ತಜ್ಞರು.




    ಆದರೆ ಮನೆಯಲ್ಲಿ ಮಾಡಿದ ಬ್ರೆಡ್ ತೂಕ ನಷ್ಟಕ್ಕೆ ಆರೋಗ್ಯಕರ ಆಯ್ಕೆಯೇ ಎಂಬ ಪ್ರಶ್ನೆ ಮೂಡುತ್ತದೆ. ಹಾಗಾದ್ರೆ ನಿಮ್ಮ ತೂಕ ಇಳಿಕೆ ಪ್ರಯಾಣಕ್ಕೆ ತೊಂದರೆ ಉಂಟು ಮಾಡದ ಮತ್ತು ಆರೋಗ್ಯಕ್ಕೆ ಹಾನಿ ಮಾಡದ ಬ್ರೆಡ್ ಗಳು ಯಾವವು ಎಂದು ನೋಡೋಣ.


    ಸಾಮಾನ್ಯ ಬ್ರೆಡ್ ಏಕೆ ಆರೋಗ್ಯಕ್ಕೆ ಹಾನಿಕರ?


    ಫಾರಿನ್ ಕಂಟ್ರಿಗಳಲ್ಲಿ ರೊಟ್ಟಿಗೆ ಬ್ರೆಡ್ ಎಂದು ಕರೆಯುತ್ತಾರೆ. ಆದರೆ ಭಾರತದಲ್ಲಿ ಬ್ರೆಡ್ ಅಂದ್ರೆ ಬೇಕರಿಯಲ್ಲಿ ಸಂಸ್ಕರಿಸಿದ ಹಿಟ್ಟು ಬಳಸಿ ತಯಾರಿಸಿದ ಬಿಳಿ ಬ್ರೆಡ್ ಆಗಿದೆ. ಬ್ರೆಡ್ ಅಂದರೆ ಬಿಳಿ ಬ್ರೆಡ್. ಇದನ್ನು ಸಾಮಾನ್ಯವಾಗಿ ಚಹಾದ ಜೊತೆ ಮತ್ತು ಇತರೆ ಆಹಾರದಲ್ಲಿ ಬಳಕೆ ಮಾಡುತ್ತಾರೆ.


    ಆದರೆ ಈ ಸಂಸ್ಕರಿಸಿದ ಹಿಟ್ಟಿನಿಂದ ತಯಾರಿಸಿದ ಬಿಳಿಯ ಬ್ರೆಡ್ ಸೇವನೆ ಯಾವುದೇ ಪೋಷಕಾಂಶ ನೀಡುವುದಿಲ್ಲ. ಇದನ್ನು ಹೆಚ್ಚು ಸಂಸ್ಕರಿಸಲಾಗುತ್ತದೆ. ಹೀಗಾಗಿ ಇದರಿಂದ ಆರೋಗ್ಯಕ್ಕೆ ಪ್ರಯೋಜನದ ಬದಲು ಹಾನಿಯೇ ಹೆಚ್ಚು. ಬ್ರೆಡ್‌ನ ಹೆಚ್ಚಿನ ಗ್ಲೈಸೆಮಿಕ್ ಸೂಚ್ಯಂಕವು ಮಧುಮೇಹಿಗಳು ಮತ್ತು ಬೊಜ್ಜು ಇದ್ದವರಿಗೆ ಮತ್ತಷ್ಟು ಆರೋಗ್ಯ ಹಾಳು ಮಾಡುತ್ತದೆ. ಇದು ಹೆಚ್ಚಿನ ಕ್ಯಾಲೋರಿ ಹೊಂದಿದೆ. ಮತ್ತು ತೂಕ ನಷ್ಟ ಪ್ರಯಾಣದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.


    ತೂಕ ನಷ್ಟದಲ್ಲಿ ಬ್ರೆಡ್ ತಿನ್ನಬಾರದೇ?


    ತೂಕ ಇಳಿಸಲು ಬ್ರೆಡ್ ತಿನ್ನಬಹುದು. ಆದರೆ ಬಿಳಿಯ ಬ್ರೆಡ್ ಅಲ್ಲ. ಕೆಲವು ಆರೋಗ್ಯಕರ ಬ್ರೆಡ್ ಆಯ್ಕೆಗಳನ್ನು ಪ್ರಯತ್ನಿಸಬಹುದು. ಬ್ರೌನ್ ಬ್ರೆಡ್ ಮತ್ತು ಮಲ್ಟಿಗ್ರೇನ್ ಬ್ರೆಡ್ ತಿನ್ನಬಹುದು. ಈ ಬ್ರೆಡ್‌ಗಳಲ್ಲಿ ಫೈಬರ್ ಕೂಡ ಇದೆ. ಹಾಗಾಗಿ ಇದು ಆರೋಗ್ಯಕ್ಕೆ ಉತ್ತಮ.


    ಕಂದು ಮತ್ತು ಬಹುಧಾನ್ಯ ಬ್ರೆಡ್ ಹೇಗೆ ಪ್ರಯೋಜನಕಾರಿ?


    ಬಿಳಿ ಬ್ರೆಡ್‌ಗಿಂತ ಬ್ರೌನ್ ಬ್ರೆಡ್ ಉತ್ತಮ. ಸಂಪೂರ್ಣ ಗೋಧಿಯಿಂದ ಮಾಡಿದ ಬ್ರೆಡ್ ಆಯ್ಕೆ ಮಾಡಿದರೆ ಆರೋಗ್ಯಕ್ಕೆ ಸಹ ಪ್ರಯೋಜನಕಾರಿ. ಬ್ರೌನ್ ಬ್ರೆಡ್ ಫೈಬರ್, ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದೆ. ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ​​ಪ್ರಕಾರ ಫೈಬರ್-ಭರಿತ ಬ್ರೆಡ್ ರಕ್ತದ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ.


    ಜೀರ್ಣಾಂಗ ವ್ಯವಸ್ಥೆಗೆ ಪ್ರಯೋಜನಕಾರಿ


    ಬ್ರೌನ್ ಬ್ರೆಡ್ ಕರುಳಿನ ಚಲನೆ ನಿಯಂತ್ರಿಸುತ್ತದೆ. ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಅಧಿಕ ರಕ್ತದ ಸಕ್ಕರೆ, ಪಾರ್ಶ್ವವಾಯು ಅಪಾಯ, ಜಠರಗರುಳಿನ ಅಸ್ವಸ್ಥತೆಗಳು ಮತ್ತು ಸ್ಥೂಲಕಾಯ ಕಡಿಮೆ ಮಾಡುತ್ತದೆ. ಬಹು ಧಾನ್ಯದ ಬ್ರೆಡ್‌ಗಳು ಬಾರ್ಲಿ, ಗೋಧಿ, ಓಟ್ಸ್, ಕಾರ್ನ್,


    ಇದನ್ನೂ ಓದಿ: ಮಹಿಳೆಯರ ಅದೆಷ್ಟೋ ಆರೋಗ್ಯ ಸಮಸ್ಯೆಗಳನ್ನು ಬಾಳೆಹಣ್ಣು ನಿವಾರಿಸುತ್ತೆ, ಗೊತ್ತೇ?


    ಬಕ್‌ವೀಟ್, ರಾಗಿ ಮತ್ತು ಅಗಸೆಬೀಜ ಹೊಂದಿರುತ್ತವೆ. ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ. ಕ್ಯಾಲೋರಿ ಸಹ ಕಡಿಮೆ. ಬ್ರೌನ್ ಬ್ರೆಡ್ ಮತ್ತು ಮಲ್ಟಿಗ್ರೇನ್ ಬ್ರೆಡ್ ಹೊಟ್ಟೆ ತುಂಬಿದ ಭಾವನೆ ನೀಡುತ್ತದೆ. ತೂಕ ಇಳಿಸುವ ಪ್ರಯಾಣಕ್ಕೆ ಸಹಕಾರಿ.

    Published by:renukadariyannavar
    First published: