ಪ್ರಪಂಚದಾದ್ಯಂತ (World) ಇಂದು ವಿಶ್ವ ಕ್ಯಾನ್ಸರ್ ದಿನ (World Cancer Day) ಆಚರಣೆ ಮಾಡಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ಹಲವು ಕಾಯಿಲೆಗಳು (Diseases) ಹೆಚ್ಚುತ್ತಿವೆ. ಅದರಲ್ಲಿ ಕ್ಯಾನ್ಸರ್ ಮಹಾಮಾರಿಯು ತುಂಬಾ ಜನರ (People) ಜೀವ ಮತ್ತು ಜೀವನವನ್ನೇ (Life) ಕಸಿದುಕೊಂಡಿದೆ. ಇಂದಿನ ದಿನಗಳಲ್ಲಿ ಹಲವು ರೀತಿಯ ಕ್ಯಾನ್ಸರ್ ರೋಗಿಗಳು (Patients) ಸಿಗುತ್ತಾರೆ. ಕ್ಯಾನ್ಸರ್ ರೋಗಿಗಳು ಹೆಚ್ಚುತ್ತಿದ್ದಾರೆ. ಕೆಟ್ಟ ಆಹಾರ ಮತ್ತು ಜೀವನಶೈಲಿ ಪದ್ಧತಿಯು ಬಹುತೇಕ ಜನರನ್ನು ಕ್ಯಾನ್ಸರ್ ಮಹಾಮಾರಿಗೆ ನೂಕುತ್ತಿದೆ. ಹಾಗಾಗಿ ತುಂಬಾ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಒಂದೇ ರೀತಿಯ ಅಲ್ಲ, ವಿವಿಧ ರೀತಿಯ ಕ್ಯಾನ್ಸರ್ ಗಳು ಜನರನ್ನು ಬಾಧಿಸುತ್ತಿವೆ.
ಜನರನ್ನು ಬಾಧಿಸುತ್ತಿದೆ ಕ್ಯಾನ್ಸರ್ ಮಹಾಮಾರಿ
ಕ್ಯಾನ್ಸರ್ ಮಹಾಮಾರಿ ಹಳ್ಳಿ ಮತ್ತು ನಗರ ಎಲ್ಲಾ ಜನರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ. ಇದು ಭಯಾನಕ ಮತ್ತು ಮಾರಣಾಂತಿಕವಾಗಿದೆ. ಹಾಗಾಗಿ ಮಹಾಮಾರಿ ಕ್ಯಾನ್ಸರ್ ರೋಗದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನ ಆಚರಿಸಲಾಗುತ್ತದೆ.
ಕ್ಯಾನ್ಸರ್ ಎಂದ ತಕ್ಷಣ ಜನರು ಆತಂಕ ಪಡುತ್ತಾರೆ. ತಾವಿನ್ನು ಬದುಕುವುದೇ ಇಲ್ಲ ಎಂದುಕೊಳ್ತಾರೆ. ಇದಕ್ಕೆಲ್ಲಾ ಕಾರಣ ಅಂದ್ರೆ ಕ್ಯಾನ್ಸರ್ ಬಗ್ಗೆ ಸರಿಯಾದ ತಿಳಿವಳಿಕೆ ಮತ್ತು ಜಾಗೃತಿ ಇರದೇ ಇರುವುದು.
ಹಾಗಾಗಿ ಜನರಲ್ಲಿ ಕ್ಯಾನ್ಸರ್ ಬಗ್ಗೆ ಹಾಗೂ ಅದರ ರೋಗ ಲಕ್ಷಣಗಳ ಬಗ್ಗೆ ತಿಳಿಸಿದರೆ, ಅರಿವು ಮೂಡಿಸಿದರೆ, ಆರಂಭಿಕ ಹಂತದಲ್ಲೇ ಕ್ಯಾನ್ಸರ್ ನ್ನು ಪತ್ತೆ ಮಾಡಬಹುದು. ಮತ್ತು ರೋಗ ನಿರ್ಣಯದ ನಂತರ ಉತ್ತಮ ಮತ್ತು ಯಶಸ್ವಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
ಆದರೆ ಕೆಲವು ಕ್ಯಾನ್ಸರ್ ಗಳು ಆರಂಭಿಕ ಹಂತದಲ್ಲಿ ರೋಗ ಲಕ್ಷಣಗಳು ಗೋಚರಿಸುವುದಿಲ್ಲ. ಮತ್ತು ಪತ್ತೆ ಆಗುವುದಿಲ್ಲ. ಹೀಗಾಗಿ ವೈದ್ಯರು ಮತ್ತು ತಜ್ಞರು ಕ್ಯಾನ್ಸರ್ ಸಣ್ಣ ಮತ್ತು ಸೌಮ್ಯ ಲಕ್ಷಣಗಳ ಬಗ್ಗೆ ನಿಗಾ ಇಡುವಂತೆ ಹೇಳ್ತಾರೆ.
ಕ್ಯಾನ್ಸರ್ ಚಿಹ್ನೆಗಳು ಮತ್ತು ರೋಗ ಲಕ್ಷಣಗಳನ್ನು ಆರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಅವು ಬೆಳೆಯದಂತೆ ತಡೆಯಬಹುದು. ಯಶಸ್ವಿ ಚಿಕಿತ್ಸೆಗೆ ಇದು ಸಹಕಾರಿ ಆಗುತ್ತದೆ.
ವಿವಿಧ ರೀತಿಯ ಕ್ಯಾನ್ಸರ್ ಗಳು ವಿವಿಧ ರೀತಿಯ ಲಕ್ಷಣ ಬೀರುತ್ತವೆ. ಇಲ್ಲಿ ನಾವು ಕೆಲವು ಕ್ಯಾನ್ಸರ್ ಗಳ ಆರಂಭಿಕ ಲಕ್ಷಣಗಳ ಬಗ್ಗೆ ನೋಡೋಣ.
ಅನಗತ್ಯ ತೂಕ ನಷ್ಟ
ಯಾವುದೇ ಕಾರಣವಿಲ್ಲದೆ ತೂಕ ನಷ್ಟ, ಹಠಾತ್ ತೂಕ ಇಳಿಕೆಯು ತುಂಬಾ ಕೆಟ್ಟದ್ದು. ಇದು ಕ್ಯಾನ್ಸರ್ ನ ಮೊದಲ ಲಕ್ಷಣವಾಗಿರುತ್ತದೆ. ಹಾಗಾಗಿ ವೈದ್ಯರ ಬಳಿ ಸರಿಯಾಗಿ ತಪಾಸಣೆ ಮಾಡಿಸಿ ಅಂತಾರೆ ವೈದ್ಯರು. ಇದನ್ನು ವರದಿಯಂದು ಹೇಳಿದೆ.
ಕೆಲವೇ ದಿನಗಳಲ್ಲಿ 10 ಕೆಜಿ ಇಲ್ಲವೇ 4.5 ಕೆಜಿ ತೂಕ ಇಳಿಸಿದರೆ ಎಚ್ಚರಿಕೆ ವಹಿಸಿ. ಇದು ಅಪರೂಪದ ಕ್ಯಾನ್ಸರ್ ನ ಮೊದಲ ಚಿಹ್ನೆ ಆಗಿರಬಹುದು.
ಆಯಾಸ ಆಗುವುದು
ತುಂಬಾ ಕಷ್ಟ ಪಟ್ಟು ದುಡಿದು, ಬೆವರು ಹರಿಸಿ ಸಂಜೆ ಮನೆಗೆ ಬರುವ ವ್ಯಕ್ತಿಯು ಸುಸ್ತಾಗಿದೆ ಅಂದರೆ ಅದು ಸಾಮಾನ್ಯವಾಗಿರುತ್ತದೆ. ಆದರೆ ದಿನದಲ್ಲಿ ಯಾವುದೇ ಕೆಲಸ ಮಾಡದೇ ಆಯಾಸ ಆದ್ರೆ ಅದು ಕ್ಯಾನ್ಸರ್ ನ ಸಂಕೇತವಾಗಿರಬಹುದು.
ಆಯಾಸ, ವಿಶ್ರಾಂತಿ ಪಡೆದ ನಂತರವೂ ದಣಿಯುವುದು, ದೌರ್ಬಲ್ಯ ಉಂಟಾದರೆ ಇದನ್ನು ಕ್ಯಾನ್ಸರ್ ಸಂಕೇತ ಎಂದು ಕರೆಯುತ್ತಾರೆ.
ಜ್ವರ
ಹವಾಮಾನದಲ್ಲಿ ಬದಲಾವಣೆ ಆದಾಗ ಜ್ವರ ಬರುವುದು ಸಾಮಾನ್ಯ. ಶೀತ ಮತ್ತು ಜ್ವರ ಸಾಮಾನ್ಯ ಕಾಯಿಲೆ. ಹೀಗೆ ಬರುವ ಜ್ವರವು ಎರಡು ಅಥವಾ ಮೂರು ದಿನಗಳಲ್ಲಿ ಗುಣವಾಗುತ್ತದೆ. ಹಾಗೂ ವಾರದೊಳಗೆ ಶೀತವೂ ಕಡಿಮೆ ಆಗುತ್ತದೆ. ಆದರೆ ಕ್ಯಾನ್ಸರ್ ಲಕ್ಷಣವಿದ್ದಾಗ ಜ್ವರವು ಹೆಚ್ಚಾಗಿ ರಾತ್ರಿ ಕಾಣಿಸಿಕೊಳ್ಳುತ್ತದೆ. ಬೆವರು ಮತ್ತು ಜ್ವರ ರಾತ್ರಿ ಉಂಟಾದರೆ ಅದು ಕ್ಯಾನ್ಸರ್ ಲಕ್ಷಣ ಆಗಿರಬಹುದು.
ದೇಹದಲ್ಲಿ ನೋವು
ದೇಹದ ನೋವು ಉಂಟಾಗುವುದು ಸಾಮಾನ್ಯ. ಆದರೆ ವಿಶ್ರಾಂತಿ ಮತ್ತು ಔಷಧ ಸೇವನೆ ನಂತರವೂ ಜ್ವರ ವಾಸಿಯಾಗಾದಿದ್ದರೆ, ನೋವು ಕಡಿಮೆ ಆಗದಿದ್ದರೆ ಇದು ಕ್ಯಾನ್ಸರ್ ಸಂಕೇತವಾಗಿರಬಹುದು. ಕ್ಯಾನ್ಸರ್ ನೋವು ದೇಹದ ಅನೇಕ ಭಾಗಗಳಲ್ಲಿ ಒತ್ತಡ ಮತ್ತು ನೋವು ಉಂಟು ಮಾಡುತ್ತದೆ.
ಇದನ್ನೂ ಓದಿ: ಸ್ತ್ರೀಯರ ಎದೆಯ ಮೇಲೆ ದದ್ದುಗಳು ಉಂಟಾಗುವುದೇಕೆ? ಇದಕ್ಕೆ ಪರಿಹಾರ ಏನು?
ಚರ್ಮದ ಬಣ್ಣ ಹಾಗೂ ವಿನ್ಯಾಸ ಬದಲಾವಣೆ
ಚರ್ಮದಲ್ಲಿ ಕಾಮಾಲೆ ಪತ್ತೆಯಾಗುತ್ತದೆ. ಕಾಮಾಲೆ ಇದ್ದಾಗ ಅದು ಕೆಲವೊಮ್ಮೆ ಕ್ಯಾನ್ಸರ್ ಕಾಯಿಲೆ ಲಕ್ಷಣವಾಗಿರಬಹುದು. ಚರ್ಮದ ಮೇಲಿನ ಮಚ್ಚೆಗಳು ಲಘುವಾಗಿ ಪರಿಗಣಿಸಬೇಡಿ ಇದು ಕ್ಯಾನ್ಸರ್ ನ ಲಕ್ಷಣವಾಗಿರಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ