• Home
  • »
  • News
  • »
  • lifestyle
  • »
  • International Men's Day: ಪುರುಷರನ್ನು ಕಾಡುತ್ತಿದೆ 'ಪುರುಷತ್ವ' ಕೊರತೆ; ಡೋಂಟ್ ವರಿ, ಇಲ್ಲಿದೆ 'ಅದಕ್ಕೆ' ಪರಿಹಾರ!

International Men's Day: ಪುರುಷರನ್ನು ಕಾಡುತ್ತಿದೆ 'ಪುರುಷತ್ವ' ಕೊರತೆ; ಡೋಂಟ್ ವರಿ, ಇಲ್ಲಿದೆ 'ಅದಕ್ಕೆ' ಪರಿಹಾರ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪುರುಷರುಸೇವಿಸುವ ಆಹಾರ ಪದಾರ್ಥ ಮತ್ತು ಜೀವನಶೈಲಿ ಅವರ ವೀರ್ಯ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳ್ತಾರೆ ತಜ್ಞರು. ಹಾಗಾಗಿ ವೀರ್ಯದ ಗುಣಮಟ್ಟ ಕಾಪಾಡುವ ಪದಾರ್ಥ ಸೇವಿಸುವುದು ತುಂಬಾ ಮುಖ್ಯ. ಪುರುಷರು ಕಳಪೆ ಆಹಾರ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಅವರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣ ಎರಡರ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ!

ಮುಂದೆ ಓದಿ ...
  • Share this:

    ಇಂದು ಅಂತಾರಾಷ್ಟ್ರೀಯ ಪುರುಷರ ದಿನವನ್ನು (International Men’s Day) ಆಚರಣೆ ಮಾಡಲಾಗುತ್ತಿದೆ. ನವೆಂಬರ್ 19 ನ್ನು ಪ್ರತೀ ವರ್ಷ ಪುರುಷರ ದಿನವನ್ನಾಗಿ ಆಚರಿಸಲಾಗುತ್ತದೆ. ಪ್ರತಿದಿನ ಇಡೀ ಕುಟುಂಬದ (Family) ಆಗು ಹೋಗುಗಳ ಜವಾಬ್ದಾರಿ ಹೊತ್ತು, ಕುಟುಂಬಕ್ಕಾಗಿ ಎಲ್ಲವನ್ನೂ ತ್ಯಾಗ ಮಾಡುವ ಜೀವಿ ಗಂಡಸು. ಅವರಿಗಾಗಿ ಅವರು ಹೆಚ್ಚು ಏನನ್ನೂ ಕೇಳುವುದಿಲ್ಲ. ಹೀಗಿದ್ದಾಗ ಪುರುಷರು ತಮ್ಮ ಆರೋಗ್ಯದತ್ತಲೂ (Health) ಹೆಚ್ಚು ಗಮನ ಹರಿಸುವ ಅವಶ್ಯಕತೆ ಇದೆ. ಪುರುಷರು ತಾವು ಸೇವಿಸುವ ಆಹಾರ ಪದಾರ್ಥ (Food Ingredients) ಮತ್ತು ಜೀವನಶೈಲಿ ಅವರ ವೀರ್ಯ ಸಂಖ್ಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳ್ತಾರೆ ತಜ್ಞರು. ಹಾಗಾಗಿ ವೀರ್ಯದ ಗುಣಮಟ್ಟ ಕಾಪಾಡುವ ಪದಾರ್ಥ ಸೇವಿಸುವುದು ತುಂಬಾ ಮುಖ್ಯ.


    ವೀರ್ಯ ಸಂಖ್ಯೆ ಹೆಚ್ಚಿಸುವ ಮಾರ್ಗಗಳು


    ಪುರುಷರು ಸೇವಿಸುವ ಆಹಾರ ಪದಾರ್ಥವು ಅವರ ವೀರ್ಯದ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ ಎಂದು ಹೇಳ್ತಾರೆ ತಜ್ಞರು. ಹ್ಯೂಮನ್ ರಿಪ್ರೊಡಕ್ಷನ್ ಅಪ್‌ ಡೇಟ್ ಜರ್ನಲ್‌ ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ಕಳೆದ 60 ವರ್ಷಗಳಲ್ಲಿ ಪುರುಷರ ವೀರ್ಯದ ಸಂಖ್ಯೆ 50 ಪ್ರತಿಶತ ಕಡಿಮೆ ಆಗಿದೆ. ಹಾಗೂ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ಪುರುಷರ ಫಲವತ್ತತೆಯ ಪ್ರಮಾಣ ಜಾಗತಿಕವಾಗಿ 15 ಪ್ರತಿಶತ ಕಡಿಮೆ ಆಗಿದೆ ಎಂದು ಹೇಳಿದೆ.




    ಕ್ರಿಯಾತ್ಮಕ ಪೌಷ್ಟಿಕತಜ್ಞ ಮುಗ್ಧಪ್ರಧಾನ್ ಹೇಳುವ ಪ್ರಕಾರ, ಪುರುಷರ ವೀರ್ಯದ ಸಾಂದ್ರತೆ, ಚಲನಶೀಲತೆ ಮತ್ತು ಆಕಾರವು ಅವನ ಫಲವತ್ತತೆಯ ಮಟ್ಟ ನಿರ್ಧರಿಸುತ್ತದೆ ಎಂದು ಹೇಳ್ತಾರೆ. ಕೆಟ್ಟ ಜೀವನಶೈಲಿಯೇ ಇದರ ಅವನತಿಗೆ ಮುಖ್ಯ ಕಾರಣ ಎನ್ನುತ್ತಾರೆ.


    ಪುರುಷರು ಕಳಪೆ ಆಹಾರ ಮತ್ತು ಅತಿಯಾದ ಆಲ್ಕೋಹಾಲ್ ಸೇವನೆ ಮಾಡುತ್ತಿದ್ದರೆ ಅವರ ವೀರ್ಯದ ಗುಣಮಟ್ಟ ಮತ್ತು ಪ್ರಮಾಣ ಎರಡರ ಮೇಲೂ ಇದು ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ.


    ಇದು ಪುರುಷರು ತಂದೆಯಾಗುವ ಸಾಧ್ಯತೆ ಕಡಿಮೆ ಮಾಡುತ್ತದೆ. ಹಾಗಾಗಿ ಉತ್ತಮ ಆಹಾರ, ಉತ್ತಮ ಜೀವನಶೈಲಿ ಮೂಲಕ ಪುರುಷರು ತಮ್ಮ ಆರೋಗ್ಯದ ಜೊತೆಗೆ ವೀರ್ಯದ ಫಲವತ್ತತೆಯ ಗುಣಮಟ್ಟ ಕಾಪಾಡಬಹುದು.


    ವಿಟಮಿನ್ ಡಿ ಸೇವನೆ ಹೆಚ್ಚಿಸಿ


    ಪುರುಷ ಫಲವತ್ತತೆ ಹೆಚ್ಚಿಸಲು ಮತ್ತು ಆರೋಗ್ಯ ಕಾಪಾಡಲು ವಿಟಮಿನ್ ಡಿ ಪ್ರಯೋಜನಕಾರಿ ಆಗಿದೆ. ಇದು ಟೆಸ್ಟೋಸ್ಟೆರಾನ್ ಮಟ್ಟ ಹೆಚ್ಚಿಸಲು ಕೆಲಸ ಮಾಡುತ್ತದೆ. ವಿಟಮಿನ್ ಡಿ ಕೊರತೆಯಿರುವ ಪುರುಷರು ಸಾಕಷ್ಟು ಟೆಸ್ಟೋಸ್ಟೆರಾನ್ ಉತ್ಪಾದನೆ ಮಾಡಲು ಸಾಧ್ಯವಾಗಲ್ಲ ಎಂದು ಹಲವು ಅಧ್ಯಯನಗಳು ಹೇಳಿವೆ. ಈ ವೇಳೆ ಸಾಕಷ್ಟು ಪ್ರಮಾಣದ ವಿಟಮಿನ್ ಡಿ ಸೇವಿಸುವುದು ಆರೋಗ್ಯಕರ.


    ಅಶ್ವಗಂಧ ಸೇವಿಸಿ


    ಅಶ್ವಗಂಧ ಪುರುಷರಿಗೆ ತುಂಬಾ ಪ್ರಯೋಜನಕಾರಿ ಎಂದು ಹೇಳಲಾಗಿದೆ. ಪುರುಷರಲ್ಲಿ ಕಡಿಮೆ ಫಲವತ್ತತೆ ಉತ್ತೇಜಿಸಲು ಇದು ಅತ್ಯುತ್ತಮ ನೈಸರ್ಗಿಕ ಪರಿಹಾರ ಆಗಿದೆ. ದಿನಕ್ಕೆ ಐದು ಗ್ರಾಂ ಅಶ್ವಗಂಧ ಸೇವನೆ ಮಾಡಿದರೆ ವೀರ್ಯದ ಸಂಖ್ಯೆ ಮತ್ತು ಚಲನಶೀಲತೆ ಹೆಚ್ಚುತ್ತದೆ ಎಂದು ಹೇಳಲಾಗಿದೆ.


    ಸತು ಪದಾರ್ಥ ಸೇವನೆ


    ಸತುವು ಪುರುಷರಲ್ಲಿ ವೀರ್ಯಾಣು ಸಂಖ್ಯೆ ಹೆಚ್ಚಿಸಲು ಸಹಕಾರಿ. ಹಾಗಾಗಿ ಪುರುಷರಿಗೆ ಮಹಿಳೆಯರಿಗಿಂತ ಹೆಚ್ಚು ಸತು ಪದಾರ್ಥಗಳ ಅಗತ್ಯವಿದೆ. ಹೆಚ್ಚುವರಿಯಾಗಿ ಇದು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. ಇದು ಪುರುಷರ ಲೈಂಗಿಕ, ಪ್ರಾಸ್ಟೇಟ್ ಮತ್ತು ಟೆಸ್ಟೋಸ್ಟೆರಾನ್ ಆರೋಗ್ಯಕ್ಕೆ ಪ್ರಯೋಜನಕಾರಿ ಆಗಿದೆ. ಸತುವಿನ ಕೊರತೆ ವೀರ್ಯದ ಸಂಖ್ಯೆ ಕಡಿಮೆಯಾಗಲು ಕಾರಣವಾಗುತ್ತದೆ. ವೀರ್ಯದಲ್ಲಿ ಅಸಹಜತೆ ಉಂಟು ಮಾಡಬಹುದು.


    ಸೋಯಾ ಸೇವನೆ ಕಡಿಮೆ ಮಾಡಿ


    ಸೋಯಾ ವೀರ್ಯವನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ಅಧ್ಯಯನಗಳು ಹೇಳಿವೆ. ದಿನವೂ ಹೆಚ್ಚು ಸೋಯಾ ಸೇವಿಸುವ ಪುರುಷರು ಕಡಿಮೆ ಫಲವತ್ತತೆ ಹೊಂದಿದ್ದಾರೆ.


    ಇದನ್ನೂ ಓದಿ: ಅಸ್ತಮಾ ಸಮಸ್ಯೆ, ಯಕೃತ್ತಿನ ಆರೋಗ್ಯಕ್ಕೆ ಸೇವಿಸಿ ಗ್ರೀನ್ ಆ್ಯಪಲ್!


    ಶಿಲಾಜಿತ್


    ಪುರುಷರಲ್ಲಿ ದುರ್ಬಲತೆ ತಡೆಗಟ್ಟಲು ಶಿಲಾಜಿತ್ ಅತ್ಯುತ್ತಮ ಪೂರಕವಾಗಿದೆ. ವೀರ್ಯದ ಸಂಖ್ಯೆಯು ಕಡಿಮೆಯಾಗುತ್ತಿದ್ದರೆ ಹಗಲಿನಲ್ಲಿ ಶಿಲಾಜಿತ್ ಸೇವನೆ ಸಹಕಾರಿ. ವೈದ್ಯರ ಸಲಹೆ ಪಡೆದು ಸೇವಿಸಬಹುದು.

    Published by:renukadariyannavar
    First published: