• Home
 • »
 • News
 • »
 • lifestyle
 • »
 • HIV AIDS: ಇಂದು ಎಚ್ ಐವಿ ದಿನ, ಏಡ್ಸ್ ಅಪಾಯ ಯಾರಿಗೆ ಹೆಚ್ಚು, ನೈಸರ್ಗಿಕ ಪರಿಹಾರ ಹೀಗಿದೆ!

HIV AIDS: ಇಂದು ಎಚ್ ಐವಿ ದಿನ, ಏಡ್ಸ್ ಅಪಾಯ ಯಾರಿಗೆ ಹೆಚ್ಚು, ನೈಸರ್ಗಿಕ ಪರಿಹಾರ ಹೀಗಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್, ಏಡ್ಸ್‌ಗೆ ಕಾರಣವಾಗುವ ಒಂದು ರೀತಿಯ ವೈರಸ್. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸುತ್ತದೆ. ಎಚ್ಐವಿ ವೈರಸ್ ದೇಹದ ಮೇಲೆ ದಾಳಿ ಮಾಡುತ್ತದೆ. ಅನೇಕ ಕಾರಣದಿಂದ ನಿಮ್ಮನ್ನು ಸೋಂಕಿಗೆ ತುತ್ತಾಗಿಸಬಹುದು. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಸೋಂಕುಗಳು ಮತ್ತು ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.

ಮುಂದೆ ಓದಿ ...
 • Share this:

  ಪ್ರತಿ ವರ್ಷ (Every Year) ಡಿಸೆಂಬರ್ 1ನ್ನು ವಿಶ್ವ ಏಡ್ಸ್ ದಿನವನ್ನಾಗಿ (World Aids Day) ಆಚರಿಸುತ್ತಾರೆ. ಮೊದಲ ಬಾರಿಗೆ 1988 ರಲ್ಲಿ ಆಚರಿಸಲಾಯಿತು. ಈ ದಿನವನ್ನು ಏಡ್ಸ್ ಮಾರಣಾಂತಿಕ ಕಾಯಿಲೆ (Deadly Disease) ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಆಚರಿಸಲಾಗುತ್ತದೆ. ಏಡ್ಸ್ ದಿನದಂದು ವೈದ್ಯಕೀಯ ಸಂಸ್ಥೆಗಳಿಂದ ಶಾಲೆ, ಕಾಲೇಜು ಮತ್ತು ಸರ್ಕಾರಿ ಕಚೇರಿಗೆ ಕೆಂಪು ಬಣ್ಣದ ರಿಬ್ಬನ್‌ ಹಾಕುವ ಮೂಲಕ ಜನರು ವಿವಿಧ ರೀತಿಯ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ. ಈ ದಿನಗಳಲ್ಲಿ ಜನರು ಏಡ್ಸ್ ಎಚ್ಐವಿ ಬಗ್ಗೆ ಸರಿಯಾದ ಮಾಹಿತಿ ಹೊಂದಿರುವುದು ಅವಶ್ಯಕ. ಏಡ್ಸ್ ಎಚ್ಐವಿಗೆ ಸಂಬಂಧಿತ ಕೆಲವು ಪ್ರಮುಖ ಮಾಹಿತಿ ತಿಳಿಯೋಣ.


  ಎಚ್ಐವಿ ಏಡ್ಸ್ ಎಂದರೇನು?


  ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್, ಏಡ್ಸ್‌ಗೆ ಕಾರಣವಾಗುವ ಒಂದು ರೀತಿಯ ವೈರಸ್. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲಗೊಳಿಸುತ್ತದೆ. ಎಚ್ಐವಿ ವೈರಸ್ ದೇಹದ ಮೇಲೆ ದಾಳಿ ಮಾಡುತ್ತದೆ. ಅನೇಕ ಕಾರಣದಿಂದ ನಿಮ್ಮನ್ನು ಸೋಂಕಿಗೆ ತುತ್ತಾಗಿಸಬಹುದು. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುತ್ತದೆ. ಸೋಂಕುಗಳು ಮತ್ತು ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ.


  ಒಬ್ಬ ವ್ಯಕ್ತಿಯು ಒಮ್ಮೆ ಎಚ್ ಐವಿ ಸೋಂಕಿಗೆ ಒಳಗಾದರೆ ಇಡೀ ಜೀವನ ಅದರಿಂದ ರಕ್ಷಣೆ ಪಡೆಯಲು ಹೋರಾಡಬೇಕಾಗುತ್ತದೆ. HIV ಮಾನವರ ಮೇಲೆ ಪ್ರತಿರಕ್ಷಣಾ ವ್ಯವಸ್ಥೆಯ ಬಿಳಿ ರಕ್ತ ಕಣಗಳಿಗೆ ಸೋಂಕು ತಗುತ್ತದೆ. ಇದು CD4 ಕೋಶಗಳನ್ನು ನಾಶ ಪಡಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆ ದುರ್ಬಲವಾಗಿ ಸೋಂಕನ್ನು ತಡೆಯಲು ಸಾಧ್ಯವಾಗಲ್ಲ.
  HIV ಯ ಆರಂಭದ ಲಕ್ಷಣಗಳು


  ಜ್ವರ ರೋಗ ಲಕ್ಷಣ ಕಂಡು ಬರುತ್ತದೆ. ಇದು ನಿಧಾನವಾಗಿ ಟಿ-ಕೋಶಗಳನ್ನು ನಾಶಪಡಿಸುತ್ತದೆ. ಟಿ-ಕೋಶಗಳು ತುಂಬಾ ಕಡಿಮೆಯಾದರೆ ಕಾಯಿಲೆ ಉಂಟಾಗುತ್ತದೆ. ತ್ವರಿತ ತೂಕ ನಷ್ಟ, ಅತ್ಯಂತ ದಣಿದ ಭಾವನೆ, ಬಾಯಿ ಮತ್ತು ಜನನಾಂಗದ ಪ್ರದೇಶದಲ್ಲಿ ಹುಣ್ಣು, ಜ್ವರ, ರಾತ್ರಿ ಬೆವರುವಿಕೆ ಮತ್ತು ಚರ್ಮದ ಬಣ್ಣ ಬದಲಾಗುತ್ತದೆ.


  ಯಾರಿಗೆ HIV ಅಪಾಯ ಹೆಚ್ಚು?


  HIV ಪಾಸಿಟಿವ್ ಸಂಗಾತಿ ಜೊತೆ ಇರುವುದು, ಹೆಚ್ಚಿನ HIV ಪ್ರಮಾಣವಿರುವ ಪ್ರದೇಶಗಳಲ್ಲಿ ವಾಸಿಸುವ ಜನರ ಜೊತೆ ಇರುವುದು, ಲೈಂಗಿಕ ಶಕ್ತಿ ಹೆಚ್ಚಿಸಲು ಔಷಧ ಬಳಸುವುದು, ಅಸುರಕ್ಷಿತ ಲೈಂಗಿಕತೆ, ಡ್ರಗ್ಸ್ ಚುಚ್ಚುಮದ್ದು ಮಾಡುವ ಜನರು, ಬೇರೆ ಜನರ ಔಷಧ ಉಪಕರಣಗಳನ್ನು ಬಳಸುವ ಜನರು. ಅಪರಿಚಿತ ವ್ಯಕ್ತಿಯೊಂದಿಗೆ ಲೈಂಗಿಕ ಆಟಿಕೆ ಹಂಚಿಕೊಳ್ಳುವುದು, ಹೆಪಟೈಟಿಸ್ ಬಿ ಮತ್ತು ಹೆಪಟೈಟಿಸ್ ಸಿ, ಒಂದಕ್ಕಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಲೈಂಗಿಕ ಕ್ರಿಯೆ ನಡೆಸುವುದು ಎಚ್ ಐವಿ ತಗುಲುವ ಸಾಧ್ಯತೆ ಹೆಚ್ಚಿಸುತ್ತದೆ.


  ಎಚ್ಐವಿ ಏಡ್ಸ್ ಸೋಂಕನ್ನು ತಪ್ಪಿಸಲು ಕಾಳಜಿ ವಹಿಸಿ


  HIV ಪರೀಕ್ಷೆ ಮಾಡಿಸಿ. ಸಂಭೋಗಕ್ಕೂ ಮೊದಲು ಪರೀಕ್ಷೆ ಮಾಡಿಸಿ. ಕಡಿಮೆ ಅಪಾಯಕಾರಿ ಲೈಂಗಿಕ ಅಭ್ಯಾಸಗಳನ್ನು ಆಯ್ಕೆ ಮಾಡಿ. ಸುರಕ್ಷಿತ ಲೈಂಗಿಕತೆಗೆ ಆದ್ಯತೆ ನೀಡಿ. ಕಾಂಡೋಮ್ಗಳು ಮತ್ತು ಅವುಗಳ ಬಳಕೆಯ ಬಗ್ಗೆ ಸರಿಯಾದ ಮಾಹಿತಿ ಪಡೆಯಿರಿ. ಲೈಂಗಿಕ ಪಾಲುದಾರರ ಸಂಖ್ಯೆ ಮಿತಿಗೊಳಿಸಿ. ಹೆಚ್ಚು ಲೈಂಗಿಕ ಪಾಲುದಾರರನ್ನು ಹೊಂದುವುದು ಅಪಾಯ ತಂದೊಡ್ಡುತ್ತದೆ.


  ಲೆಸ್ಬಿಯನ್ ಮತ್ತು ಎಲ್ಜಿಬಿಟಿ ಭ್ರಾತೃತ್ವದ ಜನರು ಸಹ ವಿಶೇಷ ಕಾಳಜಿ ವಹಿಸಿ. ಲೆಸ್ಬಿಯನ್ ಲೈಂಗಿಕತೆಯ ಸಮಯದಲ್ಲಿ ಎಚ್ಐವಿ ಸೋಂಕಿನ ಸಾಧ್ಯತೆಯಿದೆ. ಗುದ ಸಂಭೋಗವು ಎಚ್ಐವಿ ಹರಡುವಿಕೆಗೆ ದೊಡ್ಡ ಕಾರಣಗಳಲ್ಲಿ ಒಂದಾಗಿದೆ. ಔಷಧ, ಚುಚ್ಚುಮದ್ದು ಇತರರೊಂದಿಗೆ ಹಂಚಿಕೊಳ್ಳಬೇಡಿ.


  ಇದನ್ನೂ ಓದಿ: ಯಾವ ವಯಸ್ಸಿನ ಮಕ್ಕಳಿಗೆ ಎಷ್ಟು ಪ್ರಮಾಣದ ಕಬ್ಬಿಣಾಂಶ ಬೇಕಾಗುತ್ತದೆ?


  ಏಡ್ಸ್ ರೋಗ ಲಕ್ಷಣ ಎದುರಿಸಲು ಕೆಲವು ನೈಸರ್ಗಿಕ ಪರಿಹಾರಗಳು


  ಡಾ. ಸ್ಮಿತಾ ನರಮ್ ಪ್ರಕಾರ, ಅಡುಗೆ ಮನೆಯಲ್ಲಿರುವ ಪದಾರ್ಥಗಳಲ್ಲಿ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ಹುಡುಕುತ್ತೇವೆ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂಟರಿಂದ ಹತ್ತು ತುಳಸಿ ಎಲೆ ತಿನ್ನುವುದು ಎಚ್‌ಐವಿಯಿಂದ ಉಂಟಾಗುವ ನೋವಿನಿಂದ ಮುಕ್ತಿ ಪಡೆಯಬಹುದು. ಖರ್ಜೂರ, ಎರಡು ಬಾದಾಮಿ ಸೇರಿ ಒಣ ಹಣ್ಣುಗಳನ್ನು ನೀರಿನಲ್ಲಿ ನೆನೆಸಿ ಸೇವಿಸಿ.

  Published by:renukadariyannavar
  First published: