Tobacco-Cancer: ಸಿಗರೇಟ್, ತಂಬಾಕು ಸೇವನೆ ಮಾಡುವವರಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್ ಅಪಾಯ! ತಜ್ಞರು ಹೇಳೋದೇನು?

ಸಂಶೋಧನೆಯ ಪ್ರಕಾರ, ಸಿಗರೇಟ್ ಸೇದುವವರಲ್ಲಿ ಮೂತ್ರಪಿಂಡದ ಕ್ಯಾನ್ಸರ್ ಬರುವ ಸಾಧ್ಯತೆ 1.36 ಪಟ್ಟು ಹೆಚ್ಚು ಎಂದು ಳಿಸಿದೆ. ಜೊತೆಗೆ ಸಿಗರೇಟ್ ಸೇದುವವರಿಗೆ ಕ್ಯಾನ್ಸರ್ ನ ಮುಂದುವರಿದ ಹಂತ ಬರುವ ಸಾಧ್ಯತೆ ಹೆಚ್ಚಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವಿಶ್ವದಲ್ಲೇ (World)  ತಂಬಾಕು ಸೇವನೆ (Tobacco) ಮಾಡುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇದು ಅತಿ ದೊಡ್ಡ ಸಾರ್ವಜನಿಕ ಆರೋಗ್ಯ (Health) ಬೆದರಿಕೆಗಳಲ್ಲಿ ಒಂದಾಗಿದೆ. ಧೂಮಪಾನ (Smoking) ಅಥವಾ ತಂಬಾಕು ಸೇವನೆಯ ಇತರ ವಿಧಾನಗಳು ಕ್ಯಾನ್ಸರ್‌ (Cancer) ಗೆ ಮುಖ್ಯ ಕಾರಣ ಆಗುತ್ತಿವೆ. ಧೂಮಪಾನ ಹಾಗೂ ತಂಬಾಕು ಸೇವನೆ ವ್ಯಕ್ತಿಯಲ್ಲಿ ಕ್ಯಾನ್ಸರ್ ಅನ್ನು ಬೇಗ ಹುಟ್ಟು ಹಾಕುತ್ತದೆ. ರಕ್ತದ ಕ್ಯಾನ್ಸರ್, ಮೂತ್ರಪಿಂಡ ಮತ್ತು ಮೂತ್ರಕೋಶ, ಸಣ್ಣ ಮತ್ತು ದೊಡ್ಡ ಕರುಳು, ಬಾಯಿ ಮತ್ತು ಗಂಟಲಿನ ಕ್ಯಾನ್ಸರ್, ಶ್ವಾಸನಾಳದ ಕ್ಯಾನ್ಸರ್ ಮತ್ತು ಶ್ವಾಸಕೋಶ, ಯಕೃತ್ ಮತ್ತು ಗರ್ಭಾಶಯದ ಕ್ಯಾನ್ಸರ್ ಮತ್ತು ಸಾಮಾನ್ಯವಾಗಿ ದೇಹದ ಯಾವುದೇ ಭಾಗದಲ್ಲಿ ಕ್ಯಾನ್ಸರ್‌ ಹುಟ್ಟಿಕೊಳ್ಳಲು ತಂಬಾಕು ಮುಖ್ಯ ಕಾರಣವಾಗಿದೆ.

    ಸಿಗರೇಟ್ ಸೇದುವವರಿಗೆ ಕ್ಯಾನ್ಸರ್

    ಇಲ್ಲಿ ನಾವು ಮೂತ್ರಪಿಂಡದ ಕ್ಯಾನ್ಸರ್ ಬಗ್ಗೆ ಹೇಳುವುದಾದರೆ, ಸಿಗರೇಟ್ ಸೇದುವವರಿಗೆ ಮೂತ್ರಪಿಂಡದ ಕ್ಯಾನ್ಸರ್ ಬರುವ ಸಾಧ್ಯತೆ 1.36 ಪಟ್ಟು ಹೆಚ್ಚು ಎಂದು ಸಂಶೋಧನೆ ತಿಳಿಸಿದೆ. ಆದರೆ ಸಿಗರೇಟ್ ಸೇದುವವರಿಗೆ ಕ್ಯಾನ್ಸರ್‍‍ನ ಮುಂದುವರಿದ ಹಂತ ಬರುವ ಸಾಧ್ಯತೆ ಹೆಚ್ಚಾಗಿದೆ. ವಿಶ್ವಾದ್ಯಂತ ಪ್ರತಿ ವರ್ಷ ಸುಮಾರು 4,00,000 ಹೊಸ ಕಿಡ್ನಿ ಕ್ಯಾನ್ಸರ್‌ಗಳು ಪತ್ತೆಯಾಗುತ್ತಿವೆ.

    ಹೆಚ್ಚುತ್ತಿದೆ ಮೂತ್ರಪಿಂಡದ ಕ್ಯಾನ್ಸರ್ ರೋಗಿಗಳ ಸಂಖ್ಯೆ

    ಅದೇ ವೇಳೆ ಮೂತ್ರಪಿಂಡದ ಕ್ಯಾನ್ಸರ್‍‍‍ನಿಂದ ಪ್ರತಿ ವರ್ಷ ಸುಮಾರು 1,70,000 ಸಾವುಗಳು ಸಂಭವಿಸುತ್ತವೆ. ಹೊಗೆಯನ್ನು ಉಸಿರಾಡುವ ಶ್ವಾಸಕೋಶದಿಂದ ಧೂಮಪಾನ ಪ್ರಾರಂಭವಾಗುತ್ತದೆ. ಹೊಗೆ ಶ್ವಾಸಕೋಶಗಳು, ರಕ್ತಪ್ರವಾಹದ ಮೂಲಕ ಮೂತ್ರಪಿಂಡಗಳಿಗೆ ಚಲಿಸುತ್ತದೆ. ಅಲ್ಲಿ ಗಡ್ಡೆಯನ್ನು ಕಂಡು ಹಿಡಿಯುವ ಮೊದಲೇ ಅದು ದೊಡ್ಡದಾಗಿ ಬೆಳೆದಿರುವ ಅಪಾಯವಿದೆ.

    ಇದನ್ನೂ ಓದಿ: ಮೂತ್ರದ ಬಣ್ಣ ಗಾಢವಾಗಿ ನೊರೆ ಇದ್ದರೆ ನಿರ್ಲಕ್ಷ್ಯ ಬೇಡ! ಅಪಾಯಕಾರಿ ರೋಗದ ಲಕ್ಷಣಗಳಿವು

    ನೆಫ್ರಾಲಜಿಯ ಹಿರಿಯ ಸಮಾಲೋಚಕ ತೇಜಿಂದರ್ ಸಿಂಗ್ ಚೌಹಾಣ್ ಹೇಳುವ ಪ್ರಕಾರ, ರೋಗಿಗೆ ಯಾವುದೇ ರೀತಿಯ ನೋವು ಅಥವಾ ಮೂತ್ರದಲ್ಲಿ ರಕ್ತದ ಅನುಭವವಾಗದ ಹೊರತು ಮೂತ್ರಪಿಂಡ ಕ್ಯಾನ್ಸರ್ ಬಗ್ಗೆ ಬೇಗ ತಿಳಿದು ಬರುವುದಿಲ್ಲ. ಆಗಾಗ್ಗೆ ರೋಗಿಯು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಎಡತಾಕುತ್ತಾನೆ. ನೀವು ಧೂಮಪಾನ ತ್ಯಜಿಸಿದರೆ, ನಿಮ್ಮ ಸ್ಥಿತಿಯನ್ನು ಅಭಿವೃದ್ಧಿಪಡಿಸುವ ಅಪಾಯವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು."

    ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ನೆಫ್ರಾಲಜಿ ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟ್‌ನ ಹೆಚ್ಚುವರಿ ನಿರ್ದೇಶಕಿ ಮತ್ತು ಹೆಚ್ಒಡಿ ಡಾ.ಅನುಜಾ ಪೋರ್ವಾಲ್ ಅವರ ಪ್ರಕಾರ, ಧೂಮಪಾನವು ಅನೇಕ ರೋಗಗಳಿಗೆ ಕಾರಣ. ಮೂತ್ರಪಿಂಡದ ಕಾಯಿಲೆಗಳಲ್ಲಿ ಧೂಮಪಾನವು ಮಹತ್ವದ ಪಾತ್ರ ವಹಿಸುತ್ತದೆ ತಿಳಿದು ಬಂದಿದೆ. ಧೂಮಪಾನವು ಮೂತ್ರಪಿಂಡದ ಕಾಯಿಲೆಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಜೊತೆಗೆ ಮೊದಲೇ ಅಸ್ತಿತ್ವದಲ್ಲಿರುವ ಮೂತ್ರಪಿಂಡದ ಕಾಯಿಲೆಗಳ ಉಲ್ಬಣಕ್ಕೆ ಕಾರಣವಾಗುತ್ತದೆ.

    ಕಿಡ್ನಿ ಕೋಶಗಳ ಕ್ಯಾನ್ಸರ್ ಸಾವುಗಳಿಗೆ ಧೂಮಪಾನವು ಸಂಬಂಧಿಸಿದೆ ಎಂದು ಇತ್ತೀಚಿನ ಕೆಲವು ಸಂಶೋಧನೆಗಳು ಸೂಚಿಸಿವೆ, ಅಂದರೆ, ಧೂಮಪಾನವು ಮೂತ್ರಪಿಂಡದ ಕೋಶಗಳ ಕ್ಯಾನ್ಸರ್‌ಗೆ ಕಾರಣ ಮಾತ್ರವಲ್ಲದೆ ಅದು ಕ್ಯಾನ್ಸರ್ ಅನ್ನು ಹೆಚ್ಚು ಗಂಭೀರಗೊಳಿಸುವಲ್ಲಿ ಒಂದು ಪಾತ್ರವನ್ನು ವಹಿಸುತ್ತದೆ. ಧೂಮಪಾನ ಮಾಡುವವರಲ್ಲಿ ಈ ರೋಗವು ಅತ್ಯಂತ ಗಂಭೀರ ಸ್ವರೂಪದಲ್ಲಿ ಹೊರಬರಲು ಇದೇ ಕಾರಣ.

    ಮೂತ್ರಪಿಂಡದ ಕ್ಯಾನ್ಸರ್ ಮತ್ತು ರಕ್ತದೊತ್ತಡದ ನಡುವಿನ ಸಂಬಂಧ

    ಗುರುಗ್ರಾಮ್‌ನ ಫೋರ್ಟಿಸ್ ಮೆಮೋರಿಯಲ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ಕಾರ್ಯನಿರ್ವಾಹಕ ನಿರ್ದೇಶಕ ಅನಿಲ್ ಮಂಧನಿ ಪ್ರಕಾರ, ವಯಸ್ಕರರ ಮೇಲೆ ಪರಿಣಾಮ ಬೀರುವ 10 ಪ್ರಮುಖ ಕ್ಯಾನ್ಸರ್ ಕಾಯಿಲೆಗಳಲ್ಲಿ ಕಿಡ್ನಿ ಕ್ಯಾನ್ಸರ್ ಕೂಡ ಒಂದು. ದುರದೃಷ್ಟವಶಾತ್, ಅರಿವಿನ ಕೊರತೆ ಮತ್ತು ಭಾರತದಲ್ಲಿ ಅಲ್ಟ್ರಾಸೋನೋಗ್ರಫಿಯಂತಹ ಸ್ಕ್ರೀನಿಂಗ್ ಕಾರ್ಯವಿಧಾನಗಳ ಕೊರತೆ ಮೂತ್ರಪಿಂಡದ ಕ್ಯಾನ್ಸರ್ ರೋಗನಿರ್ಣಯ ಮಾಡುವ ರೋಗಿಗಳ ಬಗ್ಗೆ ಮಾಹಿತಿಯು ಅಷ್ಟಾಗಿ ಮುಂದುವರೆದಿಲ್ಲ.

    ಅಮೆರಿಕದಲ್ಲಿ ಸುಮಾರು 90% ಕಿಡ್ನಿ ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿವೆ. ಈ ಬಗ್ಗೆ ಸಂಶೋಧನೆಯು ಬಹಿರಂಗಪಡಿಸಿದೆ. ಆದರೆ ಭಾರತದಲ್ಲಿ ಕೇವಲ 15 ರಿಂದ 20% ರಷ್ಟು ಕ್ಯಾನ್ಸರ್‌ಗಳು ಆರಂಭಿಕ ಹಂತಗಳಲ್ಲಿ ಕಂಡು ಬರುತ್ತವೆ. ಕಿಡ್ನಿ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಮಾಡಿದರೆ ಅದಕ್ಕೆ ಚಿಕಿತ್ಸೆ ನೀಡಬಹುದು.

    ಇದನ್ನೂ ಓದಿ: ನಿಮ್ಮ ಅಡುಗೆ ಮನೆಯಲ್ಲೇ ಸಿಗುವ ಪದಾರ್ಥಗಳಿಂದ ತೂಕ ಇಳಿಸುವ ಪ್ರಯತ್ನವನ್ನು ಸುಲಭವಾಗಿಸಿ!

    ನೀವು ಯಾವುದೇ ರೀತಿಯ ಲ್ಯಾಬ್ ಪರೀಕ್ಷೆ ಪಡೆಯುತ್ತಿದ್ದರೆ, ನಿಮ್ಮ ಕಿಬ್ಬೊಟ್ಟೆಯ ಅಲ್ಟ್ರಾಸೋನೋಗ್ರಫಿ ಮಾಡಿಕೊಳ್ಳಿ. ಈ ಪರೀಕ್ಷೆಯಲ್ಲಿ ಕಿಡ್ನಿ ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಬಹುದು. ಮತ್ತು  ಮೂತ್ರಪಿಂಡವನ್ನು ಉಳಿಸಬಹುದು.
    Published by:renukadariyannavar
    First published: