ಇತ್ತೀಚಿನ ದಿನಗಳಲ್ಲಿ ಥೈರಾಯ್ಡ್ ರೋಗಿಗಳ (Thyroid Patients) ಸಂಖ್ಯೆ ಹೆಚ್ಚುತ್ತಿದೆ. ಥೈರಾಯ್ಡ್ ಗಂಭೀರವಾಗಿ (Serious) ಹಾಗೂ ವೇಗವಾಗಿ ಬೆಳೆಯುತ್ತಿರುವ ಕಾಯಿಲೆ (Disease) ಆಗಿದೆ. ಸಾಕಷ್ಟು ಜನರು (People) ಥೈರಾಯ್ಡ್ ಕಾಯಿಲೆಯಿಂದ ಬಳಲುತ್ತಿದ್ದಾರೆ. ಗಂಟಲಿನಲ್ಲಿ ಸಣ್ಣ ಚಿಟ್ಟೆ ಆಕಾರದ ಗ್ರಂಥಿ ಇದೆ. ಇದನ್ನು ಥೈರಾಯ್ಡ್ ಗ್ರಂಥಿ ಎಂದು ಕರೆಯಲಾಗುತ್ತದೆ. ಥೈರಾಯ್ಡ್ ಗ್ರಂಥಿಯು ಥೈರಾಯ್ಡ್ ಎಂಬ ಹಾರ್ಮೋನ್ ನ್ನು ಉತ್ಪಾದಿಸುವ ಕೆಲಸ ಮಾಡುತ್ತದೆ ಎಂಬುದು ನಿಮಗೆ ಗೊತ್ತಿರುವ ಸಂಗತಿ. ಅಷ್ಟೇ ಅಲ್ಲದೇ, ದೇಹದ (Body) ಉತ್ತಮ ಕಾರ್ಯ ನಿರ್ವಹಣೆಗೆ ಥೈರಾಯ್ಡ್ ಹಾರ್ಮೋನ್ ತುಂಬಾ ಅತ್ಯಗತ್ಯವಾಗಿದೆ. ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡದೇ ಹೋದ್ರೆ ಅಸ್ವಸ್ಥತೆ ಉಂಟಾಗುತ್ತದೆ.
ಥೈರಾಯ್ಡ್ ಕಾಯಿಲೆ
ಒಂದು ವೇಳೆ ಥೈರಾಯ್ಡ್ ಗ್ರಂಥಿಯು ಸರಿಯಾಗಿ ಕೆಲಸ ಮಾಡದೇ ಹೋದ್ರೆ ಥೈರಾಯ್ಡ್ ಹಾರ್ಮೋನ್ ಹೆಚ್ಚು ಅಥವಾ ಕಡಿಮೆ ಉತ್ಪತ್ತಿಯಾಗುವ ಮೂಲಕ ಆರೋಗ್ಯ ಸಮಸ್ಯೆ ಸೃಷ್ಟಿಸುತ್ತದೆ. ಆಗ ಇದನ್ನು ಥೈರಾಯ್ಡ್ ಕಾಯಿಲೆ ಎಂದು ಹೆಸರಿಸಲಾಗುತ್ತದೆ.
ಥೈರಾಯ್ಡ್ ರೋಗ ಲಕ್ಷಣಗಳು ಯಾವವು?
ಹೆಚ್ಚು ಥೈರಾಯ್ಡ್ ಸಮಸ್ಯೆ ಉಂಟಾದಾಗ ಅದು ಹೆಚ್ಚಿದ ಹೃದಯ ಬಡಿತ ಮತ್ತು ತೂಕ ನಷ್ಟಕ್ಕೆ ಕಾರಣವಾಗುತ್ತದೆ. ಥೈರಾಯ್ಡ್ ಕಡಿಮೆ ಇರುವ ಸಮಸ್ಯೆ ಇದ್ದಾಗ ಆಯಾಸ ಮತ್ತು ತೂಕ ಹೆಚ್ಚಳ ಸಮಸ್ಯೆ ಉಂಟಾಗುತ್ತದೆ.
ಥೈರಾಯ್ಡ್ ಸಮಸ್ಯೆಗೆ ಚಿಕಿತ್ಸೆ ಏನಿದೆ?
ಥೈರಾಯ್ಡ್ ಸಮಸ್ಯೆಗೆ ಹಲವು ರೀತಿಯ ಔಷಧಗಳು ಲಭ್ಯ ಇವೆ. ಆರೋಗ್ಯಕರ ಜೀವನ ನಡೆಸಲು ಥೈರಾಯ್ಡ್ ಅನ್ನು ನಿಯಂತ್ರಣದಲ್ಲಿಡುವುದು ತುಂಬಾ ಮುಖ್ಯ. ಕೆಲವು ಆಹಾರಗಳ ಸೇವನೆಯು ಥೈರಾಯ್ಡ್ ನ್ನು ನಿಯಂತ್ರಿಸಲು ಸಹಕಾರಿ. ಆಯುರ್ವೇದ ವೈದ್ಯೆ ದೀಕ್ಷಾ ಭಾವಸರ್ ಅವರು ಥೈರಾಯ್ಡ್ ಗೆ ಕೆಲವು ಆಯುರ್ವೇದ ಪರಿಹಾರ ಹೇಳಿದ್ದಾರೆ.
ಥೈರಾಯ್ಡ್ ಕಾಯಿಲೆ ನಿಯಂತ್ರಿಸಲು ಗಿಡಮೂಲಿಕೆ ಚಹಾ ಸೇವಿಸಿ
ಕೆಫೀನ್ ಇರುವ ಚಹಾ ಮತ್ತು ಕಾಫಿ ಬದಲು ಹರ್ಬಲ್ ಚಹಾ ಸೇವನೆ ಮೂಲಕ ದಿನವನ್ನು ಆರಂಭಿಸುವಂತೆ ವೈದ್ಯರು ಸಲಹೆ ನೀಡುತ್ತಾರೆ. ಬೆಳಿಗ್ಗೆ ಕೆಫೀನ್ ಇರುವ ಚಹಾ ಸೇವನೆಯಿಂದ ಉರಿಯುತ್ತಿರುವ ಥೈರಾಯ್ಡ್ ಗ್ರಂಥಿಯಲ್ಲಿ ಮತ್ತಷ್ಟು ಊತ ಉಂಟಾಗುತ್ತದೆ.
ಇದು ನಿಮ್ಮ ಕರುಳಿನ ಒಳಪದರ ಕೆರಳಲು ಕಾರಣವಾಗುತ್ತದೆ. ಜೊತೆಗೆ ನಿಮ್ಮ ಥೈರಾಯ್ಡ್ ಗುಣವಾಗುವುದು ವಿಳಂಬವಾಗುತ್ತದೆ. ಥೈರಾಯ್ಡ್ ಸಮಸ್ಯೆ ನಿಮ್ಮ ಚಯಾಪಚಯ, ಹಾರ್ಮೋನು ಮತ್ತು ಫಲವತ್ತತೆ ಮೇಲೆ ಪರಿಣಾಮ ಬೀರುತ್ತದೆ.
ಗಿಡಮೂಲಿಕೆ ಚಹಾ ಮಾಡುವುದು ಹೇಗೆ?
ಥೈರಾಯ್ಡ್ ಸಮಸ್ಯೆ ಕಡಿಮೆ ಮಾಡಲು ಗಿಡಮೂಲಿಕೆ ಚಹಾ ಮಾಡಲು ಒಂದು ಗ್ಲಾಸ್ ನೀರು, ಎರಡು ಟೀಸ್ಪೂನ್ ಕೊತ್ತಂಬರಿ ಬೀಜಗಳು, 12 ಕರಿಬೇವಿನ ಎಲೆಗಳು, 7 ಒಣ ಗುಲಾಬಿ ದಳ ಬೇಕು.
ಗಿಡಮೂಲಿಕೆ ಚಹಾ ಮಾಡುವುದು ಹೇಗೆ?
ಒಂದು ಪಾತ್ರೆಗೆ ನೀರು ಹಾಕಿ. ನಂತರ ಅದಕ್ಕೆ ಕೊತ್ತಂಬರಿ ಬೀಜ, ಕರಿಬೇವಿನ ಎಲೆಗಳು ಮತ್ತು ಒಣ ಗುಲಾಬಿ ದಳ ಹಾಕಿರಿ. ಮಧ್ಯಮ ಉರಿಯಲ್ಲಿ ಏಳು ನಿಮಿಷ ಚಹಾ ಕುದಿಸಿ. ಈಗ ಚಹಾ ಸಿದ್ಧವಾಗಿದೆ. ಅದನ್ನು ಬೆಳಿಗ್ಗೆ ಚಹಾ, ಕಾಫಿ ಬದಲು ಸೇವಿಸಿ.
ಬೆಳಗ್ಗೆ ಚಹಾ ಮತ್ತು ಕಾಫಿ ಕುಡಿಯುವ ಕೆಟ್ಟ ಅಭ್ಯಾಸ ಬಿಡದೇ ಹೋದ್ರೆ ಥೈರಾಯ್ಡ್ ಸಮಸ್ಯೆ ಹೆಚ್ಚುತ್ತದೆ. ಜೊತೆಗೆ ಕರುಳು ಹಾಗೂ ಹಾರ್ಮೋನ್ ಸಮಸ್ಯೆ ಹೆಚ್ಚುತ್ತದೆ. ಹಾಗಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಫೀನ್ ಸೇವನೆ ನಿಲ್ಲಿಸಿ.
ಚಹಾ ಮತ್ತು ಕಾಫಿ ಸೇವನೆ ನಿಲ್ಲಿಸಲು ಸಾಧ್ಯವಾಗದೇ ಹೋದ್ರೆ ನಿಮ್ಮ ಚಹಾ ಅಥವಾ ಕಾಫಿಗೆ ಅರ್ಧ ಚಮಚ ದೇಸಿ ತುಪ್ಪ ಅಥವಾ ಒಂದು ಚಮಚ ತೆಂಗಿನ ಎಣ್ಣೆ ಸೇರಿಸಿ. ಇದು ಹೊಟ್ಟೆಯ ಹಾನಿ ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಬಾದಾಮಿ ತಿಂದರೆ ನಿಜಕ್ಕೂ ನೆನಪಿನ ಶಕ್ತಿ ಹೆಚ್ಚುತ್ತಾ? ಅಧ್ಯಯನ ಏನ್ ಹೇಳುತ್ತೆ ನೋಡಿ..!
ಗಿಡಮೂಲಿಕೆ ಚಹಾ ಸೇವನೆಯ ಪ್ರಯೋಜನಗಳು
ಗಿಡಮೂಲಿಕೆ ಚಹಾ ಸೇವನೆ ಥೈರಾಯ್ಡ್ ಕಾರ್ಯ ಸುಧಾರಿಸುತ್ತದೆ. ಹೈಪರ್ ಥೈರಾಯ್ಡಿಸಮ್ ರೋಗಿಗಳಲ್ಲಿ ನೈಸರ್ಗಿಕವಾಗಿ ಥೈರಾಯ್ಡ್ ಹಾರ್ಮೋನ್ ಮಟ್ಟ ಕಡಿಮೆ ಮಾಡುತ್ತದೆ. ಕಬ್ಬಿಣ, ಚಯಾಪಚಯ ಸುಧಾರಿಸುವುದು, ಚರ್ಮದ ಶುಷ್ಕತೆ ಕಡಿಮೆ ಮಾಡುತ್ತದೆ. ಕೂದಲು ಉದುರುವಿಕೆ ಕಡಿಮೆ ಮಾಡುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ