Summer Diet routine: ಬೇಸಿಗೆ ರೋಗಗಳಿಂದ ತಪ್ಪಿಸಿಕೊಳ್ಳಲು ನಿಮ್ಮ ಆಹಾರಕ್ರಮ ಹೀಗಿರಲಿ

ತಜ್ಞರ ಪ್ರಕಾರ ಬೇಸಿಗೆ ಋತುವಿನಲ್ಲಿ ಸರಿಯಾಗಿ ಆಹಾರ ಪದಾರ್ಥಗಳನ್ನು ತಿನ್ನುವುದು ಈ ರೋಗ ಲಕ್ಷಣಳಿಂದ ನಿಮ್ಮನ್ನು ದೂರ ಇಡುತ್ತದೆ. ಆರೋಗ್ಯಕರ ಉಪಹಾರವು ದಿನವಿಡೀ ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಶಕ್ತಿಯಿಂದ ತುಂಬಿರುವಂತೆ ನೋಡಿಕೊಳ್ಳುತ್ತದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಬೇಸಿಗೆಯಲ್ಲಿ (Summer) ಬಿಸಿಲು (Heat) ಮತ್ತು ಬೆವರುವಿಕೆಯಿಂದಾಗಿ (Sweating) ದೇಹವು (Body) ಹೆಚ್ಚು ನೀರಿನ (Water) ಕೊರತೆ ಅನುಭವಿಸಿ, ಡಿಹೈಡ್ರೇಷನ್ ಉಂಟಾಗುತ್ತದೆ. ಇದು ದೇಹದಲ್ಲಿ ಆಯಾಸ, ದೌರ್ಬಲ್ಯ ಮತ್ತು ಪ್ರಕ್ಷುಬ್ಧತೆಯಂತಹ ರೋಗ ಲಕ್ಷಣಗಳನ್ನು ಉಂಟು ಮಾಡುತ್ತದೆ. ಬೇಸಿಗೆಯಲ್ಲಿ ನಿದ್ರಾಹೀನತೆ ಮತ್ತು ಹಸಿವಿನ ಕೊರತೆ  ಸಮಸ್ಯೆಗಳು ಹೆಚ್ಚಾಗಿ ಕಂಡು ಬರುತ್ತವೆ. ತಜ್ಞರ ಪ್ರಕಾರ ಬೇಸಿಗೆ ಋತುವಿನಲ್ಲಿ ಸರಿಯಾಗಿ ಆಹಾರ ಪದಾರ್ಥಗಳನ್ನು ತಿನ್ನುವುದು ಈ ರೋಗ ಲಕ್ಷಣಳಿಂದ ನಿಮ್ಮನ್ನು ದೂರ ಇಡುತ್ತದೆ. ಆರೋಗ್ಯಕರ ಉಪಹಾರವು ದಿನವಿಡೀ ನಿಮ್ಮನ್ನು ಆರೋಗ್ಯಕರವಾಗಿ ಮತ್ತು ಶಕ್ತಿಯಿಂದ ತುಂಬಿರುವಂತೆ ನೋಡಿಕೊಳ್ಳಲು ಸಹಾಯ ಮಾಡುತ್ತದೆ.

  ಬೇಸಿಗೆಯಲ್ಲಿ ಆರೋಗ್ಯಕರ ಆಹಾರ ಕ್ರಮ ಅನುಸರಿಸಿ

  ನಿಮ್ಮ ಬೆಳಗಿನ ಉಪಾಹಾರದಲ್ಲಿ ನೀವು ಮೊಳಕೆ ಕಟ್ಟಿದ ಹೆಸರು ಕಾಳು, ದ್ವಿದಳ ಧಾನ್ಯಗಳು, ಬೀಜಗಳು ಮತ್ತು ಓಟ್ಸ್ ತಿಂಡಿಗಳನ್ನು ಸೇರಿಸಿಕೊಳ್ಳಬಹುದು. ಈ ವಸ್ತುಗಳಲ್ಲಿ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳು ಕಂಡು ಬರುತ್ತವೆ.

  ಬೇಸಿಗೆಯಲ್ಲಿ ನಿರ್ಜಲೀಕರಣ ಸಮಸ್ಯೆ ಹೆಚ್ಚು ಕಾಡುತ್ತದೆ. ಹಾಗಾಗಿ ನಿಂಬೆ ಪಾನಕ, ಬಾರ್ಲಿ ಮತ್ತು ತೆಂಗಿನ ನೀರು ಮುಂತಾದ ಆರೋಗ್ಯಕರ ಪದಾರ್ಥಗಳ ಸೇವನೆ ಮಾಡುವುದು ನಿಮ್ಮ ಮೊದಲ ಮತ್ತು ಉತ್ತಮ ಆಯ್ಕೆ ಆಗಿರಲಿ.

  ಇದನ್ನೂ ಓದಿ: ಹೀಟ್ ಸ್ಟ್ರೋಕ್​​ನಿಂದ ಹಲವು ಆರೋಗ್ಯ ಸಮಸ್ಯೆ! ಇದಕ್ಕೇನು ಪರಿಹಾರ?

  ಆಯಾಸ, ನಿರ್ಜಲೀಕರಣ, ಮೈಗ್ರೇನ್ ಮತ್ತು ಆಲಸ್ಯದಂತಹ ಸಮಸ್ಯೆ ನಿರ್ಮೂಲನೆ ಮಾಡಲು ಬೇಸಿಗೆ ಕಾಲದಲ್ಲಿ ನೀವು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬುದನ್ನು ಸರಿಯಾಗಿ ತಿಳಿದುಕೊಳ್ಳಬೇಕು. ಫ್ಯಾಟ್ ಟು ಸ್ಲಿಮ್‌ನ ನಿರ್ದೇಶಕಿ, ಪೌಷ್ಟಿಕತಜ್ಞ ಮತ್ತು ಡಯೆಟಿಷಿಯನ್ ಶಿಖಾ ಅಗರ್ವಾಲ್ ಶರ್ಮಾ ನಿಮಗೆ ಬೇಸಿಗೆಯಲ್ಲಿ ಆರೋಗ್ಯಕರ ಆಹಾರ ಸೇವನೆ ಬಗ್ಗೆ ತಿಳಿಸಿದ್ದಾರೆ.

  ಬೆಳಗಿನ ಉಪಾಹಾರದಲ್ಲಿ ಹಾಲು-ಮೊಟ್ಟೆ

  ನಿಮ್ಮ ಉಪಹಾರದಲ್ಲಿ ಮೊಟ್ಟೆ ಮತ್ತು ಹಾಲನ್ನು ಸೇರಿಸಿ. ಮೊಟ್ಟೆ ನಿಮ್ಮನ್ನು ದಿನವಿಡೀ ಚೈತನ್ಯದಿಂದ ಇಡಲು ಸಹಾಯ ಮಾಡುತ್ತದೆ. ಮೊಟ್ಟೆಯಲ್ಲಿ ಅಮೈನೋ ಆಮ್ಲಗಳು ಮತ್ತು ಉತ್ತಮ ಕೊಬ್ಬುಗಳಿವೆ. ಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಅಧಿಕವಾಗಿದೆ.

  ಮೊಟ್ಟೆ ಮತ್ತು ಹಾಲಿನಲ್ಲಿ ಪ್ರೋಟೀನ್, ಸೋಡಿಯಂ, ಫೋಲೇಟ್, ಸೆಲೆನಿಯಮ್ ಮತ್ತು ಕ್ಯಾಲ್ಸಿಯಂ ಸಮೃದ್ಧವಾಗಿದೆ. ಈ ಹೆಚ್ಚಿನ ಪ್ರೋಟೀನ್ ಸಂಯೋಜನೆಯು ನಿರ್ಜಲೀಕರಣ ತಡೆದು ಸ್ನಾಯುವಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

  ಸಾಕಷ್ಟು ಕಾಲೋಚಿತ ಹಣ್ಣುಗಳನ್ನು ತಿನ್ನಿರಿ

  ಕಲ್ಲಂಗಡಿ, ಕರ್ಬೂಜ್, ಕಿತ್ತಳೆ, ಅನಾನಸ್, ಸ್ಟ್ರಾಬೆರಿ, ಮಾವು ಮತ್ತು ಹೆಚ್ಚಿನ ನೀರಿನ ಅಂಶವಿರುವ ಇತರ ಹಣ್ಣುಗಳನ್ನು ಸಾಕಷ್ಟು ಸೇವಿಸಿ. ನಿರ್ಜಲೀಕರಣ ತಡೆಗಟ್ಟುವಲ್ಲಿ ಹಣ್ಣುಗಳು ಪರಿಣಾಮಕಾರಿಯಾಗಿದೆ. ಅವುಗಳನ್ನು ಫ್ರಿಜ್ ಅಥವಾ ಫ್ರೀಜರ್‌ನಲ್ಲಿ ಸಂಗ್ರಹಿಸುವುದು ತಿನ್ನುವ ಮೊದಲು ಅವುಗಳನ್ನು ಹೈಡ್ರೇಟ್ ಮಾಡಲು ಮತ್ತು ತಂಪಾಗಿಸಲು ಒಂದು ಮಾರ್ಗವಾಗಿದೆ.

  ಹೆಚ್ಚು ಹಸಿರು ತರಕಾರಿಗಳ ಸೇವನೆ ಮಾಡಿ

  ಬೇಸಿಗೆಯಲ್ಲಿ ಸೋರೆಕಾಯಿ, ಕುಂಬಳಕಾಯಿ, ಕೋಸುಗಡ್ಡೆ, ಹಾಗಲಕಾಯಿ, ಸೌತೆಕಾಯಿಯಂತಹ ತರಕಾರಿಗಳ ಸೇವನೆ ಮಾಡಿ. ನಿರ್ಜಲೀಕರಣ ತಪ್ಪಿಸಲು ಮತ್ತು ನಿಮ್ಮ ದೇಹವನ್ನು ಸಕ್ರಿಯವಾಗಿರಿಸಲು ಸಹಾಯಕಾರಿ. ನೀರು ಮತ್ತು ಪೊಟ್ಯಾಸಿಯಮ್ ಅನ್ನು ಹೊಂದಿವೆ. ಅಧಿಕ ರಕ್ತದೊತ್ತಡ ಮತ್ತು ಎಲೆಕ್ಟ್ರೋಲೈಟ್ ಸಮತೋಲನ ಕಾಪಾಡುತ್ತವೆ.

  ಸಂಜೆ ಉಪಾಹಾರಕ್ಕಾಗಿ ಈ ವಸ್ತುಗಳನ್ನು ಸೇವಿಸಿ

  ಮೊಳಕೆ ಬರಿಸಿದ ಹೆಸರು ಕಾಳು , ಪಾಲಕ, ದ್ವಿದಳ ಧಾನ್ಯಗಳು, ಬೀಜಗಳು ಆಹಾರಗಳು ಅನೇಕ ಜೀವಸತ್ವಗಳು, ಖನಿಜಗಳು ಮತ್ತು ಸಂಯುಕ್ತಗಳನ್ನು ಹೊಂದಿವೆ. ಈ ಆಹಾರಗಳು ಮೆಗ್ನೀಸಿಯಮ್ ನಿಂದ ತುಂಬಿಸುತ್ತವೆ. ಇದು ಜೀವಕೋಶಗಳ ಶಕ್ತಿ ಮತ್ತು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

  ನೀರು ಕುಡಿಯುವ ಬಗ್ಗೆ ಗಮನ ಕೊಡಿ

  ನೀವು ಹೈಡ್ರೇಟ್ ಆಗಿರಲು ಹೆಚ್ಚು ಸರಳವಾದ ನೀರನ್ನು ಕುಡಿಯುವುದನ್ನು ತಪ್ಪಿಸಿ. ಏಕೆಂದರೆ ಅದು ನಿಮ್ಮ ದೇಹದಿಂದ ಖನಿಜಗಳನ್ನು ತೊಳೆಯುತ್ತದೆ. ಹಸಿರು ಚಹಾ, ನಿಂಬೆ ಪಾನಕ ಅಥವಾ ತಾಜಾ ತೆಂಗಿನ ನೀರು ನಿಮ್ಮ ದೇಹವನ್ನು ಪ್ರಮುಖ ಖನಿಜಗಳು ಮತ್ತು ಜೀವಸತ್ವದಿಂದ ತುಂಬಿಸುತ್ತದೆ. ಈ ಪಾನೀಯಗಳು ಮಧ್ಯಾಹ್ನದ ಸಮಯದಲ್ಲಿ ನಿಮ್ಮನ್ನು ರೀಚಾರ್ಜ್ ಮಾಡಲು ಮತ್ತು ನಿಮ್ಮ ದೇಹದಲ್ಲಿ ಎಲೆಕ್ಟ್ರೋಲೈಟ್ ಸಮತೋಲನವನ್ನು ಕಾಪಾಡಲು ಬೆಸ್ಟ್ ಆಯ್ಕೆ.

  ಇದನ್ನೂ ಓದಿ: ಅಗತ್ಯ ನೆನಪಿಡಿ, ಕ್ಯಾನ್ಸರ್ ಅಪಾಯ ಹೆಚ್ಚಿಸೋ ಆಹಾರಗಳಿವು!

  ಮಸಾಲೆಗಳು ಸಹ ಅಗತ್ಯ

  ಸಣ್ಣ ಪ್ರಮಾಣದಲ್ಲಿ ಮಸಾಲೆಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಮತ್ತು ಆಯಾಸ ಮತ್ತು ಸೋಂಕಿನಿಂದ ನಿಮ್ಮನ್ನು ರಕ್ಷಿಸುತ್ತದೆ. ಶುಂಠಿ, ಕರಿಮೆಣಸು, ದಾಲ್ಚಿನ್ನಿ, ಬೆಳ್ಳುಳ್ಳಿ ಮುಂತಾದ ಮಸಾಲೆಗಳು ನೀವು ಆಹಾರದೊಂದಿಗೆ ಸೇವಿಸಬಹುದಾದ ಕೆಲವು ಪದಾರ್ಥಗಳಾಗಿವೆ.
  Published by:renukadariyannavar
  First published: