ನಿಮ್ಮ ಹೆಂಡತಿ ಅಥವಾ ಗರ್ಲ್​ಫ್ರೆಂಡ್​ ಅನ್ನು ಮೆಚ್ಚಿಸಲು ಹೀಗೆ ಮಾಡಿದ್ರೆ ಸಾಕಂತೆ..!

ಈ ಸಂಶೋಧನೆಯ ಪ್ರಮುಖ ಉದ್ದೇಶ ಪುರುಷರು ಮತ್ತು ಮಹಿಳೆಯರು ಸಂಬಂಧದಲ್ಲಿ ಸಹಾನುಭೂತಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿತ್ತು.

zahir | news18
Updated:June 27, 2019, 5:40 PM IST
ನಿಮ್ಮ ಹೆಂಡತಿ ಅಥವಾ ಗರ್ಲ್​ಫ್ರೆಂಡ್​ ಅನ್ನು ಮೆಚ್ಚಿಸಲು ಹೀಗೆ ಮಾಡಿದ್ರೆ ಸಾಕಂತೆ..!
couple
  • News18
  • Last Updated: June 27, 2019, 5:40 PM IST
  • Share this:
ಹೆಣ್ಣನ್ನು ಸಾಮಾನ್ಯವಾಗಿ ಮಾಯೆ ಎನ್ನಲಾಗುತ್ತದೆ. ಇದಕ್ಕೆ ಮುಖ್ಯ ಕಾರಣ ಹೆಣ್ಣಿನ ಚಂಚಲ ಮನಸ್ಸು. ಶತಮಾನಗಳಿಂದಲೂ ಗಂಡಿಗೆ ಅರ್ಥವಾಗದ ಇವರ ಮನದಾಳ ಒಂದು ರಹಸ್ಯವಾಗಿಯೇ ಉಳಿದಿದೆ. ಅದಕ್ಕೆ ಅಲ್ಲವೇ, ಹಿರಿಯರು ಹೇಳಿದ್ದು, ಮೀನಿನ ಹೆಜ್ಜೆಯನ್ನಾದರೂ ಕಂಡು ಹಿಡಿಯಬಹುದು ಆದರೆ ಹೆಣ್ಣಿ ಮನಸ್ಸಿನಲ್ಲೇನಿದೆ ಎಂಬುದು ಮಾತ್ರ ಅರ್ಥವಾಗುವುದಿಲ್ಲ ಎಂದು.

ಹೀಗಾಗಿ ಎಷ್ಟೋ ಜನರು ತಮ್ಮ ಸಂಗಾತಿಯನ್ನು ಅದೆಷ್ಟು ಪ್ರಯತ್ನಪಟ್ಟರೂ ಮೆಚ್ಚಿಸಲು ಮಾತ್ರ ಸಾಧ್ಯವಾಗುವುದಿಲ್ಲ. ಇಂತಹದೊಂದು ಗಂಡ್​ ಹೈಕ್ಳ ನೋವಿಗೆ ಉತ್ತರ ಎಂಬಂತೆ ಅಮೆರಿಕದ ಸಂಶೋಧಕರು ಮಾನವನ ನಡವಳಿಕೆಯ ಮೇಲೆ ಅಧ್ಯಯನವೊಂದನ್ನು ನಡೆಸಿದ್ದಾರೆ.

ಈ ಸಂಶೋಧನೆಯಲ್ಲಿ ಮಹಿಳೆಯರ ಅಥವಾ ನಿಮ್ಮ ಸಂಗಾತಿಯ ಮುಖದಲ್ಲಿ ಸುಲಭವಾಗಿ ಸಂತೋಷ ಕಾಣುವ ವಿಧಾನವನ್ನು ತಿಳಿಸಲಾಗಿದೆ. ಅಂದರೆ ಪ್ರತಿಯೊಂದು ವಿಷಯದಲ್ಲೂ ನಿಮ್ಮವಳನ್ನು ಅಥವಾ ನಿಮ್ಮವರನ್ನು ಮೆಚ್ಚಿಸಲು ನೀವು ಮೊದಲು ಮಾಡಬೇಕಿರುವುದು ಅವಳ ಬಗ್ಗೆ ಸಹಾನುಭೂತಿ.

ನಿಮ್ಮ ಸಂಗಾತಿಯೊಂದಿಗೆ ಸಹಾನುಭೂತಿ ಹೊಂದಿದ್ದರೆ ಮಾತ್ರ ಆಕೆ ಚಂಚಲ ಮನಸ್ಸು ನಿಮಗೆ ಅರ್ಥವಾಗುವುದು ಎಂದು ತಿಳಿಸಿದ್ದಾರೆ. ಈ ಅಧ್ಯಯನಕ್ಕಾಗಿ ಅಮೆರಿಕನ್ ಸೈಕಲಾಜಿಕಲ್ ಅಸೋಸಿಯೇಷನ್‌ನ ಸಂಶೋಧಕರು 156 ಭಿನ್ನ ಲಿಂಗೀಯರ ವರ್ತನೆಗಳ ಮೇಲೆ ಅಧ್ಯಯನ ನಡೆಸಿದ್ದರು. ಇಲ್ಲಿ ಪ್ರತಿಯೊಂದು ದಂಪತಿಗಳ ಆರ್ಥಿಕ ಸ್ಥಿತಿ ಮತ್ತು ಸಾಂಪ್ರದಾಯಿಕ ವಾತಾವರಣವು ವಿಭಿನ್ನವಾಗಿದ್ದು, ಈ ಎಲ್ಲಾ ದಂಪತಿಗಳು 3 ವರ್ಷಗಳಿಗಿಂತ ಹೆಚ್ಚು ಕಾಲ ಪರಸ್ಪರ ಸಂಬಂಧ ಹೊಂದಿದ್ದರು.

ಈ ಸಂಶೋಧನೆಯ ಪ್ರಮುಖ ಉದ್ದೇಶ ಪುರುಷರು ಮತ್ತು ಮಹಿಳೆಯರು ಸಂಬಂಧದಲ್ಲಿ ಸಹಾನುಭೂತಿಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಎಂಬುದನ್ನು ತಿಳಿದುಕೊಳ್ಳುವುದಾಗಿತ್ತು. ಇದಕ್ಕಾಗಿ, ಕೆಲವು ವೀಡಿಯೊ ತುಣುಕುಗಳನ್ನು ಅವರಿಗೆ ತೋರಿಸಲಾಯಿತು. ನಂತರ ಅವರ ಪ್ರತಿಕ್ರಿಯೆ ಕೇಳಿದಾಗ, ತಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳಲು ಹೆಚ್ಚಿನ ಸಮಯ ನೀಡಿರುವ ಪುರುಷರು ಉತ್ತಮವರೆಂದು ಮಹಿಳೆಯರು ಅಭಿಪ್ರಾಯಪಟ್ಟಿದ್ದಾರೆ.

ಈ ಸಂಶೋಧನೆಯಲ್ಲಿ ಭಾಗವಹಿಸಿದ ಮಹಿಳೆಯರು ತಮ್ಮ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ತಮ್ಮ ಸಂಗಾತಿ ಹೆಚ್ಚುವರಿ ಸಮಯ ನೀಡುವಾಗ ತಮ್ಮ ಸಂಬಂಧದಲ್ಲಿ ತೃಪ್ತಿಯನ್ನು ಅನುಭವಿಸುವುದಾಗಿ ತಿಳಿಸಿದ್ದಾರೆ. ಅಂದರೆ ಮಹಿಳೆಯರ ಮೇಲೆ ಹೆಚ್ಚಿನ ಸಹಾನುಭೂತಿ ಹೊಂದಿದ್ದಷ್ಟು, ಸ್ತ್ರೀಯರು ಸಂಗಾತಿಯೊಂದಿಗೆ ಭಾವನಾತ್ಮಕವಾಗಿ ಉತ್ತಮ ಸಂಪರ್ಕದಲ್ಲಿರುತ್ತಾರೆ ಎಂಬುದು ಕಂಡು ಬಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಸಂಗಾತಿಗಳು ಭಾವನಾತ್ಮಕವಾಗಿ ಜೊತೆಗಿದ್ದರೆ ಪರಸ್ಪರ ಹೊಂದಾಣಿಕೆಯಿಂದ ಇರುತ್ತಾರೆ ಎಂದು ಹೇಳಿರುವ ಅಧ್ಯಯನ ತಂಡ, ಇಬ್ಬರ ಅಭಿರುಚಿ ಸಮತೋಲನದಿಂದ ಕೂಡಿದ್ದರೆ ಮತ್ತು ಅವರ ಮೇಲೆ ಹೆಚ್ಚಿನ ಸಹಾನುಭೂತಿ ತೋರಿದರೆ ಮಹಿಳೆಯ ಮನಸ್ಸನ್ನು ಸುಲಭವಾಗಿ ಗೆಲ್ಲಬಹುದು ತಿಳಿಸಿದೆ.ಇದನ್ನೂ ಓದಿ: World cup: 1992 ಮತ್ತು 2019ರ ವಿಶ್ವಕಪ್​ ಸಾಮ್ಯತೆ: ಈ ಬಾರಿ ಕೂಡ ಫೈನಲ್​ ಪ್ರವೇಶಿಸಲಿದೆಯಾ ಪಾಕ್?

First published:June 27, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ