ಬ್ಲಾಕ್ ಟೀ ಮತ್ತು ಗ್ರೀನ್ ಟೀ ನಂತರ ಬಂದಿದೆ ಬ್ಲೂ ಟೀ !

news18
Updated:June 2, 2018, 6:42 PM IST
ಬ್ಲಾಕ್ ಟೀ ಮತ್ತು ಗ್ರೀನ್ ಟೀ ನಂತರ ಬಂದಿದೆ ಬ್ಲೂ ಟೀ !
news18
Updated: June 2, 2018, 6:42 PM IST
ನ್ಯೂಸ್ 18 ಕನ್ನಡ

ಬ್ಲ್ಯಾಕ್ ಟೀ ಮತ್ತು ಗ್ರೀನ್ ಟೀ ಇಂದು ಸಾಮಾನ್ಯವಾಗಿದೆ. ಇದರ ಹೊರತಾಗಿ ನೀವು ಹೊಸ ಟೀ ಹುಡುಕಾಟದಲ್ಲಿದ್ದರೆ ಬ್ಲೂ ಟೀ ( ನೀಲಿ ಚಹಾ) ಬಂದಿದೆ. ಇದು ರುಚಿಯನ್ನು ನೀಡುವುದಲ್ಲದೆ, ಆರೋಗ್ಯವನ್ನು ಉತ್ತಮ ಪಡಿಸುತ್ತದೆ ಎಂದು ಹೇಳಲಾಗಿದೆ.

ಬ್ಲೂ ಟೀ ಕುಡಿಯುವುದರಿಂದ ಸಿಗುವ ಪ್ರಯೋಜನಗಳ ಬಗ್ಗೆ Teabox.comನ ಸಂಸ್ಥಾಪಕ ಕೌಶಲ್ ದುಗರ್​​ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

* ಆಂಟಿ ಆಕ್ಸಿಡೆಂಟ್ ಅಂಶಗಳು : ಬ್ಲೂ ಟೀ ಕುಡಿಯುವುದರಿಂದ ದೇಹದಲ್ಲಿ ಆಂಟಿ ಆಕ್ಸಿಡೆಂಟ್ ಪ್ರಮಾಣ ಹೆಚ್ಚಾಗುತ್ತದೆ. ಇದರಲ್ಲಿರುವ ಜೈವಿಕಾಂಶಗಳು ಶೀಘ್ರ ಮುಪ್ಪಾಗುವುದನ್ನು ತಡೆಯುತ್ತದೆ. ಅಲ್ಲದೆ ದೇಹದಲ್ಲಿರುವ ವಿಷಾಂಶಗಳು ಹೊರಹೋಗಲು ಆಂಟಿಆಕ್ಸಿಡೆಂಟ್ ಭರಿತ ಬ್ಲೂ ಟೀ ಪರಿಣಾಮಕಾರಿಯಾಗಿದೆ.

* ಮಧುಮೇಹ ನಿವಾರಕ : ಊಟಗಳ ನಡುವೆ ಒಂದು ಕಪ್ ಬ್ಲೂ ಟೀ ಕುಡಿಯುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ನೀಲಿ ಚಹಾದಲ್ಲಿರುವ ಆಂಟಿಆಕ್ಸಿಡೆಂಟ್​ ಅಂಶಗಳು ಮಧುಮೇಹಿಗಳನ್ನು ಸೋಂಕಿನಿಂದ ರಕ್ಷಿಸುತ್ತದೆ. ಹಾಗೆಯೇ ಇದನ್ನು ಕುಡಿಯುವುದರಿಂದ ಹೃದಯದ ಆರೋಗ್ಯ ಉತ್ತಮಗೊಳ್ಳುತ್ತದೆ.

* ತ್ವಚೆ ಮತ್ತು ಕೂದಲ ಆರೈಕೆ : ಆಂಟಿಆಕ್ಸಿಡೆಂಟ್​ಗಳನ್ನು ಹೊಂದಿರುವ ಬ್ಲೂ ಟೀ ಕೂದಲು ಮತ್ತು ತ್ವಚೆಯ ಸೌಂದರ್ಯವನ್ನು ಹೆಚ್ಚಿಸುತ್ತದೆ. ಈ ಟೀನಲ್ಲಿ ವಿಟಮಿನ್​ ಮತ್ತು ಖನಿಜಾಂಶಗಳು ಹೇರಳವಾಗಿದ್ದು, ಇದು ತ್ವಚೆ ಮತ್ತು ಕೂದಲಿನ ಸೌಂದರ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳುತ್ತದೆ.

* ಮೆದುಳಿನ ಚಟುವಟಿಕೆ ಹೆಚ್ಚಿಸುತ್ತದೆ : ಬ್ಲೂ ಟೀ ಒಂದು ನೂಟ್ರೋಪಿಕ್ ಎಂದು ಅಧ್ಯಯನದಿಂದ ಸಾಬೀತಾಗಿದೆ. ಇದು ಮೆದುಳಿನ ಚುಟುವಟಿಕೆ ಕಾರ್ಯವನ್ನು ಹೆಚ್ಚಿಸುವುದಲ್ಲದೆ, ದೇಹದ ಸಾಮರ್ಥ್ಯವನ್ನೂ ಉತ್ತಮಪಡಿಸುತ್ತದೆ.
Loading...

'ದಿ ಟೀ ಟ್ರೊವ್' ಸಂಸ್ಥಾಪಕ ರಿಷವ್ ಕನಾಯ್ ಕೂಡ ಬ್ಲೂ ಟೀ ಕುರಿತಾದ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.

* ಆತಂಕ-ಖಿನ್ನತೆ ದೂರ ಮಾಡುತ್ತದೆ : ಇತ್ತೀಚಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಖಿನ್ನತೆಯ ಸಮಸ್ಯೆಗೆ ಬ್ಲೂ ಟೀ ಕೂಡ ಪರಿಹಾರ ಎಂದು ಅಧ್ಯಯನ ತಿಳಿಸಿದೆ. ಬ್ಲೂ ಟೀ ಕುಡಿಯುವುದರಿಂದ ಒತ್ತಡವನ್ನು ಕಡಿಮೆಗೊಳಿಸಬಹುದು. ಆತಂಕದ ಸಮಸ್ಯೆ ಇದ್ದರೆ ಬ್ಲೂ ಟೀ ಕುಡಿಯುವುದು ಉತ್ತಮ ಎಂದು ಸಂಶೋಧನೆ ಹೇಳಿದೆ.

* ಸೌಂದರ್ಯ ಹೆಚ್ಚಿಸುತ್ತದೆ : ಬ್ಲೂ ಟೀನಲ್ಲಿ ಆಂಟಿ-ಗ್ಲೈಕೇಷನ್​ ಅಂಶಗಳು ಹೆಚ್ಚಾಗಿರುತ್ತದೆ. ಇದು ತ್ವಚೆಯು ಸುಕ್ಕುಗಟ್ಟುವುದನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದರಿಂದ ಸದಾಕಾಲ ಸೌಂದರ್ಯವನ್ನು ಕಾಪಾಡಿಕೊಳ್ಳಬಹುದು. ಅಲ್ಲದೆ ಇದನ್ನು ದಿನನಿತ್ಯ  ಕುಡಿಯುವುದರಿಂದ ಕೂದಲ ಸೌಂದರ್ಯವನ್ನು ಹೆಚ್ಚಿಸಬಹುದು.

* ಕ್ಯಾನ್ಸರ್ ಅಪಾಯ ಕಡಿಮೆ : ಈ ಟೀ ನಲ್ಲಿ ಆಂಟಿಆಕ್ಸಿಡೆಂಟ್ ಅಂಶಗಳು ಸಮೃದ್ದವಾಗಿದೆ. ಇದು ದೇಹದ ಜೀವಕೋಶಗಳು ಹಾನಿಯಾಗದಂತೆ ತಡೆಯುತ್ತದೆ. ಕೋಶಗಳ ಹಾನಿಯನ್ನು ತಡೆಯುವುದರಿಂದ ವಿವಿಧ ಕ್ಯಾನ್ಸರ್ ಅಪಾಯವನ್ನು ಬ್ಲೂ ಟೀ ದೂರ ಮಾಡುತ್ತದೆ.
First published:June 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...