Health Tips: ಹಲ್ಲುಗಳ ಹಳದಿ ಕಲೆ ನಿವಾರಣೆಗೆ ಇಲ್ಲಿದೆ ಸೂತ್ರಗಳು

Teeth Whitening: ಹಲ್ಲುಗಳ ಆರೋಗ್ಯ ಕಾಪಾಡುವುದು ಬಹಳ ಮುಖ್ಯವಾಗುತ್ತದೆ. ಎಷ್ಟು ಸಾಧ್ಯವೋ ಅಚ್ಟು ಹಲ್ಲುಗಳ ಬಗ್ಗೆ ಕಾಳಜಿವಹಿಸುವುದು ಅಗತ್ಯ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಮ್ಮ ಕೂದಲು ಮತ್ತು ಚರ್ಮದ ಆರೋಗ್ಯದ ಜೊತೆ ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ. ನಮ್ಮ ಹಲ್ಲುಗಳು ಕೂಡ ಸೌಂದರ್ಯದ ಸಂಕೇತ. ನೀವು ಅದೆಷ್ಟೇ ಆರೋಗ್ಯವಾಗಿರಿ ಹಲ್ಲುಗಳಲ್ಲಿ ಹಳದಿ ಕಲೆ ಅಥವಾ ಬೇರೆ ತೊಂದರೆಗಳಿದ್ದಲ್ಲಿ ಅದು ನಿಮಗೆ ಮುಜುಗರವನ್ನು ಉಂಟು ಮಾಡುತ್ತದೆ. ಯಾವುದೇ ಸಮಯದಲ್ಲಿ ನಿಮ್ಮ ಹಲ್ಲುಗಳ ಹೊಳಪನ್ನು ಹೆಚ್ಚಿಸಲು ಇಲ್ಲಿದೆ ಸುಲಭ ಮಾರ್ಗ.

ಹಲ್ಲುಗಳನ್ನು ಹಳದಿ ಕಲೆ ಮತ್ತು ಬೇರೆ ತೊಂದರೆಗಳಿಂದ ದೂರವಿರಿಸಲು ಉತ್ತಮ ಮಾರ್ಗವೆಂದರೆ ಕೆಟ್ಟ ಅಭ್ಯಾಸಗಳನ್ನು ಬಿಡುವುದು. ನಿಮಗೆ ಸಿಗರೇಟ್ ಸೇದುವುದು ಮತ್ತು ಹೆಚ್ಚು ತಂಬಾಕು ಸೇವನೆಯನ್ನು ಮಾಡುವ ಅಭ್ಯಾಸವಿದ್ದಲ್ಲಿಅಲ್ಲದೇ ನೀವು ಹೆಚ್ಚು ಕಾಫಿ ಕುಡಿಯುವ ಅಭ್ಯಾಸವನ್ನು ಹೊಂದಿದ್ದರೆ, ಅದರಿಂದ ದೂರವಿರುವುದು ಒಳ್ಳೆಯದು. ಹಾಗೆಯೇ ಜಂಕ್ ಫುಡ್ಗಳಿಂದ ದೂರವಿರಿ. ನೀವು ಜಂಕ್ ಬದಲು ಕ್ಯಾರೆಟ್, ಸೇಬು, ಸೌತೆಕಾಯಿ ಸೇರಿದಂತೆ ಬೇರೆ ತರಕಾರಿ ಮತ್ತು ಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಅಲ್ಲದೇ ಹಾಲು ಮೊಸರು ಸೇವನೆ ಮಾಡುವುದು ನಿಮ್ಮ ಪಿಎಚ್ ಮಟ್ಟವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ನಿಮ್ಮ ಹಲ್ಲು ಮತ್ತು ಬಾಯಿಯ ಆರೋಗ್ಯ ಸುಧಾರಿಸಲು ನೀವು ಹೆಚ್ಚು ಕಾಳಜಿವಹಿಸಬೇಕು. ಹಾಗಾಗಿ ದಿನನಿತ್ಯ ಬ್ರಷ್ ಮಾಡಲೇಬೇಕು. ಸಾಮಾನ್ಯ ಬ್ರಷ್’ಗಿಂತ ವೈಟ್‘ನಿಂಗ್ ಟೂತ್ಪೇಸ್ಟ್ ಮತ್ತು ಎಲೆಕ್ಟ್ರಿಕ್ ಟೂತ್ ಬ್ರಷ್ ಕಲೆಗಳನ್ನು ಮತ್ತು ಪ್ಲೇಕ್ ಅನ್ನು ಹೆಚ್ಚು ಪರಿಣಾಮಕಾರಿಯಾಗಿ ತೊಡೆದುಹಾಕಲು ಸಹಾಯ ಮಾಡುತ್ತದೆ. ಹಾಗೆ ರಾತ್ರಿ ಕೂಡ ಊಟದ ನಂತರ ಬ್ರಷ್ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಇನ್ನೊಂದು ಮುಖ್ಯ ಅಂಶವೆಂದರೆ ಊಟವಾದ ತಕ್ಷಣ ಬ್ರಷ್ ಮಾಡಬಾರದು ಸುಮಾರು ಒಂದು ಗಂಟೆಗಳ ನಂತರ ಬ್ರಷ್ ಮಾಡಬೇಕು.

ಇದನ್ನೂ ಓದಿ: ಅರಿಶಿನ ಹಚ್ಚುವಾಗ ಈ ತಪ್ಪುಗಳನ್ನು ಮಾಡಬೇಡಿ

ತೆಂಗಿನಕಾಯಿ, ಎಳ್ಳು ಎಣ್ಣೆಯಿಂದ ನಿಮ್ಮ ಬಾಯಿಯನ್ನು ತೊಳೆಯುವುದು ಕಲೆಯನ್ನು ಹೋಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಯಾವುದೇ ಒಸಡುಗಳ ಸಮಸ್ಯೆಯನ್ನು ತಡೆಯುತ್ತದೆ. ಯಾವುದೇ ಎಣ್ಣೆಯನ್ನು ಎರಡು ಚಮಚ ತೆಗೆದುಕೊಂಡು, ಕನಿಷ್ಠ ಐದು ನಿಮಿಷಗಳ ಕಾಲ ತೊಳೆಯಿರಿ. ಆ ನಂತರ ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಮುಂದಿನ ಅರ್ಧ ಗಂಟೆಯವರೆಗೆ ಆಹಾರ ತಿನ್ನುವುದನ್ನು ತಪ್ಪಿಸಿ. ಯಾವುದೇ ಹಲ್ಲಿನ ಸಮಸ್ಯೆಗಳನ್ನು ತಪ್ಪಿಸಲು ಇದನ್ನು ದಿನಕ್ಕೆ ಎರಡು ಬಾರಿ ಮಾಡುವುದು ಒಳ್ಳೆಯದು.

ಬೇರೆ ಯಾವುದೇ ರಾಸಾಯನಿಕ ಟೂತ್ ಪೇಸ್ಟ್ಗಳನ್ನು ಬಳಕೆ ಮಾಡುವ ಬದಲು ನೀವೆ ಮನೆಯಲ್ಲಿ ಟೂತ್ ಪೇಸ್ಟ್ ತಯಾರಿಸಿ. ತುಳಸಿ ಎಲೆಗಳನ್ನು ಬಳಸಿ ಆರೋಗ್ಯಕರ ಟೂತ್ ಪೇಸ್ಟ್ ತಯಾರಿಸಬಹುದು. ತುಳಸಿಗೆ ಹಲ್ಲನ್ನು ಬಿಳಿ ಮಾಡುವ ಮತ್ತು ಬ್ಲೀಚಿಂಗ್ ಸಾಮರ್ಥ್ಯವಿದೆ. ನೀವು 15 ರಿಂದ 20 ತಾಜಾ ತುಳಸಿ ಎಲೆಗಳನ್ನು ತೆಗೆದುಕೊಂಡು ರುಬ್ಬಿ, ನಂತರ ನಿಮ್ಮದೇ ಆದ ನೈಸರ್ಗಿಕ ಟೂತ್’ಪೇಸ್ಟ್ ತಯಾರಿಸಬಹುದು. ಈ ಪೇಸ್ಟ್ ಬಳಸಿ ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಜ್ಜಿಕೊಳ್ಳಿ, ಇನ್ನು ನಿಮ್ಮ ಹಲ್ಲುಗಳಲ್ಲಿನ ಕಲೆಯನ್ನು ಇದ್ದಿಲನ್ನು ಬಳಕೆ ಮಾಡಿ. ಇದು ನಿಮ್ಮ ಹಲ್ಲುಗಳನ್ನು ಬಿಳಿಪಾಗಿಸುತ್ತದೆ.

ವಾರಕ್ಕೊಮ್ಮೆ, ಸೇಬು ಸೈಡರ್ ವಿನೆಗರ್ ಮತ್ತು ನೀರನ್ನು ಸೇರಿಸಿ ಅದನ್ನು ನಿಮ್ಮ ಬಾಯಿಯ ಸುತ್ತ ಕೆಲವು ನಿಮಿಷಗಳ ಕಾಲ ತಿರುಗಿಸಿ. ಹಾಗೆಯೆ ನಿಮ್ಮ ಹಲ್ಲುಗಳಲ್ಲಿನ ಕಲೆ ಹೋಗಿಸಲು ಇನ್ನೊಂದು ಉತ್ತಮ ಪರಿಹಾರ ಪ್ರತಿದಿನ ನಿಮ್ಮ ಹಲ್ಲುಗಳನ್ನು ಬಾಳೆಹಣ್ಣಿನ ಸಿಪ್ಪೆ ಅಥವಾ ಕಿತ್ತಳೆ ಸಿಪ್ಪೆಯೊಂದಿಗೆ ಉಜ್ಜುವುದು ನಿಮ್ಮ ಹಲ್ಲುಗಳನ್ನು ಬಿಳಿಗೊಳಿಸಲು ಸಹಾಯ ಮಾಡುತ್ತದೆ.
Published by:Sandhya M
First published: