Health Tips: ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಈ ಯೋಗ ಮಾಡಿ; ಉತ್ತಮ ಜೀವನ ಶೈಲಿಗೆ ಆರೋಗ್ಯ ತಜ್ಞರ ಸಲಹೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಭ್ಯಾಸ ಮಾಡಬಹುದಾದ ಕೆಲವು ಸುಲಭವಾದ ಯೋಗ ಆಸನಗಳೆಂದರೆ ಭುಜಾಸನ, ಹಲಾಸನ, ಮತ್ಯಾಸನ ಮತ್ತು ಧನುರಾಸನ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ನಾವು ಆರೋಗ್ಯವಾಗಿರಲು (Health) ನಮ್ಮಲ್ಲಿರುವ ಪ್ರತಿರಕ್ಷಣಾ ವ್ಯವಸ್ಥೆಯು ಪ್ರಮುಖ ಪಾತ್ರ ವಹಿಸುತ್ತದೆ. ದೇಹವು ಸೋಂಕುಗಳು ವಿರುದ್ಧ ಹೋರಾಡಲು, ಸಣ್ಣ-ಪುಟ್ಟ ಕಾಯಿಲೆಗಳಿಂದ ರಕ್ಷಿಸಲು ಅಗತ್ಯವಾಗಿ ಇಮ್ಯುನಿಟಿ ಪವರ್ ಬೇಕು. ಕೋವಿಡ್ (Covid) ಆಗಮನದ ನಂತರವಂತೂ ರೋಗನಿರೋಧಕ (Immunity) ಶಕ್ತಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ದುರ್ಬಲ ಪ್ರತಿರಕ್ಷಣಾ ವ್ಯವಸ್ಥೆಯು ಸೋಂಕಿಗೆ ಒಳಗಾಗುತ್ತದೆ ಮತ್ತು ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ವ್ಯಕ್ತಿಯು ಇತರ ಜನರಿಗಿಂತ ಹೆಚ್ಚಾಗಿ ಸೋಂಕಿಗೆ ಒಳಗಾಗಬಹುದು. ಮಾನವ ದೇಹವು ರೋಗನಿರೋಧಕ ಶಕ್ತಿಯನ್ನು ಸರಿಪಡಿಸುವ ಮತ್ತು ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದ್ದರೂ, ನಮ್ಮ ರೋಗನಿರೋಧಕ ಶಕ್ತಿಯು ಜಡ ಜೀವನಶೈಲಿಯೊಂದಿಗೆ (Life Style) ರಾಜಿ ಮಾಡಿಕೊಳ್ಳಬಹುದು.

ಹೀಗಾಗಿ ಯೋಗ ಮತ್ತು ನೈಸರ್ಗಿಕ ಜೀವನ ವಿಧಾನದ ಸಹಾಯದಿಂದ ದುರ್ಬಲ ರೋಗನಿರೋಧಕ ಶಕ್ತಿಯನ್ನು ಗುಣಪಡಿಸಲು ಆರೋಗ್ಯ ತಜ್ಞರ ಕೆಲವು ಸಲಹೆಗಳು ಇಲ್ಲಿವೆ.

ರೋಗ ನಿರೋಧಕ ಶಕ್ತಿ ಹೆಚ್ಚಳಕ್ಕೆ ಯೋಗ

ಆಯುರ್ವೇದ ತಜ್ಞೆ, ವೈದ್ಯೆ ಶಕುಂತಲಾ ದೇವಿ ಅವರು ಹೇಳುವ ಪ್ರಕಾರ, “ನಿಯಮಿತವಾಗಿ ಯೋಗ ಮಾಡುವುದರಿಂದ ದುರ್ಬಲ ರೋಗನಿರೋಧಕ ಶಕ್ತಿಯನ್ನು ಸುಧಾರಿಸಬಹುದು. ಯೋಗದಲ್ಲಿ 'ಪ್ರಾಣ ವಾಯು' ವು ದೇಹವು ಆಂತರಿಕವಾಗಿ ಪಡೆಯುವ ಶಕ್ತಿಯನ್ನು ಸೂಚಿಸುತ್ತದೆ. ಇದು ಹೃದಯ ಚಕ್ರಕ್ಕೆ ಸಂಬಂಧಿಸಿದೆ ಮತ್ತು ಉಸಿರಾಟ ಹಾಗೂ ಶ್ವಾಸಕೋಶವನ್ನು ನಿಯಂತ್ರಿಸುತ್ತದೆ, ನಮ್ಮ ದೇಹವನ್ನು ಪೋಷಿಸಲು ನಾವು ಸೇವಿಸುವ ಆಹಾರದ ಮೇಲೂ ಪರಿಣಾಮ ಬೀರುತ್ತದೆ. ದೇಹದಲ್ಲಿ ಪ್ರಾಣ ವಾಯುವಿನ ಸರಿಯಾದ ಪರಿಚಲನೆ ಹೊಂದಿರುವ ಜನರು ಉತ್ತಮ ರೋಗನಿರೋಧಕ ಶಕ್ತಿಯನ್ನು ಹೊಂದಿರುತ್ತಾರೆ” ಎಂದಿದ್ದಾರೆ. ಯೋಗದಲ್ಲಿ ನಿರ್ದಿಷ್ಟ ಪ್ರಾಣ ವಾಯು ಮುದ್ರೆ ಇದೆ, ಇದನ್ನು ಪ್ರತಿ ದಿನವೂ ಅಭ್ಯಾಸ ಮಾಡಬಹುದು. ರೋಗನಿರೋಧಕ ಶಕ್ತಿಯನ್ನು ನಿರ್ಮಿಸಲು ಮತ್ತು ದೇಹವನ್ನು ಚೈತನ್ಯಗೊಳಿಸಲು ಸಹಕರಿಸುತ್ತದೆ ಎಂದಿದ್ದಾರೆ.

ಕಳಪೆ ರೋಗನಿರೋಧಕ ಶಕ್ತಿಯು ರಾತ್ರೋರಾತ್ರಿ ಸುಧಾರಿಸುವುದಿಲ್ಲ ಎಂದು ಹಲೋ ಮೈ ಯೋಗ ಸಂಸ್ಥಾಪಕಿ ಶಿವಾನಿ ಗುಪ್ತಾ ಹೇಳುತ್ತಾರೆ. ಆರೋಗ್ಯಕರ ಜೀವನಶೈಲಿಯನ್ನು ನಡೆಸಿದರೆ ಮಾತ್ರ ಸುಧಾರಣೆಗಳನ್ನು ಗಮನಿಸಬಹುದು ಎಂದು ಹೇಳಿದ್ದಾರೆ. “ಆರೋಗ್ಯಕರ ಜೀವನಶೈಲಿಯು ನಿಮ್ಮ ಮನಸ್ಸು, ಉಸಿರಾಟ ಮತ್ತು ದೇಹವನ್ನು ಸಮತೋಲನದಲ್ಲಿಡಲು ಯೋಗ, ಪ್ರಾಣಾಯಾಮ ಮತ್ತು ಧ್ಯಾನವನ್ನು ಒಳಗೊಂಡಿರುವ ದೈನಂದಿನ ದಿನಚರಿಯನ್ನು ಅನುಸರಿಸುತ್ತದೆ. ಜಂಕ್ ಫುಡ್‌ಗಳಿಂದ ದೂರವಿರಿ, ಸಾತ್ವಿಕ ಊಟ ಸೇವಿಸಿ, ಕರಿದ-ಹುರಿದ ಆಹಾರಗಳನ್ನು ತಪ್ಪಿಸಿ ಮತ್ತು ನಿಮ್ಮ ದಿನದ ಸ್ವಲ್ಪ ಹೊತ್ತನ್ನು ನಿಸರ್ಗದಲ್ಲಿ ಕಳೆಯಿರಿ ಎನ್ನುತ್ತಾರೆ ಶಿವಾನಿ ಗುಪ್ತಾ.

ಪ್ರಾಣಾಯಾಮ ಮತ್ತು ಧ್ಯಾನ ಮಾಡಿ

ಡಿವೈನ್ ಸೋಲ್ ಯೋಗದ ಸಂಸ್ಥಾಪಕ ಡಾ. ದೀಪಕ್ ಮಿತ್ತಲ್ ಹೇಳುವ ಪ್ರಕಾರ, “ಯೋಗವು ಆರೋಗ್ಯಕರ ದೇಹ ಮತ್ತು ಮನಸ್ಸನ್ನು ಕಾಪಾಡಿಕೊಳ್ಳಲು ಪ್ರಾಚೀನ ಭಾರತೀಯ ಅಭ್ಯಾಸವಾಗಿದೆ ಮತ್ತು ನಮ್ಮ ಪ್ರಮುಖ ಶಕ್ತಿಯನ್ನು ಕಾಪಾಡಿಕೊಳ್ಳಲು ಹಾಗೂ ರೋಗದ ವಿರುದ್ಧ ಹೋರಾಡಲು ಅನುವು ಮಾಡಿಕೊಡುತ್ತದೆ. ಹೀಗಾಗಿ, ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗವು ಪರಿಣಾಮಕಾರಿ ಅಭ್ಯಾಸವಾಗಿದೆ. ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಮಾಡುವುದರಿಂದ ನಮ್ಮ ದೇಹ ಮತ್ತು ಮನಸ್ಸು ಹಲವು ಪ್ರಯೋಜನ ಪಡೆಯುತ್ತದೆ ಎಂದಿದ್ದಾರೆ.

ದೈನಂದಿನ ಒತ್ತಡ, ಆತಂಕ, ಖಿನ್ನತೆ, ಮೈಗ್ರೇನ್, ನಿದ್ರಾಹೀನತೆ, ಅಧಿಕ ರಕ್ತದೊತ್ತಡ ಮತ್ತು ವಿವಿಧ ಮನೋದೈಹಿಕ ಕಾಯಿಲೆಗಳನ್ನು ಎದುರಿಸಲು ಯೋಗ ಉತ್ತಮ ಪರಿಹಾರವಾಗಿದೆ ಎನ್ನುತ್ತಾರೆ ಮಿತ್ತಲ್. ಯೋಗ, ಧ್ಯಾನ, ಜೀವನ ಶೈಲಿ ನಮ್ಮ ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ರಕ್ತ ಪರಿಚಲನೆ ಸರಾಗಗೊಳಿಸಿ ಏಕಾಗ್ರತೆಯನ್ನು ಸುಧಾರಿಸುತ್ತದೆ, ಉಸಿರಾಟದ ವ್ಯವಸ್ಥೆಯನ್ನು ಬಲಪಡಿಸುತ್ತದೆ, ನಿದ್ರೆಯನ್ನು ನಿಯಂತ್ರಿಸುತ್ತದೆ ಮತ್ತು ದೈವಿಕ ಗುಣಪಡಿಸುವಿಕೆಯನ್ನು ಉತ್ತೇಜಿಸುತ್ತದೆ ಎಂದಿದ್ದಾರೆ.

ಆರೋಗ್ಯ ತಜ್ಞರ ಸಲಹೆ

ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಭ್ಯಾಸ ಮಾಡಬಹುದಾದ ಕೆಲವು ಸುಲಭವಾದ ಯೋಗ ಆಸನಗಳೆಂದರೆ ಭುಜಾಸನ, ಹಲಾಸನ, ಮತ್ಯಾಸನ ಮತ್ತು ಧನುರಾಸನ. ಇವುಗಳನ್ನು ಉತ್ತಮ ಅರ್ಹ ಮತ್ತು ಅನುಭವಿ ತರಬೇತುದಾರರ ಮೇಲ್ವಿಚಾರಣೆಯಲ್ಲಿ ಅಭ್ಯಾಸ ಮಾಡಬೇಕು.

ಇದನ್ನೂ ಓದಿ: Drinking water: ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಕೆಲಸ ಮಾಡಿ, ನಿಮ್ಮಲ್ಲಾಗುವ ಬದಲಾವಣೆ ನೋಡಿ

ಬಲವಾದ ಪ್ರತಿರಕ್ಷಣಾ ವ್ಯವಸ್ಥೆಯು ಕೆಲವೇ ದಿನಗಳಲ್ಲಿ ವೈರಸ್ ಅನ್ನು ಕೊಲ್ಲುತ್ತದೆ ಎಂದು ಹೇಳಿದ ಡಾ. ಗಂಗಾ ಆನಂದ್ (ಪಿಟಿ), ಯೋಗವು ಪ್ರತಿರಕ್ಷಣಾ ವ್ಯವಸ್ಥೆಯ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ, ಥೈಮಸ್ ಗ್ರಂಥಿಯನ್ನು ಬೆಂಬಲಿಸುತ್ತದೆ ಮತ್ತು ಉತ್ತೇಜಿಸುತ್ತದೆ, ರಕ್ತ ಪರಿಚಲನೆ ಸುಧಾರಿಸುತ್ತದೆ, ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ ಮತ್ತು ಪೋಷಕಾಂಶಗಳಿಂದ ಜೀವಕೋಶಗಳಿಗೆ ಶಕ್ತಿಯ ವರ್ಗಾವಣೆಗೆ ಸಹಾಯ ಮಾಡುತ್ತದೆ ಎಂದಿದ್ದಾರೆ.

ಡಾ. ಗಂಗಾ ಆನಂದ್ ಅವರು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಸನಗಳು, ಪ್ರಾಣಾಯಾಮ ಮತ್ತು ಧ್ಯಾನಗಳನ್ನು ಒಳಗೊಂಡಿರುವ ಕೆಲವು ಯೋಗ ಅಭ್ಯಾಸಗಳ ಬಗ್ಗೆ ಸಲಹೆ ನೀಡಿದ್ದಾರೆ, ಅವುಗಳೆಂದರೆ

1) ಧನುರಾಸನ (ಬಿಲ್ಲು ಭಂಗಿ)-

ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಒತ್ತಡ ಹೇರುವ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಅಗತ್ಯವಾಗಿರುವ ರಕ್ತಕಣಗಳಾದ ಬಿಳಿ ರಕ್ತ ಕಣಗಳ ಹರಿವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಧನುರಾಸನವನ್ನು ಅಭ್ಯಾಸ ಮಾಡುವುದರಿಂದ ಹೊಟ್ಟೆಯ ಮೇಲೆ ಒತ್ತಡ ಉಂಟಾಗುತ್ತದೆ ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ.

2) ವೃಕ್ಷಾಸನ (ಮರದ ಭಂಗಿ)-

ಇದು ಸಮತೋಲನದ ಸ್ಥಿತಿಯನ್ನು ಸಾಧಿಸಲು ಸಹಾಯ ಮಾಡುತ್ತದೆ. ಇದು ಶಾಂತ ಮತ್ತು ಪ್ರಶಾಂತತೆಯ ಭಾವವನ್ನು ಸಂಕೇತಿಸುತ್ತದೆ.

3) ತಾಡಾಸನ (ಪರ್ವತ ಭಂಗಿ)-

ನರಮಂಡಲಕ್ಕೆ ತಾಡಾಸನ ಹೆಚ್ಚು ಸಹಕಾರಿ. ಅಲ್ಲದೇ ಇದು ತೊಡೆಗಳ ಮತ್ತು ಕೀಲುಗಳ ನಮ್ಯತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: Healthy Drinks: ಸುಡು ಬಿಸಿಲು, ಮಕ್ಕಳ ಆಹಾರದಲ್ಲಿ ಈ ಪದಾರ್ಥಗಳನ್ನು ಮಿಸ್ ಮಾಡಲೇಬೇಡಿ

4) ಅರ್ಧ ಮತ್ಸ್ಯೇಂದ್ರಾಸನ (ಅರ್ಧ-ಮೀನಿನ ಭಂಗಿ)-

ಇದನ್ನು "ಮಾರಣಾಂತಿಕ ರೋಗಗಳ ನಾಶಕ" ಎಂದು ಹೇಳಲಾಗುತ್ತದೆ. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಇದು ಹೆಚ್ಚು ಸಹಕಾರಿ

ಇವುಗಳ ಜೊತೆ ಚತುರಂಗ ದಂಡಾಸನ, ಮತ್ಸ್ಯಾಸನ, ಉತ್ಕಟಾಸನ, ಆಂಜನೇಯಾಸನ ಮುಂತಾದ ಹಲವು ಆಸನಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದು ತಜ್ಞರು ಹೇಳಿದ್ದಾರೆ.
Published by:Pavana HS
First published: