ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್​ ಅನುಸರಿಸಿ

ದೇಹವು ದಣಿದಿದ್ದರೂ ಸಹ ರಾತ್ರಿಯಲ್ಲಿ ನಿದ್ದೆ ಬರದಿರುವುದು ಗಂಭೀರ ಸಮಸ್ಯೆಯಾಗಿದೆ. ಈ ಸಮಸ್ಯೆಗೆ ಪರಿಹಾರವಾಗಿ ಕೆಲವೊಂದು ಮನೆಮದ್ದನ್ನು ಅನುಸರಿಸಿದರೆ ಸುಲಭವಾಗಿ ನಿದ್ರೆಗೆ ಜಾರಬಹುದು. 

news18
Updated:June 5, 2019, 9:41 PM IST
ಸರಿಯಾಗಿ ನಿದ್ರೆ ಬರುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್​ ಅನುಸರಿಸಿ
Tips to Sleep
  • News18
  • Last Updated: June 5, 2019, 9:41 PM IST
  • Share this:
ಇಂದಿನ ಜೀವನ ಶೈಲಿಯಲ್ಲಿ ನಿದ್ರಾಹೀನತೆಯು ಬಹುದೊಡ್ಡ ಸಮಸ್ಯೆಯಾಗಿದೆ. ಕೆಲಸದ ಒತ್ತಡ, ತಲೆ ಬಿಸಿ, ಖಿನ್ನತೆ ಮುಂತಾದವುಗಳು ನಿದ್ದೆ ಕಡಿಮೆಯಾಗಲು ಮುಖ್ಯ ಕಾರಣ. ದೇಹವು ದಣಿದಿದ್ದರೂ ಸಹ ರಾತ್ರಿಯಲ್ಲಿ ನಿದ್ದೆ ಬರದಿರುವುದು ಗಂಭೀರ ಸಮಸ್ಯೆಯಾಗಿದೆ. ಆದರೆ, ಇಂತಹ ಸಮಸ್ಯೆಗೆ ಪರಿಹಾರವಾಗಿ ಕೆಲವೊಂದು ಮನೆಮದ್ದನ್ನು ಅನುಸರಿಸಿದರೆ ಸುಲಭವಾಗಿ ನಿದ್ರೆಗೆ ಜಾರಬಹುದು.

-ವಾರಕ್ಕೊಮ್ಮೆ ಹರಳೆಣ್ಣೆಯನ್ನು ತಲೆ, ಮೈ, ಕೈಗೆ ಹಚ್ಚಿಕೊಂಡು ಸ್ನಾನ ಮಾಡುವುದರಿಂದ ದೇಹದ ಉಷ್ಣ ಕಡಿಮೆ ಆಗುತ್ತದೆ. ರಾತ್ರಿ ವೇಳೆ ಚೆನ್ನಾಗಿ ನಿದ್ರೆ ಬರುತ್ತದೆ.

-ಮಲಗುವ ಮುನ್ನ ಬಾಳೆಹಣ್ಣು ಸೇವಿಸಿದರೆ ಉತ್ತಮ. ಇದರಲ್ಲಿ ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ ಪ್ರಮಾಣ ಇರುವುದರಿಂದ ಶರೀರಕ್ಕೆ ಟ್ರಿಪ್ಟೊಫಾನ್ ಒದಗಿಸುವ ಕೆಲಸ ಮಾಡುತ್ತದೆ. ಇದು ಮಿದುಳಿಗೆ ವಿಶ್ರಾಂತಿ ನೀಡುವ ಜೊತೆಗೆ ನಿದ್ರೆ ಬರಲು ಸಹಾಯ ಮಾಡುತ್ತದೆ.

-ರಾತ್ರಿ ಮಲಗುವ ಮೊದಲು ಹಾಲು ಕುಡಿಯುವುದು ಒಳ್ಳೆಯದು. ಇದರಲ್ಲಿ ಕ್ಯಾಲ್ಸಿಯಂ ಪ್ರಮಾಣ ಇರುವುದರಿಂದ ನಿದ್ರೆಗೆ ಅಡಚಣೆಯಾಗದಂತೆ ನೋಡಿಕೊಳ್ಳುತ್ತದೆ. ನಿದ್ರಾ ಹೀನತೆ ಸಮಸ್ಯೆಯಿರುವವರು ರಾತ್ರಿ ಮಲಗುವ ಮೊದಲು ಒಂದು ಗ್ಲಾಸ್ ಬಿಸಿ ಹಾಲನ್ನು ಕುಡಿದು ಮಲಗುವುದು ಉತ್ತಮ.

-ಸೌತೆಕಾಯಿ ತಿರುಳನ್ನು ಅಂಗಾಲಿಗೆ ಮೂರು ನಿಮಿಷ ಉಜ್ಜಿಕೊಂಡರೆ ಚೆನ್ನಾಗಿ ನಿದ್ರೆ ಬರುವುದರ ಜೊತೆಗೆ ದೇಹ ಕೂಡ ತಂಪಾಗಿರುತ್ತದೆ.

ಇದನ್ನೂ ಓದು‘ಸಲಗ’ದಲ್ಲಿ ಘೀಳಿಡಲಿದ್ದಾರೆ ‘ಡಾಲಿ’: ಚಿತ್ರದಲ್ಲಿನ ‘ಧನಂಜಯ್’ ರಗಡ್ ಪಾತ್ರಕ್ಕೆ ಈ ಫೋಟೋಗಳೇ ಸಾಕ್ಷಿ

-ಗಸಗಸೆ ಪಾಯಸ ಮಾಡಿಕೊಂಡು ಕುಡಿದರೆ ದೇಹ ತಂಪಾಗುವುದಲ್ಲದೆ ಚೆನ್ನಾಗಿ ನಿದ್ರೆ ಬರುತ್ತದೆ.-ಹುರುಳಿಕಾಳು ಮೊಳಕೆ ಸಾರನ್ನು ಸೇವಿಸುವುದರಿಂದಲೂ ಉತ್ತಮ ನಿದ್ರೆ ಪಡೆಯಬಹುದು.

-ಸಬ್ಬಸ್ಸಿಗೆ ಸೊಪ್ಪು ಬಸಿದು ಮಾಡಿದ ಸಾರನ್ನು ಉಪಯೋಗಿಸುತ್ತಿದ್ದರೆ ಚೆನ್ನಾಗಿ ನಿದ್ರೆ ಬರುವುದು ಖಚಿತ.

-ಹಸಿ ಅಲಸಂದೆ ಕಾಳನ್ನು ಬೆಲ್ಲದೊಂದಿಗೆ ಸೇರಿಸಿ ಜಗಿದು ತಿಂದರೆ ನಿದ್ರಾಹೀನತೆಯಿಂದ ಬಳಲುವುದು ತಪ್ಪುವುದಲ್ಲದೇ ಶರೀರದಲ್ಲಿ ಲವಲವಿಕೆ ಹೆಚ್ಚುತ್ತದೆ.

 
First published:June 3, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ