• Home
  • »
  • News
  • »
  • lifestyle
  • »
  • Eye Care: ಮಧುಮೇಹಿಗಳು ಕಣ್ಣಿನ ಆರೈಕೆಯನ್ನು ಈ ರೀತಿ ಮಾಡಬೇಕಂತೆ

Eye Care: ಮಧುಮೇಹಿಗಳು ಕಣ್ಣಿನ ಆರೈಕೆಯನ್ನು ಈ ರೀತಿ ಮಾಡಬೇಕಂತೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Eye Care During Diabetes: ಮಧುಮೇಹವು ಕಣ್ಣುಗಳ ಮೇಲೆ ಗಂಭೀರವಾದ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಜೊತೆಗೆ ಇದು ಕುರುಡುತನಕ್ಕೂ ಕಾರಣವಾಗಬಹುದು.

  • Share this:

ಮಧುಮೇಹ (Diabetes) ಹೊಂದಿರುವವರು ರಕ್ತದಲ್ಲಿ ಸಕ್ಕರೆ ಮಟ್ಟವನ್ನು (Sugar Level In Blood)  ಕಾಯ್ದುಕೊಳ್ಳುವುದು ತುಂಬಾನೇ ಮುಖ್ಯ. ನಿಯಮಿತವಾಗಿ ಅದನ್ನು ಪರೀಕ್ಷಿಸುತ್ತ ಇರುವುದು ಬಹಳ ಮುಖ್ಯ. ಇದರಿಂದ ಮಧುಮೇಹ ಪೀಡಿತರಲ್ಲಿ ದೃಷ್ಟಿ ನಷ್ಟ, ಹೃದಯ ಕಾಯಿಲೆ (Heart) ಮತ್ತು ಮೂತ್ರಪಿಂಡದ ಕಾಯಿಲೆಯಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಪ್ಪಿಸಬಹುದು. ನಿಮಗೆ ಗೊತ್ತಿರುವ ಹಾಗೆ ಮಧುಮೇಹವು ಕಣ್ಣುಗಳ ಮೇಲೆ ಗಂಭೀರವಾದ ಋಣಾತ್ಮಕ ಪರಿಣಾಮವನ್ನು ಬೀರಬಹುದು. ಜೊತೆಗೆ ಇದು ಕುರುಡುತನಕ್ಕೂ ಕಾರಣವಾಗಬಹುದು. ಆದರೆ, ವೈದ್ಯರ ಶಿಫಾರಸಿನ ಪ್ರಕಾರ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮೇಲ್ವಿಚಾರಣೆ ಮಾಡುವ ಮೂಲಕ ಕಣ್ಣಿನ (Eye) ಹಾನಿಯನ್ನು ತಪ್ಪಿಸಬಹುದಾಗಿದೆ.


ಮಧುಮೇಹದ ಸಮಯದಲ್ಲಿ ಕಣ್ಣಿನ ದೃಷ್ಟಿಯನ್ನು ರಕ್ಷಿಸಲು ನೀವು ಅನುಸರಿಸಬೇಕಾದ ಕ್ರಮಗಳು ಹೀಗಿವೆ.


1.ಸಂಖ್ಯೆಗಳನ್ನು ಅರ್ಥಮಾಡಿಕೊಳ್ಳಿ: ಕಣ್ಣಿನ ಹಿಂಭಾಗದ ಸುಮಾರು 65 ಪ್ರತಿಶತದಷ್ಟು ತೆಳುವಾದ ಅಂಗಾಂಶವನ್ನು ರೆಟಿನಾ ಅಂತ ಕರೆಯಲಾಗುತ್ತದೆ.ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾದಾಗ ರೆಟಿನಾವನ್ನು ಪೂರೈಸುವ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಅಧಿಕ ರಕ್ತದ ಸಕ್ಕರೆಯು ನಿರ್ದಿಷ್ಟವಾಗಿ ರೆಟಿನಾವನ್ನು ಹಾನಿಗೊಳಿಸುತ್ತದೆ.


ಇದರಿಂದ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ದೃಷ್ಟಿ ಸಮಸ್ಯೆ ಉಂಟಾಗಬಹುದು. ಡಯಾಬಿಟಿಕ್ ರೆಟಿನೋಪತಿ, ಗ್ಲುಕೋಮಾ ಮತ್ತು ಕಣ್ಣಿನ ಪೊರೆಗಳು ಮಧುಮೇಹ ಹೊಂದಿರುವ ಜನರಲ್ಲಿ ಸಾಮಾನ್ಯವಾಗಿ ಕಂಡುಬರುವ ಮೂರು ವಿಭಿನ್ನ ಕಣ್ಣಿನ ಕಾಯಿಲೆಗಳಾಗಿವೆ.


ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಂಡು, ಅದನ್ನು ಗಮನಿಸುತ್ತಾ ಇರುವುದರಿಂದ ಇಂಥ ಸಮಸ್ಯೆಗಳನ್ನು ಕಡಿಮೆ ಮಾಡಬಹುದು.


2.ಧೂಮಪಾನ ನಿಲ್ಲಿಸಿ: ದೇಹದ ಪ್ರತಿ ವ್ಯವಸ್ಥೆಯೂ ಧೂಮಪಾನದಿಂದ ಹಾನಿಗೊಳಗಾಗುತ್ತದೆ. ಅದರಲ್ಲೂ ಮಧುಮೇಹಿಗಳು ವಿಶೇಷವಾಗಿ ದುರ್ಬಲರಾಗಿರುತ್ತಾರೆ.


ಧೂಮಪಾನವು ದೇಹದಲ್ಲಿನ ರಕ್ತನಾಳಗಳು, ಅಪಧಮನಿಗಳು ಸೇರಿದಂತೆ ಹಲವು ಅಂಗಗಳಿಗೆ ಹಾನಿ ಮಾಡುತ್ತದೆ. ಮಧುಮೇಹಕ್ಕೆ ಸಂಬಂಧಿಸಿದ ಕಣ್ಣಿನ ಹಾನಿಯನ್ನು ಉಲ್ಬಣಗೊಳಿಸುತ್ತದೆ.
ಹಾಗಾಗಿ ಮಧುಮೇಹಿಗಳು ಧೂಮಪಾನವನ್ನು ತ್ಯಜಿಸಲೇ ಬೇಕು. ಈ ಬಗ್ಗೆ ನೀವು ವೈದ್ಯರೊಂದಿಗೆ ಚರ್ಚಿಸಿ ಮಾರ್ಗಗಳನ್ನು ಕಂಡುಕೊಳ್ಳಬಹುದು.


ಇದನ್ನೂ ಓದಿ: ದೇಹದಲ್ಲಿಯ ಅತ್ಯಧಿಕ ಕೊಬ್ಬನ್ನು ಬೇಗ ಕರಗಿಸುವ ಹಸಿರು ಆಹಾರಗಳು


3.ವ್ಯಾಯಾಮ, ವಾಕಿಂಗ್‌ ನಿಲ್ಲಿಸಬೇಡಿ: ವ್ಯಾಯಾಮವು ಬಹುತೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಿದೆ. ಆದ್ದರಿಂದ ವ್ಯಾಯಾಮವನ್ನು ಎಂದಿಗೂ ನಿಲ್ಲಿಸಬೇಡಿ.


ಊಟದ ನಂತರ ಸ್ವಲ್ಪ ದೂರ ವಾಕಿಂಗ್‌ ಮಾಡಬಹುದು. ನಿಯಮಿತವಾದ ವ್ಯಾಯಾಮವು ಮಧುಮೇಹ ಕಣ್ಣಿನ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ.


ಏಕೆಂದರೆ ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡುತ್ತದೆ. ಆದ್ರೆ ಯಾವುದೇ ವ್ಯಾಯಾಮವನ್ನು ಆರಂಭಿಸುವ ಮೊದಲು ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.


4.ಆರೋಗ್ಯಕರವಾಗಿ ತಿನ್ನುವುದರತ್ತ ಗಮನ ಹರಿಸಿ: ನೀವು ಏನು ತಿನ್ನುತ್ತೀರಿ ಎಂಬುದರ ಮೇಲೆ ಗಮನವಿರಲಿ. ಆರೋಗ್ಯಕರ ಆಹಾರವು ಆರೋಗ್ಯಕರ ಕಣ್ಣುಗಳಿಗೆ ಒಳ್ಳೆಯದು.


ಮಧುಮೇಹಿಗಳ ಕಣ್ಣುಗಳನ್ನು ರಕ್ಷಿಸಲು ನಿಮ್ಮ ದೇಹಕ್ಕೆ ಉತ್ತಮ ಪೋಷಕಾಂಶಗಳನ್ನು ಹೊಂದಿರುವ ಆಹಾರ ಸೇವಿಸಿ. ವಿಟಮಿನ್ ಎ, ಸಿ, ಇ, ಬೀಟಾ-ಕ್ಯಾರೋಟಿನ್, ಲುಟೀನ್, ಒಮೆಗಾ-3 ಕೊಬ್ಬಿನಾಮ್ಲಗಳು, ಸತು ಇರುವಂಥ ಆಹಾರಗಳನ್ನು ಸೇವಿಸಿ.


ಸೊಪ್ಪು, ಸಾಲ್ಮನ್ ಅಥವಾ ಮ್ಯಾಕೆರೆಲ್‌ನಂತಹ ಮೀನುಗಳು, ವಾಲ್‌ನಟ್ಸ್ ಮತ್ತು ಬಾದಾಮಿ, ಬೀನ್ಸ್, ಮಸೂರ ಬೇಳೆ, ಮಶ್ರೂಮ್‌ಗಳೂ ನಿಮ್ಮ ಆಹಾರದಲ್ಲಿರಲಿ.


5.ವಾರ್ಷಿಕವಾಗಿ ಕಣ್ಣಿನ ಪರೀಕ್ಷೆ: ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ನಿಮ್ಮ ಪ್ರಯತ್ನಗಳು ನಿಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನೀವು ಖಚಿತಪಡಿಸಿಕೊಳ್ಳಬೇಕು.


ಅದಕ್ಕಾಗಿ ನೀವು ವರ್ಷಕ್ಕೊಮ್ಮೆ ಕಣ್ಣಿನ ವೈದ್ಯರ ಬಳಿ ಪರೀಕ್ಷೆ‌ ಮಾಡಿಸಿಕೊಳ್ಳುವುದನ್ನು ಮರೆಯದಿರಿ. ಇದರಿಂದ ಕಣ್ಣಿನ ಪೊರೆ, ಗ್ಲುಕೋಮಾ ಮತ್ತು ಡಯಾಬಿಟಿಕ್ ರೆಟಿನೋಪತಿಯ ಸ್ಕ್ರೀನಿಂಗ್ ಅನ್ನು ನಡೆಸಬಹುದು.


ಇದನ್ನೂ ಓದಿ: ಸಂಸ್ಕರಿಸಿದ ಆಹಾರಗಳಿಂದ ಮೆದುಳಿಗೆ ಹೆಚ್ಚು ಹಾನಿಯಂತೆ, ಅಧ್ಯಯನದಲ್ಲಿ ಬಹಿರಂಗ


ನಿಮ್ಮ ನೇತ್ರಶಾಸ್ತ್ರಜ್ಞರು ರೆಟಿನಾ, ಮ್ಯಾಕುಲಾ ಮತ್ತು ಆಪ್ಟಿಕ್ ನರವನ್ನು ಹತ್ತಿರದಿಂದ ಪರೀಕ್ಷಿಸಲು ಅನುವು ಮಾಡಿಕೊಡುತ್ತದೆ. ಇಂತಹ ಪರೀಕ್ಷೆಗಳಿಂದ ನಿಮ್ಮ ವೈದ್ಯರು ಡಯಾಬಿಟಿಕ್ ರೆಟಿನೋಪತಿಯನ್ನು ಅದರ ಆರಂಭಿಕ ಹಂತಗಳಲ್ಲಿ ಗುರುತಿಸಬಹುದು.

Published by:Sandhya M
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು