ಮಳೆಗಾಲದ ಆರಂಭದಲ್ಲೇ ಎಚ್ಚರಿಕೆ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವಿರಿ ಹುಷಾರ್..!

ಸಾಮಾನ್ಯ ಜ್ವರದಿಂದ ಪ್ರಾರಂಭವಾಗುವ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ವೈದ್ಯರಿಂದ ಚಿಕಿತ್ಸೆ ಪಡೆಯುವತ್ತ ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆರೋಗ್ಯ ಕೈಕೊಡುವ ಸಾಧ್ಯತೆಯೇ ಹೆಚ್ಚು.

zahir | news18
Updated:June 26, 2019, 2:51 PM IST
ಮಳೆಗಾಲದ ಆರಂಭದಲ್ಲೇ ಎಚ್ಚರಿಕೆ ವಹಿಸದಿದ್ದರೆ ಅನಾರೋಗ್ಯಕ್ಕೆ ತುತ್ತಾಗುವಿರಿ ಹುಷಾರ್..!
@en.prothomalo.com
  • News18
  • Last Updated: June 26, 2019, 2:51 PM IST
  • Share this:
ಬೇಸಿಗೆಯಲ್ಲಿ ಬಳಲಿದ್ದ ದೇಹ ಮುಂಗಾರಿನ ಆರಂಭಕ್ಕೆ ಮೈಯೊಡ್ಡಲು ಸಜ್ಜಾಗಿದೆ. ಸಾಮಾನ್ಯವಾಗಿ ಮಳೆಗಾಲ ಆರಂಭವಾಗುತ್ತಿದ್ದಂತೆ ಅನಾರೋಗ್ಯದ ಸಮಸ್ಯೆಗಳು ಸಹ ಕಾಣಿಸಿಕೊಳ್ಳುತ್ತವೆ. ಬದಲಾಗುವ ವಾತಾವರಣಕ್ಕೆ ಅನುಗುಣವಾಗಿ ಆರೋಗ್ಯದಲ್ಲಿ ಏರುಪೇರಾಗುವುದೇ ಇದಕ್ಕೆ ಮುಖ್ಯ ಕಾರಣ.

ಬೇಸಿಗೆಯಲ್ಲಿ ನಾನಾ ಸಮಸ್ಯೆಗಳು ಕಾಣಿಸಿದರೂ, ದೇಹವು ಉಷ್ಣಾಂಶದಿಂದ ಕೂಡಿರುವುದರಿಂದ ಸೋಂಕುಗಳು ಬಾಧಿಸುವುದಿಲ್ಲ. ಆದರೆ ಮಳೆಗಾಲದಲ್ಲಿ ಆಗಲ್ಲ. ಮಳೆಯೊಂದಿಗೆ ಶೀತ ಗಾಳಿ ಕೂಡ ಇರುವುದರಿಂದ ಸೋಂಕುಗಳು ದೇಹವನ್ನು ವೇಗವಾಗಿ ಆವರಿಸುತ್ತವೆ. ನೀರು, ಆಹಾರ ಮತ್ತು ಗಾಳಿಯ ಮೂಲಕ ಸೂಕ್ಷ್ಮ ರೋಗಾಣುಗಳು ದೇಹ ಸೇರುತ್ತದೆ. ಹೀಗಾಗಿ ಆರಂಭದಲ್ಲೇ ಅನಾರೋಗ್ಯದ ಬಗ್ಗೆ ಕಾಳಜಿವಹಿಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ.

ಮಳೆಗಾಲ ಮತ್ತು ನೀರು:

ಮಳೆಗಾಲದಲ್ಲಿ ಬರುವ ಸಾಮಾನ್ಯ ಕಾಯಿಲೆಗಳ ಮೂಲ ನೀರು ಎನ್ನಬಹುದು. ಮುಂಗಾರಿನೊಂದಿಗೆ ಸೊಳ್ಳೆಗಳು ಸಂತಾನಾಭಿವೃದ್ಧಿಯನ್ನು ಪ್ರಾರಂಭಿಸುತ್ತವೆ. ಇದರಿಂದ ಇದರಿಂದ ಮಲೇರಿಯಾ, ಡೆಂಘಿ, ಚಿಕೂನ್‌ ಗುನ್ಯಾದಂತಹ ಅಪಾಯಕಾರಿ ರೋಗಗಳು ಕಂಡು ಬರುತ್ತವೆ. ಸಾಮಾನ್ಯ ಜ್ವರದಿಂದ ಪ್ರಾರಂಭವಾಗುವ ಇಂತಹ ಸಮಸ್ಯೆಗಳಿಗೆ ಆರಂಭದಲ್ಲೇ ವೈದ್ಯರಿಂದ ಚಿಕಿತ್ಸೆ ಪಡೆಯುವತ್ತ ಗಮನ ಹರಿಸಬೇಕಾಗುತ್ತದೆ. ಇಲ್ಲದಿದ್ದಲ್ಲಿ ಆರೋಗ್ಯ ಕೈಕೊಡುವ ಸಾಧ್ಯತೆಯೇ ಹೆಚ್ಚು.

ಆಹಾರ:
ಮಳೆಗಾಲದಲ್ಲಿ ಆಹಾರದಿಂದಲೂ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಅದರಲ್ಲಿ ಮುಖ್ಯವಾಗಿ ಡಯೇರಿಯಾ ಮತ್ತು ಕಾಲಾರ. ಬ್ಯಾಕ್ಟೀರಿಯಾ ಹಾಗೂ ವೈರಸ್‌ನಿಂದ ಹರಡುವ ಈ ರೋಗಗಳು ಚರ್ಮದ ಅಲರ್ಜಿ, ನೆಗಡಿ, ಜ್ವರದ ಸಮಸ್ಯೆಯನ್ನು ತಂದೊಡ್ಡಬಹುದು. ಅದರಲ್ಲೂ ವಾಂತಿ, ಭೇದಿ, ಟೈಫಾಯಿಡ್ ಜ್ವರ, ಜಾಂಡಿಸ್ ಚಿಕೂನ್‌ಗುನ್ಯಾ ಕಾಣಿಸಿಕೊಂಡರೆ ಆರೋಗ್ಯವೇ ಹೈರಾಣವಾಗಿ ಬಿಡುತ್ತವೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಮ್ಮಿಯಿರುವವರಿಗೆ ಈ ರೀತಿಯ ಸಮಸ್ಯೆಗಳು ಬಹುಬೇಗನೆ ಕಾಡುತ್ತದೆ. ಹೀಗಾಗಿ ಸಣ್ಣ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿವಹಿಸಬೇಕು.

ಕಲುಷಿತ ನೀರು:ಮಳೆಗಾಲದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಚಳಿಜ್ವರ ಮತ್ತು ಮಲೇರಿಯಾಗೆ ಮುಖ್ಯ ಕಾರಣ ಅನಾಫಿಲೀಸ್ ಎಂಬ ಸೊಳ್ಳೆಗಳು. ಇದು ಸಾಮಾನ್ಯವಾಗಿ ಕಲುಷಿತ ನೀರಿನಲ್ಲಿ ಮೊಟ್ಟೆಗಳನ್ನಿಡುತ್ತದೆ. ಹೀಗಾಗಿ ಮನೆ ಸುತ್ತಮುತ್ತಲಿನ ಸ್ಥಳಗಳಲ್ಲಿನ ಕಲುಷಿತ ನೀರನ್ನು ಹೋಗಲಾಡಿಸಿ. ಹಾಗೆಯೇ ಕಟ್ಟಿ ನಿಂತಿರುವ ನೀರಿನ ಜಾಗಗಳನ್ನು ಸ್ವಚ್ಛಗೊಳಿಸಿ. ಮಲೇರಿಯಾ ಜ್ವರ ಬಂದರೆ ಚಳಿಜ್ವರ, ರಕ್ತಹೀನತೆ, ಸುಸ್ತು, ತಲೆನೋವು, ವಾಂತಿ ಲಕ್ಷಣಗಳು ಕಾಣಿಸುತ್ತವೆ. ಇಂತಹ ಸಂದರ್ಭದಲ್ಲಿ ವೈದ್ಯರಿಂದ ಆರೋಗ್ಯ ತಪಾಸಣೆ ಮಾಡಿಕೊಳ್ಳಿ.

ಮುನ್ನೆಚ್ಚರಿಕೆ ಕ್ರಮಗಳು:
-ಮಳೆಗಾಲದಲ್ಲಿ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ.
-ಜ್ವರ ಅಥವಾ ಸೋಂಕು ತಗುಲಿದ ವ್ಯಕ್ತಿಗಳು ಬಳಸಿದ ವಸ್ತುಗಳಿಂದ ಸಾಧ್ಯವಾದಷ್ಟು ದೂರವಿರಿ.
-ಸೊಳ್ಳೆ ಪರದೆ ಅಥವಾ ಸೊಳ್ಳೆ ಬತ್ತಿ ಬಳಸಿ ಸೊಳ್ಳೆಗಳ ಸಮಸ್ಯೆಯನ್ನು ದೂರ ಮಾಡಿ.
-ದ್ರವರೂಪದ ಆಹಾರ ಸೇವನೆಗೆ ಹೆಚ್ಚು ಒತ್ತು ನೀಡಿ.
-ಟೈಫಾಯಿಡ್, ಕಾಲಾರ ನಿಯಂತ್ರಣಕ್ಕೆ ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸಿ.
-ಮಳೆಗೆ ಮೈಯೊಡ್ಡದಿರಿ. ಹಾಗೆಯೇ ದೇಹವನ್ನು ಬೆಚ್ಚನೆಯ ಉಡುಪಿನಿಂದ ರಕ್ಷಿಸಿಕೊಳ್ಳಿ.
-ಬೇಯಿಸದ ತಿನಿಸುಗಳ ಸೇವನೆ ಬೇಡ.
-ತೆರೆದ ಸ್ಥಿತಿಯಲ್ಲಿರುವ ಹಣ್ಣು, ಜಂಕ್ ಫುಡ್​ಗಳನ್ನು ತಿನ್ನದಿರಿ.
-ಮನೆಯ ಸುತ್ತ ಮುತ್ತ ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ.
First published:June 26, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ