ವ್ಯಾಯಾಮದ ಬಳಿಕ ದೇಹದಲ್ಲಿ ನೋವು ಕಾಣಿಸುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ

ವರ್ಕೌಟ್ ನೋವು ಕಡಿಮೆ ಮಾಡಲು, ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ.

zahir | news18-kannada
Updated:August 26, 2019, 11:46 AM IST
ವ್ಯಾಯಾಮದ ಬಳಿಕ ದೇಹದಲ್ಲಿ ನೋವು ಕಾಣಿಸುತ್ತಿದೆಯೇ? ಹಾಗಿದ್ರೆ ಹೀಗೆ ಮಾಡಿ
ಸಾಂದರ್ಭಿಕ ಚಿತ್ರ
  • Share this:
ಆರೋಗ್ಯದ ದೃಷ್ಟಿಯಿಂದ ಅಥವಾ ನಮ್ಮ ಮೈಕಟ್ಟಿನ ಆಕರ್ಷಣೆಗಾಗಿ ನಿತ್ಯವೂ ಜಿಮ್ ಅಥವಾ ವ್ಯಾಯಾಮ ಮಾಡುವುದು ಉತ್ತಮ. ಆದರೆ ಜಿಮ್ ಸೇರಿಕೊಂಡ ಮರುದಿನವೇ ಹಲವರು ವರ್ಕೌಟ್​ಗೆ ಗುಡ್​ಬೈ ಹೇಳಿದ ನಿದರ್ಶನಗಳಿವೆ.

ಕೆಲವರಿಗೆ ಟ್ರೆಡ್​ಮಿಲ್​ನಿಂದ ಇಳಿಯುತ್ತಿದ್ದಂತೆ ತಲೆತಿರುಗುವಿಕೆ ಉಂಟಾದರೆ, ಮತ್ತೆ ಕೆಲವರಿಗೆ ಪುಷ್ ಅಪ್, ವರ್ಕೌಟ್​ ಮಾಡಿದ್ದರಿಂದ ದೇಹದ ಶಕ್ತಿಯೇ ಹೊರಟು ಹೋದಂತಿರುತ್ತದೆ. ಅದರಲ್ಲೂ ಮರುದಿನವಂತು ಕೈ ಕಾಲುಗಳು ಅಲುಗಾಡಿಸದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಇದಕ್ಕೆಲ್ಲಾ ಮುಖ್ಯ ಕಾರಣ ನಮ್ಮ ಜೀವನಕ್ರಮ. ವ್ಯಾಯಾಮವಿಲ್ಲದೆ ಏಕಾಏಕಿ ವರ್ಕೌಟ್ ಮಾಡಿದಾಗ ತೋಳು,ತೊಡೆ ಹಾಗೂ ಸ್ನಾಯುಗಳಲ್ಲಿ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ.

ಸಾಮಾನ್ಯವಾಗಿ ಜಿಮ್ ಅಥವಾ ವ್ಯಾಯಾಮ ಮಾಡುವುದರಿಂದ ನಮ್ಮ ಅಂಗಾಂಶಗಳಲ್ಲಿ ಬಿರುಕು ಉಂಟಾಗುತ್ತದೆ. ಇದರಿಂದಾಗಿ ಎರಡು ಮೂರು ದಿನಗಳವರೆಗೆ ದೇಹದಲ್ಲಿ ನೋವು ಉಳಿದುಕೊಳ್ಳುವುದು. ಇಂತಹ ನೋವನ್ನು ತಪ್ಪಿಸುವ ಕೆಲ ಮಾರ್ಗಗಳಿವೆ.

- ಆರೋಗ್ಯಕರ ಆಹಾರ
ಉತ್ತಮ ಆರೋಗ್ಯಕ್ಕೆ ಅತ್ಯುತ್ತಮ ಆಹಾರ ಅತ್ಯವಶ್ಯಕ. ಪ್ರೋಟೀನ್, ಕಾರ್ಬೋಹೈಡ್ರೇಟ್ ಮತ್ತು ಫ್ಯಾಟ್ ಅಂಶವಿರುವ ಆಹಾರಗಳನ್ನು ಸೇವಿಸುವುದರಿಂದ ಸ್ನಾಯು ನೋವು ತ್ವರಿತವಾಗಿ ಸರಿಯಾಗುತ್ತದೆ. ಈ ಆಹಾರದೊಂದಿಗೆ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ಸಿಕ್ಕರೂ ಮುಂದೆ ನಿಮಗೆ ವರ್ಕೌಟ್ ಪೈನ್ ಇರುವುದಿಲ್ಲ. ಹಾಗೆಯೇ ಫಿಟ್‌ನೆಸ್ ತಜ್ಞರ ಮೂಲಕ ನೀವು ಪ್ರೋಟೀನ್ ಪೂರಕಗಳನ್ನು ಸಹ ತೆಗೆದುಕೊಳ್ಳಬಹುದು.

- ಕೊಬ್ಬಿನಾಮ್ಲಗಳ ಆಹಾರ
ವರ್ಕೌಟ್ ನೋವು ಕಡಿಮೆ ಮಾಡಲು, ಒಮೆಗಾ -3 ಕೊಬ್ಬಿನಾಮ್ಲಗಳನ್ನು ಒಳಗೊಂಡಿರುವ ಆಹಾರಗಳನ್ನು ಹೆಚ್ಚಾಗಿ ಸೇವಿಸಿ. ಮೀನು- ಮಾಂಸ, ಆವಕಾಡೊ(ಬಟರ್​​ಫ್ರೂಟ್), ವಾಲ್​ನಟ್ಸ್​ ಇತ್ಯಾದಿಗಳಲ್ಲಿ ಕೊಬ್ಬಿನಾಮ್ಲ ಹೆಚ್ಚು ಕಂಡುಬರುತ್ತದೆ.- ಐಸ್ ಪ್ಯಾಕ್ ಅನ್ವಯಿಸಿ
ತಾಲೀಮು ನಂತರ, ನೋವು ಇರುವ ಜಾಗದಲ್ಲಿ ಐಸ್ ಪ್ಯಾಕ್ ಇಟ್ಟುಕೊಳ್ಳಿ. ಇದು ನೋವು ಮತ್ತು ಉರಿಯೂತ ಎರಡನ್ನೂ ಕಡಿಮೆ ಮಾಡುತ್ತದೆ.

- ಸ್ಟ್ರೆಚ್
ವರ್ಕೌಟ್ ಮುಗಿದ ಬಳಿಕ ನಿಮ್ಮ ದೇಹವನ್ನು ಹಿಗ್ಗಿಸಲು (ಸ್ಟ್ರೆಚ್​) ಮರೆಯದಿರಿ. ವರ್ಕೌಟ್​ ಮಾಡುವ ಸಮಯದಲ್ಲಿ ಮಸಲ್ ಫೈಬರ್​ಗಳು ಚಿಕ್ಕದಾಗುತ್ತವೆ. ಸ್ಟ್ರೆಚ್ ಮಾಡುವುದರಿಂದ ನೋವು ಕಡಿಮೆಯಾಗುವುದಲ್ಲದೆ, ಮಸಲ್​ಗಳು ಸಹ ಫ್ರಿಯಾಗಿ ಬಿಡುತ್ತದೆ. ಹೀಗೆ ಮಾಡುವುದರಿಂದ ತಾಲೀಮಿನ ಬಳಿಕ ದೇಹದಲ್ಲಿ ನೋವಿರುವುದಿಲ್ಲ.


ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್​ನಲ್ಲಿ ಸಬ್​ಸ್ಕ್ರೈಬ್​ ಮಾಡಿ

First published: August 26, 2019, 11:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading