Winter Heart Attacks: ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ತಗ್ಗಿಸಲು ಇಲ್ಲಿವೆ ಸಲಹೆಗಳು

ಚಳಿಗಾಲದಲ್ಲೇ ಹೃದಯಾಘಾತ ಏಕೆ ಸಂಭವಿಸುತ್ತದೆ ಎಂಬುದರ ಕುರಿತು ನಿಖರ ಮಾಹಿತಿ ಇಲ್ಲದೇ ಇದ್ದರೂ ಹೃದಯಾಘಾತ ಉಲ್ಬಣವಾಗಲು ನಮ್ಮ ದೇಹದ ರಚನಾಶಾಸ್ತ್ರ ಒಂದು ಕಾರಣ ಎಂಬುದಾಗಿ ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ  (Heart Attack) ಮರಣ ಹೊಂದುತ್ತಿರುವ ಸಂಖ್ಯೆ ಏರಿಕೆಯಾಗುತ್ತಿದೆ. ಅದರಲ್ಲೂ 20, 30 ಹಾಗೂ 40ರ ಹರೆಯದವರೇ ಈ ಕಾಯಿಲೆಗೆ ಬಲಿಯಾಗುತ್ತಿರುವುದು ಕಳವಳಕಾರಿ ಅಂಶವಾಗಿದೆ. ಹೃದಯಾಘಾತಕ್ಕೆ ಕಾರಣವಾಗುವ ಹಲವಾರು ಅಪಾಯಕಾರಿ ಅಂಶಗಳ ಜೊತೆಗೆ ರೋಗಲಕ್ಷಣಗಳಿಗೆ ಸರಿಯಾದ ಗಮನ ಹರಿಸದೇ ಇರುವುದು, ಋತುಮಾನದ ಬದಲಾವಣೆಗಳು ಕೂಡ ನಿಮ್ಮ ಹೃದಯವನ್ನು ದುರ್ಬಲಗೊಳಿಸಬಹುದು. ಈ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಚಳಿಗಾಲದಲ್ಲೇ ಹೃದಯಾಘಾತ ಏಕೆ ಸಂಭವಿಸುತ್ತದೆ ಎಂಬುದರ ಕುರಿತು ನಿಖರ ಮಾಹಿತಿ ಇಲ್ಲದೇ ಇದ್ದರೂ ಹೃದಯಾಘಾತ ಉಲ್ಬಣವಾಗಲು ನಮ್ಮ ದೇಹದ ರಚನಾಶಾಸ್ತ್ರ ಒಂದು ಕಾರಣ ಎಂಬುದಾಗಿ ತಜ್ಞರು ಹೇಳುತ್ತಾರೆ.

ಸಾಂದರ್ಭಿಕ ಚಿತ್ರ


ಚಳಿಗಾಲದಲ್ಲೇ ಹೃದಯಾಘಾತಗಳು ಸಾಮಾನ್ಯವಾಗಿವೆ ಏಕೆ?

ಚಳಿಗಾಲದಲ್ಲಿ ಪಾರ್ಶ್ವವಾಯು, ಹೃದಯ ವೈಫಲ್ಯ, ಹೃದಯರಕ್ತನಾಳದ ಸಮಸ್ಯೆಗಳು, ಆರ್ಹೆತ್ಮಿಯಾ ಮತ್ತು ಅಸ್ವಸ್ಥತೆಗಳು ಹೆಚ್ಚು ಉಂಟಾಗುತ್ತದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಚಳಿಗಾಲದಲ್ಲಿ ದೇಹದ ಸ್ನೇಹಪರ ನರಮಂಡಲ ಕ್ರಿಯಾಶೀಲತೆಯು ಹೆಚ್ಚಾಗುತ್ತದೆ ಹಾಗೂ ಇದರಿಂದ ರಕ್ತನಾಳಗಳು ಕಿರಿದಾಗುತ್ತವೆ. ಇದನ್ನು ವಾಸೋಕನ್ಸ್ಟ್ರಿಕ್ಷನ್ ಎಂದು ಕರೆಯಲಾಗುತ್ತದೆ. ಹೀಗಾದಾಗ ರಕ್ತದೊತ್ತಡ ಮಟ್ಟವು ಹೆಚ್ಚಾಗುತ್ತದೆ ಹಾಗೂ ದೇಹದ ವಿವಿಧ ಭಾಗಗಳಿಗೆ ರಕ್ತವನ್ನು ಪೂರೈಸಲು ಹೃದಯವು ಹೆಚ್ಚು ಶ್ರಮಿಸುತ್ತದೆ. ಅಲ್ಲದೆ ತಣ್ಣಗಿನ ವಾತಾವರಣದಲ್ಲಿ ದೇಹದ ಶಾಖವನ್ನು ಕಾಪಾಡಿಕೊಳ್ಳಲು ಕಷ್ಟವಾಗುತ್ತದೆ. ಇದರಿಂದ ದೇಹದ ಉಷ್ಣತೆ ಸಾಮಾನ್ಯ ಪ್ರಮಾಣಕ್ಕಿಂತ ಕಡಿಮೆಯಾಗುತ್ತದೆ. ಇದರಿಂದ ರಕ್ತನಾಳಗಳಿಗೆ ಹಾನಿಯುಂಟಾಗುತ್ತದೆ

ಅಪಾಯಗಳು ಹೃದಯ ಕಾಯಿಲೆ ರೋಗಿಗಳಿಗೆ ಹೇಗೆ ಪರಿಣಾಮ ಬೀರುತ್ತವೆ?

ಚಳಿಗಾಲದಲ್ಲಿ ಶೀತ ವಾತಾವರಣ ನಿಭಾಯಿಸುವುದು ಕಷ್ಟಕರವಾಗಿರುತ್ತದೆ. ತಾಪಮಾನ ಕಡಿಮೆಯಾದಾಗ ದೇಹವು ಶಾಖವನ್ನು ನಿಯಂತ್ರಿಸಲು ದುಪ್ಪಟ್ಟು ಶ್ರಮಿಸುತ್ತದೆ. ಇದು ಹೃದಯದ ಕಾರ್ಯನಿರ್ವಹಣೆಯ ಮೇಲೆ ಒತ್ತಡ ಹೇರುತ್ತದೆ. ಈಗಾಗಲೇ ಹೃದಯದ ಸಮಸ್ಯೆಗಳನ್ನು ಹೊಂದಿರುವವರು ಇಲ್ಲವೇ ಹೃದಯಾಘಾತದ ಇತಿಹಾಸ ಹೊಂದಿರುವವರಿಗೆ ಅಪಾಯ ಹೆಚ್ಚಾಗಿರುತ್ತದೆ. ಚಳಿಗಾಲದಲ್ಲಿ ದೇಹದ ಆಮ್ಲಜನಕ ಅವಶ್ಯಕತೆಗಳು ಹೆಚ್ಚಾಗಿರುವುದರಿಂದ ರಕ್ತನಾಳಗಳ ಸಂಕೋಚನ ಸಂಭವಿಸುತ್ತದೆ ಹಾಗೂ ಹೃದಯಕ್ಕೆ ಕಡಿಮೆ ಪ್ರಮಾಣದ ಆಮ್ಲಜನಕ ತಲುಪುತ್ತದೆ. ಇದು ಹೃದಯಾಘಾತಕ್ಕೆ ಕಾರಣವಾಗಿರುವ ಅಪಾಯಗಳನ್ನುಂಟು ಮಾಡುತ್ತದೆ.

ಸಮಸ್ಯೆಗಳನ್ನುಂಟು ಮಾಡುವ ಇತರ ಕಾರಣಗಳು ಯಾವುವು?

ಚಳಿಗಾಲದ ಆರಂಭದೊಂದಿಗೆ, ಹೃದಯಾಘಾತದ ಅಪಾಯಗಳಿಗೆ ಕಾರಣವಾಗುವ ಅಂಶಗಳಲ್ಲಿ ಪರೋಕ್ಷ ಏರಿಕೆ ಕಂಡುಬರಬಹುದು. ತಂಪಾದ ತಾಪಮಾನ ಹಾಗೂ ಚಟುವಟಿಕೆಯಿಂದಿರಲು ಈ ಋತುಮಾನದಲ್ಲಿ ಜನರು ಕಷ್ಟಪಡುತ್ತಾರೆ. ಇದರಿಂದ ವ್ಯಾಯಾಮವನ್ನು ನಡೆಸದೇ ಇರುವುದು ಇಲ್ಲವೇ ಸಕ್ರಿಯರಾಗಿ ಇಲ್ಲದೇ ಇರುವುದು ಹೃದಯಕ್ಕೆ ಇನ್ನಷ್ಟು ಅಪಾಯವನ್ನುಂಟು ಮಾಡುತ್ತದೆ. ಚಳಿಗಾಲದಲ್ಲಿ ದಿನಚರಿ ಹಾಗೂ ಆಹಾರ ಅಭ್ಯಾಸಗಳು ಬದಲಾವಣೆಯಾಗುವುದರಿಂದ ಹೃದಯದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.

ಇದನ್ನೂ ಓದಿ: Health: ಹೃದ್ರೋಗದಿಂದ ಅಪಾಯದಲ್ಲಿರುವ 44% ಭಾರತೀಯರು: ತಜ್ಞರು ಹೇಳುವುದೇನು..?

ಇದಲ್ಲದೆ ಹೆಚ್ಚುತ್ತಿರುವ ಧೂಮ ಹಿಮ, ಮಾಲಿನ್ಯದ ಮಟ್ಟಗಳೊಂದಿಗೆ ಗಾಳಿಯಲ್ಲಿನ ಕಣಗಳ (PM) ಮಟ್ಟಗಳು ಉರಿಯೂತ ಉಲ್ಬಣಗೊಳಿಸಬಹುದು ಮತ್ತು ಹೃದಯದ ತೊಂದರೆ ಉಂಟುಮಾಡಬಹುದು. ಮಾಲಿನ್ಯದ ಮಟ್ಟಗಳಲ್ಲಿನ ಏರಿಕೆಯಿಂದಾಗಿ 69%ನಷ್ಟು ಹೃದಯರಕ್ತನಾಳದ ಸಾವುಗಳು ಸಂಭವಿಸಿವೆ ಎಂದು ವರದಿಯಾಗಿದೆ. ಅನುವಂಶಿಕ ಅಪಾಯ ಹಾಗೂ ಆರೋಗ್ಯದ ಮೇಲಿನ ಕಡಿಮೆ ಮುತುವರ್ಜಿಯಿಂದಾಗಿ ಚಳಿಗಾಲದಲ್ಲಿ ಹೃದಯಾಘಾತ ಅಪಾಯಗಳು ಗಂಭೀರವಾಗಿ ಕಾಡುತ್ತಿವೆ.

ಅಪಾಯವನ್ನು ಹೇಗೆ ಕಡಿಮೆ ಮಾಡಬಹುದು ಹಾಗೂ ಸುರಕ್ಷಿತರಾಗಿರುವುದು ಹೇಗೆ?

ಹೃದಯಾಘಾತವು ಗಮನಾರ್ಹ ಅಪಾಯವಾಗಿದ್ದು ಯಾವುದೇ ವಯಸ್ಸಿನಲ್ಲಿ ಆರೈಕೆಯ ಅಗತ್ಯವಿರುತ್ತದೆ. ಚಳಿಗಾಲದಲ್ಲಿ ಹೆಚ್ಚಿನ ಅಪಾಯ ಹಾಗೂ ಮಾಲಿನ್ಯವೂ ಹೆಚ್ಚಾಗಿರುವುದರಿಂದ ಸರಿಯಾದ ಆರೋಗ್ಯ ವಿಧಾನ ಅಳವಡಿಸಿಕೊಳ್ಳುವುದು ಮುಖ್ಯವಾಗಿದೆ. ಚಳಿಗಾಲದಲ್ಲಿ ಯಾವ ರೀತಿಯಲ್ಲಿ ಆರೋಗ್ಯ ಕಾಪಾಡಿಕೊಂಡು ಹೃದಯದ ಕಾಳಜಿ ಮಾಡಬಹುದು ಎಂಬುದನ್ನು ತಜ್ಞರು ತಿಳಿಸಿದ್ದಾರೆ. ಚಳಿಗಾಲದಲ್ಲಿ ಹೃದಯಾಘಾತದ ಅಪಾಯ ಹೆಚ್ಚಿರುವುದರಿಂದ ಆದಷ್ಟು ದೇಹವನ್ನು ಬೆಚ್ಚಗೆ ಇರಿಸಿಕೊಳ್ಳಬೇಕಾಗುತ್ತದೆ. ಚಳಿಗಾಲಕ್ಕೆ ತಕ್ಕಂತಹ ಉಡುಪುಗಳನ್ನು ಧರಿಸಿಕೊಳ್ಳಿ.

ಒಬ್ಬ ರೋಗಿಯಲ್ಲಿ ಎರಡು ರೋಗಗಳ ಅಪಾಯ ತಗ್ಗಿಸುವುದು (ಸಹವರ್ತಿ ರೋಗಗಳು)

ಹೃದ್ರೋಗ ಹಾಗೂ ಹಠಾತ್ ಆಗಿ ಸಂಭವಿಸುವ ಹೃದಯಾಘಾತದ ಅಪಾಯ ತಗ್ಗಿಸಲು ಮಧುಮೇಹ, ರಕ್ತದೊತ್ತಡ ಹಾಗೂ ಇತರ ಆರೋಗ್ಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಮುಖ್ಯವಾಗಿದೆ. ಇದನ್ನು ಪರಿಶೀಲಿಸದೇ ಹಾಗೆಯೇ ಬಿಟ್ಟರೆ ಇದು ಸಂಕೀರ್ಣಗೊಳ್ಳುವ ಅಪಾಯವಿದೆ ಹಾಗೂ ನಿಮ್ಮನ್ನು ಹೆಚ್ಚಿನ ಅಪಾಯಗಳಿಗೆ ಒಳಗಾಗುವಂತೆ ಮಾಡುತ್ತದೆ.

ಆಹಾರ ಪದ್ಧತಿಯ ಮೇಲೆ ನಿಗಾ ಇರಿಸಿ

ಚಳಿಗಾಲದಲ್ಲಿ ಹಸಿವು ಹೆಚ್ಚಾಗಿರುತ್ತದೆ ಹಾಗೂ ಕರಿದ ಮತ್ತು ಸಿಹಿ ಪದಾರ್ಥಗಳ ಮೇಲೆ ಚಪಲ ಹೆಚ್ಚಾಗಿರುತ್ತದೆ. ಇಂತಹ ಪದಾರ್ಥಗಳಲ್ಲಿ ಕೊಲೆಸ್ಟ್ರಾಲ್, ಸಕ್ಕರೆ ಹಾಗೂ ಕೊಬ್ಬು ಅಧಿಕ ಪ್ರಮಾಣದಲ್ಲಿರುತ್ತದೆ. ನೀವು ಸೇವಿಸುವ ಆಹಾರದ ಮೇಲೆ ಗಮನ ಹರಿಸಿ ಮತ್ತು ಆದಷ್ಟು ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿ, ಮದ್ಯಪಾನ ತಂಬಾಕು ಸೇವನೆ ಮಿತಿಯಲ್ಲಿರಲಿ.

ಅಪಾಯದ ಬಗ್ಗೆ ಮುತುವರ್ಜಿ ವಹಿಸಿ ಹಾಗೂ ತಡೆಗಟ್ಟುವ ಪರೀಕ್ಷೆಗಳನ್ನು ನಡೆಸಿ

ಹೃದಯಾಘಾತದ ಅಪಾಯ ತಗ್ಗಿಸಲು ಹಾಗೂ ಹಠಾತ್ ಹೃದಯಾಘಾತ ತಡೆಯಲು, ನಿಯಮಿತ ತಪಾಸಣೆಗೆ ಒಳಗಾಗಬೇಕು. ಕೌಟುಂಬಿಕ ಇತಿಹಾಸ, ಅಪಾಯ-ಅಂಶಗಳನ್ನು ನಿರ್ಣಯಿಸುವುದು, ಲಕ್ಷಣಗಳ ಮೇಲ್ವಿಚಾರಣೆಗೆ ತಕ್ಕಂತೆ ಕ್ರಮ ತೆಗೆದುಕೊಳ್ಳುವುದು ಅತ್ಯಗತ್ಯವಾದುದು.

ನೆರವು ಪಡೆಯಲು ವಿಳಂಬ ಮಾಡಬೇಡಿ

ಹೃದಯಾಘಾತದ ಸಂದರ್ಭದಲ್ಲಿ ತುರ್ತು ಆರೈಕೆಯ ಅಗತ್ಯವಿರುತ್ತದೆ. ಎಚ್ಚರಿಕೆಯ ಚಿಹ್ನೆ ಹಾಗೂ ರೋಗಲಕ್ಷಣಗಳನ್ನು ಗುರುತಿಸಿ. ಆದಷ್ಟು ಬೇಗ ವೈದ್ಯಕೀಯ ನೆರವನ್ನು ಪಡೆದುಕೊಳ್ಳಿ ಹಾಗೂ ಯಾವುದೇ ರೋಗಲಕ್ಷಣಗಳನ್ನು ಮುಂದೂಡಬೇಡಿ. ಕಿರಿಕಿರಿ, ಎದೆಯಲ್ಲಿ ನೋವು, ಬೆವರುವುದು, ಭುಜ ನೋವು, ದವಡೆ ನೋವು, ತಲೆತಿರುಗುವುದು, ವಾಕರಿಕೆ ರೋಗಲಕ್ಷಣಗಳನ್ನು ಅಸಡ್ಡೆ ಮಾಡದಿರಿ.
First published: