Motion Sickness: ವಿಮಾನದಲ್ಲಿ ಪ್ರಯಾಣ ಮಾಡುವಾಗ ತಲೆಸುತ್ತು ವಾಕರಿಕೆಯಂತಹ ಸಮಸ್ಯೆ ಬಾರದಂತೆ ಹೀಗೆ ಮಾಡಿ

ಬಸ್, ಕಾರು ಪ್ರಯಾಣ ಎಂದರೆ ಕೆಲವರಿಗೆ ಇನ್ನಿಲ್ಲದ ಸಣ್ಣ, ಪುಟ್ಟ ಸಮಸ್ಯೆಗಳು ಶುರುವಾಗಿ ಬಿಡುತ್ತವೆ. ಕೆಲವರಂತೂ ಕೇಳೋದೆ ಬೇಡ ಬಸ್, ಕಾರು ಹತ್ತಿದರೆ ಸಾಕು ಇಲ್ಲಿಂದ ಶುರುವಾದ ವಾಕರಿಕೆ, ತಲೆಸುತ್ತು ಸ್ಥಳ ತಲುಪುವವರೆಗೂ ಇರುತ್ತದೆ. ಹೀಗೆ ಮೋಷನ್ ಸಿಕ್ನೆಸ್ ನಿಂದ ಬಳಲುವವರು ವಿಮಾನದಲ್ಲಿ ಹೋಗುವಾಗ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ನಾವಿಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವೆ...

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಬಸ್, ಕಾರು ಪ್ರಯಾಣ (Travel) ಎಂದರೆ ಕೆಲವರಿಗೆ ಇನ್ನಿಲ್ಲದ ಸಣ್ಣ, ಪುಟ್ಟ ಸಮಸ್ಯೆಗಳು ಶುರುವಾಗಿ ಬಿಡುತ್ತವೆ. ಕೆಲವರಂತೂ ಕೇಳೋದೆ ಬೇಡ ಬಸ್, ಕಾರು ಹತ್ತಿದರೆ ಸಾಕು ಇಲ್ಲಿಂದ ಶುರುವಾದ ವಾಕರಿಕೆ, ತಲೆಸುತ್ತು ಸ್ಥಳ ತಲುಪುವವರೆಗೂ ಇರುತ್ತದೆ. ಇನ್ನೂ ಕೆಲವರಿಗೆ ತಲೆ ನೋವು, ತಲೆಸುತ್ತು ಚಳಿ, ಬೆವರು ಶುರುವಾಗುತ್ತದೆ. ಹೀಗೆ ನಿಮ್ಮ ಕಣ್ಣು, ಕಿವಿ ಮತ್ತು ದೇಹದಿಂದ ಕಳುಹಿಸಲಾದ ಮಾಹಿತಿಯನ್ನು ನಿಮ್ಮ ಮೆದುಳು (Brain) ಅರ್ಥಮಾಡಿಕೊಳ್ಳಲು ಸಾಧ್ಯವಾಗದಿದ್ದಾಗ ಇದನ್ನು ಚಲನೆಯ ಕಾಯಿಲೆ ಅಥವಾ ಮೋಷನ್ ಸಿಕ್ ನೆಸ್ (Motion Sickness) ಎನ್ನಲಾಗುತ್ತದೆ. ಕಾರು, ವಿಮಾನ, ದೋಣಿ, ಅಥವಾ ಜಾತ್ರೆಗಳಲ್ಲಿ ಬರುವಂತಹ ತೊಟ್ಟಿಲಾಟ ಇಂತಹುಗಳ ಮೇಲೆ ಸವಾರಿ ಮಾಡುವಾಗ ಈ ರೀತಿಯಾದ ಅನಾರೋಗ್ಯದ (Illness) ಭಾವನೆ ಉಂಟಾಗುತ್ತದೆ.

ಬಸ್, ಕಾರುಗಳಲ್ಲಿ ಹೋಗುವಾಗ ಹೀಗಾದಾಗ ಸುಲಭವಾಗಿ ಸುಧಾರಿಸಿಕೊಳ್ಳಬಹುದು. ಕಾರಲ್ಲಿ ಹೋಗುವಾಗ ರಸ್ತೆ ಬದಿ ಕಾರನ್ನು ನಿಲ್ಲಿಸಿ ಸ್ವಲ್ಪ ಸ್ವಚ್ಛ ಗಾಳಿ ತೆಗೆದುಕೊಳ್ಳವ ಮೂಲಕವೋ, ವಿಶ್ರಾಂತಿ ತೆಗೆದುಕೊಳ್ಳುವ ಮೂಲಕ ಸುಧಾರಿಸಿಕೊಳ್ಳಬಹುದು. ಆದರೆ ವಿಮಾನದಲ್ಲಿ ಹೋಗುವಾಗ ಹೀಗಾದರೆ ಏನು ಮಾಡೋದು? ಖಂಡಿತ ವಿಮಾನ ನಿಲ್ಲಿಸಿ ಕೆಲ ಹೊತ್ತು ಸುಧಾರಿಸಿಕೊಳ್ಳುವುದು ಆಗೋ ಮಾತಲ್ಲ. ಹೀಗಿರುವಾಗ ಮೋಷನ್ ಸಿಕ್ನೆಸ್ ನಿಂದ ಬಳಲುವವರು ವಿಮಾನದಲ್ಲಿ ಹೋಗುವಾಗ ಏನೆಲ್ಲಾ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಬಗ್ಗೆ ನಾವಿಲ್ಲಿ ಕೆಲವು ವಿಷಯಗಳನ್ನು ಹಂಚಿಕೊಳ್ಳುತ್ತಿದ್ದೇವೆ ನೋಡಿ.

1) ವಿಮಾನದ ರೆಕ್ಕೆಗಳ ಬಳಿ ಆಸನವನ್ನು ಆರಿಸಿ
ವಿಮಾನದಲ್ಲಿ ಎಷ್ಟು ಎತ್ತರಕ್ಕೆ ಹೋಗುತ್ತಿದ್ದೇವೆ ಅಥವಾ ಎಲ್ಲಿದ್ದೇವೆ ಎಂಬ ಕೆಲವು ಪ್ರಕ್ಷುಬ್ಧತೆ ಇರುತ್ತದೆ. ಮೇಲೆ ಕೆಳಗೆ ಹೋಗುವ ಪರಿಣಾಮವು ಪ್ರತಿ ಪ್ರಯಾಣಿಕರಿಗೆ ವಿಭಿನ್ನವಾಗಿರುತ್ತದೆ. ಆದ್ದರಿಂದ, ಯಾವಾಗಲೂ ನಿಮ್ಮ ಆಸನವನ್ನು ವಿಮಾನದ ರೆಕ್ಕೆಗಳ ನಡುವೆ ಅಥವಾ ಮುಂಭಾಗಕ್ಕೆ ಹತ್ತಿರದಲ್ಲಿ ಕಾಯ್ದಿರಿಸಲು ಪ್ರಯತ್ನಿಸಿ. ಇದು ಹೆಚ್ಚು ಸ್ಥಿರವಾದ ಪ್ರದೇಶವಾಗಿದ್ದು, ನಿಮಗೆ ಅನುಕೂಲವಾಗಬಹುದು. ಹಿಂಭಾಗದಲ್ಲಿ ಕುಳಿತುಕೊಳ್ಳುವುದು ಮೋಷನ್ ಸಿಕ್ ನೆಸ್ ಇರುವವರಿಗೆ ಅಷ್ಟೊಂದು ಆಹ್ಲಾದಕರವಾಗಿರುವುದಿಲ್ಲ.

2) ವಾಕರಿಕೆ ನಿವಾರಿಸಲು ಮೊದಲೇ ಔಷಧವನ್ನು ತೆಗೆದುಕೊಳ್ಳಿ
ನೀವು ವಿಮಾನ ಪ್ರಯಾಣ ಮಾಡುವಾಗ ಅಗತ್ಯವಾಗಿ ವಾಕರಿಕೆ, ತಲೆತಿರುಗುವಿಕೆ ಮತ್ತು ವಾಂತಿ ಇವುಗಳನ್ನು ತಪ್ಪಿಸಲು ಔಷಧಿಯನ್ನು ತೆಗೆದುಕೊಳ್ಳುವುದು ಉತ್ತಮ. ಇದು ನಿಮಗೆ ನಿದ್ರೆಯನ್ನು ಅಥವಾ ಅರೆನಿದ್ರಾವಸ್ಥೆಯನ್ನು ಉಂಟುಮಾಡಬಹುದು, ಜೊತೆಗೆ ನಿಮ್ಮ ದೇಹವನ್ನು ಶಾಂತಗೊಳಿಸುತ್ತದೆ. ವಾಕರಿಕೆ ತಡೆಗಟ್ಟಲು ಕೆಲವು ಮನೆಮದ್ದುಗಳನ್ನು ಮಾಡಿಕೊಂಡು ಸಹ ಸೇವಿಸಬಹುದು. ಶುಂಠಿ ನೀರು, ನಿಂಬೆ ಹಣ್ಣು ಸೇರಿ ಇನ್ನೂ ಕೆಲವು ಪದಾರ್ಥಗಳು ವಾಕರಿಕೆ ತಡೆಗಟ್ಟಲು ಸಹಕಾರಿಯಾಗಿವೆ.

ಇದನ್ನೂ ಓದಿ: School Bags: ಭಾರವಾದ ಶಾಲಾ ಬ್ಯಾಗ್‍ಗಳು ಮಕ್ಕಳಿಗೆ ಕಂಟಕವಾಗಬಹುದು! ಪೋಷಕರೇ ಈ ಬಗ್ಗೆ ಇರಲಿ ಗಮನ 

3)ವಿಶ್ರಾಂತಿ
ಒತ್ತಡ ಮತ್ತು ಆತಂಕವು ಸಮಸ್ಯೆಗಳನ್ನು ಮತ್ತಷ್ಟು ಹೆಚ್ಚಿಸುತ್ತದೆ. ಆದ್ದರಿಂದ, ವಿಮಾನ ಹತ್ತುವ ಮೊದಲು ವಿಶ್ರಾಂತಿ ಮಾಡುವುದು ಮುಖ್ಯ. ಆಳವಾಗಿ ಉಸಿರು ತೆಗೆದುಕೊಳ್ಳುವ ವ್ಯಾಯಾಮಗಳನ್ನು ಮಾಡಿ ಮತ್ತು ಸಾಧ್ಯವಾದರೆ ಧ್ಯಾನ ಮಾಡಿ ಮತ್ತು ಧನಾತ್ಮಕವಾಗಿ ಯೋಚಿಸಿ.

4) ಹುರಿದ, ಮಸಾಲೆಯುಕ್ತ ಆಹಾರವನ್ನು ಸೇವಿಸಬೇಡಿ
ಹಾರಾಟದ ಮೊದಲು ಅಥವಾ ವಿಮಾನದಲ್ಲಿ ಕರಿದ, ಜಿಡ್ಡಿನ ಆಹಾರವನ್ನು ಸೇವಿಸುವುದನ್ನು ತಪ್ಪಿಸಿ. ಅಜೀರ್ಣ ಅಥವಾ ಹೊಟ್ಟೆಯನ್ನು ಕೆಡಿಸಬಲ್ಲ ಆಹಾರಗಳಿಂದ ದೂರವಿರಿ ಮತ್ತು ಲೈಟ್ ಆಹಾರವನ್ನು ಸೇವಿಸಿ. ಉಪ್ಪು ಮತ್ತು ಕರಿದ ಆಹಾರವು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಇದು ತಲೆತಿರುಗುವಿಕೆ ಮತ್ತು ವಾಕರಿಕೆಗೆ ಮುಖ್ಯ ಕಾರಣಗಳಲ್ಲಿ ಒಂದಾಗಿದೆ.

5) ಮೊಬೈಲ್ ಬಳಕೆಯನ್ನು ತಪ್ಪಿಸಿ
ಐ-ಪ್ಯಾಡ್‌ಗಳು ಅಥವಾ ಮೊಬೈಲ್‌ಗಳಂತಹ ಯಾವುದೇ ರೀತಿಯ ಗ್ಯಾಜೆಟ್‌ಗಳಬಳಕೆ, ಚಲನೆಯ ಕಾಯಿಲೆಯನ್ನು ಉಲ್ಬಣಗೊಳಿಸಬಹುದು. ಆದ್ದರಿಂದ ಅವುಗಳನ್ನು ತಪ್ಪಿಸಿ. ಆದರೆ ನಿಮ್ಮ ಪ್ರಯಾಣ ಸುದೀರ್ಘವಾಗಿದ್ದರೆ ಬೇಸರ ಕಳೆಯಲು ಮೊಬೈಲ್ ನೋಡುವ ಬದಲು ಹೆಡ್‌ಫೋನ್‌ಗಳನ್ನು ಬಳಸಿ ಹಾಡು ಕೇಳುವುದು ಉತ್ತಮ.

ಇದನ್ನೂ ಓದಿ: Health Tips: ಮುಟ್ಟಿನ ಸಮಯದಲ್ಲಿ ದೈಹಿಕ ಸಂಪರ್ಕ, ಆರೋಗ್ಯದ ಮೇಲೇನು ಪರಿಣಾಮ?

ಹಾಗಾದರೆ ನೀವು ಕೂಡ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದರೆ, ಮುಂದಿನ ಬಾರಿ ವಿಮಾನ ಪ್ರಯಾಣದ ವೇಳೆ ಈ ಎಲ್ಲಾ ವಿಷಯಗಳನ್ನು ಚಾಚು ತಪ್ಪದೇ ಪಾಲಿಸಿ ಮತ್ತು ನಿಮ್ಮ ಪ್ರಯಾಣವನ್ನು ಉತ್ತಮವಾಗಿಸಿ.
Published by:Ashwini Prabhu
First published: