ನಿಮ್ಮ ಮಕ್ಕಳ ಕೋಪ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್ ಬಳಸಿ

ಪಾಲಕರ ವರ್ತನೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು. 14-25 ವರ್ಷ ವಯಸ್ಸಿನ ಮಕ್ಕಳ ಕೋಪಕ್ಕೆ ಮುಖ್ಯ ಕಾರಣ ಪಾಲಕರ ವರ್ತನೆ ಕಾರಣವಾಗಬಹುದು.

news18
Updated:June 4, 2019, 6:00 PM IST
ನಿಮ್ಮ ಮಕ್ಕಳ ಕೋಪ ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲವೇ? ಹಾಗಿದ್ದರೆ ಈ ಟಿಪ್ಸ್ ಬಳಸಿ
@hl
  • News18
  • Last Updated: June 4, 2019, 6:00 PM IST
  • Share this:
ಮಕ್ಕಳು ಕಿರಿಕಿ ಮಾಡುವುದು ಸಾಮಾನ್ಯ. ಆದರೆ ಪ್ರತಿ ಮಾತಿಗೂ ಗಲಾಟೆ ಮಾಡುವುದು, ಕೈಗೆ ಸಿಕ್ಕ ವಸ್ತುಗಳನ್ನು ಎಸೆಯುವ ಮಕ್ಕಳ ಸಿಟ್ಟನ್ನು ನಿಯಂತ್ರಣಗೊಳಿಸುವುದು ತುಂಬಾ ಕಷ್ಟ. ಇಂತಹ ಸಂದರ್ಭದಲ್ಲಿ ಪಾಲಕರು ಮನಶಾಸ್ತ್ರಜ್ಞರಿಗೆ ತೋರಿಸುವುದು ಸೂಕ್ತ. ಮಕ್ಕಳ ಈ ಗಲಾಟೆಗೆ ಎರಡು ಕಾರಣಗಳಿದ್ದು ಹಾರ್ವೋನ್​ನಲ್ಲಾಗುವ ಸಮಸ್ಯೆ ಒಂದೆಡೆಯಾದರೆ ಇನ್ನೊಂದು ಮಕ್ಕಳು ವಾಸವಾಗಿರುವ ವಾತಾವರಣ ಕಾರಣವಾಗುತ್ತದೆ.

ಕೆಲವೊಮ್ಮೆ ಪೋಷಕರ ವರ್ತನೆ ಮಕ್ಕಳ ಕಿರಿಕಿರಿಗೆ ಕಾರಣವಾಗಬಹುದು. ಹಾಗಾಗಿ ಪೋಷಕರು ಮಕ್ಕಳನ್ನು ಬೆಳೆಸುವ ರೀತಿ,  ಅವರ ಜೊತೆಗಿನ ಒಡೆನಾಟ ಚೆನ್ನಾಗಿರ ಬೇಕಾಗಿದೆ. ಹಾಗಾಗಿ, ಮಕ್ಕಳ ಗಲಾಟೆ, ಸಿಟ್ಟನ್ನು ಕಡಿಮೆ ಗೊಳಿಸಲು ಪಾಲಕರಿಗೆ ಕೆಲವೊಂದು ಟಿಪ್ಸ್ ನೀಡಲಾಗಿದೆ.

ಮಕ್ಕಳು ಕೋಪಗೊಂಡಾಗ ಪಾಲಕರು ಕೋಪಗೊಳ್ಳುವುದು ಸಾಮಾನ್ಯ. ಆದರೆ ಪಾಲಕರು ಕೋಪವನ್ನು ನಿಯಂತ್ರಿಸಿಕೊಳ್ಳಬೇಕಾಗುತ್ತದೆ. ಇಬ್ಬರೂ ಕೋಪಗೊಂಡರೆ ಪರಿಸ್ಥಿತಿ ನಿಭಾಯಿಸುವುದು ಕಷ್ಟ. ಮಕ್ಕಳ ಮಾತನ್ನು ಪೂರ್ಣವಾಗಿ ಕೇಳಿ. ಸಿಟ್ಟು ಕಮ್ಮಿಯಾದ ಮೇಲೆ ಪ್ರೀತಿಯಿಂದ ಅವರಿಗೆ ಬುದ್ದಿ ಹೇಳಿ. ಬಿಡುವಿನ ಸಮಯದಲ್ಲಿ. ಕ್ರಿಕೆಟ್, ಬ್ಯಾಡ್ಮಿಂಟನ್, ಕರಾಟೆ, ಈಜು ಸೇರಿದಂತೆ ಯಾವುದಾದರೊಂದು ಚಟುವಟಿಕೆಯಲ್ಲಿ ಸೇರಿಸಿ.

ಇದನ್ನೂ ಓದಿ: ಸ್ವಾಭಿಮಾನದಿಂದ ಪಕ್ಷ ಬೆಳೆಸುವವರಿಗೆ ಕಾಂಗ್ರೆಸ್​ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತಿಲ್ಲ: ಎ. ಮಂಜು

ಪಾಲಕರ ವರ್ತನೆಯು ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರಬಹುದು. 14-25 ವರ್ಷ ವಯಸ್ಸಿನ ಮಕ್ಕಳ ಕೋಪಕ್ಕೆ ಮುಖ್ಯ ಕಾರಣ ಪಾಲಕರ ವರ್ತನೆ ಕಾರಣವಾಗಬಹುದು. ಮಕ್ಕಳಿಗೆ ಬೈಯ್ಯುವುದು, ತಪ್ಪನ್ನು ಎತ್ತಿ ಹೇಳುವುದು ಸೇರಿದಂತೆ ಅನೇಕ ಕಾರಣಗಳಿರುತ್ತವೆ. ಹಾರ್ಮೋನ್ ಬದಲಾವಣೆ ಈ ವಯಸ್ಸಿನವರ ಕಿರಿಕಿರಿಗೆ ಮುಖ್ಯ ಕಾರಣವಾಗುತ್ತದೆ.

ಮಕ್ಕಳನ್ನು ಯಾರ ಮುಂದೆಯೂ ಬೈದು, ಹೊಡೆದು ಮಾಡಬೇಡಿ. ಮಕ್ಕಳ ಗೌರವಕ್ಕೆ ಧಕ್ಕೆ ತರುವ ಕೆಲಸ ಮಾಡಬೇಡಿ. ಎಲ್ಲಾ ಪ್ರಯತ್ನದ ನಂತರವೂ ಮಕ್ಕಳು ಸುಧಾರಿಸದೆ ಹೋದರೆ ಮನಶಾಸ್ತ್ರಜ್ಞರ ಸಹಾಯ ಪಡೆಯಿರಿ. ತಜ್ಞರು ಮಕ್ಕಳ ಸ್ಥಿತಿ ನೋಡಿ ಏನು ಮಾಡಬೇಕೆಂದು ಸಲಹೆ ನೀಡ್ತಾರೆ.
First published:June 4, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ