• Home
  • »
  • News
  • »
  • lifestyle
  • »
  • Deepavali 2022: ಹಬ್ಬದ ಸಮಯದಲ್ಲಿ ಬಿಪಿ, ಶುಗರ್ ಲೆವೆಲ್ ಜಾಸ್ತಿಯಾಗೋ ಭಯಾನಾ? ಹಾಗಿದ್ರೆ ಅದನ್ನ ಕಂಟ್ರೋಲ್ ಮಾಡೋಕೆ ಇಲ್ಲಿದೆ ಟಿಪ್ಸ್

Deepavali 2022: ಹಬ್ಬದ ಸಮಯದಲ್ಲಿ ಬಿಪಿ, ಶುಗರ್ ಲೆವೆಲ್ ಜಾಸ್ತಿಯಾಗೋ ಭಯಾನಾ? ಹಾಗಿದ್ರೆ ಅದನ್ನ ಕಂಟ್ರೋಲ್ ಮಾಡೋಕೆ ಇಲ್ಲಿದೆ ಟಿಪ್ಸ್

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Tips to Manage Blood Sugar: ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಮತ್ತು ಸಕ್ಕರೆಯ ತಿಂಡಿಗಳಿಂದ ದೂರವಿರುವುದು ಮಧುಮೇಹಿಗಳಿಗೆ ಉತ್ತಮ ಎನ್ನಲಾಗುತ್ತದೆ.

  • Share this:

ದೀಪಾವಳಿ ಆರಂಭವಾಗಿದೆ, ಎಲ್ಲೆಡೆ ಭರದಿಂದ ಆಚರಣೆ ಮಾಡಲಾಗುತ್ತಿದೆ. ಆತ್ಮೀಯರೊಂದಿಗೆ ಸಂತೋಷದ ಸಮಯವನ್ನು ಕಳೆಯುವ ಸಮಯ ಇದು ಎನ್ನಬಹುದು. ಈ ಸಮಯದಲ್ಲಿ ಪಟಾಕಿ, ಸಿಹಿ ತಿಂಡಿಗಳ ಆರ್ಭಟ ಹೆಚ್ಚಿರುತ್ತದೆ. ಈ ಸಮಯದಲ್ಲಿ ನಾವು ಮೈ ಮರೆತು ಹೆಚ್ಚಿನ ಸಿಹಿ ತಿಂಡಿಗಳನ್ನು ತಿನ್ನುತ್ತೇವೆ. ಆದರೆ ,ನಂತರ ಸಮಸ್ಯೆಗಳ ಸರಮಾಲೆ ಆರಂಭವಾಗುತ್ತದೆ. ಮಧುಮೇಹ ಹೊಂದಿರುವ ಜನರು, ವಿಶೇಷವಾಗಿ ಸರಿಯಾದ ಹಬ್ಬದ ಆಹಾರ, ಅವರ ಊಟದ ಸಮಯವನ್ನು ಆಯ್ಕೆಮಾಡುವಾಗ ಎಚ್ಚರಿಕೆ ವಹಿಸಬೇಕು. ಹೆಚ್ಚಿನ ಕ್ಯಾಲೋರಿ ಇರುವ ಆಹಾರ ಮತ್ತು ಸಕ್ಕರೆಯ ತಿಂಡಿಗಳಿಂದ ದೂರವಿರುವುದು ಮಧುಮೇಹಿಗಳಿಗೆ ಉತ್ತಮ ಎನ್ನಲಾಗುತ್ತದೆ.


ಸಾಮಾನ್ಯವಾಗಿ ಎಲ್ಲಾ ಹಬ್ಬಕ್ಕೂ ನಾವು ಸ್ವೀಟ್​ ಮಾಡಿ ತಿನ್ನುತ್ತೇವೆ, ಆದರೆ ದೀಪಾವಳಿಯ ಸಂದರ್ಭದಲ್ಲಿ ಮಾತ್ರ ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆಯ ಮಟ್ಟದ ಬಗ್ಗೆ ಹೆಚ್ಚು ಗಮನ ನೀಡಲು ಸಲಹೆ ನೀಡಲಾಗುತ್ತದೆ.  ಏಕೆಂದರೆ ಈ ಸಮಯದಲ್ಲಿ ಹೆಚ್ಚು ಸ್ವೀಟ್​ ದೇಹವನ್ನು ಸೇರುತ್ತದೆ. ನಾವು ಹೇಗೆ ಸ್ನೇಹಿತರ ಮನೆಗೆ ಸಿಹಿ ಕಳುಹಿಸುತ್ತೇವೆಯೋ, ಹಾಗೆಯೇ ನಮ್ಮ ಮನೆಗೂ ಸಹ ಸಿಹಿ ಬರುತ್ತದೆ. ಜೊತೆಗೆ ಮಧುಮೇಹ ಇದ್ದರೂ ಸಹ ಎಲ್ಲದರ ರುಚಿ ನೋಡುವ ಹಂಬಲ ದಿನಕ್ಕೆ ಕಾಲು ಕೆಜಿಯಷ್ಟು ಸ್ವೀಟ್​ ನಮ್ಮ ದೇಹ ಸೇರಲು ಕಾರಣವಾಗುತ್ತದೆ.


ಅಲ್ಲದೇ, ಅನಿಯಮಿತ ಊಟದ ಸಮಯ, ವ್ಯಾಯಾಮ ಮಾಡದಿರುವುದು, ಸಾಕಷ್ಟು ನೀರು ಕುಡಿಯದಿರುವುದು ಅಥವಾ ವಿಶ್ರಾಂತಿ ಪಡೆಯದಿರುವಂತಹ ಇತರ ಅಂಶಗಳು ನಿಮ್ಮ ಆರೋಗ್ಯಕರ ರಕ್ತದಲ್ಲಿನ ಸಕ್ಕರೆ ಮಟ್ಟದ ಮೇಲೆ ಸಹ ಪರಿಣಾಮ ಬೀರಬಹುದು. ಮಧುಮೇಹ ಹೊಂದಿರುವ ಜನರು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ರಕ್ತದೊತ್ತಡವನ್ನು ಉತ್ತಮವಾಗಿ ನಿರ್ವಹಿಸಲು ಸಾಧ್ಯವಾಗುವ ರೀತಿಯಲ್ಲಿ ತಮ್ಮ ವೇಳಾಪಟ್ಟಿಯನ್ನು ಯೋಜಿಸಬೇಕು. ಅದಕ್ಕೆ ಕೆಲ ಸಲಹೆ ಇಲ್ಲಿದೆ.


ಆಗಾಗ ಸಣ್ಣ ಸಣ್ಣ ಅಥವಾ ಸ್ವಲ್ಪ ಸ್ವಲ್ಪ ಊಟ ಮಾಡಿ


ದೀಪಾವಳಿಯ ಸಮಯದಲ್ಲಿ, ನೀವು ಸರಿಯಾದ ಸಮಯಕ್ಕೆ  ಊಟ ಮಾಡಲು ಸಾಧ್ಯವಾಗುವುದಿಲ್ಲ. ಹೆಚ್ಚು ಸಮಯ ಬಿಟ್ಟು ತಿನ್ನುವುದು ರಕ್ತದಲ್ಲಿನ ಸಕ್ಕರೆಯ ಮಟ್ಟದಲ್ಲಿ ಏರಿಳಿತಕ್ಕೆ ಕಾರಣವಾಗಬಹುದು ಎಂಬುದನ್ನು ನೆನಪಿಡಿ. ಆದ್ದರಿಂದ, 3 ಬಾರಿ ಹೆಚ್ಚು ಆಹಾರ ಸೇವನೆ ಮಾಡುವ  ಬದಲು ದಿನಕ್ಕೆ ಕನಿಷ್ಠ 5 ಊಟಗಳನ್ನು ಮಾಡುವುದು ಉತ್ತಮ. ಊಟವನ್ನು ಬಿಡುವುದು ಜ ರಕ್ತದಲ್ಲಿನ ಸಕ್ಕರೆ ಮಟ್ಟ ಏರಲು ಅಥವಾ ಇಳಿಯಲು ಕಾರಣವಾಗಬಹುದು.


ಆಲ್ಕೋಹಾಲ್ ಸೇವನೆ ಮಾಡಬೇಡಿ


ಮಧುಮೇಹ ಇರುವವರು ದೀಪಾವಳಿಯ ಸಮಯದಲ್ಲಿ ಮದ್ಯಪಾನ ಅಥವಾ ಧೂಮಪಾನವನ್ನು ತ್ಯಜಿಸಬೇಕು. ಎಳನೀರು ಅಥವಾ ನಿಂಬೆ ರಸದಂತಹ ಆರೋಗ್ಯಕರ ಪಾನೀಯಗಳಿಗೆ ಈ ಬಾರಿ ಪ್ರಯತ್ನಿಸಿ. ಕೋಲಾಗಳು, ಸೋಡಾಗಳು ಮತ್ತು ಇತರ ಸಿಹಿಯಾದ ಪಾನೀಯಗಳಿಂದ ದೂರವಿರಿ.
ನಾರಿನಂಶವಿರುವ ಆಹಾರಗಳನ್ನು ಸೇವಿಸಿ


ಹೆಚ್ಚು ಫೈಬ್ರಸ್ ಆಹಾರಗಳನ್ನು ಆಯ್ಕೆ ಮಾಡಲು ಪ್ರಯತ್ನಿಸಿ. ಸಾಕಷ್ಟು ತಾಜಾ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ಸೇವಿಸಿ. ಜಂಕ್, ಎಣ್ಣೆಯುಕ್ತ, ಮಸಾಲೆಯುಕ್ತ ಆಹಾರಗಳನ್ನು ಮತ್ತು ಸಿಹಿತಿಂಡಿಗಳನ್ನು ತಪ್ಪಿಸಿ. ಆಹಾರವನ್ನು ಕಡಿಮೆ ಪ್ರಮಾಣದಲ್ಲಿ ತಿನ್ನಲು ಪ್ರಯತ್ನಿಸಿ. ಕಾಲಕಾಲಕ್ಕೆ ನಿಮ್ಮ ಸಕ್ಕರೆ ಮಟ್ಟವನ್ನು ಪರೀಕ್ಷಿಸುವುದು ಬಹಳ ಮುಖ್ಯ.


ಇದನ್ನೂ ಓದಿ: ಪಟಾಕಿ ಹೊಡೆಯುವಾಗ ಮಿಸ್​ ಮಾಡದೇ ಈ ವಸ್ತುಗಳನ್ನು ಹತ್ತಿರವಿಟ್ಟುಕೊಳ್ಳಿ


ಆರೋಗ್ಯಕರ ಅಡುಗೆ ವಿಧಾನವನ್ನು ಬಳಸಿ


ನಿಮ್ಮ ತಿಂಡಿಗಳನ್ನು ಫ್ರೈ ಮಾಡುವ ಬದಲು ಗ್ರಿಲ್, ರೋಸ್ಟ್ ಅಥವಾ ಬೇಕ್ಮಾಡುವುದು ಉತ್ತಮ. ಆರೋಗ್ಯಕರ ಆಹಾರ ಪದ್ಧತಿಗೆ ಅಂಟಿಕೊಳ್ಳುವುದು ಉತ್ತಮ. ಹೈಡ್ರೇಟೆಡ್ ಆಗಿರಿಹೈಡ್ರೇಟೆಡ್ ಆಗಿರಲು ಸಾಕಷ್ಟು ನೀರು ಕುಡಿಯುವುದು ಮುಖ್ಯ. ಏಕೆಂದರೆ ಇದು ಕರುಳನ್ನು ಶುದ್ಧೀಕರಿಸುವಲ್ಲಿ ಸಹಾಯ ಮಾಡುತ್ತದೆ.


ನಿಮ್ಮ ಸಿಹಿತಿಂಡಿಗಳನ್ನು ಮನೆಯಲ್ಲಿಯೇ ತಯಾರಿಸಿ


ನಿಮ್ಮ ಸಿಹಿತಿಂಡಿಗಳನ್ನು ತಯಾರಿಸುವ ಕಾರ್ಬೋಹೈಡ್ರೇಟ್‌ಗಳು, ಎಣ್ಣೆ ಮತ್ತು ಸಕ್ಕರೆಯ ಅಂಶವನ್ನು ಗಮನಿಸಿಕೊಂಡು ಮನೆಯಲ್ಲಿಯೇ ತಯಾರಿಸಲು ಪ್ರಯತ್ನಿಸಿ. ಸಮೋಸಾ, ವಡಾ, ಸಿಹಿತಿಂಡಿ, ಕೇಕ್‌, ಪೇಸ್ಟ್ರಿ ಮತ್ತು ಇತರ ಬೇಕರಿ ಪದಾರ್ಥಗಳನ್ನು ತಿನ್ನುವುದನ್ನು ತಪ್ಪಿಸಿ. ಮೈದಾ ಮತ್ತು ಸಕ್ಕರೆಯನ್ನು ಬಳಸದಿರುವುದು ಉತ್ತಮ.


ಇದನ್ನೂ ಓದಿ: ಪಟಾಕಿಯಿಂದ ಏಟಾದ್ರೆ ಬೆಂಗಳೂರಿನ ಈ ಆಸ್ಪತ್ರೆಗಳಲ್ಲಿ ಕೂಡಲೇ ಚಿಕಿತ್ಸೆ ಸಿಗುತ್ತೆ, ಗಮನಿಸಿ


ಬಹಳಷ್ಟು ಸಕ್ಕರೆಯನ್ನು ಸೇರಿಸುವ ಬದಲು ಸಿಹಿಗಾಗಿ ಖರ್ಜೂರ ಅಥವಾ ಜೇನುತುಪ್ಪದ ಸಹಾಯದಿಂದ ಬೆಸನ್ ಲಡೂ ಮಾಡಲು ಪ್ರಯತ್ನಿಸಿ. ಸಿಹಿತಿಂಡಿಗಳಲ್ಲಿ ಸಕ್ಕರೆಯ ಬದಲು ಬಾದಾಮಿ, ವಾಲ್‌ನಟ್ಸ್, ಖರ್ಜೂರ ಅಥವಾ ಬ್ಲ್ಯಾಕ್​ ಕರ್ರಂಟ್‌ಗಳನ್ನು ಸೇರಿಸಬಹುದು.

Published by:Sandhya M
First published: